ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅಕ್ರಮದಲ್ಲಿ ರಷ್ಯಾ ಹ್ಯಾಕರ್ ಕೈವಾಡವಿದೆ ಎಂದು ಸಿಬಿಐ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ. ಇನ್ನು, ದೆಹಲಿ ನ್ಯಾಯಾಲಯ ಈ ಪ್ರಕರಣ ಸಂಬಂಧ 2 ದಿನಗಳ ವಿಚಾರಣೆಗೆ ಅವರನ್ನು ಕಸ್ಟಡಿಗೆ ನೀಡಿದೆ.
ರಷ್ಯಾದ ಹ್ಯಾಕರ್ (Hacker) ಮಿಕೇಲ್ ಶಾರ್ಗಿನ್ (Mikhail Shargin) ಕಳೆದ ವರ್ಷದ ಐಐಟಿಗಳಂತಹ ಭಾರತದ ಉನ್ನತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ನೀಡುವ ಜೆಇಇ-ಮೇನ್ಸ್ (JEE Mains) ಪರೀಕ್ಷೆಯಲ್ಲಿ ಆನ್‌ಲೈನ್ ವ್ಯವಸ್ಥೆಯನ್ನು ಕುಶಲತೆಯಿಂದ ನಿರ್ವಹಿಸುವ ಮೂಲಕ 820 ವಿದ್ಯಾರ್ಥಿಗಳಿಗೆ ವಂಚನೆ ಮಾಡಲು ಸಹಾಯ ಮಾಡಿದ್ದಾರೆ ಎಂದು ಸಿಬಿಐ ಇಂದು ದೆಹಲಿ ನ್ಯಾಯಾಲಯದಲ್ಲಿ ಹೇಳಿದೆ. ಇದು ಆರಂಭಿಕ ಅಂದಾಜಿಗಿಂತ ಹೆಚ್ಚಾಗಿದೆ. ಇನ್ನು, ರಷ್ಯಾದ ಈ 25 ವರ್ಷದ ಯುವಕನನ್ನು ನ್ಯಾಯಾಲಯ 2 ದಿನಗಳ ಅವಧಿಗೆ ಕಸ್ಟಡಿಗೆ ನೀಡಲಾಗಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆಗೆದುಕೊಂಡ ಪರೀಕ್ಷೆಯನ್ನು - ಗೊತ್ತುಪಡಿಸಿದ ಕೇಂದ್ರಗಳಲ್ಲಿ ನಿಯಂತ್ರಣ-ನಿರ್ಬಂಧಿತ ಕಂಪ್ಯೂಟರ್‌ಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಮಿಖೇಲ್ ಶಾರ್ಗಿನ್ ಸಿಸ್ಟಮ್ ಅನ್ನು ಹ್ಯಾಕ್ ಮಾಡಿದ್ದರಿಂದ ವಿದ್ಯಾರ್ಥಿಗಳು ತನ್ನ ಸಹವರ್ತಿಗಳಿಗೆ "ರಿಮೋಟ್ ಆಕ್ಸೆಸ್"(Remote Access) ನೀಡಬಹುದಾಗಿತ್ತು. ನಂತರ ಅವರು ಬೇರೆಡೆ ಕುಳಿತುಕೊಂಡೇ ಕಂಪ್ಯೂಟರ್‌ಗಳಲ್ಲಿ ಜೆಇಇ ಮೇನ್ಸ್ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ನೀಡಿದ್ದಾರೆ ಎಂದು ಸಿಬಿಐ ತನಿಖೆ ಹೇಳುತ್ತದೆ.
