Mini Scorpio ರಿಲೀಸ್‌ ಮಾಡಲು ರೆಡಿಯಾದ ಮಹೀಂದ್ರಾ, ಕಮ್ಮಿ ಬಜೆಟ್‌ನಲ್ಲಿ ಲಕ್ಸುರಿ ಲುಕ್ ಕೊಡಲಿದೆ ವಿಜನ್ ಎಸ್

Published : Jun 18, 2026, 06:04 PM IST
mahindra vision s mini scorpio suv

ಸಾರಾಂಶ

ಮಹೀಂದ್ರಾ ಸಂಸ್ಥೆಯು 'ವಿಜನ್ ಎಸ್' ಎಂಬ ಹೊಸ ಮಿಡ್-ಸೈಜ್ ಎಸ್‌ಯುವಿಯನ್ನು ಪರಿಚಯಿಸಲು ಸಜ್ಜಾಗಿದೆ. ಪೆಟ್ರೋಲ್, ಡೀಸೆಲ್, ಮತ್ತು ಎಲೆಕ್ಟ್ರಿಕ್ ಸೇರಿದಂತೆ ಹಲವು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿರುವ ಈ ಕಾರು, ಪನೋರಮಿಕ್ ಸನ್‌ರೂಫ್ ಹಾಗೂ ಆಧುನಿಕ ಫೀಚರ್‌ಗಳನ್ನು ಒಳಗೊಂಡಿರಲಿದೆ.

ಮುಂಬೈ (ಜೂ.18): ಭಾರತದ ವಾಹನ ಪ್ರಿಯರಿಗಾಗಿ ಮಹೀಂದ್ರಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಅತ್ಯುತ್ತಮ ಆಯ್ಕೆ ಪರಿಚಯಿಸುತ್ತಿದೆ. ವಿಶೇಷವೆಂದರೆ, ಈ ಕಾರು ಪೆಟ್ರೋಲ್, ಡೀಸೆಲ್ ಸೇರಿದಂತೆ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಹೀಗೆ ಎಲ್ಲಾ ರೀತಿಯ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ ಸಾಧ್ಯತೆಯಿದೆ. ಪನೋರಮಿಕ್ ಸನ್‌ರೂಫ್ ಮತ್ತು ದೊಡ್ಡ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ನಂತಹ ಆಧುನಿಕ ಫೀಚರ್‌ಗಳನ್ನು ಹೊಂದಿರುವ ಈ ಎಸ್‌ಯುವಿ, ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಂತೆ ಸಂಚಲನ ಸೃಷ್ಟಿಸೋದು ಗ್ಯಾರಂಟಿ ಎಂದು ಅಂದಾಜಿಸಲಾಗಿದೆ.

ಮಹೀಂದ್ರಾ ಪ್ರಸ್ತುತ ಭಾರತೀಯ ಮಾರುಕಟ್ಟೆಗಾಗಿ ಹೊಸ ಎಸ್‌ಯುವಿ ವಿನ್ಯಾಸದ ಕೆಲಸದಲ್ಲಿದ್ದು, ಮುಂಬರುವ ಅತ್ಯಂತ ಆಸಕ್ತಿದಾಯಕ ಮಾಡೆಲ್‌ಗಳಲ್ಲಿ ‘ವಿಜನ್ ಎಸ್’ ಮಿಡ್-ಸೈಜ್ ಎಸ್‌ಯುವಿ ಪ್ರಮುಖವಾಗಿದೆ. ಸದ್ಯಕ್ಕೆ ಕಂಪನಿಯು ಈ ಎಸ್‌ಯುವಿಯ ಸಂಪೂರ್ಣ ವಿವರಗಳನ್ನು ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ, ಶೀಘ್ರದಲ್ಲೇ ಇದರ ಉತ್ಪಾದನೆಯನ್ನು ಪ್ರಾರಂಭಿಸಬಹುದು ಎನ್ನಲಾಗಿದೆ. ಈಗಾಗಲೇ ಪರೀಕ್ಷಾರ್ಥ ಸಂಚರಿಸುವ (ಟೆಸ್ಟಿಂಗ್) ವೇಳೆಯೂ ಈ ಕಾರು ಹಲವು ಬಾರಿ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಕಾರಿನ ಮುಂಭಾಗದ ವಿನ್ಯಾಸ ಮತ್ತು ಎತ್ತರದ ಬೋನೆಟ್ ರಸ್ತೆಯ ಮೇಲೆ ಈ ಎಸ್‌ಯುವಿಯ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ. ಮಹೀಂದ್ರಾ ವಿಜನ್ ಎಸ್‌ನ ವಿನ್ಯಾಸವು ಫೋರ್ಡ್ ಬ್ರಾಂಕೋ (Ford Bronco) ಮತ್ತು ಲ್ಯಾಂಡ್ ರೋವರ್ ಡಿಫೆಂಡರ್ (Land Rover Defender) ನಂತಹ ಐಷಾರಾಮಿ ಎಸ್‌ಯುವಿಗಳಿಂದ ಪ್ರೇರಿತವಾಗಿದೆ.

