Business Ideas: ಬಟ್ಟೆಗೆ ಅಗತ್ಯವಾಗಿರುವ ದಾರ ತಯಾರಿಸಿ ಕೈ ತುಂಬ ಗಳಿಸಿ

By Suvarna News  |  First Published Jan 16, 2023, 12:40 PM IST

ಬ್ಯುಸಿನೆಸ್ ಶುರು ಮಾಡುವ ಮುನ್ನ ಯಾವುದು ಬೆಸ್ಟ್ ಎಂಬ ಗೊಂದಲ ಸಾಮಾನ್ಯವಾಗಿರುತ್ತದೆ. ಕೆಲವೊಂದು ವ್ಯವಹಾರಕ್ಕೆ ಸದಾ ಬೇಡಿಕೆಯಿರುತ್ತದೆ. ಹಳ್ಳಿ – ನಗರ ಎರಡರಲ್ಲಿ ಎಲ್ಲಿ ಬೇಕಾದ್ರೂ ಶುರು ಮಾಡಬಹುದಾದದ ಈ ವ್ಯವಹಾರದಲ್ಲಿ ಲಾಭ ಕೂಡ ಹೆಚ್ಚಿರುತ್ತದೆ. 
 


ದಾರವಿಲ್ಲದೆ ಬಟ್ಟೆ ಹೊಲಿಯಲು ಸಾಧ್ಯವಿಲ್ಲ. ಬಟ್ಟೆಗಳನ್ನು ತಯಾರಿಸಲು ಅತ್ಯಂತ ಅಗತ್ಯವಿರುವ ಈ ದಾರಕ್ಕೆ ಬೇಡಿಕೆ ಹೆಚ್ಚಿದೆ. ನಗರ ಮತ್ತು ಹಳ್ಳಿ ಎರಡರಲ್ಲೂ ನೀವು ಸುಲಭವಾಗಿ ಥ್ರೆಡ್ ತಯಾರಿಕೆ ವ್ಯವಹಾರವನ್ನು ಶುರು ಮಾಡಬಹುದು. ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ನೋಡಿದರೆ ಥ್ರೆಡ್ ಮೇಕಿಂಗ್ ಬಿಸಿನೆಸ್ ನಲ್ಲಿ ತುಂಬಾ ಲಾಭವಿದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ನಾವಿಂದು ದಾರ ತಯಾರಿಕಾ ವ್ಯವಹಾರ ಶುರು ಮಾಡೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೆವೆ.

ದಾರ (Thread) ತಯಾರಿಕಾ ವ್ಯವಹಾರ (Business) ವನ್ನು ಹೇಗೆ ಪ್ರಾರಂಭಿಸುವುದು? : ಥ್ರೆಡ್ ತಯಾರಿಸುವ ವ್ಯವಹಾರವನ್ನು ಪ್ರಾರಂಭಿಸಲು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಥ್ರೆಡ್ ಗೆ ಬಳಸುವ ಕಚ್ಚಾ (Raw) ವಸ್ತುಗಳನ್ನು ಎಲ್ಲಿಂದ ಪಡೆಯಬೇಕು ಎಂಬುದನ್ನು  ತಿಳಿದುಕೊಳ್ಳಬೇಕು. ದಾರ ತಯಾರಿಸುವ  ಯಂತ್ರ (Machine) ಗಳನ್ನು ಖರೀದಿಸಬೇಕು. ಅದರ ನಂತರ ನೀವು ಥ್ರೆಡ್ ವ್ಯವಹಾರ ಶುರು ಮಾಡಬಹುದು. ಥ್ರೆಡ್ ವ್ಯವಹಾರವನ್ನು ನೀವು ಸಣ್ಣ ಪ್ರಮಾಣದಲ್ಲಿ ಕೂಡ ಶುರು ಮಾಡಬಹುದು. ಮನೆಯಲ್ಲಿಯೇ ದಾರ ತಯಾರಿಸಿ ಮಾರಾಟ ಮಾಡಬಹುದು. ನೀವೇ ನೇರವಾಗಿ ಗ್ರಾಹಕರಿಗೆ ದಾರ ನೀಡ್ತೀರಿ ಎಂದಾದ್ರೆ ನೀವು ಜನನಿಬಿಡಿ ಪ್ರದೇಶದಲ್ಲಿ ಅಂಗಡಿ ತೆರೆಯಬೇಕು. ನೀವು ಅಂಗಡಿಗಳಿಗೆ ದಾರವನ್ನು ನೀಡ್ತಿರಿ ಎಂದಾದ್ರೆ ನಿಮ್ಮದೆ ಅಂಗಡಿ ಅವಶ್ಯಕತೆ ಇರೋದಿಲ್ಲ.

