ನಾವೆಲ್ಲರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಹೊಸ ತಳಿ ಬಗ್ಗೆ ನಾವ್ಯಾರೂ ಆಲಸ್ಯ ಮಾಡಬಾರದು. ಪ್ರತಿಯೊಬ್ಬರೂ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು. ಸ್ವಚ್ಛತೆ ಕಾಪಾಡಿಕೊಂಡು ನಮ್ಮ ಆರೋಗ್ಯವನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಸುಧಾಕರ್
ತುಮಕೂರು(ಡಿ.25): ಚೀನಾ, ಅಮೆರಿಕ ಸೇರಿದಂತೆ ಜಗತ್ತಿನ 10ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಬಿಎಫ್7 ಹೊಸ ತಳಿ ಇನ್ನು ಎರಡು, ಮೂರು ತಿಂಗಳಲ್ಲಿ ರಾಜ್ಯಕ್ಕೂ ಬರುವ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಕೊರಟಗೆರೆಯ ದೊಡ್ಡಸಾಗೆರೆಯಲ್ಲಿ ಮಾತನಾಡಿದ ಸುಧಾಕರ್, ನಾವೆಲ್ಲರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಹೊಸ ತಳಿ ಬಗ್ಗೆ ನಾವ್ಯಾರೂ ಆಲಸ್ಯ ಮಾಡಬಾರದು. ಪ್ರತಿಯೊಬ್ಬರೂ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು. ಸ್ವಚ್ಛತೆ ಕಾಪಾಡಿಕೊಂಡು ನಮ್ಮ ಆರೋಗ್ಯವನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
undefined
ಭಾರತದಲ್ಲಿ ಹೆಚ್ಚಿದ ಕೋವಿಡ್ ಆತಂಕ, ದೆಹಲಿ ಮುಂಬೈ ಚರಂಡಿ ನೀರಿನಲ್ಲಿ COV-2 RNA ವೈರಸ್ ಪತ್ತೆ!
ಚೀನಾ ಸೇರಿ 5 ದೇಶಗಳಿಂದ ಬರುವವರಿಗೆ ಕೋವಿಡ್ ಟೆಸ್ಟ್
ಚಂಡೀಗಢ: ಕೊರೋನಾ ಅಬ್ಬರ ಇರುವ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಥಾಯ್ಲೆಂಡ್ ದೇಶಗಳಿಂದ ಆಗಮಿಸುವ ಎಲ್ಲಾ ಪ್ರಯಾಣಿಕರಿಗೂ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಭಾರತಕ್ಕೆ ಬಂದಿಳಿದ ಬಳಿಕ ಆ ಪ್ರಯಾಣಿಕರಲ್ಲಿ ಜ್ವರ ಕಾಣಿಸಿಕೊಂಡರೆ ಅಥವಾ ಸೋಂಕು ಖಚಿತಪಟ್ಟರೆ ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಬೇಕು ಎಂದು ಸ್ಪಷ್ಪಪಡಿಸಿದೆ.