ಡಿ ಗ್ಯಾಂಗ್ ಕ್ರೌರ್ಯ ಬಿಚ್ಚಿಟ್ಟ FSL ರಿಪೋರ್ಟ್, ವೃಷಣಕ್ಕೆ ಹಲ್ಲೆ ಸಂಜೆ 6 ರಿಂದ 6.30ರೊಳಗೆ  ರೇಣುಕಾಸ್ವಾಮಿ ಸಾವು

ದರ್ಶನ್ ಗ್ಯಾಂಗ್ ಕ್ರೌರ್ಯ ಬಿಚ್ಚಿಟ್ಟ ಎಫ್ಎಸ್‌ಎಲ್ ರಿಪೋರ್ಟ್, ವೃಷಣದ ಮೇಲೆ ಗಂಭೀರ ಹಲ್ಲೆ, ಸಂಜೆ 6 ರಿಂದ 6.30ರೊಳಗೆ ಮೃತಪಟ್ಟ ರೇಣುಕಾಸ್ವಾಮಿ

First Published Aug 14, 2024, 1:08 PM IST | Last Updated Aug 14, 2024, 1:09 PM IST

ಡಿ  ಗ್ಯಾಂಗ್ ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿ ಸಿಕ್ಕಿವೆ. ಇದೆಲ್ಲದ ನಡುವೆ ರೇಣುಕಾಸ್ವಾಮಿಯನ್ನು ಎಷ್ಟು ಭಯಾನಕವಾಗಿ ಕೊಲ್ಲಲಾಗಿತ್ತು ಎಂಬುದಕ್ಕೆ ಮರಣೋತ್ತರ ವರದಿ ಕೂಡ ಪೊಲೀಸರ ಕೈ ಸೇರಿದ್ದು, ಎದೆಯ ಎಲುಬು ಮುರಿದು ಹೋಗಿ ಶ್ವಾಸಕೋಶಕ್ಕೆ ಚುಚ್ಚಿದೆ. ಬೆನ್ನಿನ ಮೂಳೆ ಮುರಿದು ಹೋಗಿದೆ. ಬಲದ ಕಣ್ಣಿಗೆ ತೀವ್ರ ಪೆಟ್ಟಾಗಿದೆ. ಕಾಲಿನ ಮೂಳೆ ಮುರಿದು ಹೋಗಿದ್ದು, ವೃಷಣದ ಮೇಲೆ ಹೀನಾಯವಾಗಿ ಹಲ್ಲೆಯಾಗಿ ರಕ್ತ ಸೋರಿಕೆಯಾಗಿದೆ. ತಲೆಗೆ ಗಂಭೀರ ಗಾಯ, ಮೆದುಳಿನಿಂದ ರಕ್ತಸ್ರಾವವಾಗಿದೆ. ಸಾವಿನ ಸಮಯ ಸಂಜೆ 6 ರಿಂದ 6.30 ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಜೈಲಿನಲ್ಲಿರುವ ದರ್ಶನ್ ಆರೋಗ್ಯದಲ್ಲಿ ಏರುಪೇರು, ಚಿಂತಿಸುವ ಅಗತ್ಯವಿಲ್ಲ

ಕೊಲೆ ತನಿಖೆಯಲ್ಲಿ ದರ್ಶನ್ ವಿರುದ್ದ ಕೂಡ ಮಹತ್ವದ ಸಾಕ್ಷಿ ಪೊಲೀಸರಿಗೆ ಸಿಕ್ಕಿದೆ. ದರ್ಶನ್ ಕೊಲೆಯಲ್ಲಿ ಭಾಗಿದ್ದ ಸಂಬಂಧ ಎಫ್ ಎಸ್ ಎಲ್ ವರದಿ ಬಂದಿದ್ದು, ದರ್ಶನ್ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ದೇಹದ ರಕ್ತದ ಕಲೆಗಳು ಇರುವುದು ಪತ್ತೆಯಾಗಿದೆ. ದರ್ಶನ್ ಮನೆಯಿಂದ ಈ ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.