ಚಿಕ್ಕಬಳ್ಳಾಪುರ: ಜೂಜು ಅಡ್ಡೆಯಲ್ಲಿ ಕಂತೆ ಕಂತೆ ಹಣ..ಮೊತ್ತ!

By Web Desk  |  First Published Jun 23, 2019, 9:49 PM IST

ಭರ್ಜರಿ ಬೇಟೆ ನಡೆಸಿರುವ ಚಿಕ್ಕಬಳ್ಳಾಪುರ ಪೊಲೀಸರು ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿ ಬರೋಬ್ಬರಿ 24 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.


ಚಿಕ್ಕಬಳ್ಳಾಪುರ[ಜೂ. 23]  ಇಸ್ಪೀಟ್ ಅಡ್ಡೆ ಮೇಲೆ ಮಿಂಚಿನ ದಾಳಿ ನಡೆಸಿದ ಪೊಲೀಸರು  24 ಲಕ್ಷ 70 ಸಾವಿರ ನಗದು ವಶ ಪಡಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಕಣಿತಹಳ್ಳಿ ಗ್ರಾಮದ ಜೂಜು ಅಡ್ಡೆ ಮೇಲೆ ದಾಳಿ ಮಾಡಿ 24 ಲಕ್ಷ 70 ಸಾವಿರ ನಗದು, 21 ಮೊಬೈಲ್ , 17 ಬೈಕ್ ವಶಕ್ಕೆ ಪಡೆದಿದ್ದಾರೆ. 17 ಜನರನ್ನು ಬಂಧಿಸಿದ್ದಾರೆ.

Tap to resize

Latest Videos

ಜೂಜಾಡಿ 15 ಕೋಟಿ ಡಾಲರ್ ಸಂಪಾದಿಸಿದ ವಿಶ್ವದ ಅತಿದೊಡ್ಡ ಜೂಜುಕೋರ!

ಕಣಿತಹಳ್ಳಿ ಅರಣ್ಯ ಪ್ರದೇಶದಲ್ಲಿ  ಜೂಜು ನಡೆಯುತ್ತಿರುವ ಮಾಹಿತಿ ಆಧರಿಸಿ ಚಿಕ್ಕಬಳ್ಳಾಪುರ ಗ್ರಾಮಾಂತರದ ನಂದಿ ಪೊಲೀಸರು ಭರ್ಜರಿ ಬೇಟೆ ನಡೆಸಿದ್ದಾರೆ.

click me!