ಹೊಸ ಅವತಾರದಲ್ಲಿ ಫೇಸ್‌ಲಿಫ್ಟ್ ಹೊಸ ಸ್ವಿಫ್ಟ್ ಕಾರು ಬಿಡುಗಡೆ

By Suvarna News  |  First Published Feb 26, 2021, 4:25 PM IST

ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆಯುತ್ತಿರುವ ಸ್ವಿಫ್ಟ್ ಕಾರು ಕಂಡ ಯಶಸ್ಸು ಊಹೆಗೆ ನಿಲುಕದ್ದು. 2005ರಲ್ಲಿ ಮಾರುಕಟ್ಟೆಗೆ ಬಂದಾಗಿನಿಂದ ಹಿಡಿದು ಈವರೆಗೆ ಅದು ತನ್ನ ಯಶಸ್ಸಿನ ಓಟ ನಿಲ್ಲಿಸಿಲ್ಲ. ಇದೀಗ ಕಂಪನಿ ಈ ಸ್ವಿಫ್ಟ್‌ ಕಾರಿನ ಫೇಸ್‌ಲಿಫ್ಟ್ ವರ್ಷನ್ ಬಿಡುಗಡೆ ಮಾಡಿದೆ. ಈ ಕಾರು ಸೇಫ್ಟಿ ಮಾತ್ರವಲ್ಲದೇ ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ.


ದೇಶದ ಬಹುದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ತನ್ನ ಐಕಾನಿಕ್ ಮತ್ತು ಅತ್ಯಂತ ಜನಪ್ರಿಯ ಕಾರ್, ಸ್ವಿಫ್ಟ್‌ನ ಹೊಸ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಫೇಸ್‌ಲಿಫ್ಟ್ ಆಗಿರುವ ಈ ಸ್ವಿಫ್ಟ್‌ ಕಾರು ಈಗ ಮೊದಲಿಗಿಂತಲೂ ಹೆಚ್ಚು ಶಕ್ತಿಶಾಲಿ ಹಾಗೂ ಅತ್ಯಾಧುನಿಕಗೊಂಡಿದೆ. ಸೇಫ್ಟಿ ಫೀಚರ್ಸ್ ಮತ್ತು ಅತ್ಯಾಧುನಿಕ ಫೀಚರ್‌ಗಳ ಮೂಲಕ ಗಮನ ಸೆಳೆಯುತ್ತಿದೆ.  ಈ ಹೊಸ ಫೇಸ್‌ಲಿಫ್ಟ್ ಸ್ವಿಫ್ಟ್ ಕಾರಿನಲ್ಲಿ  ನೆಕ್ಸ್ಟ್ ಜೆನ್ ಕೆ ಸೀರೀಸ್ 1.2 ಲೀಟರ್ ಜೆಟ್ ಡುಯಲ್ ವಿವಿಟಿ ಎಂಜಿನ್ ‌ಅಳವಡಿಸಲಾಗಿದೆ.

Tap to resize

Latest Videos

undefined

ಸರ್ಕಾರಿ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳು ಕಡ್ಡಾಯ?!

ಈ ಮೊದಲೇ ಹೇಳಿದಂತೆ ಭಾರತೀಯ ರಸ್ತೆಗಳಲ್ಲಿ ಸ್ವಿಫ್ಟ್ ಕಾರುಗಳ ತಮ್ಮ ಆದ ಪ್ರಭಾವ ಹೊಂದಿವೆ. ಈ ಕಾರುಗಳ ಮಾರಾಟ  ಕಂಡ ಪರಿ ಅಧ್ಯಯನ ಯೋಗ್ಯವೂ ಹೌದು. ಅಷ್ಟರಮಟ್ಟಿಗೆ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಈ ಹಿನ್ನೆಲೆಯಲ್ಲೇ ಕಂಪನಿ ಆಗಾಗ ಸ್ವಿಫ್ಟ್ ಕಾರನ್ನು ಅಪ್‌ಗ್ರೇಡ್ ಮಾಡುತ್ತ, ಗ್ರಾಹಕರ ಬೇಡಿಕೆಗಳನ್ನು ಪೂರೈಸುತ್ತಿದೆ. ಇದೀಗ ಬಿಡುಗಡೆಯಾಗಿರುವ ಫೇಸ್‌ಲಿಫ್ಟ್ ಕಂಡಿರುವ ಮಾರುತಿ ಎಲ್ಲ ರೀತಿಯಿಂದಲೂ ನಿಮ್ಮ ಸೆಳೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದು.

