ಸಿಧು ಮೂಸೆ ವಾಲ ಹತ್ಯೆ ಬಳಿಕ ಕಾರಿನಲ್ಲಿ ಸಂಭ್ರಮ ಆಚರಿಸಿದ್ದ ಹಂತಕರು, ವಿಡಿಯೋ ವೈರಲ್!
- ಸಿಧು ಮೂಸೆ ವಾಲಾ ಹತ್ಯೆ ನಂತರದ ವಿಡಿಯೋ ಬಹಿರಂಗ
- ಬಂಧಿತನ ಮೊಬೈಲ್‌ನಲ್ಲಿತ್ತು ಪಿಸ್ತೂಲ್ ತೋರಿಸಿ ಸಂಭ್ರಮಿಸಿದ ವಿಡಿಯೋ
- ವಿಜಯೋತ್ಸವದ ವಿಡಿಯೋದಿಂದ ಸ್ಫೋಟಕ ಮಾಹಿತಿ ಬಹಿರಂಗ
ಪಂಜಾಬ್(ಜು.04): ಗಾಯಕ, ಪಂಜಾಬ್ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲ ಹತ್ಯೆ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಇದೀಗ ಬಂಧಿತ ಆರೋಪಿಯ ಮೊಬೈಲ್‌ನಿಂದ ವಿಡಿಯೋ ಬಹಿರಂಗವಾಗಿದೆ. ಸಿಧು ಮೂಸೆವಾಲಾ ಹತ್ಯೆ ಬಳಿಕ ಹಂತಕರು ತಮ್ಮ ಕಾರಿನಲ್ಲಿ ಸಂಭ್ರಮಿಸುತ್ತಿರುವ ವಿಡಿಯೋ ಬಹಿರಂಗವಾಗಿದೆ.
ಬಂಧಿತ ಆರೋಪಿ ಅಂಕಿತ್ ಸಿರ್ಸಾ ಮೊಬೈಲ್‌ನಿಂದ ಈ ವಿಡಿಯೋ ಬಹಿರಂಗವಾಗಿದೆ. ಅಂಕಿತ್ ಸಿರ್ಸಾ ಹಂತಕರ ಗ್ಯಾಂಗ್‌ನಲ್ಲಿರುವ ಕಿರಿ ಆರೋಪಿಯಾಗಿದ್ದಾನೆ. ಈ ವಿಡಿಯೋದಲ್ಲಿ ಐವರು ಕಾರಿನಲ್ಲಿ ಕೈಯಲ್ಲಿ ಪಿಸ್ತೂಲ್ ಹಿಡಿದು ಸಂಭ್ರಮಿಸುತ್ತಿರುವ ದೃಶ್ಯವಿದೆ. ಸುಮಾರು 10ಕ್ಕೂ ಹೆಚ್ಚು ಪಿಸ್ತೂಲ್‌ಗಳನ್ನು ಹಿಡಿದು ಸಂಭ್ರಮ ಆಚರಿಸಿದ್ದಾರೆ.
ಸಲ್ಮಾನ್ ಖಾನ್ ಗೆ ಬೆದರಿಕೆ ಪ್ರಕರಣದಲ್ಲಿ ಬಿಗ್ ನ್ಯೂಸ್, ಲಾರೆನ್ಸ್ ಬಿಷ್ಣೋಯಿ ಈ ಸಾಹಸ ಮಾಡಿದ್ದೇಕೆ?
ಸಿಧು ಮೂಸೆವಾಲ ಮೇಲೆ ಸತತ ಗುಂಡಿನ ದಾಳಿ ನಡೆಸಿದ ಹಂತಕರು ಸಿಧು ಮರಣ ಖಚಿತಪಡಿಸಿದ ಬಳಿಕವಷ್ಟೇ ಸ್ಥಳದಿಂದ ತೆರಳಿದ್ದಾರೆ. ಇದಕ್ಕಾಗಿ 10ಕ್ಕೂ ಹೆಚ್ಚು ಪಿಸ್ತೂಲ್ ಬಳಸಲಾಗಿದೆ. ಕಳೆದ ರಾತ್ರಿ ಕಾಶ್ಮರೆ ಘಾಟ್ ಬಸ್ ನಿಲ್ದಾಣದ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
18 ವರ್ಷದ ಅಂಕಿತ್ ಸಿರ್ಸಾ ಈ ಹಂತಕರ ಗ್ಯಾಂಗ್‌ನಲ್ಲಿರುವ ಶಾರ್ಪ್ ಶೂಟರ್. ಈತನ ಪಿಸ್ತೂಲ್‌ನಿಂದ ಸಿಡಿಸದ ಎಲ್ಲಾ ಗುಂಡುಗಳು ಸಿಧೂ ಮೂಸೆವಾಲ ದೇಹ ಹೊಕ್ಕಿದೆ. ಕಳೆದ ರಾತ್ರಿ ಬಂಧಿಸಿರುವ ಆರೋಪಿಗಳ ಮೊಬೈಲ ವಶಕ್ಕೆ ಪಡೆದಿರುವ ಪೊಲೀಸರು ಇದೀಗ ಹೆಚ್ಚಿನ ವಿಚಾರಣೆ ಆರಂಭಿಸಿದ್ದಾರೆ. ಬಂಧಿತ ಆರೋಪಿಗಳ ಮೊಬೈಲ್ ನಿಂದ ಮತ್ತಷ್ಟು ವಿಡಿಯೋಗಳು ಹೊರಬರುವ ಸಾಧ್ಯತೆ ಇದೆ.
