ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮನವಿ ಮಾಡಿಕೊಂಡಿಕೊಂಡಿದ್ದಾರೆ. ದೇಶದ ಏಕತೆಯ ಶಕ್ತಿಯನ್ನು ಜಗತ್ತಿಗೆ ತೋರಿಸಲು ಹೇಳಿದ್ದಾರೆ.
ನವದೆಹಲಿ(ಏ.03): ಕೊರೋನಾ ವೈರಸ್ ತಡೆಯಲು ನಾವೆಲ್ಲಾ ಒಂದಾಗೋಣ. ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ಮನೆಯ ಲೈಟ್ ಆರಿಸಿ 9 ನಿಮಿಷಗಳ ಕಾಲ ದೀಪ ಹಚ್ಚಿ, ಬೆಳಕಿನಿನ ಶಕ್ತಿ ಏನೆಂದು ತೋರಿಸೋಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೀಪ ಬೆಳಗಿಸಿ ಭಾರತ ಗೆಲ್ಲಿಸಿ ಎಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಯಡಿಯೂರಪ್ಪ ಜತೆ ಪ್ರಧಾನಿ ಮೀಟಿಂಗ್: ಬಿಎಸ್‌ವೈಗೆ ಮೋದಿ ಕೊಟ್ಟ ಖಡಕ್ ಸೂಚನೆಗಳಿವು
ದೇಶದಲ್ಲಿ ಲಾಕ್‌ಡೌನ್ ಘೋಷಿಸಿ 9 ದಿನಗಳಾಗಿವೆ. ನೀವೆಲ್ಲಾ ಸಹಕರಿಸಿದ ರೀತಿ ಅಭೂತಪೂರ್ವವಾಗಿದೆ. ಈ ಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದ್ದೀರಿ. ಈ ಸಂಕಷ್ಟವನ್ನು ದೇಶದ ಜನತೆ ಒಟ್ಟಾಗಿ ಎದುರಿಸೋಣ. ನಿಮ್ಮ ಮನೆಯ ಎಲ್ಲಾ ಲೈಟ್ ಆರಿಸಿ, ಮನೆಯ ಬಾಲ್ಕನಿ, ಇಲ್ಲವೇ ಬಾಗಿಲಲ್ಲಿ ನಿಂತು ಮೊಂಬತ್ತಿ, ಮೊಬೈಲ್ ಪ್ಲಾಸ್ ಲೈಟ್, ದೀಪ ಹಚ್ಚಿ ಎಂದು ಮೋದಿ ಹೇಳಿದ್ದಾರೆ. ನಾವು ಒಂಟಿಯಲ್ಲ ಎನ್ನುವ ಸಂದೇಶ ರವಾನಿಸೋಣ. ಆದರೆ ಇದೇ ವೇಳೆ ಸಾಮಾಜಿಕ ಅಂತರದ ನಮ್ಮ ಲಕ್ಷ್ಮಣ ರೇಖೆಯನ್ನು ದಾಟದಿರೋಣ ಎನ್ನುವ ಎಚ್ಚರಿಯನ್ನು ಈ ಸಂದೇಶದ ಜತೆ ರವಾನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 22ರಂದು ಜನತಾ ಕರ್ಫ್ಯೂ ಹೇರಿದ್ದರು. ಇದಾದ ಬಳಿಕ 21ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದ್ದರು. ಹೀಗಾಗಿ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಮೋದಿ ಮಾತನಾಡಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.
ಈ ಹಿಂದೆ ಜನತಾ ಕರ್ಫ್ಯೂದಂದು ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ನಿಶ್ವಾರ್ಥ ಸೇವಕರಿಗೆ ಧನ್ಯವಾದ ರೂಪದಲ್ಲಿ ಮನೆಯ ಬಾಲ್ಕನಿಯಲ್ಲಿ ನಿಂತು ಸಂಜೆ 5 ಗಂಟೆಗೆ ಚಪ್ಪಾಳೆ ಹಾಗೂ ಜಾಗಟೆ ಬಾರಿಸಲು ಹೇಳಿದ್ದರು. ಮೋದಿ ಕರೆಗೆ ದೇಶ ಅಭೂತಪೂರ್ವವಾಗಿ ಸ್ಪಂದಿಸಿತ್ತು. ಆದರೆ ಕೆಲವೆಡೆ ಅಭಿಮಾನ ಮಿತಿಮೀರಿ ರಸ್ತೆಗಿಳಿದು ಸಂಭ್ರಮಿಸಿದ್ದರು. ಇದೀಗ ಪ್ರಧಾನಿ ಮತ್ತೊಮ್ಮೆ ಸಾಮಾಜಿಕ ಅಂತರದ ಬಗ್ಗೆ ಒತ್ತಿ ಹೇಳಿದ್ದಾರೆ. ಇನ್ನು ಮಾರ್ಚ್ 24ರಂದು ಪ್ರಧಾನಿ ಮೋದಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ.
ದಿನೇದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ದೇಶದ ಜನತೆಯ ಭಯವನ್ನು ಹೋಗಲಾಡಿಸಲು ಪ್ರಧಾನಿ ಮೋದಿ 9 ನಿಮಿಷಗಳ ಕಾಲ ದೀಪ ಬೆಳಗಿಸಲು ಕರೆ ನೀಡಿದ್ದಾರೆ. ಏಪ್ರಿಲ್ 5ರ ಬಾನುವಾರ ರಾತ್ರಿ 9 ಗಂಟೆಗೆ ದೇಶ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲಿದೆ.
A video messsage to my fellow Indians. https://t.co/rcS97tTFrH
— Narendra Modi (@narendramodi)