ಬಾರ್ಸಿಲೋನಾದಲ್ಲಿ ಫೆರಾರಿ ಥೀಮ್ ಪಾರ್ಕ್, ಕಾರು ಪ್ರಿಯರಿಗೆ ಇದು ಡಿಸ್ನಿ ಲ್ಯಾಂಡ್!

By Suvarna NewsFirst Published Feb 19, 2024, 6:18 PM IST
Highlights

ಫೆರಾರ್ ಸೂಪರ್ ಕಾರುಗಳ ನೋಟದಲ್ಲಿ ಮಾತ್ರವಲ್ಲ ಪರ್ಫಾಮೆನ್ಸ್‌ನಲ್ಲೂ ರೋಚಕ ಅನುಭವ ನೀಡಲಿದೆ. ಇದೀಗ ಫೆರಾರಿ ಪ್ರಿಯರಿಗೆ ಬಾರ್ಲಿಲೋನಾದಲ್ಲಿರುವ ಫೆರಾರಿ ಥೀಮ್ ಪಾರ್ಕ್ ಹೊಸ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಾರ್ಸಿಲೋನಾ(ಫೆ.19) ಫೆರಾರಿ ಕಾರುಗಳನ್ನು ಇಷ್ಟಪಡದವರು ಯಾರಿದ್ದಾರೆ? ಫೆರಾರಿ ಸೂಪರ್ ಕಾರುಗಳ ವಿನ್ಯಾಸ, ಪರ್ಫಾಮೆನ್ಸ್, ಫೀಚರ್ಸ್ ಎಂತವನ್ನೂ ಮೋಡಿ ಮಾಡುತ್ತದೆ. ಇದೀಗ ಫೆರಾರಿ ಕಾರು ಇಷ್ಟಪಡುವರು ಕಾರಿನ ಅನುಭವದ ಜೊತೆಗೆ ಹಲವು ವಿಶೇಷ ಕ್ಷಣಗಳನ್ನು ಕಳೆಯಲು ಫೆರಾರಿ ಥೀಮ್ ಪಾರ್ಕ್ ಆರಂಭಗೊಂಡಿದೆ. ಬಾರ್ಸಿಲೋನಾದಲ್ಲಿ ಆರಂಭಗೊಂಡಿರುವ ಈ ಫೆರಾರಿ ಥೀಮ್ ಪಾರ್ಕ್‌ನಲ್ಲಿ ಅತೀ ಎತ್ತದ ರೋಲರ್ ಕೋಸ್ಟರ್ ಲಭ್ಯವಿದೆ. ಈ ರೋಲರ್ ಕೋಸ್ಟರ್ ಮೂಲಕ ಫೆರಾರಿ ಕಾರನ್ನು ಚಲಾಯಿಸಿ ಅನುಭವ ಪಡೆಯಬಹುದು.

112 ಮೀಟರ್ ಎತ್ತರದಲ್ಲಿ ನಿರ್ಮಾಣ ಮಾಡಿರುವ ರೋಲರ್ ಕೋಸ್ಟರ್‌ನಲ್ಲಿ ದೊಡ್ಡ ಗಾತ್ರದ ಫೆರಾರಿ ಕಾರನ್ನು ಅಳವಡಿಸಲಾಗಿದೆ. ಈ ಕಾರಿನಲ್ಲಿ ಕುಳಿತು ಪಾರ್ಕ್ ತುಂಬಾ ಓಡಾಡಬಹುದು. ವಿಶೇಷ ಅಂದರೆ ಕೇವಲ 5 ನಿಮಿಷದಲ್ಲಿ 180 ಕಿಲೋಮೀಟರ್ ವೇಗವನ್ನು ಈ ಕಾರು ಪಡೆದುಕೊಳ್ಳಲಿದೆ. ರೋಲರ್ ಕೋಸ್ಟರ್ ಹಳಿ ಮೂಲಕ ಈ ಕಾರು ಅತೀ ವೇಗವಾಗಿ ಸಂಚರಿಸಲಿದೆ. ಇದು ವಿಶೇಷ ಅನುಭವ ನೀಡಲಿದೆ. ಯೂರೋಪ್‌ನಲ್ಲಿರುವ ಅತೀ ಎತ್ತರದ ರೋಲ್ ಕೋಸ್ಟರ್ ರೈಡ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಂಗಳೂರಿನ ರಸ್ತೆಯಲ್ಲಿ ಫೆರಾರಿ ಸವಾರಿ, ಟ್ರಾಫಿಕ್‌ನಲ್ಲಿ ಸಿಲುಕಿರುವುದು ನೋಡಲು ನೋವಾಗುತ್ತೆ ಎಂದ ಫ್ಯಾನ್ಸ್!

ರೋಲರ್ ಕೋಸ್ಟರ್ ಫೆರಾರಿ ಡ್ರೈವಿಂಗ್ ಜೊತೆಗೆ ವಿಶೇಷ ಫೆರಾರಿ ಕಾರುಗಳ ಪ್ರದರ್ಶನವೂ ಲಭ್ಯವಿದೆ. ರೇಸಿಂಗ್ ದಿಗ್ಗಜರು ಬಳಸಿದ ಫೆರಾರಿ ಕಾರುಗಳು ಕೂಡ ಇಲ್ಲಿದೆ. ಬರೋಬ್ಬರಿ 70,000 ಚದರ ಅಡಿ ವಿಸ್ತೀರ್ಣದಲ್ಲಿ ಈ ಫೆರಾರಿ ಥೀಮ್ ಪಾರ್ಕ್ ನಿರ್ಮಾಣಗೊಂಡಿದೆ. ಕಾರಿನ ಡೈವಿಂಗ್, ಪ್ರದರ್ಶನಗಳ ಅನುಭವದ ಜೊತೆಗೆ  250 ಕೊಠಡಿಗಳ 5 ಸ್ಟಾರ್ ಹೊಟೆಲ್ ಕೂಡ ಇಲ್ಲಿದೆ. 

ಈ ಫೆರಾರಿ ಥೀಮ್ ಪಾರ್ಕ್ ಇಟಾಲಿಯನ್ ಕಾರು ಪರಂಪರೆಗೆ ಅನುಗುಣವಾಗಿ ನಿರ್ಮಾಣ ಮಾಡಲಾಗಿದೆ. ಬಾರ್ಸಿಲೋನಾದಲ್ಲಿ ಆರಂಭಗೊಂಡಿದ್ದರೂ ಇಟಾಲಿಯನ್ ಹಳ್ಳಿಯ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಇಲ್ಲಿ ಬರ್ಲಿನೆಟಾಸ್, ಕ್ಯಾಲಿಫೋರ್ನಿಯಾಸ್, ಸ್ಪೆಶಲ್ಸ್, ಇಟಾಲಿಯಸ್ ಹಾಗೂ ಸ್ಪೈಡರ್ಸ್ ಸೇರಿದಂತೆ ಕೆಲ ಫಾರ್ಮುಲಾ ಒನ್ ಕಾರುಗಳು ಪ್ರದರ್ಶನ ಇಲ್ಲಿದೆ.  

 

7.50 ಕೋಟಿ ರೂ ಫೆರಾರಿ SF90 ಕಾರಿನಲ್ಲಿ ಅಕಾಶ್ ಅಂಬಾನಿ ಜಾಲಿ ಡ್ರೈವ್!

click me!