ಕಿಯಾರಾ ಅಡ್ವಾನಿಯವರ ಬೆತ್ತಲೆ ಫೋಟೋ ಪುನಃ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಏನಿದು ಫೋಟೋ?
ಕಳೆದ ಫೆಬ್ರುವರಿಯಲ್ಲಷ್ಟೇ ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಅವರ ಮದುವೆಯಾಗಿದೆ. ಭರ್ಜರಿ ಮದುವೆ, ಅದ್ಧೂರಿ ಗಿಫ್ಟ್ ಮೂಲಕ ಈ ಜೋಡಿ ತಿಂಗಳುಗಟ್ಟಲೆ ಭಾರಿ ಸುದ್ದಿಯಲ್ಲಿತ್ತು. ಜೋಡಿ ಈಗ ಮದುವೆಯ ಲೈಫ್ ಎಂಜಾಯ್ ಮಾಡುತ್ತಿರುವಾಗಲೇ ಕಿಯಾರಾ ಅಡ್ವಾಣಿಯ ಬೆತ್ತಲೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಟಾಪ್ಲೆಸ್ ಆಗಿರುವ ಕಿಯಾರಾ ಎಲೆಯಿಂದ ತಮ್ಮ ದೇಹವನ್ನು ಮುಚ್ಚಿಕೊಂಡಿರುವ ಫೋಟೋ ಇದಾಗಿದೆ. ಅಸಲಿಗೆ ಇದನ್ನು 2-3 ವರ್ಷಗಳ ಹಿಂದೆ ಕ್ಲಿಕ್ಕಿಸಲಾಗಿದ್ದು, ಅದಾಗ ಭಾರಿ ವೈರಲ್ ಆಗಿತ್ತು. ಈಗ ಮತ್ತೊಮ್ಮೆ ಮದುವೆಯಾದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಸುದ್ದಿಯಾಗುತ್ತಿದೆ. ಬಾಲಿವುಡ್ನ ಖ್ಯಾತ ಛಾಯಾಗ್ರಾಹಕ ಡಬೂ ರತ್ನಾನಿ ಅವರ ಸೆಲೆಬ್ರಿಟಿ ಕ್ಯಾಲೆಂಡರ್ ಶೂಟ್ನಲ್ಲಿ ಕಿಯಾರಾ ಅಡ್ವಾನಿ ಬೆತ್ತಲಾದ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಫೋಟೋ ಹಿಂದೆ ವಿವಾದಕ್ಕೂ ಕಾರಣವಾಗಿತ್ತು. ಅದಕ್ಕೆ ಕಾರಣ, ಅಂತರರಾಷ್ಟ್ರೀಯ ಛಾಯಾಗ್ರಾಹಕ ಮಾರಿಬ್ ಅವರು ಮಾಡಲ್ ಒಬ್ಬರನ್ನು ಎಲೆ ಹಿಂದೆ ನಿಲ್ಲಿಸಿ ಫೋಟೋ ತೆಗೆದಿದ್ದರು. 2019ರಲ್ಲೇ ಅದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನೇ ಡಬೂ ನಕಲು ಮಾಡಿದ್ದಾರೆ ಅಂತ ಅವರನ್ನು ಟ್ರೋಲ್ ಮಾಡಲಾಗುತ್ತಿತ್ತು.
ಆ ಟ್ರೋಲ್ ವಿಷಯ ಅಲ್ಲಿಗೇ ಮುಗಿದಿದೆ. ಆದರೆ ಈಗ ಫೋಟೋ ಮತ್ತೆ ಮುನ್ನೆಲೆಗೆ ಬಂದಿದ್ದು, ಮದುವೆಯಾದ ಮೇಲೆ ಪುನಃ ಇದನ್ನು ವೈರಲ್ ಮಾಡುವ ಅವಶ್ಯಕತೆ ಏನಿತ್ತು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಈ ಬಗ್ಗೆ ಕಿಯಾರಾ (Kiara Advani ) ತಲೆ ಕೆಡಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಕಿಯಾರಾ ಅಡ್ವಾಣಿಯ ಇನ್ನೊಂದು ಹೆಸರೇ ಬೋಲ್ಡ್‌ನೆಸ್ ಬ್ಯೂಟಿ ಎಂದು. ಈಕೆ 'ಲಸ್ಟ್ ಸ್ಟೋರಿಸ್'ನಲ್ಲಿ ಮಾಡಿದ ಅಭಿನಯವನ್ನು ನೋಡಿದರೆ ಈಕೆ ಎಂಥ ಪಾತ್ರಕ್ಕೂ ಸೈ ಎನ್ನುವಂತಿದೆ. ಆದ್ದರಿಂದ ಎಲೆಯಲ್ಲಾದರೂ ದೇಹ ಮುಚ್ಚಿಕೊಂಡಿದ್ದಾರಲ್ಲ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದರೆ, ತರ್ಲೆ ಹೈಕಳು ಮಾತ್ರ ಎಲೆಯನ್ನು ಸರಿಸಿಬಿಡಿ ಪ್ಲೀಸ್ ಎನ್ನುತ್ತಿದ್ದಾರೆ!
