Cab Booking Rules Changed: ರೈಡ್ ಬುಕ್ ಮಾಡುವವರಿಗೆ ಗುಡ್ ನ್ಯೂಸ್; ಓಲಾ, ಉಬರ್, ರ್ಯಾಪಿಡೋಗೆ ಕೇಂದ್ರದ ಬಿಗ್ ಶಾಕ್!

Published : Aug 13, 2026, 02:51 PM IST
Cab Ride

ಸಾರಾಂಶ

ಮುಂಗಡ ಟಿಪ್ ನೀಡಿದರೆ ಬೇಗ ರೈಡ್ ಸಿಗುತ್ತದೆ ಎಂಬ ಭಾವನೆ ಮೂಡಿಸಿ ಗ್ರಾಹಕರ ಮೇಲೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಚ್ಚರಿಕೆ ನೀಡಿದೆ.

ಕ್ಯಾಬ್ ಬುಕ್ ಮಾಡುವವರಿಗೆ ಕೇಂದ್ರ ಸರ್ಕಾರ ಪ್ರಮುಖ ಸೂಚನೆಯನ್ನು ನೀಡಿದೆ. ಪ್ರಯಾಣ ಆರಂಭ ಆಗುವ ಮುನ್ನವೇ ಪ್ರಯಾಣಿಕರಿಗೆ ಟಿಪ್ ನೀಡಿ ಅಂತ ಪ್ರೋತ್ಸಾಹಿಸುವ ವಿಧಾನಗಳನ್ನು ಕ್ಯಾಬ್ ಅಗ್ರಿಗೇಟರ್‌ಗಳು ತಮ್ಮ ಆಪ್‌ನಿಂದ ತೆಗೆದು ಹಾಕಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶ ನೀಡಿದೆ. ಮೊದಲೇ ಟಿಪ್ ನೀಡಿದರೆ ಆ ಬಳಿಕ ಕ್ಯಾಬ್ ಬೇಗ ಸಿಗುತ್ತದೆ ಎಂಬ ಭಾವನೆಯನ್ನು ಮೂಡಿಸುವಂತಹ ಸಂದೇಶಗಳನ್ನು, ಆಯ್ಕೆಗಳನ್ನು ತೋರಿಸುವಂತೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಒತ್ತಡ ಹಾಕುವ ತಂತ್ರ!

ಕೆಲವೊಂದು ಕ್ಯಾಬ್ ಬುಕ್ಕಿಂಗ್ ಆಪ್‌ಗಳಲ್ಲಿ 'Advance Tip', 'Choose An Add-on' ನಂತಹ ಆಯ್ಕೆಗಳನ್ನು ನೀಡುತ್ತಿರುವುದು ಕೇಂದ್ರದ ಗಮನಕ್ಕೆ ಬಂದಿತ್ತು. ಅಷ್ಟೇ ಅಲ್ಲದೆ ಟಿಪ್ ನೀಡಿದರೆ ಚಾಲಕ ಬೇಗ ರೈಡ್ ಅಂಗೀಕರಿಸುವ ಅವಕಾಶ ಇರುತ್ತೆ ಎಂಬ ಭಾವನೆ ಮಾಡಿಸುವ ಸಂದೇಶಗಳನ್ನು ಕೂಡ ಕಳುಹಿಸುವುದನ್ನು ಇಲಾಖೆ ಗುರುತಿಸಿದೆ. ಇಂತಹ ಫೀಚರ್‌ಗಳು ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುವ, ಹಣವನ್ನು ಹೆಚ್ಚುವರಿಯಾಗಿ ನೀಡಲು ಒತ್ತಡ ಹಾಕುವ ಅವಕಾಶವಿದೆ ಎಂದು ಕೇಂದ್ರ ಹೇಳಿದೆ.

ಆದೇಶದಲ್ಲಿ ಏನಿದೆ?

ಟಿಪ್ ನೀಡುವುದರಿಂದ ರೈಡ್ ಬೇಗ ಅಧಿಕೃತ ಆಗುತ್ತೆ, ಚಾಲಕ ವೇಗ ರೈಡ್ ಅಂಗೀಕಾರ ಮಾಡ್ತಾನೆ, ಡ್ರೈವರ್‌ಗಳ ನಿಯೋಜನೆ, ಕಾಯುವ ಸಮಯ ಅಥವಾ ಸೇವೆ ನೀಡುವ ಗುಣಮಟ್ಟ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವನ್ನು ಗ್ರಾಹಕರಿಗೆ ಮೂಡಿಸುವ ರೀತಿಯಲ್ಲಿ ಯಾವುದೇ ರೀತಿಯ ಫೀಚರ್‌ಗಳು ಆಪ್‌ನಲ್ಲಿ ತೋರಿಸುವಂತೆ ಇಲ್ಲ ಎಂದು ಕೇಂದ್ರ ಸ್ಪಷ್ಟವಾದ ಆದೇಶವನ್ನು ಜಾರಿ ಮಾಡಿದೆ.

