ಮಗಳ ಕತ್ತು ಹಿಸುಕಿ ಬಾಯಿಗೆ ಟಾಯ್ಲೆಟ್ ಕ್ಲೀನರ್ ಸುರಿದ ಪಾಪಿ ತಂದೆ: ಸಾವು ಬದುಕಿನ ನಡುವೆ ಹೋರಾಟ!

By BK Ashwin  |  First Published Apr 29, 2023, 12:31 PM IST

ಮಹಿಳೆ ತನ್ನ ನೆರೆಯವನಾದ ಅಜಯ್ ಕುಮಾರ್‌ನನ್ನು ಮದುವೆಯಾಗಲು ಬಯಸಿದ್ದಳು. ಆದರೆ, ತನ್ನ ಮಗಳು ಪ್ರೇಮ ವಿವಾಹ ಮಾಡಿಕೊಳ್ಳುವುದು ಬೇಡವೆಂದು ಕುಟುಂಬದವರು ಅದನ್ನು ಒಪ್ಪಲಿಲ್ಲ ಎಂದು ತಿಳಿದುಬಂದಿದೆ. 


ಬರೇಲಿ (ಏಪ್ರಿಲ್ 29, 2023): ದೆಹಲಿ-ಲಖನೌ ಹೆದ್ದಾರಿಯಲ್ಲಿ ಸುಮಾರು 40% ಸುಟ್ಟಗಾಯಗಳೊಂದಿಗೆ 25 ವರ್ಷದ ಮಹಿಳೆಯೊಬ್ಬಳು ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಈ ಘಟನೆ ಬೆಳಕಿಗೆ ಬಂದ  ಗಂಟೆಗಳ ನಂತರ, ಪೊಲೀಸರು ಆಕೆಯ ತಂದೆ, ತೋಟರಾಮ್ ಸಿಂಗ್ ಮತ್ತು ಸೋದರ ಮಾವ ದಿನೇಶ್ ಕುಮಾರ್ ಅವರನ್ನು ಬಂಧಿಸಿದ್ದಾರೆ. ಏಕೆಂದರೆ, ಈ ಆರೋಪಿಗಳು ತಮ್ಮ ಕುಟುಂಬದ ಗೌರವಕ್ಕಾಗಿ ಮಗಳನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಅಪರಾಧದಲ್ಲಿ ಇತರ ಇಬ್ಬರು ಸಹಚರರು, ಕುಟುಂಬ ಸದಸ್ಯರ ಮೇಲೂ ಪ್ರಕರಣ ದಾಖಲಿಸಲಾಗಿದೆ ಮತ್ತು ಅವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಈ ಪ್ರಕರಣ ಸಂಬಂಧ ಮಾಹಿತಿ ನೀಡಿದ ಹೆಚ್ಚುವರಿ ಎಸ್‌ಪಿ ರಾಜ್‌ಕುಮಾರ್‌ ಅಗರ್ವಾಲ್‌, ‘’ಸಂತ್ರಸ್ತೆ ಇನ್ನೂ ತನ್ನ ಹೇಳಿಕೆಯನ್ನು ದಾಖಲಿಸುವ ಸ್ಥಿತಿಯಲ್ಲಿಲ್ಲ. ಆದರೆ ಆಕೆಯ ಸ್ಥಿತಿ ಸುಧಾರಿಸಿದೆ" ಎಂದು ಹೇಳಿದ್ದಾರೆ.

Tap to resize

Latest Videos

ಇದನ್ನು ಓದಿ: ಮತ್ತೊಂದು ಮರ್ಯಾದಾ ಹತ್ಯೆ: ಹೆತ್ತ ತಾಯಿ, ಮಗನನ್ನೇ ಕೊಚ್ಚಿ ಕೊಲೆ ಮಾಡಿದ ಪಾಪಿ ತಂದೆ!

ಮಹಿಳೆ ತನ್ನ ನೆರೆಯವನಾದ ಅಜಯ್ ಕುಮಾರ್‌ನನ್ನು ಮದುವೆಯಾಗಲು ಬಯಸಿದ್ದಳು. ಆದರೆ, ತನ್ನ ಮಗಳು ಪ್ರೇಮ ವಿವಾಹ ಮಾಡಿಕೊಳ್ಳುವುದು ಬೇಡವೆಂದು ಕುಟುಂಬದವರು ಅದನ್ನು ಒಪ್ಪಲಿಲ್ಲ. ಅಲ್ಲದೆ, ಏಪ್ರಿಲ್ 22 ರಂದು ದೇವೇಂದ್ರ ಕುಮಾರ್ ಎಂಬ ಇನ್ನೊಬ್ಬ ವ್ಯಕ್ತಿಯೊಂದಿಗೆ ಆಕೆಗೆ ಮದುವೆ ಮಾಡಿದರು. ಆದರೆ, ಮದುವೆಯ ಮರುದಿನವೇ ತಂದೆಗೆ ಕರೆ ಮಾಡಿ ಬಾಯ್ ಫ್ರೆಂಡ್ ಜೊತೆ ಬಾಳುವುದಾಗಿ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಮಹಿಳೆಯ ತಂದೆ, ಆಕೆಯ ಸಹೋದರ, ಸೋದರ ಮಾವ ಮತ್ತು ಸೋದರಸಂಬಂಧಿ ಅವಳನ್ನು ಕೊಲ್ಲಲು ನಿರ್ಧರಿಸಿದರು ಎಂದು ಪೊಲೀಸರು ಈ ಘಟನೆ ಬಗ್ಗೆ ವಿವರಿಸಿದ್ದಾರೆ.

