ಕೇಂದ್ರ ಬಜೆಟ್ 2021ರಲ್ಲಿ ಗೆದ್ದವರು ಯಾರು? ಸೋತವರು ಯಾರು? ಇಲ್ಲಿದೆ ಸಿಹಿ-ಕಹಿ ಲಿಸ್ಟ್!

By Suvarna NewsFirst Published Feb 1, 2021, 8:06 PM IST
Highlights

2014ರಿಂದ ನರೇಂದ್ರ ಮೋದಿ ಸರ್ಕಾರ ಬಜೆಟ್ ಮಂಡಿಸುತ್ತಿದೆ. ಕಳದೆಲ್ಲಾ ಬಜೆಟ್‌ಗಿಂತ ಈ ಬಾರಿಯ ಬಜೆಟ್ ಅತ್ಯಂತ ಸವಾಲಿನಿಂದ ಕೂಡಿದ್ದಾಗಿತ್ತು. ಆರ್ಥಿಕತೆ,, ಜಿಡಿಪಿ, ನಿರುದ್ಯೋಗ ಸೇರಿದಂತೆ ಹಲವು ಸವಾಲುಗಳನ್ನು ಸರಿದೂಗಿಸಿಬಲ್ಲ ಬಜೆಟ್ ಮಂಡಿಸಿದ್ದಾರೆ. ಹಾಗಂತ ಎಲ್ಲಾ ಕ್ಷೇತ್ರಗಳಿಗೆ ಭರಪೂರ ಕೂಡುಗೆಗಳೇನು ಸಿಕ್ಕಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಗೆದ್ದವರು ಯಾರು?ಸೋತವರು ಯಾರು? 

ನವದೆಹಲಿ(ಫೆ.01): ಕುಸಿದ ಆರ್ಥಿಕತೆ, ಆರೋಗ್ಯ, ನಿರುದ್ಯೋಗ, ಹಳಿ ತಪ್ಪಿದ ಶಿಕ್ಷಣ, ರೈತರ ಪ್ರತಿಭಟನೆ ಸೇರಿದಂತೆ ಹಲವು ಸವಾಲುಗಳ ನಡುವೆ ಮೋದಿ ಸರ್ಕಾರ 2021-22 ಆರ್ಥಿಕ ಸಾಲಿನ ಆಯವ್ಯಯಗಳ ಬಜೆಟ್ ಮಂಡಿಸಿದೆ. ಈ ಭಾರಿಯ ಬಜೆಟ್ ಆರ್ಥಿಕ ಪುನಶ್ಚೇತನಕ್ಕೆ ರಹ ದಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಬಜೆಟ್ ಬೆನ್ನಲ್ಲೇ ಷೇರು ಮಾರುಕಟ್ಟೆ ಜಿಗಿತ; 22 ವರ್ಷಗಳ ಬಳಿಕ ದಾಖಲೆ!

 ಕೇಂದ್ರದ 2021ರ ಬಜೆಟ್ ಹಲವರಿಗೆ ಸಿಹಿ ನೀಡಿದ್ದರೆ, ಕೆಲ ಕ್ಷೇತ್ರಕ್ಕೆ ಕಹಿ ನೀಡಿದೆ. ಹೀಗೆ ಗೆದ್ದವರು ಸೋತವರ ಲಿಸ್ಟ್ ಇಲ್ಲಿದೆ.

ಕೇಂದ್ರದ ಬಜೆಟ್‌ನಿಂದ ಗೆದ್ದವರು:
ಆರೋಗ್ಯ ಕ್ಷೇತ್ರ:
 ಕೊರೋನಾ ವೈರಸ್ ಕಾರಣ ಇದೇ ಮೊದಲ ಬಾರಿಗೆ ಆರೋಗ್ಯ ಕ್ಷೇತ್ರಕ್ಕೆ ಭರ್ಜರಿ ಕೂಡುಗೆ ನೀಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಶೇಕಡಾ 137ರಷ್ಟು ಹೆಚ್ಚುವರಿ ಅನುದಾನ ನೀಡಲಾಗಿದೆ. ಪ್ರತಿ ಭಾರಿ ಆರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಆದರೆ ಈ ಬಾರಿ ಊಹಗೂ ನಿಲುಕದ ರೀತಿ ಆರೋಗ್ಯ ಕ್ಷೇತ್ರವನ್ನು ಪರಿಗಣಿಸಲಾಗಿದೆ.