ನಿಯಮಗಳು ಏನು ಹೇಳುತ್ತವೆ?

ಆಗಸ್ಟ್‌ 11ರಂದು ಜಾರಿಗೆ ಬಂದ ಆದೇಶದ ಅನ್ವಯ, ಎಲ್ಲಾ ಮೋಟಾರ್ ವೆಹಿಕಲ್ ಅಗ್ರಿಗ್ರೇಟರ್‌ಗಳು ತಮ್ಮ ಮೊಬೈಲ್ ಆಪ್, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೂಡಲೇ ಪರಿಶೀಲನೆ ನಡೆಸಿ ಹೊಸದಾಗಿ ನೀಡಿರುವ ಮಾರ್ಗಸೂಚಿಗಳ ಅನ್ವಯ ಬದಲಾವಣೆಗಳನ್ನು ಮಾಡಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಯಾರಿಗೆ ಆದರೂ ಟಿಪ್ ನೀಡುವುದು ಗ್ರಾಹಕನ ಸ್ವತಃ ನಿರ್ಧಾರ, ಒಂದೊಮ್ಮೆ ಪ್ರಯಾಣಿಕ ಟಿಪ್ ಕೊಟ್ಟರೆ ಈ ಅಷ್ಟು ಮೊತ್ತವನ್ನು ಅಗ್ರಿಗೇಟರ್‌ ಯಾವುದೇ ಹಣವನ್ನು ಕಟ್ ಮಾಡಿಕೊಳ್ಳದೇ, ಚಾಲಕನಿಗೆ ನೀಡಬೇಕಾಗುತ್ತದೆ ಎಂದು ಕೇಂದ್ರ ಇದೇ ವೇಳೆ ಸ್ಪಷ್ಟಪಡಿಸಿದೆ.

ಆದರೆ, ಇಲ್ಲಿ ಕೇಂದ್ರ ಸರ್ಕಾರ ಚಾಲಕರಿಗೆ ಟಿಪ್ ನೀಡುವ ಗ್ರಾಹಕರನ ಆಯ್ಕೆಯನ್ನು ಕಡಿತಗೊಳಿಸಲ್ಲ. ಮೋಟಾರು ವಾಹನ ಮಾರ್ಗಸೂಚಿಗಳ ಅನ್ವಯ, ಪ್ರಯಾಣಿಕರು ತಮ್ಮ ಪ್ರಯಾಣದ ಬಳಿಕ ಚಾಲಕನಿಗೆ ಟಿಪ್ ನೀಡಲು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಪ್ರಮುಖ ಷರತ್ತು ಎಂದರೆ, ಟ್ರಿಪ್ ಪೂರ್ಣಗೊಂಡ ನಂತರವೇ ಈ ಆಯ್ಕೆ ಲಭ್ಯವಾಗುವಂತೆ ಮಾಡಬೇಕು. ಕೇಂದ್ರದ ಈ ನಿರ್ಧಾರವೂ ಗ್ರಾಹಕರ ಮೇಲೆ ಅನಗತ್ಯವಾಗಿ ಹೇರುತ್ತಿದ್ದ ಒತ್ತಡವನ್ನು ಕಡಿಮೆ ಮಾಡುವ ಪ್ರಮುಖ ಉದ್ದೇಶವನ್ನು ಹೊಂದಿದೆ.

PREV
Read more Articles on
click me!

Recommended Stories

Toyota Hiluxಗೆ ಟಕ್ಕರ್ ಕೊಡಲು ಮಹೀಂದ್ರಾ ಹೊಸ ಅಸ್ತ್ರ, Scorpio-N Pickup ಆಗಸ್ಟ್ 14ಕ್ಕೆ ಗ್ರ್ಯಾಂಡ್ ಎಂಟ್ರಿ
ಬ್ಲ್ಯಾಕ್‌ ಲುಕ್‌ನಲ್ಲಿ ಬಂದ ಹುಂಡೈನ ಸಣ್ಣ SUV, ಭರ್ಜರಿ ಫೀಚರ್ಸ್‌ನೊಂದಿಗೆ 8.13 ಲಕ್ಷದಿಂದ ಬುಕ್ಕಿಂಗ್‌ ಶುರು!