ನ್ಯೂ_ಐಕ್ಯೂ (NU_IQ) ಆರ್ಕಿಟೆಕ್ಚರ್ ಆಧಾರಿತ ವಿನ್ಯಾಸ

ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಇದರ ಟೆಸ್ಟ್ ಮಾಡೆಲ್ ಫೈವ್-ಸ್ಪೋಕ್ ಅಲಾಯ್ ವೀಲ್ಸ್‌ಗಳೊಂದಿಗೆ ಕಂಡುಬಂದಿದೆ. ಈ ಎಸ್‌ಯುವಿಯ ವೀಲ್ ಆರ್ಚ್‌ಗಳು ಮತ್ತು ಡೋರ್‌ಗಳ ಮೇಲೆ ಬಲಿಷ್ಠವಾದ ಸೈಡ್ ಕ್ಲಾಡಿಂಗ್ ಇರಲಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ವಿಜನ್ ಎಸ್‌ನ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ, ಇದು ಮಹೀಂದ್ರಾ ಸಂಸ್ಥೆಯ ಸಂಪೂರ್ಣ ಹೊಸದಾದ 'NU_IQ' ಆರ್ಕಿಟೆಕ್ಚರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ನಿರ್ಮಾಣವಾಗುತ್ತಿದೆ. ಮಹೀಂದ್ರಾ ಕಂಪನಿಯು ಹಲವು ಪವರ್‌ಟ್ರೇನ್ ಆಯ್ಕೆಗಳನ್ನು ಬೆಂಬಲಿಸಲು ಈ ನೆಕ್ಸ್ಟ್ ಜನರೇಷನ್ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಿದೆ. ಈ ಪ್ಲಾಟ್‌ಫಾರ್ಮ್‌ನ ದೊಡ್ಡ ಪ್ರಯೋಜನವೆಂದರೆ, ಇದು ಆಂತರಿಕ ದಹನ ಇಂಜಿನ್ (ICE) ಮತ್ತು ಸಂಪೂರ್ಣ ಎಲೆಕ್ಟ್ರಿಕ್ ಪವರ್‌ಟ್ರೇನ್ (EV) ಎರಡನ್ನೂ ಒಳಗೊಂಡಿರಬಹುದು. ಹಾಗಾಗಿ ಕಂಪನಿಯು ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಜೊತೆಗೆ ವಿಜನ್ ಎಸ್ ಕಾರಿನ ಸಂಪೂರ್ಣ ಎಲೆಕ್ಟ್ರಿಕ್ ವೆರಿಯೆಂಟ್ ಅನ್ನು ಸಹ ಪರಿಚಯಿಸಲಿದೆ.

ಶಕ್ತಿಶಾಲಿ ಫೀಚರ್‌ಗಳ ಸೌಲಭ್ಯ

ಈ ಹೊಸ ಕಾರಿನಲ್ಲಿ ಡಬಲ್ ಟ್ರಾಪೆಜೊಯ್ಡಲ್ ಎಸಿ ವೆಂಟ್ಸ್, 12.3 ಇಂಚಿನ ಬೃಹತ್ ಸ್ಕ್ರೀನ್, ಎಂಐಡಿ (MID) ಜೊತೆಗೆ ಸ್ಕಾರ್ಪಿಯೋ-ಎನ್ (Scorpio-N) ಮಾದರಿಯ ಇನ್ಸ್ಟ್ರುಮೆಂಟ್ ಗೇಜ್ ಕ್ಲಸ್ಟರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಮ್ಯಾನುಯಲ್ ಹ್ಯಾಂಡ್‌ಬ್ರೇಕ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ಇನ್ನೂ ಹತ್ತು ಹಲವು ಆಧುನಿಕ ತಂತ್ರಜ್ಞಾನದ ಫೀಚರ್‌ಗಳು ಗ್ರಾಹಕರಿಗೆ ಸಿಗಲಿವೆ.

ಬಿಡುಗಡೆ ಯಾವಾಗ? ಮತ್ತು ಅಂದಾಜು ಬೆಲೆ ಎಷ್ಟು?

ಮಹೀಂದ್ರಾ ಕಂಪನಿಯು ವಿಜನ್ ಎಸ್ ಕಾರಿನ ಬಿಡುಗಡೆಯ ಅಧಿಕೃತ ದಿನಾಂಕವನ್ನು ಇನ್ನು ಖಚಿತಪಡಿಸಿಲ್ಲ. ಆದರೆ, ಈ ಎಸ್‌ಯುವಿ 2026 ರ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಲಗ್ಗೆ ಇಡಬಹುದು ಎಂದು ಅಂದಾಜಿಸಲಾಗುದೆ. ಅದಾದ ನಂತರ 2027 ರ ಆರಂಭದಲ್ಲಿ ಭಾರತದಲ್ಲಿ ಅಧಿಕೃತವಾಗಿ ಗ್ರಾಹಕರ ಕೈಸೇರಲಿದೆ. ಇನ್ನು ಬೆಲೆಯ ಬಗ್ಗೆ ಮಾತನಾಡುವುದಾದರೆ, ಈ ಕಾರಿನ ಅಂದಾಜು ಬೆಲೆಯು ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 10 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿ ಇರುವ ಸಾಧ್ಯತೆಯಿದೆ.

 

PREV
Read more Articles on
click me!

Recommended Stories

ಕಾರು ಚಾಲಕರೇ ಗಮನಿಸಿ! ಈ ವಾರ್ನಿಂಗ್ ಲೈಟ್‌ಗಳನ್ನು ಕಡೆಗಣಿಸಿದರೆ ಸಾವಿರಾರು ರೂ. ನಷ್ಟ ಖಚಿತ!
Maruti 7-Seater: ಮಿಡ್ಲ್‌ಕ್ಲಾಸ್ ಕುಟುಂಬಗಳಿಗೆ ಸೂಪರ್; ಮಾರುತಿಯಿಂದ ಬರುತ್ತಿರುವ ಈ ಹೊಸ 7 ಸೀಟರ್ ಕಾರುಗಳು!