ಗೃಹ ಸಾಲ, ತೆರಿಗೆ ವಿನಾಯ್ತಿ; ಮನೆ ಖರೀದಿಸುವವರಿಗೆ ಬಿಗ್ ರಿಲೀಫ್ ನೀಡಿದ ಬಜೆಟ್!

ರಿಯಲ್ ಎಸ್ಟೇಟ್:
ಕಟ್ಟಡ ನಿರ್ಮಾಣ, ಗೃಹ ಸಾಲದ ಮೇಲಿನ ತಿರೆಗೆ ವಿನಾಯ್ತಿ ಸೇರಿದಂತೆ ಕೆಲ ಕೂಡುಗೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.  ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಹೊಸ ಅಭಿವೃದ್ಧಿ ಹಣಕಾಸು ಸಂಸ್ಥೆಯ ಯೋಜನೆಗಳಿಂದ ಲಾಭ ಪಡೆಯಲು ರಿಯಲ್ ಎಸ್ಟೇಟ್ ಉದ್ದಿಮೆದಾರರು ಸಜ್ಜಾಗಿದ್ದಾರೆ. 

ಉಕ್ಕು, ಕಬ್ಬಿಣ ಸೇರಿದಂತೆ ಮೆಟಲ್ ಕ್ಷೇತ್ರ:
ಹೆಚ್ಚುವರಿ 11,000 ಕಿ.ಮೀ ಹೆದ್ದಾರಿ ನಿರ್ಮಾಣ , 27 ನಗರಗಳಿಗೆ ತ್ವರಿತ ರೈಲು ಸಾರಿಗೆ, ಮೆಟ್ರೋ ಯೋಜನೆ ಹಾಗೂ ಹಳೆ ವಾಹನ ಗುಜುರಿಗೆ ನೀತಿ ಗಳಿಂದ ಮೆಟಲ್ ಕ್ಷೇತ್ರ ಹೆಚ್ಚಿನ ಲಾಭ ಪಡೆಯಲಿದೆ. ಉಕ್ಕು ಮತ್ತು ಅಲ್ಯೂಮಿನಿಯಂಗೆ ಹೆಚ್ಚಿನ ಬೇಡಿಕೆ ಬರಲಿದೆ.  ಇವುಗಳಲ್ಲಿ ಜಿಂದಾಲ್ ಸ್ಟೀಲ್ & ಪವರ್ ಲಿಮಿಟೆಡ್, JSW ಸ್ಟೀಲ್ ಲಿಮಿಟೆಡ್, ಟಾಟಾ ಸ್ಟೀಲ್ ಲಿಮಿಟೆಡ್, ಹಿಂಡಾಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್, ವೇದಾಂತ ಲಿಮಿಟೆಡ್, ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಸೇರಿವೆ.

ರಾಜ್ಯ ಬ್ಯಾಂಕ್:
ಬ್ಯಾಂಕಿಂಗ್ ಕ್ಷೇತ್ರದ ಅಭಿವೃದ್ಧಿಗೆ ಆಸ್ತಿ ನಿರ್ವಹಣಾ ಘಟಕ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ NPA ಸಾಲಗಳು, ಬ್ಯಾಂಕುಗಳ ಒತ್ತಡದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲು ಸೇರಿದಂತೆ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಇದರಿಂದ ಈ ಬಜೆಟ್‌ ರಾಜ್ಯ ಬ್ಯಾಂಕ್‌ಗಳಿಗೆ ನೆರವಾಗಲಿದೆ

ಟೆಕ್ಸ್‌ಟೈಲ್:
ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಮುಂದಿನ ಮೂರು ವರ್ಷಗಳಲ್ಲಿ 7 ಅತೀ ದೊಡ್ಡ ಜವಳಿ ಉದ್ಯಮಗಳನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ಇದು ಟೆಕ್ಸ್‌ಟೈಲ್ ಉದ್ಯಮವನ್ನು ಅಭಿವೃದ್ಧಿ ಪಡಿಸಲಾಗಿದೆ.

