ಉದ್ಯೋಗಿಗೆ 4 ಕೋಟಿ ರೂ ಲ್ಯಾಂಬೋರ್ಗಿನಿ ಕಾರು ಗಿಫ್ಟ್ ನೀಡಿದ ಕಂಪನಿ, ಇಲ್ಲೆ ಕೆಲಸ ಕೊಡಿ ಎಂದ ನೆಟ್ಟಿಗರು

Published : Oct 29, 2026, 06:42 PM IST
Lamborghini Gift Stuns Employee

ಸಾರಾಂಶ

ಉದ್ಯೋಗ ಕಡಿತ, ಒತ್ತಾಯಪೂರ್ವಕ ಸ್ವಯಂ ನಿವೃತ್ತಿ ಘಟನಗಳೇ ಕೇಳಿಬರುತ್ತಿದೆ. ಇನ್ನು ವೇತನ ಹೆಚ್ಚಳವಿಲ್ಲ, ಸಂಕಷ್ಟದ ನಡುವೆ ಇಲ್ಲೊಂದು ಕಂಪನಿ ತನ್ನ ಉದ್ಯೋಗಿಗಳಿಗೆ 4 ಕೋಟಿ ರೂ ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ಕಾರು ಗಿಫ್ಟ್ ನೀಡಿದೆ. ಇದೀಗ ನೆಟ್ಟಿಗರು ಸ್ಯಾಲರಿ ಕಡಿಮೆಯಾದರೂ ಪರ್ವಾಗಿಲ್ಲ, ಇಲ್ಲೇ ಕೆಲಸ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.

ದುಬೈ (ಅ.29) ಮೈಕ್ರೋಸಾಫ್ಟ್‌ನಲ್ಲಿ ಸ್ವಯಂ ನಿವೃತ್ತಿಗೆ ಸೂಚನೆ ನೀಡಲಾಗಿದೆ. ಇತ್ತ ಅಮೇಜಾನ್ ಸೇರಿದಂತೆ ಹಲವು ಕಂಪನಿಗಳಲ್ಲಿ ಉದ್ಯೋಗ ಕಡಿತಗಳು ನಡೆಯುತ್ತಿದೆ. ಹಲವು ಕಂಪನಿ ಉದ್ಯೋಗ ಕಡಿತ ಮಾಡಿಲ್ಲ, ಆದರೆ ಸ್ಯಾಲರಿ ಹೆಚ್ಚಳವೂ ಮಾಡದೆ ಸರಿದೂಗಿಸುತ್ತಿದೆ. ಇದರ ನಡುವೆ ಇಲ್ಲೊಂದು ಕಂಪನಿ ತನ್ನ ಉದ್ಯೋಗಿಗಳಿಗೆ ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ಕಾರು ಗಿಫ್ಟ್ ನೀಡಿದೆ. ದುಬೈನ ರಿಯಲ್ ಎಸ್ಟೇಟ್ ಕಂಪನಿಯ ಈ ನಡೆಗೆ ಸ್ಯಾಲರಿ ಎಂಪ್ಲಾಯ್ಸ್ ಕಣ್ಣುಕಣ್ಣು ಮಿಟುಕಿಸಿದ್ದಾರೆ.

ರಿಯಲ್ ಎಸ್ಟೇಟ್ ಕಂಪನಿ ನಡೆಗೆ ಭಾರಿ ಮೆಚ್ಚುಗೆ

ಕಂಪನಿಯ ಟಾಪ್ ಪರ್ಫಾಮರ್‌ಗಳಿಗೆ ಕಂಪನಿ 4 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ಕಾರು ಗಿಫ್ಟ್ ನೀಡಿದೆ. ರಿಚ್‌ಕೀ ಪ್ರಾಪರ್ಟೀಸ್ (Richkey Properties) ರಿಯಲ್ ಎಸ್ಟೇಟ್ ಕಂಪನಿ ತನ್ನ ಅತ್ಯುತ್ತಮ ಉದ್ಯೋಗಿಗೆ ಕಣ್ಣು ಕೋರೈಸುವಂತಹ ದುಬಾರಿ ಕೊಡುಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಸಂಸ್ಥೆಯ ಮೂರನೇ ವರ್ಷದ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕಂಪನಿಯ ಕಂಪನಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಸೇಲ್ಸ್ ವಿಭಾಗದ ನಟಾಲಿಯಾ ಚಾವೇಜ್ (Natalia Chavez) ಅವರಿಗೆ ಹೊಚ್ಚ ಹೊಸ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಉರಸ್' (Lamborghini Urus) ಸೂಪರ್ ಎಸ್‌ಯುವಿ ಕಾರು ಗಿಫ್ಟ್ ನೀಡಿದೆ.