ಇದನ್ನು ಓದಿ: ಪಿಎಸ್‌ಐ ಅಕ್ರಮ: ಕಬುರಗಿಯಲ್ಲಿ ಮತ್ತೋರ್ವ ಸೆರೆ
ಸರಳವಾಗಿ ಹೇಳುವುದಾದರೆ, ಕೇಂದ್ರಗಳ ಹೊರಗಿನ "ಶಿಕ್ಷಕರು" ಅಥವಾ "ತರಬೇತುದಾರರು" (Coachers) ವಿದ್ಯಾರ್ಥಿಗಳ ಕಂಪ್ಯೂಟರ್‌ಗಳ ಉಸ್ತುವಾರಿ ವಹಿಸಿಕೊಳ್ಳಲು ಮತ್ತು ಪ್ರಶ್ನೆಗಳನ್ನು ಪರಿಹರಿಸಲು ಸಮರ್ಥರಾಗಿದ್ದರು. ಇನ್ನು, ಈ ಪ್ರಕರಣ ಸಂಬಂಧ ಈವರೆಗೆ 24 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಮಿಕೇಲ್ ಶಾರ್ಗಿನ್ ಅವರು ಕಝಾಕಿಸ್ತಾನ್‌ನಿಂದ ಭಾರತಕ್ಕೆ ಬಂದಿಳಿದ ನಂತರ ನಿನ್ನೆ ಬಂಧಿಸಲಾಗಿದೆ.. ಅವರು ತನಿಖಾಧಿಕಾರಿಗಳಿಗೆ ಸಹಕರಿಸುತ್ತಿಲ್ಲ ಎಂದು ಸಿಬಿಐ ಇಂದು ನ್ಯಾಯಾಲಯಕ್ಕೆ ತಿಳಿಸಿದೆ. "ಅವರು ವೃತ್ತಿಪರ ಹ್ಯಾಕರ್ ಆಗಿದ್ದಾರೆ ಮತ್ತು iLeon ಸಾಫ್ಟ್‌ವೇರ್ (Software) ಅನ್ನು ಹ್ಯಾಕ್ ಮಾಡಿದ್ದಾರೆ" ಎಂದು ಕೇಂದ್ರೀಯ ತನಿಖಾ ಸಂಸ್ಥೆ (Central Bureau of Investigation) ಹೇಳಿದೆ. ಈ ಸಾಫ್ಟ್‌ವೇರ್ ಅನ್ನು ವಿಶ್ವಪ್ರಸಿದ್ಧ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services) (TCS) ಒದಗಿಸಿತ್ತು.
.
ಇನ್ನೊಂದೆಡೆ, ಸಿಬಿಐ ತನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲು ಬಯಸಿದರೆ, ಅದು ತನ್ನ ಉಪಸ್ಥಿತಿಯಲ್ಲೇ ಆಗಿರಬೇಕು ಎಂದು ರಷ್ಯಾದ ಹ್ಯಾಕರ್ ಮಿಕೇಲ್ ಶಾರ್ಗಿನ್ ನ್ಯಾಯಾಲಯಕ್ಕೆ ತಿಳಿಸಿದರು. ಈ ಮಧ್ಯೆ, ಅವರ ಯೂಸರ್ ನೇಮ್ ಮತ್ತು ಪಾಸ್ ವರ್ಡ್‌ಗಳನ್ನು ಹಂಚಿಕೊಳ್ಳುವಂತೆ ನಿರ್ದೇಶನ ನೀಡುವಂತೆ ಸಿಬಿಐ ಕೋರ್ಟ್‌ಗೆ ಮನವಿ ಮಾಡಿದೆ.
ಇದನ್ನೂ ಓದಿ: ಪಿಎಸ್‌ಐ ಮರು ಪರೀಕ್ಷೆಗೆ ಹೈಕೋರ್ಟ್ ಮಧ್ಯಂತರ ತಡೆ
ಹರಿಯಾಣದ ಸೋನಿಪತ್‌ನಲ್ಲಿರುವ ಪರೀಕ್ಷಾ ಕೇಂದ್ರದಿಂದ "ರಿಮೋಟ್ ಆಕ್ಸೆಸ್" ಅನ್ನು ಒದಗಿಸಲಾಗಿದೆ ಎಂದು ಈವರೆಗಿನ ತನಿಖೆಯು ಹೇಳುತ್ತದೆ. ಆರಂಭದಲ್ಲಿ, 20 ವಿದ್ಯಾರ್ಥಿಗಳು ಮೋಸ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅಲಲ್ಲದೆ, ಆ 20 ವಿದ್ಯಾರ್ಥಿಗಳಿಗೆ, ಮುಂದಿನ ಮೂರು ವರ್ಷಗಳವರೆಗೆ ಅವರಿಗೆ ಪರೀಕ್ಷೆ ತೆಗೆದುಕೊಳ್ಳದಂತೆ ಬ್ಯಾನ್ ಮಾಡಲಾಗಿದೆ.
ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ವಂಚನೆ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದ್ದು, ಹಲವು ನಗರಗಳಲ್ಲಿ ದಾಳಿ ನಡೆಸಿ ಲ್ಯಾಪ್‌ಟಾಪ್‌ಗಳು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡಿತ್ತು. ನಂತರ, ತನಿಖೆ ವೇಳೆ ರಷ್ಯಾದ ಹ್ಯಾಕರ್ ಮಿಕೇಲ್ ಶಾರ್ಗಿನ್ ಅವರ ಹೆಸರು ಬೆಳಕಿಗೆ ಬಂದಿದ್ದು, ಅಲ್ಲದೆ, ಮತ್ತಷ್ಟು ಜನರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈ ಹಗರಣದಲ್ಲಿ ಹಲವಾರು ವಿದೇಶಿ ಪ್ರಜೆಗಳು ಭಾಗಿಯಾಗಿದ್ದಾರೆ ಎಂದೂ ಮೂಲಗಳು ತಿಳಿಸಿವೆ.