Tap to resize

Latest Videos

ನೀವು ಯಾವ ದಾರ ತಯಾರಿ ಮಾಡ್ತಿರಿ ಎನ್ನುವುದ್ರ ಆಧಾರದ ಮೇಲೆ ನೀವು ಕಚ್ಚಾ ವಸ್ತು ಆಯ್ಕೆ ಮಾಡಿಕೊಳ್ಳಬೇಕು. ಝರಿ ದಾರ, ರೇಷ್ಮೆ ದಾರ, ಪ್ಲಾಸ್ಟಿಕ್ ದಾರ, ಹತ್ತಿ ದಾರ ಹೀಗೆ ಅನೇಕ ವೆರೈಟಿ ದಾರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸ್ಟ್ಯಾಟ್ಲರ್ ಫೈಬರ್, ಹತ್ತಿ ಮತ್ತು ರೇಷ್ಮೆ, ಸಿಂಥೆಟಿಕ್ ಫೈಬರ್ ಇದ್ರಲ್ಲಿ ಒಂದನ್ನು ಬಳಸಬೇಕಾಗುತ್ತದೆ. ಇದಕ್ಕೆ ಯಾವುದೇ ವಿಶೇಷ ವಿದ್ಯಾರ್ಹತೆಯ ಅಗತ್ಯವಿಲ್ಲ. ಯಂತ್ರಕ್ಕೆ ದಾರ ಹಾಕಿದ್ರೆ ಎಲ್ಲ ಸಿದ್ಧವಾಗಿ ನಿಮ್ಮ ಕೈಗೆ ಸಿಗುತ್ತದೆ. ನೀವು ಅದನ್ನು ಪ್ಯಾಕಿಂಗ್ ಮಾಡಿ ಮಾರಾಟ ಮಾಡಿದ್ರೆ ಸಾಕಾಗುತ್ತದೆ. ಥ್ರೆಡ್ ರೋಲಿಂಗ್ ಯಂತ್ರ ಹಾಗೂ ರೀಲ್ ತಯಾರಿಸುವ ಯಂತ್ರಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. 

Business Ideas: ಎಲ್ಲರಿಗೂ ಅಗತ್ಯವಿರುವ ಡಿಟರ್ಜೆಂಟ್ ಪೌಡರ್ ನಲ್ಲಿದೆ ಲಾಭ

ಥ್ರೆಡ್ ವ್ಯವಹಾರಕ್ಕಾಗಿ ನೋಂದಣಿ ಅಗತ್ಯವಿದೆಯೇ? : ಸಣ್ಣ ಪ್ರಮಾಣದಲ್ಲಿ ಥ್ರೆಡ್ ತಯಾರಿಕೆಯ ವ್ಯವಹಾರವನ್ನು ಮಾಡಿದರೆ, ಅದಕ್ಕೆ ನೋಂದಣಿ ಅಗತ್ಯವಿಲ್ಲ. ಆದರೆ ಯಾವುದೇ ವ್ಯವಹಾರವನ್ನು ಕಾನೂನುಬದ್ಧವಾಗಿ ದೊಡ್ಡ ಪ್ರಮಾಣದಲ್ಲಿ ನಡೆಸಲು  ಕೆಲವು ಅಗತ್ಯ ನೋಂದಣಿಗಳು ಮತ್ತು ಪರವಾನಗಿಗಳು ಬೇಕಾಗುತ್ತವೆ. ಆದ್ದರಿಂದ ನೀವು ದೊಡ್ಡ ಪ್ರಮಾಣದಲ್ಲಿ ಥ್ರೆಡ್ ವ್ಯವಹಾರವನ್ನು ಮಾಡಲು ಬಯಸಿದರೆ ನೀವು ಹತ್ತಿರದ ಉದ್ಯಮ ವಿಭಾಗದಲ್ಲಿ ನೋಂದಾಯಿಸಿಕೊಳ್ಳಬೇಕು. ಇದರೊಂದಿಗೆ ಜಿಎಸ್ಟಿ ನೋಂದಣಿಯನ್ನು ಸಹ ಮಾಡಬೇಕಾಗುತ್ತದೆ.

