ಹಾಟ್ ಬ್ಯೂಟಿ ತ್ರಿಶಾ ಓಕೆ ಅಂದ್ರೂ 96 ಚಿತ್ರದಲ್ಲಿ ಲಿಕ್ಪಾಕ್ಗೆ ನಿರಾಕರಿಸಿದ್ದರು ವಿಜಯ ಸೇತುಪತಿ. ಅಷ್ಟಕ್ಕೂ ಆಗಿದ್ದೇನು?
ಈಗ ಚಿತ್ರಗಳಲ್ಲಿ ಲಿಪ್‌ಲಾಕ್ (Liplock) ದೊಡ್ಡ ವಿಷಯವೇ ಅಲ್ಲ.ಈ ದೃಶ್ಯ ಮಾಡಲು ಹೆಚ್ಚಿನ ನಾಯಕ-ನಾಯಕಿಯರು ಹಿಂಜರಿಯುವುದಿಲ್ಲ. ಇತ್ತೀಚೆಗೆ ಬಿಡುಗಡೆಗೊಂಡ ರಾಕಿ ಔರ್ ರಾಣಿ ಕೀ ಪ್ರೇಮ್ ಕಥಾ ಬ್ಲಾಕ್ಬಸ್ಟರ್ ಚಿತ್ರದಲ್ಲಿ 87 ವರ್ಷದ ಧರ್ಮೇಂದ್ರ ಅವರೇ ನಟಿ ಶಜನಾ ಅಜ್ಮಿ ಅವರನ್ನು ಲಿಪ್‌ಲಾಕ್ ಮಾಡಿ ಎಲ್ಲರ ಹುಬ್ಬೇರಿಸಿದ್ದರು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಇಂಥ ಇಂಟಿಮೇಟ್ ದೃಶ್ಯಗಳನ್ನು ಮಾಡಲು ನಟ-ನಟಿಯರು ಒಪ್ಪದ ಘಟನೆಗಳೂ ನಡೆದಿವೆ. ಅದರಲ್ಲಿಯೂ ಹೆಚ್ಚಾಗಿ ನಟಿಯರು ಕೆಲವು ನಟರ ಜೊತೆ ಲಿಪ್‌ಲಾಕ್ ಸೀನ್ ಮಾಡಲು ಒಪ್ಪುವುದಿಲ್ಲ. ಈ ಬಗ್ಗೆ ಇದಾಗಲೇ ಹಲವು ತಾರೆಯರು ತಮಗಾಗಿರುವ ಕೆಟ್ಟ ಅನುಭವಗಳನ್ನು ಕೇಳಿಕೊಂಡಿದ್ದಾರೆ. ಒತ್ತಾಯಪೂರ್ವಕವಾಗಿ ಕೆಲವು ನಟಿಯರಿಗೆ ಲಿಪ್‌ಲಾಕ್ ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದರೆ, ಇನ್ನು ಕೆಲವು ನಟಿಯರು ಈ ದೃಶ್ಯಕ್ಕೆ ಒಲ್ಲೆ ಎಂದು ಒಳ್ಳೆಯ ಅವಕಾಶವನ್ನೇ ಕಳೆದುಕೊಂಡಿದ್ದಾರೆ.
ಆದರೆ, ಇಲ್ಲಿ ಹೇಳಹೊರಟಿರುವುದು ತುಸು ಭಿನ್ನವಾದ ಕಥೆ. ಇಲ್ಲಿ ನಟಿ ಲಿಪ್ಲಾಕ್ಗೆ ಓಕೆ ಎಂದರೂ ನಟ ಮಾತ್ರ ಸುತರಾಂ ಒಪ್ಪಲೇ ಇಲ್ಲ. ಕೊನೆಗೆ ಆ ದೃಶ್ಯವಿಲ್ಲದೇ ಶೂಟಿಂಗ್ ಮಾಡಲಾಗಿತ್ತು. ಚಿತ್ರ ಸಕತ್ ಸೂಪರ್ಹಿಟ್ ಕೂಡ ಆಗಿದೆ. ಹೌದು. ಇಲ್ಲಿ ಹೇಳಹೊರಟಿರುವುದು ಹಾಟ್ ಬ್ಯೂಟಿ ತ್ರಿಶಾ ಮತ್ತು ಸೂಪರ್ ಸ್ಟಾರ್ ವಿಜಯ ಸೇತುಪತಿಯವರ ಕುರಿತು. ಚಿತ್ರವೊಂದ ಕ್ಲೈಮ್ಯಾಕ್ಸ್ನಲ್ಲಿ ಇವರಿಬ್ಬರು ಲಿಪ್‌ಲಾಕ್ ಮಾಡುವ ಸನ್ನಿವೇಶವನ್ನು ನಿರ್ದೇಶಕರು ಹೇಳಿದ್ದರು. ತ್ರಿಶಾ ಇದಕ್ಕೆ ಒಪ್ಪಿಕೊಂಡಿದ್ದರು. ಆದರೆ ವಿಜಯ ಸೇತುಪತಿ (Vijay Setupathi) ಮಾತ್ರ ತಮ್ಮಿಂದ ಇದು ಸಾಧ್ಯವೇ ಇಲ್ಲ ಎಂದುಬಿಟ್ಟಿರು.
10 ವರ್ಷಗಳ ನಂತ್ರ 'ನಾನ್ ರೆಡಿ' ಅಂತಾ ಟ್ವೀಟ್ ಮಾಡಿದ ತ್ರಿಶಾ, 'ಪುರಾತತ್ವ ಇಲಾಖೆಯಲ್ಲಿ ಇರ್ಬೇಕಿತ್ತು' ಎಂದ ಫ್ಯಾನ್ಸ್!
