Asianet Suvarna News Asianet Suvarna News

Davanagere crime: ಹಂತಕ ಲಾರಿ ಚಾಲಕ; ಮೂವರು ದರೋಡೆಕೋರರ ಬಂಧನ

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿ ಹೊಡೆದು ಸವೀರ್‍ಸ್‌ ರಸ್ತೆಗೆ ಬಿದ್ದು ಸಾವನ್ನಪ್ಪಿದ್ದ ಮೂವರು ಯುವಕರ ಸಾವಿನ ಪ್ರಕರಣ ಬೇಧಿಸಿರುವ ಪೊಲೀಸರು ಚೆನ್ನೈನಲ್ಲಿ ಲಾರಿ ಸಮೇತ ಚಾಲಕ ಹಾಗೂ ಇದೇ ಲಾರಿ ಚಾಲಕನನ್ನು ದರೋಡೆ ಮಾಡಿದ್ದ ಆರೋಪಿಗಳ ಪೈಕಿ ಮೂವರನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

A killer lorry driver; Arrest of three robbers  at davangere rav
Author
First Published Feb 16, 2023, 5:09 AM IST

ದಾವಣಗೆರೆ (ಫೆ.16) : ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿ ಹೊಡೆದು ಸವೀರ್‍ಸ್‌ ರಸ್ತೆಗೆ ಬಿದ್ದು ಸಾವನ್ನಪ್ಪಿದ್ದ ಮೂವರು ಯುವಕರ ಸಾವಿನ ಪ್ರಕರಣ ಬೇಧಿಸಿರುವ ಪೊಲೀಸರು ಚೆನ್ನೈನಲ್ಲಿ ಲಾರಿ ಸಮೇತ ಚಾಲಕ ಹಾಗೂ ಇದೇ ಲಾರಿ ಚಾಲಕನನ್ನು ದರೋಡೆ ಮಾಡಿದ್ದ ಆರೋಪಿಗಳ ಪೈಕಿ ಮೂವರನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲೂಕಿನ ಆನಗೋಡು(Anagodu) ಸಮೀಪ ರಾಷ್ಟ್ರೀಯ ಹೆದ್ದಾರಿ-48(Highway)ರಲ್ಲಿ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸಮೇತ ಮೂವರು ಸವಾರರು ಸವೀರ್‍ಸ್‌ ರಸ್ತೆಗೆ ಹೋಗಿ ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇದೊಂದು ರಸ್ತೆ ಅಪಘಾತ ಪ್ರಕರಣವೆಂದು ಮೇಲ್ನೋಟಕ್ಕೆ ಅನಿಸಿದರೂ ಇಡೀ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿ ಲಾರಿ ಚಾಲಕ ಹಾಗೂ ಆತನನ್ನು ದರೋಡೆ ಮಾಡಿದ್ದ ದರೋಡೆಕೋರರ ಪೈಕಿ ಮೂವರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಲಂಚ ಪಡೆದ ಆರೋಪ; ದಾವಣಗೆರೆ ನಾಲ್ವರು ಪಿಡಬ್ಲ್ಯುಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

ಹೆದ್ದಾರಿಯಲ್ಲಿ ದರೋಡೆಗೆ ಹೋದಿದ್ದ ದಾವಣಗೆರೆ ಶ್ರೀರಾಮ ನಗರ(Sriramanagara)ದ ಆರು ಜನ ಆರೋಪಿಗಳ ಪೈಕಿ ಮೂವರು ಅಂದು ಹೆದ್ದಾರಿ ಪಕ್ಕದ ಸವೀರ್‍ಸ್‌ ರಸ್ತೆಯಲ್ಲಿ ಶವವಾಗಿ ಪತ್ತೆಯಾದರೆ, ತಲೆ ಮರೆಸಿಕೊಂಡಿದ್ದ ಉಳಿದ ಮೂವರು ದರೋಡೆಕೋರರಿಗೆ ಪೊಲೀಸರು ಇದೀಗ ಹೆಡೆಮುರಿ ಕಟ್ಟಿದ್ದಾರೆ. ಅಷ್ಟೇ ಅಲ್ಲ, ರಸ್ತೆ ಅಪಘಾತದಲ್ಲಿ ಮೂವರು ದರೋಡೆಕೋರರಿದ್ದ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು, ಆ ಮೂವರ ಸಾವಿಗೆ ಕಾರಣನಾದ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿ, ಲಾರಿಯನ್ನು ಚೆನ್ನೈನಲ್ಲಿ ಜಪ್ತು ಮಾಡಿದ್ದಾರೆ.