ದಾರ ತಯಾರಿಕೆಯ ವ್ಯಾಪಾರದ ವೆಚ್ಚ ಎಷ್ಟು? : ಥ್ರೆಡ್ ತಯಾರಿಕೆಯ ವ್ಯವಹಾರವನ್ನು ಪ್ರಾರಂಭಿಸಲು ಎಷ್ಟು ವೆಚ್ಚವಾಗುತ್ತದೆ ಎಂಬುದು ನೀವು ಯಾವ ರೀತಿಯಲ್ಲಿ ವ್ಯವಹಾರ ಮಾಡ್ತಿದ್ದಿರೀ ಎಂಬುದನ್ನು ಅವಲಂಬಿಸಿರುತ್ತದೆ. ಸ್ವಯಂಚಾಲಿತ ಥ್ರೆಡ್ ತಯಾರಿಕೆ ಯಂತ್ರವನ್ನು ಖರೀದಿಸಲು ಬಯಸಿದರೆ  ವೆಚ್ಚ ಹೆಚ್ಚಿರುತ್ತದೆ. ಇದಕ್ಕಾಗಿ ನೀವು ಸುಮಾರು 5 ರಿಂದ 6 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ಪ್ರತ್ಯೇಕವಾಗಿ ಕೆಲವು ವೆಚ್ಚಗಳನ್ನು ಮಾಡಬೇಕಾಗುತ್ತದೆ. ನೀವು ಸಣ್ಣ ಪ್ರಮಾಣದ ವ್ಯಾಪಾರವನ್ನು ಮಾಡಲು ಬಯಸಿದರೆ ನಿಮ್ಮ ಬಜೆಟ್‌ಗೆ ಅನುಗುಣವಾಗಿ ನೀವು ವ್ಯವಹಾರವನ್ನು ಪ್ರಾರಂಭಿಸಬಹುದು.

Business Ideas : ಆಧಾರ್ ಕಾರ್ಡ್ ಕೇಂದ್ರ ತೆರೆದು ಗಳಿಕೆ ಶುರು ಮಾಡಿ

ದಾರ ತಯಾರಿಕೆ ವ್ಯವಹಾರದಲ್ಲಿ ಲಾಭ ಎಷ್ಟು ?: ದಾರಕ್ಕೆ ಸದಾ ಬೇಡಿಕೆಯಿದೆ. ದಾರದ ಬೇಡಿಕೆ ಕಡಿಮೆಯಾಗಲು ಸಾಧ್ಯವೇ ಇಲ್ಲ. ಆರಂಭಿಕ ಹಂತದಲ್ಲಿ ನಿಮಗೆ ನಿರೀಕ್ಷಿಸಿದಷ್ಟು ಲಾಭ ಸಿಗದೆ ಹೋಗಬಹುದು. ಅತ್ಯಲ್ಪ ಲಾಭ ಬರಬಹುದು. ಆದರೆ ನೀವು ಈ ವ್ಯವಹಾರದಲ್ಲಿ ಮುಂದುವರೆದರೆ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಿದರೆ ಹೆಚ್ಚಿನ ಲಾಭವನ್ನು ನೀವು ಪಡೆಯಬಹುದಾಗಿದೆ. 

click me!