ಚಿತ್ರದುರ್ಗ: ಭೀಕರ ಕಾರು ಅಪಘಾತ,  ಒಂದೇ ಕುಟುಂಬದ ಮೂವರ ಸಾವು

Published : Mar 13, 2019, 06:20 PM ISTUpdated : Mar 13, 2019, 07:38 PM IST
ಚಿತ್ರದುರ್ಗ: ಭೀಕರ ಕಾರು ಅಪಘಾತ,  ಒಂದೇ ಕುಟುಂಬದ ಮೂವರ ಸಾವು

ಸಾರಾಂಶ

ಘೋರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಮತ್ತೊಂದು ಕಾರು ಮತ್ತು ಲಾರಿಗೆ ಡಿಕ್ಕಿಯಾಗಿದೆ.

ಚಿತ್ರದುರ್ಗ[ಮಾ. 13] ಚಾಲಕನ ನಿಯಂತ್ರಣ ತಪ್ಪಿದ ಕಾರು ಮತ್ತೊಂದು ಕಾರು, ಲಾರಿಗೆ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೊಗಳೆರಹಟ್ಟಿ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಬಂಗಾರಕ್ಕನಗುಡ್ಡದ ಕೇಶವಮೂರ್ತಿ (40), ನಾಗಮ್ಮ (30), ರಾಧಿಕಾ (22) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬರಿಗೆ ಗಂಭೀರ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಂಗಾರಕ್ಕನಗುಡ್ಡದವರು ಎಂದು ಗುರುತಿಸಲಾಗಿದೆ. ತುರುವನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್, ದರ್ಶನ್‌ಗೆ ಜೈಲಲ್ಲೊಂದು ಶಾಕ್, ಕೋರ್ಟ್‌ನಲ್ಲೊಂದು ಆಘಾತ!