Asianet Suvarna News Asianet Suvarna News

ಆ್ಯಕ್ಸಿಡೆಂಟ್​​ನಲ್ಲಿ ಸತ್ತ ಗಂಡನನ್ನ ಮಣ್ಣು ಮಾಡಿದಳು! ಆದರೇ..? ಸಿನಿಮಾವನ್ನೇ ಮೀರಿಸುತ್ತೆ ಈ ಮರ್ಡರ್ ಸ್ಟೋರಿ!

ಈ ಸ್ಟೋರಿ ಯಾವ ಸಿನಿಮಾ ಸ್ಕ್ರಿಪ್ಟ್‌ಗೂ ಕಮ್ಮಿಯಿಲ್ಲ. ತಮ್ಮ ಗಂಡನನ್ನು ಮಣ್ಣು ಮಾಡಿ ಜಗತ್ತಿನ ಕಣ್ಣಿಗೆ ಮಣ್ಣೆರೆಚಲು ಹೋಗಿ ಕೊನೆಗೂ ಪೊಲೀಸರ ಬಳಿ ಸಿಕ್ಕಿಹಾಕಿಕೊಂಡಿದ್ದೇ ಇಂಟ್ರೆಸ್ಟಿಂಗ್ ಸ್ಟೋರಿ

First Published Sep 3, 2024, 2:55 PM IST | Last Updated Sep 3, 2024, 2:55 PM IST

ಅದು ಪುಟ್ಟ ಸಂಸಾರ. ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಗಂಡ ಹೆಂಡತಿ ಟೈರ್​​​ ಅಂಗಡಿ ನಡೆಸುತ್ತಿದ್ರೆ ಮಗಳು ದೂರದ ಮಂಗಳೂರಿನಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಳು. ಆದ್ರೆ ಆವತ್ತು ಮಗಳನ್ನ ನೋಡಿಕೊಂಡು ಬರ್ತೀನಿ ಅಂತ ಹೋದ ಗಂಡ ಡೆಡ್ಲಿ ಆ್ಯಕ್ಸಿಡೆಂಟ್​​ನಲ್ಲಿ ಸತ್ತುಹೋದ. ನಂತರ ಹೆಂಡತಿ ಅವನ ಮೃತದೇಹವನ್ನ ತಂದು ಮಣ್ಣು ಕೂಡ ಮಾಡಿದ್ಲು.

ಆದ್ರೆ ಇದೆಲ್ಲಾ ಆಗಿ ಒಂದು ವಾರಕ್ಕೆ ಆ್ಯಕ್ಸಿಡೆಂಟ್​​​ನಲ್ಲಿ ಸತ್ತಿದ್ದ ಗಂಡ ಬದುಕಿ ಬಂದಿದ್ದ. ಅಷ್ಟೇ ಅಲ್ಲ ಪೊಲೀಸರೆದುರು ನಿಂತು ನಾನೇ ಅವನು ಅಂದಿದ್ದ. ಹಾಗಾದ್ರೆ ಆತ ಅಲ್ಲಿ ಸತ್ತಿಲ್ಲವಾದ್ರೆ ಹೆಂಡತಿ ಮಣ್ಣು ಮಾಡಿದ್ದು ಯಾರನ್ನ..? ಆ್ಯಕ್ಸಿಡೆಂಟ್​​ನಲ್ಲಿ ಸತ್ತಿದ್ದು ಯಾರು..? ಒಂದು ವಿಚಿತ್ರ ಕೇಸ್​​ನ ರೋಚಕ ಇನ್ವೆಸ್ಟಿಗೇಷನ್​ ಕಥೆ ಇಲ್ಲಿದೆ ನೋಡಿ

Video Top Stories