ಕಂಪನಿಯ ಪ್ರಕಾರಸ ಮಾರುತಿ ಸ್ವಿಫ್ಟ್ ಇಂಧನ ದಕ್ಷತೆಯನ್ನು ಸಾಧಿಸಿದೆ. ಪ್ರತಿ ಲೀಟರ್‌ 23.20 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಈ ಮೈಲೇಜ್ ಮ್ಯಾನುಯೆಲ್ ಕಾರಿನಲ್ಲಿ ದೊರೆಯುತ್ತದೆ. ಇನ್ನು ಆಟೋ ಗಿಯರ್ ಸಿಫ್ಟ್‌ ಸ್ವಿಫ್ಟ್ ಕಾರು ನಿಮಗೆ ಪ್ರತಿ ಲೀಟರ್‌ಗೆ 23.76 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಹಾಗಾಗಿ, ಈ ಕಾರು ಇಂಧನ ದಕ್ಷತೆಯನ್ನು ಕಾಪಾಡಿಕೊಂಡು ಬರಬಹುದು ಎಂದು ಹೇಳಬಹುದು.

2005ರಲ್ಲಿ ಸ್ವಿಫ್ಟ್ ಕಾರು ಮಾರುಕಟ್ಟೆಗೆ ಬಿಡುಗಡೆಗೊಂಡಾಗಿನಿಂದಲೂ ಭಾರತದ ಪ್ರೀಮಿಯಮ್ ಹ್ಯಾಚ್‌ಬ್ಯಾಕ್ ಕಾರುಗಳ ಸೆಗ್ಮೆಂಟ್‌ನಲ್ಲಿ ಕ್ರಾಂತಿಯನ್ನೇ ಮಾಡಿದೆ. ಈ ಕಾರಿನ ಸ್ಪೋರ್ಟಿ ಕಾರ್ಯಕ್ಷಮತೆ, ನೇರ ನಿಲುವು ಮತ್ತು ನಿಸ್ಸಂದಿಗ್ಧವಾದ ರಸ್ತೆ ಉಪಸ್ಥಿತಿಯೊಂದಿಗೆ ಸ್ವಿಫ್ಟ್ ಇತರ ಕಾರುಗಳಿಗಿಂತಲೂ ಭಿನ್ನವಾಗಿ ನಿಲ್ಲುತ್ತದೆ. ಆಧುನಿಕ ಕಾಲದ ಗ್ರಾಹಕರ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಸ್ವಿಫ್ಟ್ ಕಾರನ್ನು ವಿನ್ಯಾಸ ಮಾಡಲಾಗಿದೆ ಎದು ಮಾರುತಿ ಸುಜುಕಿ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ(ಮಾರ್ಕೆಟಿಂಗ್ ಮತ್ತು ಸೇಲ್ಸ್) ಶಶಾಂಕ್ ಶ್ರೀವಾತ್ಸ್ ಹೇಳಿದ್ದಾರೆ.

ಕಾರಿನ ವಿಶೇಷತೆಗಳೇನು?

ಈ ಹೊಸ ಮಾದರಿಯ ಸ್ವಿಫ್ಟ್ ಕಾರು ಶಕ್ತಿಶಾಲಿ ಎಂಜಿನ್ ಅನ್ನು ಒಳಗೊಂಡಿದೆ. ಬಲೆನೋ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಅಳವಡಿಸಲಾಗಿರುವ ನೆಕ್ಸ್ಟ್ ಜೆನ್ ಕೆ ಸೀರೀಸ್ 1.2 ಲೀಟರ್ ಜೆಟ್ ಡುಯಲ್ ವಿವಿಟಿ ಎಂಜಿನ್ ‌ಅನ್ನು ಈ ಕಾರಿಗೂ ನೀಡಲಾಗಿದೆ. ಈ ಹೊಸ ಎಂಜಿನ್‌ 6000 ಆರ್‌ಪಿಎಂನಲ್ಲಿ 82 ಬಿಎಚ್‌ಪಿಯಿಂ 88 ಬಿಎಚ್‌ಪಿಯವರೆಗೂ ಪವರ್ ಉತ್ಪಾದಿಸುತ್ತದೆ. ಹಾಗೆಯೇ, 42,000 ಆರ್‌ಪಿಎಂನಲ್ಲಿ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಎಂಜಿನ್‌ನಲ್ಲಿ ಸ್ಟಾರ್ಟ್ ಸ್ಟಾಪ್(ಐಎಸ್ಎಸ್) ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಡುಯಲ್ ವಿವಿಟಿ ಮತ್ತು ಎಕ್ಸಾಸ್ಟ್ ಗ್ಯಾಸ್ ರಿಸರ್ಕೂಲೇಷನ್(ಇಜಿಆರ್) ತಂತ್ರಜ್ಞಾನದಿಂದಾಗಿ ಕಡಿಮೆ ಹೊರಸೂಸುವಿಕೆಯನ್ನು ಕಾಣಬಹುದು. ಈ ಎಲ್ಲ ಕಾರಣಗಳಿಂದಾಗಿ ಸ್ವಿಫ್ಟ್ ಕಾರು ನಿಮಗೆ ಇಂಧನ ದಕ್ಷತೆಯನ್ನೂ ಒದಗಿಸುತ್ತದೆ.

