ಬ್ಯುಸಿನೆಸ್ ಮಾಡುವಾಗ ಲಾಭ – ನಷ್ಟದ ಬಗ್ಗೆ ಆಲೋಚನೆ ಮಾಡ್ಬೇಕಾಗುತ್ತದೆ. ಕಡಿಮೆ ಹೂಡಿಕೆ ಹಾಗೂ ಹೆಚ್ಚು ಬೇಡಿಕೆ ಎರಡನ್ನೂ ಗಮನದಲ್ಲಿಟ್ಟುಕೊಂಡು ಬ್ಯುಸಿನೆಸ್ ಶುರು ಮಾಡಿದ್ರೆ ನಷ್ಟವಾಗೋದಿಲ್ಲ. ಸದಾ ಎಲ್ಲರಿಗೂ ಬೇಕಾಗಿರುವ ಡಿಟರ್ಜೆಂಟ್ ಪೌಡರ್ ತಯಾರಿಕೆ ಕೂಡ ಒಳ್ಳೆ ಬ್ಯುಸಿನೆಸ್.  

ಸರ್ಕಾರಿ ಉದ್ಯೋಗ ಮಾತ್ರ ಕೆಲಸವಲ್ಲ. ಅದರ ಹೊರತಾಗಿಯೂ ಹಲವು ವೃತ್ತಿ ಆಯ್ಕೆಗಳಿವೆ. ಹೊಸದನ್ನು ಮಾಡಲು ನೀವು ಬಯಸಿದರೆ ಸ್ವಂತ ವ್ಯಾಪಾರ ಶುರು ಮಾಡುವ ಆಲೋಚನೆಯಲ್ಲಿದ್ದರೆ ಡಿಟರ್ಜೆಂಟ್ ಪೌಡರ್ ತಯಾರಿಸುವ ವ್ಯಾಪಾರ ಶುರು ಮಾಡ್ಬಹುದು. ಡಿಟರ್ಜೆಂಟ್ ಪೌಡರ್ ಗೆ ಯಾವಾಗ್ಲೂ ಬೇಡಿಕೆ ಇದ್ದೇ ಇದೆ. ನಾವಿಂದು ಡಿಟರ್ಜೆಂಟ್ ಪೌಡರ್ ತಯಾರಿಸುವ ವ್ಯಾಪಾರ ಶುರು ಮಾಡೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೆವೆ. 

ಡಿಟರ್ಜೆಂಟ್ (Detergent) ಪೌಡರ್ (Powder) ತಯಾರಿಸುವ ಬ್ಯುಸಿನೆಸ್ (Business) : ಡಿಟರ್ಜೆಂಟ್ ಪೌಡರ್ನಲ್ಲಿ ನೀವು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕಾಗಿಲ್ಲ. ಕಡಿಮೆ ಪ್ರಮಾಣದಲ್ಲಿ ಹೂಡಿಕೆ ಮಾಡಿ ಹೆಚ್ಚು ಲಾಭ (Profit) ಗಳಿಸುವ ವ್ಯವಹಾರದಲ್ಲಿ ಇದೂ ಒಂದು. ಪ್ರತಿ ಮನೆಯಲ್ಲೂ ಡಿಟರ್ಜೆಂಟ್ ಪೌಡರ್ ಬಳಸುತ್ತಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಉತ್ಪನ್ನದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದಾಗಿ ವ್ಯಾಪಾರವು ವೇಗವಾಗಿ ಬೆಳೆಯುತ್ತಿದೆ. 

Business Ideas : ಆಧಾರ್ ಕಾರ್ಡ್ ಕೇಂದ್ರ ತೆರೆದು ಗಳಿಕೆ ಶುರು ಮಾಡಿ

ಡಿಟರ್ಜೆಂಟ್ ಪೌಡರ್ ಹೇಗೆ ತಯಾರಿಸುವುದು ? : ಡಿಟರ್ಜೆಂಟ್ ಪೌಡರ್ ತಯಾರಿಕೆ ವ್ಯವಹಾರ ಶುರು ಮಾಡಲು ಸರಿಯಾದ ಸ್ಥಳವನ್ನು ಆರಿಸಿಕೊಳ್ಳಬೇಕು. ಡಿಟರ್ಜೆಂಟ್ ಪೌಡರ್ ಉದ್ಯಮ ಆರಂಭಿಸಲು ಕನಿಷ್ಠ ಒಂದು ಸಾವಿರ ಚದರ ಅಡಿ ಜಾಗದ ವ್ಯವಸ್ಥೆ ಮಾಡಬೇಕು. ಡಿಟರ್ಜೆಂಟ್ ಪೌಡರ್ ವ್ಯವಹಾರವನ್ನು ಪ್ರಾರಂಭಿಸಲು ಯಂತ್ರದ ಅಗತ್ಯವಿರುತ್ತದೆ. ರಿಬ್ಬನ್ ಮಿಕ್ಸರ್ ಯಂತ್ರ, ಸೀಲಿಂಗ್ ಮತ್ತು ಸ್ಕ್ರ್ಯಾಮಿಂಗ್ ಯಂತ್ರವನ್ನು ನೀವು ಖರೀದಿಸಬೇಕಾಗುತ್ತದೆ. ಈ ಎಲ್ಲಾ ಯಂತ್ರಗಳನ್ನು ಖರೀದಿಸಲು ನಿಮಗೆ ಸುಮಾರು 4 ಲಕ್ಷ ರೂಪಾಯಿವರೆಗೆ ಖರ್ಚಾಗುತ್ತದೆ. ಇದಲ್ಲದೆ ಕಚ್ಚಾ ವಸ್ತುಗಳ ಅಗತ್ಯವಿದೆ. ಆಸಿಡ್ ಸ್ಲರಿ, ಕಲ್ಲಿದ್ದಲು, ಬಣ್ಣ, ಯೂರಿಯಾ ಮತ್ತು ವಾಷಿಂಗ್ ಸೋಡಾ ಇತ್ಯಾದಿ ಕಚ್ಚಾ ವಸ್ತು ಖರೀದಿಸಬೇಕು. ಈ ಎಲ್ಲ ವಸ್ತುಗಳನ್ನು ನೀವು ದೊಡ್ಡ ಮಟ್ಟದಲ್ಲಿ ಖರೀದಿ ಮಾಡಿದಾಗ ಬೆಲೆ ಕಡಿಮೆಯಾಗುತ್ತದೆ. ನೀವು ಅದನ್ನು ಆನ್‌ಲೈನ್‌ನಲ್ಲಿಯೂ ಖರೀದಿಸಬಹುದು. 