“ಆರೋಪಿ ತಂದೆ ತನ್ನ ಬೈಕ್ ಅನ್ನು ಹೆದ್ದಾರಿಯಲ್ಲಿ ನಿಲ್ಲಿಸಿ ತನ್ನ ಮಗಳ ಕತ್ತು ಹಿಸುಕಿದ್ದಾನೆ. ಅಲ್ಲದೆ, ಟಾಯ್ಲೆಟ್‌ ಕ್ಲೀನರ್ ಆಗಿ ಬಳಸುವ ತನ್ನ ಮಗನಿಗೆ ಆಸಿಡ್ ಬಾಟಲಿಯನ್ನು ಖರೀದಿಸಲು ಹೇಳಿದ್ದಾನೆ. ಬಳಿಕ, ಅದನ್ನು ಆಕೆಯ ಬಾಯಿ ಮತ್ತು ಅವಳ ದೇಹದ ಮೇಲೆ ಸುರಿದಿದ್ದಾನೆ. ಈ ಹಿನ್ನೆಲೆ ಆಕೆ ಸತ್ತು ಹೋಗಿದ್ದಾಳೆಂದು ಭಾವಿಸಿ ಪೊದೆ ಬಳಿ ಆಕೆಯನ್ನು ಎಸೆದು ಹೋಗಿದ್ದಾರೆ. ಅದೃಷ್ಟವಶಾತ್, ಮಹಿಳೆ ರಾತ್ರಿಯಿಡೀ ಬದುಕಿದ್ದು, ಮರುದಿನ ಬೆಳಗ್ಗೆ ದಾರಿಹೋಕರು ಆಕೆಯನ್ನು ನೋಡಿದ್ದಾರೆ’’ ಎಂದೂ ಹೆಚ್ಚುವರಿ ಎಸ್‌ಪಿ ರಾಜ್‌ಕುಮಾರ್‌ ಅಗರ್ವಾಲ್‌ ಹೇಳಿದರು.

ಇದನ್ನೂ ಓದಿ: Honour Killing: ಅಂತರ್ಜಾತಿ ಯುವಕನ ಜತೆ ಪ್ರೀತಿ: ಮಗಳನ್ನೇ ಕೊಂದ ತಾಯಿ..!

ನಂತರ, ನಿಮ್ಮ ಮಗಳು ರಸ್ತೆಯಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ನಾವು ತೋಟರಾಮ್ ಅವರನ್ನು ಸಂಪರ್ಕಿಸಿದಾಗ, ತಮ್ಮ ಮಗಳು ಮದುವೆಯಾಗಿದ್ದಾಳೆ ಹಾಗೂ ಆಕೆಯ ಅತ್ತೆ ಮಾವನ ಮನೆಯಲ್ಲಿ ವಾಸಿಸುತ್ತಿದ್ದಾಳೆ ಎಂದು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದರು’’ ಎಂದೂ ಅವರು ಹೇಳಿದರು.  ಬಳಿಕ, ನಾವು ಅವರಿಗೆ ಫೋಟೋ ಕಳುಹಿಸಿದಾಗ, ಅವರು 'ಅದು ನನ್ನ ಮಗಳಲ್ಲ' ಎಂದು ಹೇಳಿದರು ಎಂದೂ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

"ಆದರೆ ಮಹಿಳೆ ತನ್ನ ತಂದೆ, ಸೋದರ ಮಾವ ಮತ್ತು ಇತರ ಇಬ್ಬರು ಸಂಬಂಧಿಕರೊಂದಿಗೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಕಂಡುಕೊಂಡೆವು. ಈ ಹಿನ್ನೆಲೆ ನಮಗೆ ಅನುಮಾನ ಬಂದು ಅವರನ್ನು ಬಂಧಿಸಿದ್ದೇವೆ" ಎಂದೂ ಘಟನೆ ಬಗ್ಗೆ ಹೆಚ್ಚುವರಿ ಎಸ್‌ಪಿ ರಾಜ್‌ಕುಮಾರ್‌ ಅಗರ್ವಾಲ್‌ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: UP Honour Killing: ಹಿಂದುಳಿದ ಜಾತಿಯ ಯುವಕನೊಂದಿಗೆ ಪ್ರೇಮ; ಮಗಳನ್ನು ಕೊಂದು ಬೆಂಕಿಯಿಟ್ಟ ಅಪ್ಪ

click me!