ಹೊಸ ಬಜಾಜ್ ಪಲ್ಸರ್ 180 ಬಿಡುಗಡೆಯಾಗಿದೆ, ಹೀಗಿದೆ ನೋಡಿ

ಇನ್ನು ಸುರಕ್ಷತೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಹಿಲ್ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ಸ್ ಸ್ಟೇಬಿಲಿಟಿ ಪ್ರೋಗ್ರಾಮ್(ಇಎಸ್‌ಪಿ) ತಂತ್ರಜ್ಞಾನ ನೀಡಲಾಗಿದೆ. ಫ್ರಂಟ್ ಮತ್ತು ರಿಯರ್‌ ವ್ಹೀಲ್‌ಗಳಲ್ಲಿ ದೊಡ್ಡದಾದ ಬ್ರೇಕ್‌ಗಳಿವೆ. ಸರಾಗವಾಗಿ ಹಿಂದಿರುವ ಯಾಂತ್ರಿಕತೆಯನ್ನು ಹೊಂದಿರುವ ಪರಿಷ್ಕೃತ ಸ್ಟೀಯರಿಂಗ್ ನೀಡಲಾಗಿದೆ.

ಇಷ್ಟು ಮಾತ್ರವಲ್ಲದೇ ಡುಯಲ್ ಏರ್‌ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್, ಪ್ರಿ ಟೆನ್ಸನರ್, ಫೋರ್ಸ್ ಲಿಮಿಟರ್ಸ್, ಮುಂಬದಿಯ ಸೀಟುಗಳಿಗೆ ಸೀಟ್ ಬೇಲ್ಟ್ ರಿಮೈಂಡರ್, ಕ್ಯಾಮೆರಾದೊಂದಿಗೆ ರಿವರ್ಸ್ ಪಾರ್ಕಿಂಗ್ ಸೆನ್ಸರ್ ಸೇರಿದಂತೆ ಇನ್ನಿತರು ಫೀಚರ್‌ಗಳನ್ನು ನೀಡಲಾಗಿದೆ.

Indian Chief: ಭಾರತದಲ್ಲಿ ಬಿಡುಗಡೆಯಾಗಲಿದೆ ಇಂಡಿಯನ್ ಚೀಫ್ ಬೈಕ್

ಕ್ರೂಸ್ ಕಂಟ್ರೋಲ್, ಕೀ ಅಂತರ್ಗತವಾಗಿರುವ ಒಆರ್‌ವಿಎಂಗಳ ಆಟೋ ಪೋಲ್ಟಬಲ್, 4.2 ಇಂಟ್ ಎಐಡಿ ಕಲರ್ಡ್ ಟಿಪಿಎಫ್ ಡಿಸ್‌ಪ್ಲೇ ಹೊಂದಿರುವ ಪರಿಷ್ಕೃತ ಟ್ವಿನ್ ಪಾಡ್ ಇನ್ಸುಟ್ರುಮೆಂಟ್ ಕ್ಲಸ್ಟರ್, 7 ಇಂಚಿನ ಹೊಸ ಇನ್ಪೋಟೈನ್‌ಮೆಂಟ್  ಸಿಸ್ಟಮ್ ಇದ್ದು ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಪೋರ್ಟ್ ಮಾಡುತ್ತದೆ. ಇದಿರಿಂದಾಗಿ ಆಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯ್ಡ್ ಆಟೋ ಬಳಸಬಹುದಾಗಿದೆ. ಫೇಸ್‌ಲಿಫ್ಟ್ ಸ್ವೀಫ್ಟ್ ಬೇಸ್ ಕಾರಿನ ಬೆಲೆ 5.73 ಲಕ್ಷ ರೂ.ನಿಂದ ಆರಂಭವಾಗುತ್ತದೆ.

click me!