ಕಳೆದ ಎರಡು ವರ್ಷಗಳಲ್ಲಿ ಸುಮಾರು 500 ಮಿಲಿಯನ್ ಡಾಲರ್ (ಅಂದಾಜು 4,200 ಕೋಟಿ ರೂಪಾಯಿಗೂ ಹೆಚ್ಚು) ಮೌಲ್ಯದ ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಡೀಲ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಟಾಲಿಯಾ ಚಾವೇಜ್ ಕಂಪನಿ ಅದ್ಧೂರಿ ಉಡುಗೊರೆ ನೀಡಿದೆ. ಸೂಪರ್ ಕಾರು ಗಿಫ್ಟ್ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದೆ. 2026ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ನಟಾಲಿಯಾ ಈ ವರ್ಷದ ಟಾಪ್ ಪರ್ಫಾರ್ಮರ್' ಪ್ರಶಸ್ತಿಯೊಂದಿಗೆ ನಾಲ್ಕು ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾವುಕರಾದ ಉದ್ಯೋಗಿ

ಕಂಪನಿಯ ಸಿಇಒ ದಬಾನ್ ಒಥ್ಮಾನ್ ಹಾಗೂ ಸಂಸ್ಥಾಪಕರ ಸಮ್ಮುಖದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಟಾಲಿಯಾಗೆ ಅಚ್ಚರಿ ಗಿಫ್ಟ್ ನೀಡಿ ಗೌರವಿಸಿದ್ದಾರೆ. ಕಾರು ಗಿಫ್ಟ್ ಕುರಿತು ಯಾವುದೇ ಸುಳಿವು ಇರದ ನಟಾಲಿಯಾ, ಲಂಬೋರ್ಗಿನಿ ಕಾರನ್ನು ಕಂಡು ಅಚ್ಚರಿಗೊಂಡಿದ್ದಾರೆ. ಇದೇ ವೇಳೆ ಭಾವುಕರಾದರು. ಈ ಕಾರಿನ ಮೌಲ್ಯ ದುಬೈ ಮಾರುಕಟ್ಟೆಯಲ್ಲಿ ಸುಮಾರು 2.3 ಕೋಟಿಯಿಂದ 4 ಕೋಟಿ ರೂಪಾಯಿ (9 ಲಕ್ಷದಿಂದ 15.5 ಲಕ್ಷ ಎಇಡಿ) ಮೌಲ್ಯವಿದೆ.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಯಶಸ್ಸು ಗಳಿಸಬೇಕಾದರೆ ನಿರಂತರ ಶ್ರಮ ಮತ್ತು ಶಿಸ್ತು ಅಗತ್ಯ. ಪ್ರತಿದಿನ ದುಬೈನಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಸರಿಯಾದ ಮಾರ್ಗದರ್ಶನ ನೀಡುವುದೇ ನನ್ನ ಗುರಿಯಾಗಿತ್ತು ಎಂದು ನಟಾಲಿಯಾ ಹೇಳಿದ್ದಾರೆ. ಈ ಕ್ಷೇತ್ರದಲ್ಲಿ ಕೆಲಸಕ್ಕೆ ಕೊನೆಯಿಲ್ಲ, ಕ್ಲೈಂಟ್‌ಗಳಿಗಾಗಿ 24 ಗಂಟೆಯೂ ಸಿದ್ಧರಿರಬೇಕಾಗುತ್ತದೆ ಎಂದು ತಮ್ಮ ಯಶಸ್ಸಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ರಿಚ್‌ಕೀ ಪ್ರಾಪರ್ಟೀಸ್ ಶೇರ್ ಮಾಡಿರುವ ಈ ವಿಡಿಯೋ ಈಗ ವೈರಲ್ ಆಗಿದೆ. "ರಿಚ್‌ಕೀ ಸಂಸ್ಥೆಯಲ್ಲಿ ಕಠಿಣ ಪರಿಶ್ರಮ ವಹಿಸಿದರೆ ಏನೆಲ್ಲ ಸಿಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ" ಎಂದು ಕಂಪನಿ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದು, ವಿಶ್ವದಾದ್ಯಂತ ಇರುವ ನೆಟ್ಟಿಗರು 'ಇಂತಹ ಕಂಪನಿಯಲ್ಲಿ ಕೆಲಸ ಮಾಡಲು ನಾವೂ ಸಿದ್ಧ' ಎಂದು ಕಮೆಂಟ್ ಮಾಡುತ್ತಿದ್ದಾರೆ.

PREV
Read more Articles on
click me!

Recommended Stories

ಮಾರುತಿ ಸುಜುಕಿಗೆ,ಟಾಟಾಗೆ ನಡುಕ, ದೀಪಾವಳಿಗೂ ಮೊದಲೇ ಹ್ಯುಂಡೈ ಬೆಯಾನ್ ಕಾರಿಗೆ ಭಾರಿ ಬೇಡಿಕೆ
ನಿಮ್ಮ ಕಾರಿಗೂ ಆಫ್ಟರ್‌ ಮಾರ್ಕೆಟ್ ಸನ್‌ ರೂಫ್ ಹಾಕಿಸುವ ಪ್ಲಾನ್‌ ಇದ್ಯಾ? ಮೊದಲು ವಾರಂಟಿ ಚೆಕ್‌ ಮಾಡಿ