ಮೋದಿ ಯಾರೆಂದೇ ಗೊತ್ತಿಲ್ಲ ಎಂದ ಗುಜರಾತ್ ಶಾಸಕ..!

By Web DeskFirst Published Oct 31, 2019, 11:24 AM IST
Highlights

ಮೋದಿ ಯಾರು ಆಂದ್ರೆ ಚಿಕ್ಕ ಮಕ್ಕಳೂ ಉತ್ತರಿಸ್ತಾರೆ, ಆದ್ರೆ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರು ಅಸಲಿಗೆ ನನಗೆ ಮೋದಿ ಯಾರೆಂದೇ ಗೊತ್ತಿಲ್ಲ ಎಂದಿದ್ದಾರೆ. ಪ್ರಧಾನಿ ಮೋದಿ ಅವರು ಚಹಾ ಮಾರಿರುವ ಬಗ್ಗೆ ಪ್ರಸ್ತಾಪಿಸಿ ಮೋದಿ ಚಹಾ ಮಾರಿದ್ದಾರೋ ಗೊತ್ತಿಲ್ಲ, ಆದ್ರೆ ದೇಶವನ್ನು ಮಾರ್ತಾ ಇದ್ದಾರೆ ಎಂದು ಹೇಳಿದ್ದಾರೆ.

ಚಿತ್ರದುರ್ಗ(ಅ.31): ನನಗೆ ಮೋದಿ ಯಾರು ಎಂದೇ ಗೊತ್ತಿಲ್ಲ ಎಂದು ಚಿತ್ರದುರ್ಗದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ. ಪ್ರಧಾನಿ ಮೋದಿ ಚಹಾ ಮಾರಿದ ಮಾತು ಚೈಲ್ಡಿಶ್, ಜೋಕ್ ಆಫ್ ದಿ ಸಂಚೂರಿ. ಚಹಾ ಮಾರಿದ್ದಾರೋ ಇಲ್ಲವೋ ಈಗ ದೇಶ ಮಾರುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

06/04/18 ರಂದು ಚಿತ್ರದುರ್ಗದಲ್ಲಿ ನಡೆದ ಸಂವಾದ ವೇಳೆ ಮೋದಿ ಕಾರ್ಯಕ್ರಮದಲಿ ಕುರ್ಚಿ ತೂರಿ ಎಂಬ ಹೇಳಿಕೆ ಹಿನ್ನೆಲೆ ವಿಚಾರಣೆಗೆ ಚಿತ್ರದುರ್ಗ ನ್ಯಾಯಾಲಯಕ್ಕೆ ಹಾಜರಾಗಲು ಬಂದ ಮೇವಾನಿ ಮಾರ್ಧಯಮದ ಜೊತೆ ಮಾತನಾಡಿದ್ದಾರೆ.

ಬಡತನದ ಪಾಠ ಓದಿ ಕಲಿತಿಲ್ಲ, ನೋಡಿ ಕಲಿತಿದ್ದೇನೆ: ಮೋದಿ!

ದೇಶದಲ್ಲಿ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ತಾಂಡವ ಆಡುತ್ತಿದೆ. ಪ್ರಧಾನ ಮಂತ್ರಿ ಮೋದಿ ಬಳಿ ಯಾವುದೇ ಉತ್ತರವಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಇಂಥ ತಂತ್ರ ಹೂಡುತ್ತಿದ್ದಾರೆ. ನರೇಗಾ ಯೋಜನೆ, ಆರೋಗ್ಯ ಯೋಜನೆಗಳು ಮುಗ್ಗರಿಸಿವೆ. ಸಾವರ್ಕರ್ 13 ಸಲ ಆಂಗ್ಲರಿಗೆ ಕ್ಷಮೆ ಕೇಳಿ ಪತ್ರ ಬರೆದಿದ್ದಾರೆ. ಜನರಿಗೆ ಈಗ ಬಿಜೆಪಿ ಸರ್ಕಾರದ ಧೋರಣೆ ಅರಿವಾಗುತ್ತಿದೆ. ಎಲ್ಲಾ ಪಕ್ಷದ ನಾಯಕರು ವಾಸ್ತವ ಪರಿಸ್ಥಿತಿ ಜನರ ಮುಂದಿಡಬೇಕಿದೆ ಎಂದಿದ್ದಾರೆ.

ಮೋದಿ ಚಹಾ ಮಾರಿದ ಮಾತು ಚೈಲ್ಡಿಶ್

ಟಿಪ್ಪು ಜಯಂತಿ ರದ್ದು, ಪಠ್ಯದಿಂದ ತೆಗೆಯುವ ವಿಚಾರವಾಗಿ ಪ್ರತಿಕ್ರಿಯಿಸಿ, ಟಿಪ್ಪು ಸುಲ್ತಾನ್ ಹೆಸರು ಇಲ್ಲವಾಗಿಸಲು ಯತ್ನಿಸಲಾಗುತ್ತಿದೆ. ಅದು ಆರ್ ಎಸ್ ಎಸ್, ಬಿಜೆಪಿ ಹಿಡನ್ ಅಜೆಂಡಾ. ಹಿಂದೂ ತುಷ್ಠೀಕರಣಕ್ಕಾಗಿ ಇತಿಹಾಸವನ್ನು ಅಳಿಸಲು ಕೆಲಸ. ಮುಸ್ಲಿಂ ಸಮುದಾಯವನ್ನು ದಮನ ಮಾಡುವ ಕಾರ್ಯ ನಡೆಯುತ್ತಿದೆ. ಹಿಂದೂ ಮುಸ್ಲಿಂ ಸಮುದಾಯಗಳನ್ನು ಇಬ್ಭಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕ್ರಿಕೆಟಿಗ ಕೊಹ್ಲಿ, ಪ್ರಧಾನಿ ಮೋದಿ, ಶಾಗೆ ಉಗ್ರರ ಬೆದರಿಕೆ ಪತ್ರ

ಆರ್ ಎಸ್ ಎಸ್ ಕೋಮುವಾದಿ ಮನೋಸ್ಥಿತಿ ಕೆಲಸ ಮಾಡುತ್ತಿದೆ. ವೈವಿಧ್ಯತೆಯಲ್ಲೂ ಏಕತೆಯಿಂದಿರುವುದೇ ದೇಶದ ಸೌಂದರ್ಯ ಎಂದಿದ್ದಾರೆ. ಆರ್ ಎಸ್ ಎಸ್ ಬಿಜೆಪಿಗೆ ದಲಿತರು,‌ ಮುಸ್ಲಿಂರು 2ನೇ ದರ್ಜೆ ನಾಗರಿಕರು. ಕೆಲಸಕ್ಕೆ ಮಾತ್ರ ಬಳಸಿಕೊಳ್ಳುವುದು ಅವರ ಅಜೆಂಡಾ ಎಂದಿದ್ದಾರೆ. ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ ಆದರೆ ನಾನು ಆ ರೀತಿ ಹೇಳಿಲ್ಲ. ಅಸಲಿಗೆ ನನಗೆ ಮೋದಿ ಯಾರು ಎಂದೇ ಗೊತ್ತಿಲ್ಲ ಎಂದು ಮೆವಾನಿ ವ್ಯಂಗ್ಯ ಮಾಡಿದ್ದಾರೆ.

click me!