
ಚಿತ್ರದುರ್ಗ (ನ.21) : ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದೀಗ ಚಿತ್ರದುರ್ಗ ತಾಲ್ಲೂಕಿನ ಹೊಸಕಲ್ಲಹಳ್ಳಿ ಗ್ರಾಮದ ಬಳಿ ಬೈಕ್ ಹಾಗೂ ಟ್ರಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ರಸ್ತೆಬದಿ ನಿಂತಿದ್ದ ನೇ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ಸಹೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೋಡಿಚಿಕ್ಕೇನಹಳ್ಳಿಯ 26 ವರ್ಷದ ಮನೋಜ್ 28 ವರ್ಷದ ಮೃತ ದುರ್ದೈವಿಗಳು. ಚಿತ್ರದುರ್ಗ ಗ್ರಾಮಾಂತರ ಠಾಣಟ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ಥಳೀಯರ ಮಾಹಿತಿ ಪ್ರಕಾರ ಬೈಕ್ ಸವಾರರು ಅತೀ ವೇಗವಾಗಿ ರೈಡ್ ಮಾಡಿಕೊಂಡು ತೆರಳಿದ್ದಾರೆ. ಹೀಗಾಗಿ ಸಣ್ಣ ತಿರುವಿನ ಭಾಗದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಾಕ್ಟರ್ ಕಂಡಾಗ ನಿಯಂತ್ರಣಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಬೈಕ್ ನೇರವಾಗಿ ಟ್ರಾಕ್ಟರ್‌ಗೆ ಡಿಕ್ಕಿಯಾಗಿದೆ. ಅತೀ ವೇಗದ ಕಾರಣದಿಂದ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. ತೀವ್ರ ರಕ್ತಸ್ರಾವದಿಂದ ಮನೋಜ್ ಸ್ಥಳದಲ್ಲಿಯೇ ಮೃತಪಟ್ಟರೆ , ಗಂಭೀರವಾಗಿ ಗಾಯಗೊಂಡಿದ್ದ ಹರೀಶ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಮೃತಪಟ್ಟಿದ್ದಾರೆ.ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಸ್ನೇಹಿತನ ಜೊತೆ ಹೋಟೆಲ್‌ಗೆ ಪಾರ್ಟಿಗೆ ತೆರಳುತ್ತಿದ್ದ ಯುವತಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ಸಾವಿಗೂ ಮುನ್ನ ಸ್ನೇಹಿತ ಹಾಗೂ ಯುವತಿಯ ಮಧ್ಯೆ ಹೋಟೆಲ್‌ನಲ್ಲಿ ವಾಗ್ವಾದ ನಡೆಸಿದ್ದಾರೆ. ಹೋಟೆಲ್‌ನಲ್ಲಿ ಇಬ್ಬರು ವಾಗ್ವಾದ ನಡೆಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳಿಕ ಇಬ್ಬರು ಹೋಟೆಲ್‌ನಿಂದ ಬೈಕ್‌ನಲ್ಲಿ ತೆರಳುವ ವೇಳೆ ಅಪಘಾತ ಸಂಭವಿಸಿದೆ.ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಿಟ್ಲಕಟ್ಟೆ ಬಳಿ ಹಮ್ಸ್ ಹಾರಿದ ಬೈಕ್ ಮರಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ದಾವಣಗೆರೆ ಮೂಲದ ಪ್ರಿಯಾ(22) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ಪ್ರಿಯಾ ಸ್ನೇಹಿತ ಯೋಗೇಶ್‌ಗೂ ಗಂಭೀರ ಗಾಯವಾಗಿದೆ.
ಜರಕಟ್ಟೆಯಲ್ಲಿರುವ ಆದ್ಯಾ ಹೋಟೆಲ್ ಗೆ ಹೋದಾಗ ಸ್ನೇಹಿತ ಯೋಗೆಶ್ ಮತ್ತು ಪ್ರಿಯಾ ಮಧ್ಯೆ ವಾಗ್ವಾದ ನಡೆದಿದೆ. ಪ್ರಿಯಾ ಮನವೊಲಿಸಿದ ಗೆಳೆಯ ಯೋಗೇಶ್ ಬೈಕ್ ನಲ್ಲಿ ಕರೆತಂದಿದ್ದ. ಕಳೆದ ಎರಡು ದಿನಗಳ ಹಿಂದೆ ನೆಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ಪ್ರಿಯಾ ಮತ್ತು ಯೋಗೆಶ್ ರ ವಾಗ್ವಾದದ ಕೊನೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.