Chitradurga ಸಕ್ಕರೆ ಕಾರ್ಖಾನೆ ಮತ್ತೆ ತೆರೆಯುವಂತೆ ಹಿರಿಯೂರು ಜನರ ಆಗ್ರಹ

By Suvarna News  |  First Published Apr 25, 2022, 2:26 PM IST

ಮುಚ್ಚಿರೊ ವಾಣಿ ವಿಲಾಸ ಸಕ್ಕರೆ ಕಾರ್ಖಾನೆಯನ್ನು ಮತ್ತೆ  ಆರಂಭಿಸುವಂತೆ  ಚಿತ್ರದುರ್ಗದ ಹಿರಿಯೂರು ಜನ ಆಗ್ರಹಿಸಿದ್ದಾರೆ. ಸರ್ಕಾರ ಆರಂಭಿಸಲಾಗಿದ್ದ ಸಕ್ಕರೆ ಕಾರ್ಖಾನೆಗೆ ಕಬ್ಬು  ಪೂರೈಸಲಾಗದೇ 2002 ರಲ್ಲಿ ಮುಚ್ಚಲಾಯಿತು.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಏ.25): ಆ ಭಾಗದ ಜನರು ಎಷ್ಟೇ ವಿವಿಧ ಬೆಳೆ ಬೆಳೆದು ಉಳುಮೆ ಮಾಡಿದ್ರೂ, ನಯಾ ಪೈಸೆ ಲಾಭ ಬರ್ತಿಲ್ಲ. ಹೀಗಾಗಿ ಮುಚ್ಚಿರೊ ಸಕ್ಕರೆ ಕಾರ್ಖಾನೆಯನ್ನು (Sugar Factory) ಮತ್ತೆ ಆರಂಭಿಸುವಂತೆ ಅಲ್ಲಿನ ರೈತರು (Farmers) ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಷ್ಟಕ್ಕೂ ಆ ಫಾಕ್ಟರಿ ಎಲ್ಲಿದೆ ಮುಂದೆ ಓದಿ. ಮುಚ್ಚಿರೋ‌‌ ಸಕ್ಕರೆ ಕಾರ್ಖಾನೆ, ತುಕ್ಕು ಹಿಡಿಯುತ್ತಿರೋ ಕಾರ್ಖಾನೆಯ ಬೃಹತ್ ಯಂತ್ರಗಳು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು (Hiriyuru) ಪಟ್ಟಣದಲ್ಲಿನ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ (Vani Vilasa Co-operative Sugar Factory).

Latest Videos

undefined

ಹೌದು, 1976 ರಲ್ಲಿ ಈ ಭಾಗದ ರೈತರ ಕೈ ಬಲಪಡಿಸಲು ಸರ್ಕಾರ ಆರಂಭಿಸಲಾಗಿದ್ದ ಸಕ್ಕರೆ ಕಾರ್ಖಾನೆಗೆ ಕಬ್ಬು (Sugar Cane) ಪೂರೈಸಲಾಗದೇ 2002 ರಲ್ಲಿ ಮುಚ್ಚಲಾಯಿತು. ಅಂದಿನಿಂದ‌ ಇಂದಿನವರೆಗೆ ಈ ಭಾಗದಲ್ಲಿ‌ ಕಬ್ಬು ಬೆಳೆಯಲ್ಲ‌ವೆಂಬ ನೆಪವೊಡ್ಡಿ ಈ ಕಾರ್ಖಾನೆ ಆರಂಭಿಸಲು ಸರ್ಕಾರ ಮುಂದಾಗಿಲ್ಲ. ಹೀಗಾಗಿ ಈ ಭಾಗದ ರೈತರು‌ ಸತತ 10 ವರ್ಷಗಳಿಂದ ಇಲ್ಲಿನ ಯಾವುದೇ ಬೆಳೆ ಬೆಳೆದರೂ, ತೀವ್ರ ನಷ್ಟ ಅನುಭವಿಸುವಂತಾಗಿದೆ.

HUBBALLI VIOLENCE ಪಾರದರ್ಶಕವಾಗಿ ತನಿಖೆ ನಡೆಸಬೇಕೆಂದು ಆಗ್ರಹ

ದಾಳಿಂಬೆ, ಅಡಿಕೆ ಸೇರಿದಂತೆ ವಿವಿಧ ಬೆಳೆಗಳು ರೈತರ ಕೈ ಸುಟ್ಟಿವೆ. ಚಿತ್ರದುರ್ಗ ಜಿಲ್ಲೆಯ ರೈತರನ್ನು ಸಾಲದ ಸುಳಿಗೆ ಸಿಲುಕಿಸಿ, ಬಾರಿ ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ರೈತರಿಗೆ ಕಬ್ಬು ಬೆಳೆಯಲು ಸರ್ಕಾರ ಪ್ರೋತ್ಸಾಹಿಸುವ ಮೂಲಕ ಕಾರ್ಖಾನೆಯನ್ನು ಮತ್ತೆ ಆರಂಭಿಸಿ, ಈ ಭಾಗದ ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಒತ್ತಾಯಿಸಿದ್ದಾರೆ.

ಇನ್ನು ಹಲವು ವರ್ಷಗಳಿಂದ ಮುಚ್ಚಿರೋ ಸಕ್ಕರೆ ಕಾರ್ಖಾನೆ ಆರಂಭಿಸಿದರೆ ಈ ಭಾಗದ ರೈತರ  ಕುಟುಂಬಗಳಿಗೆ ಉದ್ಯೋಗ ಸೃಷ್ಟಿಸಿದಂತಾಗಲಿದೆ. ಜೊತೆಗೆ ವಾಣಿ ವಿಲಾಸ ಸಾಗರ ಕೂಡ ಭದ್ರಾ ನೀರಿನಿಂದ‌ ಭರ್ತಿಯಾಗಿರೋ ಪರಿಣಾಮ ಕಬ್ಬು ಬೆಳೆಯಲು ಸಹ ರೈತರು ಉತ್ಸಾಹದಲ್ಲಿದ್ದಾರೆ. ಆದ್ದರಿಂದ ಸರ್ಕಾರ ಶುಗರ್ ಫ್ಯಾಕ್ಟರಿ ಪುನರ್ ಆರಂಭಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

ಒಟ್ಟಾರೆ ಬರದನಾಡಿನ ರೈತರು ಯಾವುದೇ ಬೆಳೆ‌ ಬೆಳೆದರು ಸಂಕಷ್ಟ ಬಗೆ ಹರೆಯುತ್ತಿಲ್ಲ‌. ಹೀಗಾಗಿ ರೈತರ ಬವಣೆ ನೀಗಿಸಲು ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಲು ಸರ್ಕಾರ ಅಗತ್ಯ ಕ್ರಮ‌ ಕೈಗೊಳ್ಳಬೇಕಿದೆ.

Chamarajanagara ಬ್ಯಾಗ್ ನಲ್ಲಿ ನವಜಾತ ಗಂಡು ಶಿಶು ಪತ್ತೆ!

click me!