ಅಶ್ಲೀಲ ಚಿತ್ರದ ಶೂಟಿಂಗ್ ವೇಳೆ ನಟಿ ಸಾವು, ಸತ್ತು ಎರಡು ತಿಂಗಳಾದ್ರೂ ಮೆಸ್ಸೇಜ್ ಬರ್ತಾನೆ ಇತ್ತು!

By Roopa Hegde  |  First Published Jan 7, 2025, 12:29 PM IST

ಇಟಲಿಯ ನಟಿಯೊಬ್ಬಳ ಸಾವಿನ ಕಥೆ ಭಯಾನಕವಾಗಿದೆ. ಅಶ್ಲೀಲ ಚಿತ್ರದ ಮೂಲಕ ಹಣ ಸಂಪಾದನೆ ಮಾಡ್ತಿದ್ದ ಆಕೆ ಜೀವ, ಅದೇ ಚಿತ್ರದ ಶೂಟಿಂಗ್ ವೇಳೆ ಹೋಗಿದೆ. ಮರ್ಡರ್ ಮಾಡಿದ ವ್ಯಕ್ತಿ, ನಟಿ ಹೆಸರಿನಲ್ಲೇ ಹಣ ಸಂಪಾದನೆ ಮಾಡಿದ್ದಾನೆ. 
 


ಅಶ್ಲೀಲ ಸಿನಿಮಾಗಳಲ್ಲಿ ಕೆಲಸ ಮಾಡ್ತಿದ್ದ ನಟಿ (Actress)ಯೊಬ್ಬಳ ಸಾವಿನ ಕಥೆ ಅಚ್ಚರಿ ಹುಟ್ಟಿಸುವಂತಿದೆ. ಸಿನಿಮಾ ಶೂಟಿಂಗ್ (movie shooting) ವೇಳೆಯೇ ಆಕೆ ಸಾವನ್ನಪ್ಪಿದ್ದಾಳೆ. ಆದ್ರೆ ಹಣಕ್ಕಾಗಿ ನಟಿ ಜೀವಂತವಿದ್ದಾಳೆಂದು ಬಿಂಬಿಸಲಾಗಿತ್ತು. ಎರಡು ತಿಂಗಳ ಕಾಲ ಈ ಕಣ್ಣಾಮುಚ್ಚಾಲೆ ಆಟ ಮುಂದುವರೆದಿತ್ತು. ಆ ನಂತ್ರ ನಟಿಯ ಹತ್ಯೆಯ ಬಗ್ಗೆ ಭಯಾನಕ ಸತ್ಯ ಹೊರಗೆ ಬಿದ್ದಿತ್ತು. ಪೋರ್ನ್ ಸಿನಿಮಾ ಶೂಟಿಂಗ್ ವೇಳೆಯೇ ಸಾವನ್ನಪ್ಪಿದ ನಟಿ ಹೆಸರು ಕರೋಲ್ ಮಾಲ್ಟೆಸಿ (Carol Maltese). ಆಕೆ ಇಟಲಿ ಮೂಲದ ನಟಿ.