30 ವರ್ಷದ ಕಿಯಾರಾ ಜೊತೆ ಶಾರುಖ್ ರೊಮ್ಯಾನ್ಸ್? ಏನಿದು ಹೊಸ ವಿಷ್ಯ?
ಸದ್ಯ ಹನಿಮೂನ್ ಮೂಡ್ನಲ್ಲಿರುವ ಕಿಯಾರಾ ಚಿತ್ರರಂಗದಲ್ಲಿ ಕೆಲ ದಿನಗಳವರೆಗೆ ದೂರ ಸರಿದಿದ್ದರು. ತೆಲುಗಿನ 'ಗೇಮ್ ಚೇಂಜರ್' ಹಾಗೂ 'ಸತ್ಯಪ್ರೇಮ್ ಕಥಾ' ಸಿನಿಮಾಗಳು ಕಿಯಾರಾ ಕೈಯಲ್ಲಿವೆ. ಮದುವೆ ನಂತರ ಇತ್ತೀಚೆಗೆ ಸಿದ್ದಾರ್ಥ್ ಕಿಯಾರಾ ಹನಿಮೂನ್‌ಗಾಗಿ (Honeymoon) ವಿದೇಶಕ್ಕೆ ಹೋಗಿ ಬಂದಿದ್ದು, ಮತ್ತೆ ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 29 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿರೋ ಕಿಯಾರಾ ಹೆಚ್ಚಿನ ವೇಳೆ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಈ ಫೋಟೋ ಮಾತ್ರ ಮತ್ತೆ ಯಾರು ಪೋಸ್ಟ್ ಮಾಡಿದ್ದು ಎಂದು ತಿಳಿದಿಲ್ಲ. ಆದರೆ ಪಡ್ಡೆ ಹೈಕಳು ಮಾತ್ರ ಫುಲ್ ಖುಷ್ ಆಗಿದ್ದಾರೆ. ಥರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಕೆಲವರು ಮಾತ್ರ ಇವೆಲ್ಲಾ ಮದುವೆಯ ಮುಂಚೆ ಆಗಿದ್ದು, ಈಗ ಇದೆಲ್ಲಾ ಬೇಕಿರಲಿಲ್ಲ ಎಂದಿದ್ದಾರೆ.
ಅಂದಹಾಗೆ, ಪೋಟೋಗ್ರಾಫರ್ ಡಾಬೋ ರತ್ನಾನಿ (Dabo Ratnani) ತಮ್ಮ ಕ್ಯಾಲೆಂಡರ್‌ಗಾಗಿ ಈ ಪೋಟೋ ಶೂಟ್ ಮಾಡಿಸಿದ್ದರು. ಇವರ ಕ್ಯಾಲೆಂಡರ್‌ಗಾಗಿ ಕೆಲ ನಟಿಯರು ಬೆತ್ತಲಾಗಿದ್ದು, ಅರೆಬರೆ ಡ್ರೆಸ್ ಹಾಕಿಕೊಂಡದ್ದು ಇದೆ. ಇದಲ್ಲದೇ ಡಾಬೋ ಅ ವರು ಅಮಿತಾಭ್ , ಶಾರುಖ್, ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ವಿದ್ಯಾ ಬಾಲನ್‌ರಂತಹ ಘಟಾನುಘಟಿ ಕಲಾವಿದರ ಫೋಟೋಶೂಟ್ ಕ್ಯಾಲೆಂಡರ್‌ಗಾಗಿ ಕ್ಲಿಕ್ಕಿಸಿದ್ದಾರೆ.
Ormax List: ಆಲಿಯಾ vs ಕಿಯಾರಾ- ಜನಪ್ರಿಯತೆ ಲಿಸ್ಟ್ನಲ್ಲಿ ಯಾರ ಸ್ಥಾನ ಎಷ್ಟು?