ಹೊಸ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಕಳೆದ ನಾಲ್ಕು ದಿನಗಳಿಂದ ಹೆಚ್ಚಿರುವ ಹಿನ್ನೆಲೆ ಸಕ್ರಿಯ ಸೋಂಕಿತರ ಸಂಖ್ಯೆ 7856ಕ್ಕೆ ಇಳಿಕೆ
ಬೆಂಗಳೂರು(ಆ.27): ರಾಜ್ಯದಲ್ಲಿ ಶುಕ್ರವಾರ 1191 ಜನರಲ್ಲಿ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 2032 ಮಂದಿ ಗುಣಮುಖರಾಗಿದ್ದಾರೆ. ಮೂವರು ಸಾವಿಗೀಡಾಗಿದ್ದಾರೆ. 29 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.4ರಷ್ಟು ದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆ ಎರಡು ಸಾವಿರ ಹೆಚ್ಚು ನಡೆದಿವೆ. ಆದರೂ, ಹೊಸ ಪ್ರಕರಣಗಳು 95 ಇಳಿಕೆಯಾಗಿವೆ. (ಗುರುವಾರ 1,286 ಪ್ರಕರಣಗಳು, ಮೂರು ಸಾವು). ಬಳ್ಳಾರಿಯಲ್ಲಿ 58 ವರ್ಷದ ಪುರುಷ, ಹಾವೇರಿಯಲ್ಲಿ 90 ವರ್ಷದ ವೃದ್ಧ ಹಾಗೂ 54 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ.
ಹೊಸ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಕಳೆದ ನಾಲ್ಕು ದಿನಗಳಿಂದ ಹೆಚ್ಚಿರುವ ಹಿನ್ನೆಲೆ ಸಕ್ರಿಯ ಸೋಂಕಿತರ ಸಂಖ್ಯೆ 7856ಕ್ಕೆ ಇಳಿಕೆಯಾಗಿವೆ. ಈ ಪೈಕಿ 60 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಂದಿ ಐಸಿಯು, 5 ಮಂದಿ ಆಕ್ಸಿಜನ್, 50 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 7,796 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.
undefined
CORONA CRISIS: ಕರ್ನಾಟಕದಲ್ಲಿ 1465 ಮಂದಿಗೆ ಕೊರೋನಾ ಸೋಂಕು: 2 ಸಾವು
ಎಲ್ಲಿ, ಎಷ್ಟು ಪ್ರಕರಣ?:
ಶುಕ್ರವಾರದ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 668 ಪ್ರಕರಣ ಪತ್ತೆಯಾಗಿವೆ. ಉಳಿದಂತೆ ಮೈಸೂರು 93, ರಾಮನಗರ 70, ಹಾಸನ 48 ಮಂದಿಗೆ ಸೋಂಕು ತಗುಲಿದೆ. 8 ಜಿಲ್ಲೆಗಳಲ್ಲಿ ಬೆರಳೆಣಿಕೆ, ಯಾದಗಿರಿ ಹಾಗೂ ಗದಗದಲ್ಲಿ ಶೂನ್ಯ ಪ್ರಕರಣ ವರದಿಯಾಗಿವೆ.