ದಾವಣಗೆರೆ: ಸುಳ್ಳು ದೂರು ಕೊಟ್ಟಅಮೀರ್‌ ಖಾನ್‌ಗೆ ನ್ಯಾಯಾಂಗ ಬಂಧನ

By Kannadaprabha News  |  First Published Feb 16, 2023, 5:31 AM IST

ಆನ್‌ಲೈನ್‌ ಗೇಮ್‌ನಲ್ಲಿ ಹಣ ಸೋತು ಮನೆಯಲ್ಲಿ ಬೈಯ್ಯುತ್ತಾರೆಂದು ಯಾರೋ ಮೂವರು ಚಾಕು ತೋರಿಸಿ, ತನ್ನನ್ನು ಅಪಹರಿಸಿ, ಮೊಬೈಲ್‌ ಕಸಿದುಕೊಂಡು, 35 ಸಾವಿರ ರು. ಪೋನ್‌ ಪೇ ಮೂಲಕ ಕಳಿಸಿಕೊಂಡಿದ್ದಾರೆಂದು ಸುಳ್ಳು ದೂರು ದಾಖಲಿಸಿದ್ದ ಆರೋಪಿಯನ್ನು ಇಲ್ಲಿನ ಆಜಾದ್‌ ನಗರ ಪೊಲೀಸರು ಬಂಧಿಸಿದ್ದಾರೆ.


ದಾವಣಗೆರೆ (ಫೆ.16) : ಆನ್‌ಲೈನ್‌ ಗೇಮ್‌ನಲ್ಲಿ ಹಣ ಸೋತು ಮನೆಯಲ್ಲಿ ಬೈಯ್ಯುತ್ತಾರೆಂದು ಯಾರೋ ಮೂವರು ಚಾಕು ತೋರಿಸಿ, ತನ್ನನ್ನು ಅಪಹರಿಸಿ, ಮೊಬೈಲ್‌ ಕಸಿದುಕೊಂಡು, 35 ಸಾವಿರ ರು. ಪೋನ್‌ ಪೇ ಮೂಲಕ ಕಳಿಸಿಕೊಂಡಿದ್ದಾರೆಂದು ಸುಳ್ಳು ದೂರು ದಾಖಲಿಸಿದ್ದ ಆರೋಪಿಯನ್ನು ಇಲ್ಲಿನ ಆಜಾದ್‌ ನಗರ ಪೊಲೀಸರು ಬಂಧಿಸಿದ್ದಾರೆ.

ನಗರದ ಎಸ್‌ಎಸ್‌ಎಂ ನಗರ(SSM Nagar) ಎ ಬ್ಲಾಕ್‌ ವಾಸಿ ಅಮೀರ್‌ ಖಾನ್‌ (Amir khan)(21 ವರ್ಷ) ಬಂಧಿತ ಆರೋಪಿ. ಬಂಧಿತ ಆರೋಪಿಯು ತನ್ನ ಖಾತೆಯಲ್ಲಿದ್ದ ಹಣವನ್ನು ಮೊಬೈಲ್‌ ಆನ್‌ಲೈನ್‌ ಗೇಮ್‌(Mobile onlinge game)ನಲ್ಲಿ ಹಾಕಿ, ಹಣ ಸೋತಿದ್ದನು. ಹಣ ಸೋತಿದ್ದರಿಂದ ಮನೆಯಲ್ಲಿ ತಂದೆ ಬೈಯ್ಯುತ್ತಾರೆಂದು ಜ. 30ರ ಸಂಜೆ ಮೂವರು ವ್ಯಕ್ತಿಗಳು ತನಗೆ ಚಾಕು ತೋರಿಸಿ, ಅಪಹರಿಸಿದ್ದರು. ನಂತರ ತನ್ನ ಮೊಬೈಲ್‌ ಕಸಿದುಕೊಂಡು, ಫೋನ್‌ ಪೇ ಮೂಲಕ 35 ಸಾವಿರ ರು. ಗಳನ್ನು ತಮ್ಮ ಖಾತೆಗೆ ಕಳಿಸಿಕೊಂಡಿದ್ದರು ಎಂಬುದಾಗಿ ಆರೋಪಿ ಅಮೀರ್‌ ಖಾನ್‌ ಆಜಾದ್‌ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