ಡಿಟರ್ಜೆಂಟ್ ಪೌಡರ್ ವ್ಯವಹಾರಕ್ಕೆ ನೋಂದಣಿ : ಯಾವುದೇ ಕಂಪನಿಯನ್ನು ಪ್ರಾರಂಭಿಸುವ ಮೊದಲು, ಅದನ್ನು ನೋಂದಾಯಿಸಿಕೊಳ್ಳುವುದು ಅವಶ್ಯಕ. ನೀವು ನಿಮ್ಮ ಕಂಪನಿಯನ್ನು ಮುನ್ಸಿಪಲ್ ಕಾರ್ಪೊರೇಶನ್ ಅಥವಾ ಪುರಸಭೆಯಂತಹ ಸ್ಥಳೀಯ ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳಬೇಕು. 

ಕೆಲಸಗಾರರು ಅಗತ್ಯ : ಕಾರ್ಮಿಕರಿಲ್ಲದೆ ಡಿಟರ್ಜೆಂಟ್ ಪೌಡರ್ ವ್ಯಾಪಾರ ಸಾಧ್ಯವಿಲ್ಲ. ಹಣದ ಕೊರತೆ ಇದ್ದರೆ ಕುಟುಂಬ ಸದಸ್ಯರೆಲ್ಲ ಸೇರಿ ವ್ಯವಹಾರ ನಡೆಸಬಹುದು. ಹೂಡಿಕೆಯಿದ್ರೆ ನೀವು ಏಳರಿಂದ ಎಂಟು ಜನರನ್ನು ಕೆಲಸಕ್ಕೆ ನೇಮಿಸಿಕೊಂಡರೆ ಒಳ್ಳೆಯದು.

ಡಿಟರ್ಜೆಂಟ್ ವ್ಯವಹಾರಕ್ಕಾಗಿ ಸಿಗುತ್ತೆ ಸಾಲ : ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದಕ್ಕಾಗಿ ನೀವು ಮುದ್ರಾ ಯೋಜನೆಯ ಲಾಭವನ್ನು ಪಡೆಯಬಹುದು. ರಾಷ್ಟ್ರೀಯ ಬ್ಯಾಂಕ್ ಅಥವಾ ಖಾಸಗಿ ಬ್ಯಾಂಕ್ ನಲ್ಲಿ ನೀವು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಎಂಎಸ್ ಎಂಇ ವೆಬ್‌ಸೈಟ್ https://msme.gov.in/ ಮೂಲಕ ಅಥವಾ ಕರೆ ಮಾಡುವ ಮೂಲಕ ನೀವು ಈ ಬಗ್ಗೆ ಮಾಹಿತಿ ಪಡೆಯಬಹುದು. 

Women Finance: ಮಹಿಳೆಗೂ ಇರಲಿ ಬ್ಯಾಂಕಿಂಗ್ ಜ್ಞಾನ

ಡಿಟರ್ಜೆಂಟ್ ವ್ಯವಹಾರದಲ್ಲಿ ವೆಚ್ಚ ಮತ್ತು ಲಾಭ ಎಷ್ಟು? : ಒಂದು ಕೆಜಿ ಡಿಟರ್ಜೆಂಟ್ ಪೌಡರ್ ಮೇಲೆ ನೀವು 15 ರೂಪಾಯಿ ಗಳಿಸಬಹುದು. 100 ಕೆಜಿ ಡಿಟರ್ಜೆಂಟ್ ತಯಾರಿಸಿದ್ರೆ ನೀವು 1500 ರೂಪಾಯಿ ಉಳಿತಾಯ ಮಾಡಬಹುದು. ದಿನವೊಂದಕ್ಕೆ 200 ಕೆಜಿ ಡಿಟರ್ಜೆಂಟ್ ಪೌಡರ್ ಮಾರಿದರೆ ದಿನದಲ್ಲಿ 3ರಿಂದ 4 ಸಾವಿರ ರೂಪಾಯಿಗಳನ್ನು ಸಲೀಸಾಗಿ ಗಳಿಸಬಹುದು. ಈ ಲೆಕ್ಕದ ಪ್ರಕಾರ ನೀವು ಒಂದು ತಿಂಗಳಿಗೆ 60ರಿಂದ 70 ಸಾವಿರ ರೂಪಾಯಿ ಗಳಿಸಬಹುದು. ನೀವು ಗುಣಮಟ್ಟದ ಡಿಟರ್ಜೆಂಟ್ ತಯಾರಿಸಿದ್ರೆ ಲಾಭ ಹೆಚ್ಚು.