ದಾವಣಗೆರೆ ಶ್ರೀರಾಮ ನಗರ ನಿವಾಸಿಗಳಾದ ಪರಶುರಾಮ, ನಾಗರಾಜ, ಸಂದೇಶ, ಗಣೇಶಷ ರಾಹುಲ್‌ ಹಾಗೂ ಶಿವಕುಮಾರ ಫೆ. 11ರಂದು ರಾತ್ರಿ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಆನಗೋಡು ಸಮೀಪದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಲಾರಿ ನಿಲ್ಲಿಸಿ, ಚಾಲಕನಿಗೆ ಹೆದರಿಸಿ ಹಲ್ಲೆ ಮಾಡಿದ್ದರು. ಲಾರಿ ಚಾಲಕ ಉತ್ತರ ಪ್ರದೇಶದ ಬೋಲೆ ಯಾದವ್‌ ಮೇಲೆ ಹಲ್ಲೆ ಮಾಡಿದ್ದ ದರೋಡೆಕೋರರು 8 ಸಾವಿರ ರು. ನಗದು, ಮೊಬೈಲ್‌ ಹಾಗೂ ಇತರೆ ವಸ್ತುಗಳನ್ನು ದರೋಡೆ ಮಾಡಿಕೊಂಡು, ಸವೀರ್‍ಸ್‌ ರಸ್ತೆಯಲ್ಲಿ ಹೋಗುತ್ತಿದ್ದರು. ಅದೇ ವೇಳೆ ಲಾರಿ ಚಾಲಕ ಬೋಲೆ ಯಾದವ್‌ ತನ್ನನ್ನು ದರೋಡೆ ಮಾಡಿದ ದರೋಡೆಕೋರರು ಹೊರಟಿದ್ದ ಎರಡು ಬೈಕ್‌ಗಳನ್ನು ಬೆನ್ನು ಹತ್ತಿ, ಲಾರಿ ಹತ್ತಿಸಿದ್ದನು.

ಬೈಕ್‌ನಲ್ಲಿ ಹೊರಟಿದ್ದ ಪರಶುರಾಮ, ಶಿವಕುಮಾರ, ಸಂದೇಶನ ಮೇಲೆ ಲಾರಿ ಚಾಲಕ ಬೋಲೆ ಯಾದವ್‌ ಲಾರಿ ಹತ್ತಿಸಿದ ಪರಿಣಾಮ ತೀವ್ರ ಗಾಯಗೊಂಡು, ಸವೀರ್‍ಸ್‌ ರಸ್ತೆಯಲ್ಲಿ ಬಿದ್ದು ಸಾವನ್ನಪ್ಪಿದ್ದರು. ಮತ್ತೊಂದು ಬೈಕ್‌ನಲ್ಲಿದ್ದ ಶ್ರೀರಾಮ ನಗರದ ದರೋಡೆಕೋರರಾದ ನಾಗರಾಜ, ಗಣೇಶ, ರಾಹುಲ್‌ಗೆ ಗಾಯಗಳಾಗಿದ್ದು, ತಲೆ ಮರೆಸಿಕೊಂಡಿದ್ದರು. ತಲೆ ಮರೆಸಿಕೊಂಡಿದ್ದ ಲಾರಿ ಚಾಲಕ ಬೋಲೆ ಯಾದವ್‌ನನ್ನು ಲಾರಿ ಸಮೇತ ಚೆನ್ನೈನಲ್ಲಿ ಬಂಧಿಸಿದರೆ, ದರೋಡೆಕೋರರ ಗುಂಪಿನ ನಾಗರಾಜ, ಗಣೇಶ, ರಾಹುಲರನ್ನು ಮಂಗಳವಾರ ಬಂಧಿಸಲಾಯಿತು. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

NH Accident: ಹೆದ್ದಾರಿಯಲ್ಲಿ ದರೋಡೆಗೆಂದು ಹೋದವರು ಹೆಣವಾಗಿ ಬಿದ್ದರು: ಲಾರಿ ಹತ್ತಿಸಿ ಮೂವರ ಕೊಲೆ

ಜಿಲ್ಲಾ ಪೊಲೀಸ್‌ ವರಿಷ್ಟಸಿ.ಬಿ.ರಿಷ್ಯಂತ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ರಾಮಗೊಂಡ ಬಿ.ಬಸರಗಿ, ಗ್ರಾಮಾಂತರ ಡಿವೈಎಸ್ಪಿ ಕನ್ನಿಕಾ ಸಕ್ರಿವಾಲ್‌ ಮಾರ್ಗದರ್ಸನದಲ್ಲಿ ಗ್ರಾಮಾಂತರ ಇನ್ಸಪೆಕ್ಟರ್‌ ಲಿಂಗನಗೌಡ ನೆಗಳೂರು, ಸಿಬ್ಬಂದಿಯಾದ ಎಚ್‌.ಪಿ.ನಾರಪ್ಪ, ಜಗದೀಶ, ದೇವೇಂದ್ರ ನಾಯ್ಕ, ಅಣ್ಣಯ್ಯ, ಮಂಜುನಾಥ, ಮಹಮ್ಮದ್‌ ಯೂಸೂಫ್‌ ಅತ್ತಾರ್‌, ನಾಗರಾಜಯ್ಯ, ಡಿಸಿಐಬಿ ವಿಭಾಗದ ಸಿಬ್ಬಂದಿಯಾದ ಮಜೀದ್‌, ಆಂಜನೇಯ, ರಾಘವೇಂದ್ರ, ಮಾರುತಿ, ಅಶೋಕ, ಸುರೇಶ, ಮಲ್ಲಿಕಾರ್ಜುನ, ರಮೇಶ ನಾಯ್ಕ, ನಟರಾಜ, ಚಾಲಕ ನೂರುಲ್ಲಾ ಷರೀಫ್‌, ಎಸ್ಪಿ ಕಚೇರಿಯ ರಾಘವೇಂದ್ರ, ಶಾಂತರಾಜ ಪ್ರಕರಣ ಬೇಧಿಸುವಲ್ಲಿ ಸಫಲರಾಗಿದ್ದಾರೆ.

Follow Us:
Download App:
  • android
  • ios