ಈ ಚಿತ್ರದ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಅತ್ಯಂತ ಹೃದಯಸ್ಪರ್ಶಿ ದೃಶ್ಯವನ್ನು ಹೊಂದಿದೆ. ಇಬ್ಬರೂ ಒಬ್ಬರಿಗೊಬ್ಬರು ವಿದಾಯ ಹೇಳಿದ ದೃಶ್ಯವಿದು. ಇದು ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ವಿಮಾನ ನಿಲ್ದಾಣದಲ್ಲಿ ಈ ಜೋಡಿ ವಿದಾಯ ಹೇಳಬೇಕಿತ್ತು. ಈ ಸನ್ನಿವೇಶದಲ್ಲಿ ತ್ರಿಶಾ (Trisha) ಮತ್ತು ವಿಜಯ್ ಸೇತುಪತಿ ಚುಂಬನ ಮಾಡಬೇಕಿತ್ತು. ಆದರೆ ವಿಜಯ್ ಅವರು ಒಪ್ಪದ ಕಾರಣ, ಚುಂಬನದ ದೃಶ್ಯವಿಲ್ಲದೆ ಶೂಟಿಂಗ್ ಮಾಡಲಾಗಿತ್ತು. ಇದರ ಬದಲಾಗಿ, ಅವರು ತಮ್ಮ ಮುಖದ ಮೇಲೆ ತಮ್ಮ ಕೈಗಳನ್ನು ಹಾಕಿ ಚುಂಬಿಸುವಂತೆ ಕಾಣಿಸಿಕೊಂಡರು.
ಈ ಚಿತ್ರದ ಹೆಸರು 96. ಚಿತ್ರದಲ್ಲಿ ತ್ರಿಶಾ ಕೃಷ್ಣನ್ ಅವರ ಪಾತ್ರ ಸಕತ್ ಕಾಂಪ್ಲಿಕೇಟ್ ಆಗಿದೆ. ಈ ಸಿನಿಮಾದಲ್ಲಿ ಇವರು ಜಾನು ಪಾತ್ರವನ್ನು ನಿರ್ವಹಿಸಿದ್ದಾರೆ. ವಿಜಯ ಸೇತುಪತಿ ನಾಯಕ ಆಗಿದ್ದು, ಚಿತ್ರ ಕಿಸ್ಸಿಂಗ್ ದೃಶ್ಯ ಇಲ್ಲದೆಯೂ ಸೂಪರ್ ಹಿಟ್ ಆಗಿದೆ. ಇಲ್ಲೊಂದು ವಿಷಯ ಹೇಳಲೇಬೇಕು. ಅದೇನೆಂದರೆ ವಿಜಯ ಸೇತುಪತಿ ಹೀಗೆ ಮಾಡಲು ಕಾರಣವೂ ಇದೆ. ಅದೇನೆಂದರೆ, ವಿಜಯ್ ಸೇತುಪತಿ ತಮ್ಮ ಸಿನಿಮಾಗಳಲ್ಲಿ ಚುಂಬನದ ದೃಶ್ಯಗಳನ್ನು ಮಾಡುವುದಿಲ್ಲ. ಇಂಥ ದೃಶ್ಯಗಳನ್ನು ಅವರು ಮಾಡುವುದಿಲ್ಲ ಎಂದು ಮೊದಲೇ ನಿರ್ದೇಶಕರಿಗೆ ಹೇಳುತ್ತಾರೆ. ಇವರಂತೆಯೇ, ಟಾಲಿವುಡ್ ನಟರಾದ ಅಜಿತ್, ಸೂರ್ಯ ಮತ್ತು ಶಿವಕಾರ್ತಿಕೇಯನ್ ಅವರು ಕೂಡ ಲಿಪ್ ಲಾಕ್ ದೃಶ್ಯಗಳನ್ನು ಮಾಡುವುದಿಲ್ಲ.
ಹೃತಿಕ್ ರೋಷನ್ ಜೊತೆ ಲಿಪ್‌ಲಾಕ್ ಮಾಡಿದ್ದ ಐಶ್ವರ್ಯ ರೈಗೆ ಸಂಕಷ್ಟ! ಲೀಗಲ್ ನೋಟಿಸ್
ಇನ್ನು ತ್ರಿಶಾ ಅವರ ಸಿನಿ ಕರಿಯರ್ ಕುರಿತು ಹೇಳುವುದಾದರೆ, ಅವರು 1999ರಲ್ಲಿ ತೆರೆಕಂಡ ‘ಜೋಡಿ’ ಚಿತ್ರದ ಮೂಲಕ ಸಿಮ್ರಾನ್ ಗೆಳತಿಯಾಗಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 'ಮನಸೆಲ್ಲಂ', 'ಎನಕು 20 ಉನಕು 18' ಮತ್ತು 'ಸ್ಯಾಮಿ' ಯಂತಹ ಚಿತ್ರಗಳು ಬ್ಲಾಕ್ಬಸ್ಟರ್ ಆದವರು. ‘ಸ್ಯಾಮಿ’ ಸಿನಿಮಾದಲ್ಲಿ ವಿಕ್ರಮ್ ಜೊತೆ ‘ಕಲ್ಯಾಣಂ ತಾನ್ ಕಟ್ಟಿಕ್ತು’ ಚಿತ್ರದಂತೆಯೇ ಇವರಿಗೆ ಬ್ರೇಕ್ ಕೊಟ್ಟ ಚಿತ್ರ ನಿರ್ದೇಶಕ ಗೌತಮ್ ವಾಸುದೇವನ್ ಅವರ 'ವಿನ್ನೈತಾಂಡಿ ವರುಯಾಯಾ'.