Bengaluru ಟೀ ಕುಡಿಯಲು ಬಂದಿದ್ದ ರೌಡಿಶೀಟರ್‌ ಬರ್ಬರ ಹತ್ಯೆ, 8 ಮಂದಿ ಅರೆಸ್ಟ್

By Gowthami K  |  First Published Nov 11, 2023, 9:54 AM IST

ಟೀ ಕುಡಿಯಲು ಬೇಕರಿ ಬಳಿಗೆ ಬಂದಿದ್ದ ರೌಡಿ ಶೀಟರ್‌ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿರುವ ಘಟನೆಗೆ ಸಂಬಂಧಿಸಿದಂತೆ  ಪುಟ್ಟೇನಹಳ್ಳಿ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.


ಬೆಂಗಳೂರು (ನ.11): ಟೀ ಕುಡಿಯಲು ಬೇಕರಿ ಬಳಿಗೆ ಬಂದಿದ್ದ ರೌಡಿ ಶೀಟರ್‌ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿರುವ ಘಟನೆಗೆ ಸಂಬಂಧಿಸಿದಂತೆ  ಪುಟ್ಟೇನಹಳ್ಳಿ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ವಿನಯ್, ಧರ್ಮ ಸೇರಿ ಎಂಟು ಮಂದಿ ಬಂಧನವಾಗಿದೆ. ಗಣೇಶ ಹಬ್ಬದಿಂದಲೂ ಈ  ಗ್ಯಾಂಗ್ ಗಲಾಟೆ ಮಾಡಿಕೊಳ್ಳುತ್ತಿತ್ತು. ಗಣೇಶ ಬಿಡುವ ವಿಚಾರಕ್ಕೆ ಸಹದೇಹ ಮತ್ತು ವಿನಯ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಆರೋಪಿ ವಿನಯ್ ಮೇಲೆ ಸಹದೇವ ಹಲ್ಲೆ ಮಾಡಿದ್ದ. ಮಾತ್ರವಲ್ಲ ಆರೋಪಿ ವಿನಯ್ ತಮ್ಮನ ಮೇಲೂ ಹಲ್ಲೆ ಮಾಡಿದ್ದ. ಈ ವೇಳೆ ಎರಡು ಗ್ಯಾಂಗ್ ಗಳು ಕೈ ಕೈ ಮಿಲಾಯಿಸಿಕೊಂಡಿದ್ದವು. ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Tap to resize

Latest Videos

undefined

ಕೆಇಎ ಪರೀಕ್ಷೆ ಹಗರಣ, ಕಿಂಗ್ ಪಿನ್ ಆರ್‌ ಡಿ ಪಾಟೀಲ್‌ ಮಹಾರಾಷ್ಟ್ರದಲ್ಲಿ ಬಂಧನ

ಕೋಣನಕುಂಟೆ ಠಾಣೆ ರೌಡಿಶೀಟರ್‌ ಸಹದೇವ (32) ಕೊಲೆಯಾದ ರೌಡಿ. ಬುಧವಾರ ರಾತ್ರಿ 9.30ರ ಸುಮಾರಿಗೆ ಸಹದೇವ ಚುಂಚಘಟ್ಟ ಮುಖ್ಯರಸ್ತೆಯಲ್ಲಿ ಬೇಕರಿವೊಂದರ ಬಳಿ ಟೀ ಕುಡಿಯಲು ಬಂದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ವಿನಯ್ ಗ್ಯಾಂಗ್ ಮತ್ತು ಸಹದೇವ ನಡುವೆ ಕ್ಷುಲ್ಲಕ ವಿಚಾರಕ್ಕೆ ಕಿರಿಕ್ ನಡೆದಿದೆ. ಯಾಕೆ ಅವತ್ತು ಕೊಟ್ಟಿದ್ದು ಸಾಕಾಗಿಲ್ವಾ ಎಂದು ಸಹದೇವ ಹೇಳಿದ್ದಾನೆ. ದುಷ್ಕರ್ಮಿಗಳು ಏಕಾಏಕಿ ಸಹದೇವನ ಮೇಲೆ ಎರಗಿ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.  ಮೂರು ದ್ವಿಚಕ್ರ ವಾಹನಗಳಲ್ಲಿ ವಿನಯ್‌ ಗ್ಯಾಂಗ್ ಬಂದಿತ್ತು.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಸ್ಥಳ ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿ ಮೃತದೇಹವನ್ನು ಕುಟುಂಬಕ್ಕೆ ಒಪ್ಪಿಸಿದರು. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಅಪ್ರಾಪ್ತೆಯ ಗ್ಯಾಂಗ್‌ರೇಪ್, ಮೂವರು ಕಿರಾತಕರು ಬಂಧನ

ಕೊಲೆಯಾದ ರೌಡಿ ಸಹದೇವ ಕೋಣನಕುಂಟೆ ಪೊಲೀಸ್‌ ಠಾಣೆಯ ರೌಡಿಶೀಟರ್‌ ಆಗಿದ್ದಾನೆ. ಈತನ ವಿರುದ್ಧ ಈ ಹಿಂದೆ ದರೋಡೆ, ಸುಲಿಗೆ, ಕೊಲೆಗೆ ಯತ್ನ, ಕೊಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.  ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!