Latest Videos

undefined

DAVANAGERE CRIME: ಹಂತಕ ಲಾರಿ ಚಾಲಕ; ಮೂವರು ದರೋಡೆಕೋರರ ಬಂಧನ

ಡಿವೈಎಸ್ಪಿ ಮಲ್ಲೇಶ್‌ ದೊಡ್ಮನಿ ಮಾರ್ಗದರ್ಶನದಲ್ಲಿ ಆಜಾದ್‌ ನಗರ ಠಾಣೆ ಇನ್ಸ್‌ಪೆಕ್ಟರ್‌ ಇಮ್ರಾನ್‌ ಬೇಗ್‌ ಹಾಗೂ ಸಿಬ್ಬಂದಿಯು ತನಿಖೆ ಕೈಗೊಂಡಾಗ ಪಿರ್ಯಾದಿ ಅಮೀರ್‌ ಖಾನ್‌ ಸುಳ್ಳು ದೂರು ನೀಡಿರುವುದು ಸ್ಪಷ್ಟವಾಗಿದೆ. ಪಿರ್ಯಾದಿ ಅಮಿರ್‌ ಖಾನ್‌ಗೆ ಹಿಡಿದು, ವಿಚಾರಣೆಗೆ ಒಳಪಡಿಸಿದಾಗ ಆನ್‌ಲೈನ್‌ ಗೇಮ್‌ಗೆ ಹಣ ಹಾಕಿ ಸೋತಿದ್ದು, ತಂದೆ ಬೈಯ್ಯುತ್ತಾರೆಂದು ಸುಳ್ಳು ದೂರು ನೀಡಿದ್ದಾಗಿ ಬಾಯಿ ಬಿಟ್ಟಿದ್ದಾನೆ. ಪಿರ್ಯಾದಿ ಅಮೀರ್‌ ಖಾನ್‌ ವಿರುದ್ಧ ಐಪಿಸಿ 182 ರೀತಿ ನ್ಯಾಯಾಲಯಕ್ಕೆ ದೂರು ನೀಡಿದ್ದು, ಸುಳ್ಳು ದೂರು ದಾಖಲಿಸಿದ್ದ ಆರೋಪಿ ಅಮೀರ್‌ ಖಾನ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅಕ್ರಮ ಗಾಂಜಾ ಮಾರಾಟ; ಮೈಸೂರಿನ ಓರ್ವ ಸೇರಿ 3 ಬಂಧನ

ದಾವಣಗೆರೆ: ಸಾರ್ವಜನಿಕ ರಸ್ತೆಯಲ್ಲಿ ಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ, 25 ಸಾವಿರ ರು. ಮೌಲ್ಯದ ಗಾಂಜಾ ಸೊಪ್ಪನ್ನು ಜಪ್ತು ಮಾಡುವಲ್ಲಿ ಇಲ್ಲಿನ ಕೆಟಿಜೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಸತೀಶ್‌ (42), ಮಹಮ್ಮದ್‌ ರಫೀಕ್‌(mohmed rafeek)(25) ಹಾಗೂ ಮೈಸೂರಿನ ಸೈಯದ್‌ ಫಾರೂಕ್‌(syed farooq)(35) ಬಂಧಿತ ಆರೋಪಿಗಳು. ಇಲ್ಲಿನ ವಿದ್ಯುತ್‌ ನಗರದ ಮುಖ್ಯರಸ್ತೆಯ ಕೆಪಿಟಿಸಿಎಲ್‌ ಮುಂಭಾಗದ ಸಾರ್ವಜನಿಕ ರಸ್ತೆಯ ಬದಿ ಅಕ್ರಮವಾಗಿ ಮಾರಾಟ ಮಾಡಲು ಗಾಂಜಾ ಸೊಪ್ಪನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ.

ಲಂಚ ಪಡೆದ ಆರೋಪ; ದಾವಣಗೆರೆ ನಾಲ್ವರು ಪಿಡಬ್ಲ್ಯುಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

ಬಂಧಿತ ಸತೀಶ, ಮಹಮ್ಮದ್‌ ರಫೀಕ್‌ ಹಾಗೂ ಸೈಯದ್‌ ಫಾರೂಕ್‌ರಿಂದ 25 ಸಾವಿರ ರು. ಮೌಲ್ಯದ 410 ಗ್ರಾಂ ತೂಕದ ಗಾಂಜಾ ಸೊಪ್ಪನ್ನು ಜಪ್ತು ಮಾಡಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಪ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಡಿವೈಎಸ್ಪಿ ಮಲ್ಲೇಶ್‌ ದೊಡ್ಡಮನಿ ನೇತೃತ್ವದಲ್ಲಿ ಕೆಟಿಜೆ ನಗರ ಠಾಣೆ ಇನ್ಸ್‌ಪೆಕ್ಟರ್‌ ಶಶಿಧರ್‌, ಮಹಿಳಾ ಇನ್ಸ್‌ಪೆಕ್ಟರ್‌ ಪ್ರಭಾವತಿ ಶ್ರೇತಾ ಸನಾದಿ, ಎಸ್‌ಐ ಜಿ.ಎನ್‌. ವಿಶ್ವನಾಥ, ಸಿಬ್ಬಂದಿ ಪ್ರಕಾಶ, ಶಂಕರ ಜಾಧವ್‌, ಶಿವರಾಜ, ಮಂಜಪ್ಪ, ಷಣ್ಮುಖ, ಮಂಜನಾಥ, ಬಿ.ಆರ್‌. ರವಿ ಅವರನ್ನು ಒಳಗೊಂಡ ತಂಡ ಗಾಂಜಾ ಜಪ್ತು ಮಾಡಿ, ಆರೋಪಿಗಳನ್ನು ಬಂಧಿಸಿದೆ.

click me!