ಪ್ರಮುಖ ಶೂಟರ್ ಸೇರಿ ಇಬ್ಬರ ಬಂಧನ
ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಪ್ರಕರಣದಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕವು ಮತ್ತೆ ಇಬ್ಬರನ್ನು ಬಂಧಿಸಿದೆ. ಅಂಕಿತ್ ಹಾಗೂ ಸಚಿನ್ ಭಿವಾನಿ ಬಂಧಿತ ಆರೋಪಿಗಳು. ಇವರಿಬ್ಬರೂ ಲಾರೆನ್ಸ್ ಬಿಷ್ಣೋಯ್ ಹಾಗೂ ಗೋಲ್ಡಿ ಬ್ರಾರ್ ಅವರ ಗ್ಯಾಂಗ್ ಜತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಅಂಕಿತ್, ಸಿಧುರ ಮೇಲೆ ಗುಂಡು ಹಾರಿಸಿದ ಶೂಟರ್‌ಗಳಲ್ಲಿ ಒಬ್ಬನಾಗಿದ್ದು, ಭಿವಾನಿ 4 ಶೂಟರ್‌ಗಳಿಗೆ ಆಶ್ರಯ ನೀಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಇದರೊಂದಿಗೆ ಈವರೆಗೆ ಈ ಪ್ರಕರಣದಲ್ಲಿ ಒಟ್ಟು 5 ಜನರನ್ನು ಬಂಧಿಸಿದಂತಾಗಿದೆ.
ಸಿಧು ಮೂಸೆವಾಲಾ ಹತ್ಯೆಗೂ ಮುನ್ನ ಆತನೊಂದಿಗೆ ಸೆಲ್ಫಿ ಕ್ಲಿಕ್ ಮಾಡಿದ್ದ ವ್ಯಕ್ತಿಯ ಬಂಧನ
ಪಂಜಾಬ್ ಗಾಯಕ ಸಿಧು ಮೂಸೇವಾಲ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು, ಮೂಸೇವಾಲಾ ಮೇಲೆ ಗುಂಡಿನ ಮಳೆಗರೆದ ಇಬ್ಬರು ಸೇರಿ ಮೂವರನ್ನು ಸೋಮವಾರ ಬಂಧಿಸಿದ್ದಾರೆ. ಬಂಧಿತರನ್ನು ಹರ್ಯಾಣದ ಪ್ರಿಯಾವತ್‌ರ್ ಅಲಿಯಾಸ್ ¶ೌಜಿ (26), ಕಾಶಿಶ್(24) ಮತ್ತು ಪಂಜಾಬ್‌ನ ಕೇಶವ್ ಕುಮಾರ್(29) ಎಂದು ಗುರುತಿಸಲಾಗಿದೆ. ಬಂಧಿತರಿಂದ 8 ಗ್ರೆನೇಡ್‌ಗಳು, 9 ಎಲೆಕ್ಟ್ರಿಕ್ ಡಿಟೋನೇಟರ್, 3 ಪಿಸ್ತೂಲುಗಳು ಮತ್ತು 1 ರೈಫಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೇವಾಲಾ ಹಾಡಿದ್ದ ‘295’ ಹಾಡು ‘ಬಿಲ್‌ಬೋರ್ಡ್ ಗ್ಲೋಬಲ್ 200ರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಜುಲೈ 2021ರಲ್ಲಿ ಬಿಡುಗಡೆಯಾಗಿದ್ದ ಹಾಡು 20 ಕೋಟಿ ಜನ ನೋಡುಗರಿಂದ ಯೂಟ್ಯೂಬ್‌ನಲ್ಲಿ ವೀಕ್ಷಣೆಯಾದ ಹಿನ್ನೆಲೆಯಲ್ಲಿ ಅದು ಪಟ್ಟಿಗೆ ಸೇರಲ್ಪಟ್ಟಿದೆ. ಮೂಸೇವಾಲಾರನ್ನು ಮೇ.30ರಂದು ಮಾನ್ಸಾ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಹತ್ಯೆಮಾಡಿರುವುದು ಭಾರಿ ಮಟ್ಟದಲ್ಲಿ ಸುದ್ದಿಯಾಗಿತ್ತು.