ನಿಷ್ಕ್ರಿಯ ಅಕೌಂಟ್‌ಗಳನ್ನು ಸಕ್ರಿಯಗೊಳಿಸಲು ಎಸ್‌ಬಿಐನಿಂದ ರಾಷ್ಟ್ರವ್ಯಾಪಿ ಅಭಿಯಾನ

By Santosh Naik  |  First Published Dec 6, 2024, 3:38 PM IST

ಒಂದು ಖಾತೆಯಲ್ಲಿ ಸಾಮಾನ್ಯವಾಗಿ ಎರಡು ವರ್ಷಕ್ಕಿಂತ ಹೆಚ್ಚಿನ ಕಾಲ ಯಾವುದೇ ವಹಿವಾಟು ನಡೆಯದೇ ಇದ್ದರೆ, ಅಂಥ ಖಾತೆಗಳನ್ನು ಸಾಮಾನ್ಯವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ.


ಬೆಂಗಳೂರು (ಡಿ.6): ರಾಜ್ಯದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಷ್ಕ್ರಿಯ ಖಾತೆಗಳನ್ನು ಸಕ್ರಿಯಗೊಳಿಸುವ ಬಗ್ಗೆ ಜಾಗೃತಿ ಮೂಡಿಸಲು ದೇಶಾದ್ಯಂತ ಅಭಿಯಾನ ಆರಂಭಿಸಿದೆ. ಗ್ರಾಹಕರಿಗೆ ಹಣಕಾಸಿನ ವಹಿವಾಟುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಈ ಕ್ರಮ ಸಹಾಯ ಮಾಡುತ್ತದೆ.

ನಿಷ್ಕ್ರಿಯ ಖಾತೆಗಳೆಂದರೇನು?: ಸಾಮಾನ್ಯವಾಗಿ, ಎರಡು ವರ್ಷಗಳಿಗಿಂತ ಹೆಚ್ಚು ಕಾಲ ವಹಿವಾಟು ನಡೆಯದಿದ್ದರೆ ಖಾತೆಗಳು ನಿಷ್ಕ್ರಿಯವಾಗುತ್ತವೆ. ಅವುಗಳನ್ನು ಮತ್ತೆ ಸಕ್ರಿಯಗೊಳಿಸಲು, ಗ್ರಾಹಕರು ಮತ್ತೆ ಕೆವೈಸಿ ನೀಡಬೇಕು. ಖಾತೆಗಳು ನಿಷ್ಕ್ರಿಯವಾಗದಂತೆ ತಡೆಯಲು ಮತ್ತು ಬ್ಯಾಂಕಿಂಗ್ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ಇರಲು ಗ್ರಾಹಕರು ಖಾತೆಯನ್ನು ನಿರಂತರವಾಗಿ ಬಳಸುತ್ತಿರಬೇಕು ಎಂದು ಎಸ್‌ಬಿಐ ಹೇಳುತ್ತದೆ.

Tap to resize

Latest Videos

ಎಸ್‌ಬಿಐ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ (ಎಐ), ಮೆಷಿನ್ ಲರ್ನಿಂಗ್ (ಎಂಎಲ್) ಅನ್ನು ಬಳಸಿಕೊಳ್ಳುತ್ತಿದೆ ಮತ್ತು ಉತ್ತಮ ಗ್ರಾಹಕ ಸೇವೆಯನ್ನು ಖಚಿತಪಡಿಸುತ್ತಿದೆ ಎಂದು ಎಸ್‌ಬಿಐ ಅಧ್ಯಕ್ಷ ಸಿಎಸ್ ಶೆಟ್ಟಿ ತಿಳಿಸಿದ್ದಾರೆ.

3 ಕೋಟಿ ಎಫ್‌ಡಿ ಹಣ ಕದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ ಉದ್ಯೋಗಿ, ಆರ್‌ಬಿಐಗೆ ನೋಟಿಸ್‌ ಕಳಿಸಿದ ಕೋರ್ಟ್‌!

ವಾರಸುದಾರರಿಲ್ಲದೆ ದೇಶದ ಬ್ಯಾಂಕ್‌ಗಳಲ್ಲಿ ಕೊಳೆಯುತ್ತಿದೆ 42,207 ಕೋಟಿ ರೂಪಾಯಿ: ಇದೇ ವೇಳೆ, ದೇಶದ ಬ್ಯಾಂಕ್‌ಗಳಲ್ಲಿ ವಾರಸುದಾರರಿ್ಲದೆ 42,207 ಕೋಟಿ ರೂಪಾಯಿಗಳು ಬಾಕಿ ಉಳಿದಿವೆ. 10 ವರ್ಷಗಳಿಂದ ಕಾರ್ಯನಿರ್ವಹಿಸದ ಯಾವುದೇ ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆಯಲ್ಲಿನ ಬಾಕಿ ಅಥವಾ 10 ವರ್ಷಗಳಿಗಿಂತ ಹೆಚ್ಚು ಕಾಲ ಮೆಚ್ಯೂರಿಟಿ ದಿನಾಂಕ ಮೀರಿದ ಸ್ಥಿರ ಠೇವಣಿಗಳನ್ನು ಉತ್ತರಾಧಿಕಾರಿಗಳಿಲ್ಲದ ಠೇವಣಿ ಎಂದು ಪರಿಗಣಿಸಲಾಗುತ್ತದೆ. ಹಕ್ಕು ಪಡೆಯದ ಠೇವಣಿಗಳ ಮಾಹಿತಿಯನ್ನು ಹೂಡಿಕೆದಾರರು ಆರ್‌ಬಿಐನ ಉದ್ಗಮ್ (ಅನ್‌ಕ್ಲೈಮ್ಡ್ ಡೆಪಾಸಿಟ್ಸ್ ಗೇಟ್‌ವೇ ಟು ಆಕ್ಸೆಸ್ ಇನ್ಫರ್ಮೇಷನ್) ಪೋರ್ಟಲ್‌ನಲ್ಲಿ ಹುಡುಕಬಹುದಾಗಿದೆ.

677 ಕೋಟಿಗೆ ರಾಜಸ್ಥಾನದ ಕಂಪನಿಯ ಪಾಲಾಗಲಿದೆ ಬೆಂಗಳೂರಿನ ಪ್ರಖ್ಯಾತ ಸ್ಟಾರ್ಟ್‌ಅಪ್‌!

click me!