ಕರೋಲ್ ಮಾಲ್ಟೆಸಿ, ಇಟಲಿಯ ಪ್ರಸಿದ್ಧ ಪೋರ್ನ್ ಸ್ಟಾರ್. ಆಕೆಯನ್ನು ಜನರು ಚಾರ್ಲೋಟ್ ಆಂಜಿ ಎಂದೂ ಕರೆಯುತ್ತಿದ್ದರು. 26 ವರ್ಷದ ಕರೋಲ್ ಮಾಲ್ಟೆಸಿ, ಅತ್ಯಂತ ಪ್ರಸಿದ್ಧ ನಟಿ. ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ್ದ ಆಕೆಯ ವಿಡಿಯೋಗಳು ತುಂಬಾ ಅಸಭ್ಯವಾಗಿರ್ತಿದ್ದವು. ಸೋಶಿಯಲ್ ಮೀಡಿಯಾದಲ್ಲೂ ಪ್ರಸಿದ್ಧಿ ಪಡೆದಿರುವ ಕರೋಲ್ ಮಾಲ್ಟೆಸಿ, ಲಕ್ಷಾಂತರ ಮಂದಿ ಫಾಲೋವರ್ಸ್ ಹೊಂದಿದ್ದಳು. ಕಳೆದ ವರ್ಷ ಸೆಲೆಬ್ರಿಟಿಗಳ ಸಮಾರಂಭವೊಂದರಲ್ಲಿ ಆಕೆ ಪಾಲ್ಗೊಳ್ಳಬೇಕಿತ್ತು. ಆದ್ರೆ ಕರೋಲ್ ಮಾಲ್ಟೆಸಿ, ಕಾರ್ಯಕ್ರಮಕ್ಕೆ ಗೈರಾಗಿದ್ದಳು. ಅದಕ್ಕೆ ಕರೆ ಮಾಡಿ ವಿಚಾರಿಸುವ ಪ್ರಯತ್ನ ನಡೆಸಿತ್ತು. ಕರೋಲ್ ಮಾಲ್ಟೆಸಿ, ಯಾರಿಗೂ ಫೋನ್ ಮಾಡ್ತಿರಲಿಲ್ಲ, ಯಾರ ಫೋನ್ ಕೂಡ ರಿಸೀವ್ ಮಾಡ್ತಿರಲಿಲ್ಲ. ಜನರು ಬರೀ ವಾಟ್ಸ್ ಅಪ್ ಚಾಟ್ ಮೂಲಕವೇ ಆಕೆ ಜೊತೆ ಸಂಪರ್ಕದಲ್ಲಿದ್ದರು. ಕರೋಲ್ ಮಾಲ್ಟೆಸಿ, ಫೋನ್ ರಿಸೀವ್ ಮಾಡದ ಕಾರಣ, ಅವಳ ಮೇಲೆ ಜನರಿಗೆ ಅನುಮಾನ ಬರಲು ಶುರುವಾಗಿತ್ತು. ಈ ಬಗ್ಗೆ ಕುಟುಂಬಸ್ಥರನ್ನು ವಿಚಾರಿಸಿದ್ದರು. ಕರೋಲ್ ಮಾಲ್ಟೆಸಿ, ಪ್ರತಿ ತಿಂಗಳು ಮನೆಯ ಬಾಡಿಗೆ ಸೇರಿದಂತೆ ಬಿಲ್ ಗಳನ್ನು ಪಾವತಿ ಮಾಡ್ತಿದ್ದಳೇ ವಿನಃ ಮನೆಯವರಿಗೆ ಕರೆ ಮಾಡಿ ಎರಡು ತಿಂಗಳು ಕಳೆದಿತ್ತು. ಶೂಟಿಂಗ್ ನಲ್ಲಿ ಆಕೆ ಬ್ಯುಸಿ ಇರಬಹುದೆಂದು ನಾವು ಭಾವಿಸಿದ್ದೆವು ಎಂದು ಕುಟುಂಬಸ್ಥರು ಹೇಳಿದ್ದರು. ಜನರ ಪ್ರಶ್ನೆ ನಂತ್ರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

Tap to resize

Latest Videos

ಪಾಳು ಬಿದ್ದ ಮನೆಯ ಫ್ರಿಡ್ಜ್‌ ಬಾಗಿಲು ತೆರೆದ ಪೊಲೀಸರಿಗೆ ಶಾಕ್: ಒಳಗಿದ್ದಿದ್ದೇನು?