ಸೋತವರು: 
ರಫ್ತು:

ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಆಮದು ಸುಂಕ ಹೆಚ್ಚಿಸಲಾಗಿದೆ. ಹೀಗಾಗಿ ರಫ್ತುದಾರರಿಗೆ ಹಿನ್ನಡೆಯಾಗಿದೆ. ಮೊಬೈಲ್-ಫೋನ್ ಉಪಕರಣಗಳು ಮತ್ತು ವಾಹನ ಭಾಗಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿದೆ. ಸರ್ಕಾರವು ಸ್ವಾವಲಂಬನೆ ಭಾರತ ನಿರ್ಮಾಣಕ್ಕೆ ಅನುಗುಣವಾಗಿ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಘೋಷಿಸಲಾಗಿದೆ. 

ಗ್ರಾಮೀಣ ಭಾರತ:
ಗ್ರಾಮೀಣ ಆರ್ಥಿಕತೆ ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಘೋಷಣೆಗಳು ಈ ಬಾರಿಯ ಬಜೆಟ್‌ನಲ್ಲಿ ಇರಲಿಲ್ಲ.  ಗ್ರಾಮೀಣ ಉದ್ಯೋಗ ಯೋಜನೆಗೆ ಖರ್ಚು ಮಾಡುವ ಬಜೆಟ್ ಅಂದಾಜು 2022 ರ ಹಣಕಾಸು ವರ್ಷದಲ್ಲಿ 730 ಬಿಲಿಯನ್ ರೂಪಾಯಿಗಳಾಗಿದೆ.  

ಕೇಂದ್ರ ಬಜೆಟ್ 2021: ಯಾವುದು ದುಬಾರಿ? ಯಾವುದರ ಬೆಲೆ ಇಳಿಕೆ; ಇಲ್ಲಿದೆ ಫುಲ್ ಲಿಸ್ಟ್!

ಐಟಿ ಕ್ಷೇತ್ರ:
ಐಟಿ ಕ್ಷೇತ್ರಕ್ಕೆ ವಿಶೇಷವಾದ ಯಾವುದೇ ಕೂಡುಗೆ ನೀಡಿಲ್ಲ. ಮಾಹಿತಿ ತಂತ್ರಜ್ಞಾನದ ಭವಿಷ್ಯವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯಲು ಯಾವುದೇ ಕೂಡುಗೆ ಇರಲಿಲ್ಲ.

ಬಾಂಡ್: ಹೊಸ ಹಣಕಾಸು ವರ್ಷದಲ್ಲಿ ನಿರೀಕ್ಷೆಗಿಂತ 4 164 ಬಿಲಿಯನ್ ಸಾಲ ಪಡೆಯುವ ಯೋಜನೆಯು ಭಾರತದ ಸಾರ್ವಭೌಮ ಬಾಂಡ್‌ಗಳನ್ನು ಹೊಡೆದಿದೆ, ಅದು ಪ್ರಕಟಣೆಯ ನಂತರ ಜಾರಿತು. 13.1 ಲಕ್ಷ ಕೋಟಿ ರೂಪಾಯಿಗಳ ಸಾಲ ಮಾರಾಟದ ದಾಖಲೆಯ ಮೇರೆಗೆ ಈ ಹಣಕಾಸು ವರ್ಷದ ವೇಳೆಗೆ ಇನ್ನೂ 800 ಬಿಲಿಯನ್ ರೂಪಾಯಿಗಳನ್ನು ಸಂಗ್ರಹಿಸಲು ಸರ್ಕಾರ ಯೋಜಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಲವು ಸಾಲ ಯೋಜನೆಗಳನ್ನು ಘೋಷಿಸಲಾಗಿದೆ. ಇದು ಸಾರ್ವಭೌಮ ಬಾಂಡ್‌ಗಳಿಗೆ ಕೊಂಚ ಹಿನ್ನಡೆ ತಂದಿದೆ. 

click me!