ಯಾವುದೇ ಬ್ಯಾಂಕ್ ನಲ್ಲಿ ಖಾತೆ ತೆರೆಯುವ ಮುನ್ನ ಸುರಕ್ಷತೆಯ ಬಗ್ಗೆ ಯೋಚಿಸುತ್ತೇವೆ. ನಮ್ಮ ಹಣಕ್ಕೆ ಹೆಚ್ಚು ಭದ್ರತೆ ಸಿಗುವ ಕಡೆ ಮಾತ್ರ ಹಣ ಇಡುತ್ತೇವೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗ್ರಾಹಕರಿಗೆ ನೆರವಾಗುವ ಉದ್ದೇಶದಿಂದ ಸುರಕ್ಷಿತ ಬ್ಯಾಂಕ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನವದೆಹಲಿ (ಜ.5): ಯಾವುದೇ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಅಥವಾ ಸ್ಥಿರ ಠೇವಣಿ ಇಡುವ ಮುನ್ನ ಹಣದ ಭದ್ರತೆ ಬಗ್ಗೆ ಯೋಚಿಸುತ್ತೇವೆ. ಈ ಬ್ಯಾಂಕಿನಲ್ಲಿ ಹಣವಿಟ್ಟರೆ ಅದು ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಬಂದ್ರೆ ಮಾತ್ರ ನಾವು ಉಳಿತಾಯ ಅಥವಾ ಹೂಡಿಕೆ ಮಾಡುತ್ತೇವೆ. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದಲ್ಲಿ ಸುರಕ್ಷಿತ ಹಾಗೂ ಅತ್ಯಂತ ನಂಬಿಕಾರ್ಹ ಬ್ಯಾಂಕ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ ಆರ್ಥಿಕತೆ ಹಾಗೂ ಗ್ರಾಹಕರು ಈ ಪಟ್ಟಿಯಲ್ಲಿರುವ ಬ್ಯಾಂಕ್ ಗಳ ಮೇಲೆ ಅವಲಂಬಿತರಾಗಿದ್ದು, ಒಂದು ವೇಳೆ ಈ ಬ್ಯಾಂಕ್ ಗಳಿಗೆ ನಷ್ಟವಾದ್ರೆ ಅದು ಇಡೀ ದೇಶದ ಮೆಲೆ ಪರಿಣಾಮ ಬೀರಲಿದೆ. ದೇಶೀಯ ವ್ಯವಸ್ಥಿತ ಪ್ರಮುಖ ಬ್ಯಾಂಕ್ ಗಳ (ಡಿ-ಎಸ್ ಐಬಿಎಸ್) ಪಟ್ಟಿಯಲ್ಲಿ ಎರಡು ವಾಣಿಜ್ಯ ಬ್ಯಾಂಕ್ ಗಳು ಹಾಗೂ ಒಂದು ಸಾರ್ವಜನಿಕ ಬ್ಯಾಂಕ್ ಸೇರಿದೆ. ಪಟ್ಟಿಯಲ್ಲಿ ಕೆಲವು ಜನಪ್ರಿಯ ಬ್ಯಾಂಕ್ ಗಳ ಹೆಸರುಗಳು ಕೂಡ ಇವೆ. ಆರ್ ಬಿಐಯ 2022ನೇ ಸಾಲಿನ ಈ ಪಟ್ಟಿಯಲ್ಲಿ ಭಾರತದ ಮೂರು ಅತೀದೊಡ್ಡ ಬ್ಯಾಂಕ್ ಗಳಾದ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಖಾಸಗಿ ವಲಯದ ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ ಗಳು ಸೇರಿವೆ.