ಈ ಮಧ್ಯೆ ಬೆಟ್ಟದ ಮೇಲೆ 15 ಪಾಲಿಥಿನ್ ಚೀಲ ಬಿದ್ದಿದ್ದು, ಅದ್ರಲ್ಲಿ ಮೃತ ದೇಹದ ತುಣುಕುಗಳಿವೆ ಎಂಬ ಮಾಹಿತಿ ಸಿಕ್ಕಿತ್ತು. ಪೊಲೀಸರು ಅಪರಿಚಿತ ಶವದ ಪತ್ತೆ ಕಾರ್ಯ ಶುರು ಮಾಡಿದ್ದರು. ಸ್ಥಳಕ್ಕೆ ಬಂದಿದ್ದ ವರದಿಗಾರರೊಬ್ಬರು ಇದು ಕರೋಲ್ ಮಾಲ್ಟೆಸಿ ಶವವೆಂದಿದ್ದರು. ಕರೋಲ್ ಮಾಲ್ಟೆಸಿ ಹಾಕಿದ್ದ ಹಚ್ಚೆ ಆಧಾರದ ಮೇಲೆ ಆಕೆಯ ಮೃತದೇಹ ಪತ್ತೆ ಮಾಡಲಾಗಿತ್ತು. ಅನುಮಾನ ಬಗೆಹರಿಸಿಕೊಳ್ಳಲು ವರದಿಗಾರರು ಕರೋಲ್ ಮಾಲ್ಟೆಸಿಗೆ ಮೆಸ್ಸೇಜ್ ಮಾಡಿದ್ದರು. ಹೇಗಿದ್ದೀರಿ ಎಂದು ಪ್ರಶ್ನೆ ಕೇಳಿದ್ದರು. ಆ ಕಡೆಯಿಂದ ಚೆನ್ನಾಗಿದ್ದೇನೆಂಬ ಉತ್ತರ ಬರ್ತಿದ್ದಂತೆ ಎಲ್ಲರೂ ಬೆರಗಾಗಿದ್ದರು. ಮೆಸ್ಸೇಜ್ ಜಾಡು ಹಿಡಿದು ಹೊರಟಾಗ 43 ವರ್ಷದ ವ್ಯಕ್ತಿಯೊಬ್ಬ ಕರೋಲ್ ಮಾಲ್ಟೆಸಿ ಮೊಬೈಲ್ ಬಳಸ್ತಿರೋದು ತಿಳಿದುಬಂತು.

ಸೋಶಿಯಲ್ ಮೀಡಿಯಾದಲ್ಲಿ ಮಲಯಾಳಂ ನಟಿ ಹನಿ ರೋಸ್‌ಗೆ ಅಶ್ಲೀಲ ನಿಂದನೆ: ಓರ್ವ ಅಂದರ್,

ಆತನ ಮನೆ ಮೇಲೆ ದಾಳಿ ನಡೆಸಿದಾಗ ಕರೋಲ್ ಮಾಲ್ಟೆಸಿಗೆ ಸಂಬಂಧಿಸಿದ ಕೆಲ ವಸ್ತುಗಳು ಸಿಕ್ಕಿವೆ. ಬ್ಯಾಂಕರ್ ಆಗಿದ್ದ ವ್ಯಕ್ತಿ ಕರೋಲ್ ಮಾಲ್ಟೆಸಿ ಜೊತೆ ಎರಡು ಅಶ್ಲೀಲ ಚಿತ್ರಗಳ ಶೂಟಿಂಗ್ ಮಾಡಿದ್ದ. ಅವು ಭಯಾನಕವಾಗಿದ್ದವು. ಈ ಸಮಯದಲ್ಲಿ ಆರೋಪಿ, ಕರೋಲ್ ಮಾಲ್ಟೆಸಿ ತಲೆ ಮೇಲೆ ಪ್ಲಾಸ್ಟಿಕ್ ಇಟ್ಟು, ಕಬ್ಬಿಣದ ವಸ್ತುವಿನಿಂದ ಹೊಡೆಯಲು ಶುರು ಮಾಡಿದ್ದ. ಆತನ ಹೊಡೆತಕ್ಕೆ ಕರೋಲ್ ಮಾಲ್ಟೆಸಿ ತಲೆ ಜಜ್ಜಿ ಹೋಗಿತ್ತು. ನಂತ್ರ ಆತ, ಕರೋಲ್ ಮಾಲ್ಟೆಸಿ ದೇಹವನ್ನು ಸಣ್ಣದಾಗಿ ಕತ್ತರಿಸಿ ಫ್ರಿಜ್ ನಲ್ಲಿಟ್ಟಿದ್ದ. ಕೊನೆಯಲ್ಲಿ ಅದನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದ. ಕರೋಲ್ ಮಾಲ್ಟೆಸಿ ಮೊಬೈಲ್ ಬಳಸಿಕೊಂಡು ಹಣ ಸಂಪಾದನೆ ಶುರು ಮಾಡಿದ್ದ. ಆಕೆ ಸತ್ತು ಎ
ರಡು ತಿಂಗಳಾದ್ರೂ ಆಕೆ ಮೊಬೈಲ್ ನಿಂದ ವಿಡಿಯೋಗಳು ಪೋಸ್ಟ್ ಆಗ್ತಾನೆ ಇದ್ವು. 

click me!