ದೇಶದ ಕೆಲವು ಅತೀದೊಡ್ಡ ಹಾಗೂ ಅತ್ಯಂತ ಪ್ರಭಾವಿ ಹಣಕಾಸಿನ ಸಂಸ್ಥೆಗಳು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಸಂಸ್ಥೆಗಳ ಮೇಲೆ ಒಂದು ಕಣ್ಣಿಟ್ಟಿರುತ್ತದೆ. ಹಾಗೆಯೇ ಈ ಪಟ್ಟಿಯಲ್ಲಿರುವ ಬ್ಯಾಂಕ್ ಗಳಿಗೆ ಆರ್ ಬಿಐ ಒಂದು ಮಾನದಂಡವನ್ನು ಕೂಡ ನಿಗದಿಪಡಿಸಿದೆ. ಅದರ ಅನ್ವಯ ನಿಯಂತ್ರಣ ಅಗತ್ಯಗಳನ್ನು ಪೂರ್ಣಗೊಳಿಸಲು ಈ ಹಣಕಾಸು ಸಂಸ್ಥೆಗಳು ನಿರ್ದಿಷ್ಟ ಪ್ರಮಾಣದ ಆಸ್ತಿಯನ್ನು ಟೈರ್ 1 ಇಕ್ವಿಟಿಯಲ್ಲಿ ನಿರ್ವಹಣೆ ಮಾಡಬೇಕು. ಎಸ್ ಬಿಐ ಶೇ.0.60ರಷ್ಟು ರಿಸರ್ವರ್ಡ್ ಅಸೆಟ್ ಅನ್ನು ಟೈರ್ -1 ಇಕ್ವಿಟಿಯಾಗಿ ಮೀಸಲಿಡಬೇಕು. ಇನ್ನು ಐಸಿಐಸಿಐ ಬ್ಯಾಂಕ್ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ಶೇ.0.20ರಷ್ಟನ್ನು ಟೈರ್ -1 ಇಕ್ವಿಟಿಗೆ ಮೀಸಲಿಡಬೇಕು.
ಮತ್ತೆ 18 ಸಾವಿರ ಉದ್ಯೋಗಿಗಳ ಮನೆಗೆ ಕಳುಹಿಸಿದ ಅಮೇಜಾನ್
ದೇಶದ ಹಣಕಾಸು ಹಾಗೂ ಆರ್ಥಿಕತೆಯಲ್ಲಿ ಕ್ಲಿಷ್ಟಕರ ಬ್ಯಾಂಕ್ ಗಳ ಪಟ್ಟಿಯನ್ನು ಆರ್ ಬಿಐ 2015ರಿಂದ ನಿರ್ವಹಣೆ ಮಾಡುತ್ತಿದೆ. ಸುರಕ್ಷಿತವೆಂದು ಆರ್ ಬಿಐ ಪಟ್ಟಿ ಮಾಡಿರುವ ಬ್ಯಾಂಕ್ ಗಳು ದಿವಾಳಿಯಾಗೋದ್ರಿಂದ ಸುರಕ್ಷಿತವಾಗಿವೆ. ಹಾಗೆಯೇ ಅಗತ್ಯ ಬಿದ್ದರೆ ಸರ್ಕಾರ ಅವುಗಳಿಗೆ ಅಗತ್ಯ ನೆರವು ನೀಡಲು ಸಿದ್ಧವಿದೆ.
2022ರ ಮಾರ್ಚ್ ಗೆ ಅನ್ವಯಿಸುವಂತೆ ಆರ್ ಬಿಐ ಉನ್ನತ ನಿರ್ವಹಣೆ ತೋರುವ ಬ್ಯಾಂಕ್ ಗಳ ಪಟ್ಟಿಯನ್ನು ಸಿದ್ಧಗೊಳಿಸಿದೆ. 2015 ಹಾಗೂ 2016ರ ಪ್ರಾರಂಭದಲ್ಲಿ ಎಸ್ ಬಿಐ ಹಾಗೂ ಐಸಿಐಸಿಐ ಬ್ಯಾಂಕ್ ಅನ್ನು ಮಾತ್ರ ಆರ್ ಬಿಐ ಪಟ್ಟಿಯಲ್ಲಿ ಸೇರಿಸಿತ್ತು. 2017ರ ಮಾರ್ಚ್ ತನಕದ ಮಾಹಿತಿಗಳನ್ನು ಪರಿಶೀಲಿಸಿದ ಬಳಿಕ ಎಚ್ ಡಿಎಫ್ ಸಿ ಬ್ಯಾಂಕ್ ಅನ್ನು ಕೂಡ ಪಟ್ಟಿಗೆ ಸೇರ್ಪಡೆಗೊಳಿಸಿದೆ.
ಸತತ 3ನೇ ತಿಂಗಳು ಕರ್ನಾಟಕದಲ್ಲಿ 10,000 ಕೋಟಿ ಜಿಎಸ್ಟಿ ಸಂಗ್ರಹ
ಬ್ಯಾಂಕ್ ಲಾಕರ್ ನಿಯಮ ಬದಲು
2023ರ ಜನವರಿ 1ರಿಂದ ಬ್ಯಾಂಕ್ ಲಾಕರ್ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. 2023 ಜನವರಿ 1ರಿಂದ ಬ್ಯಾಂಕ್ ಗಳು ಹೊಸ ಲಾಕರ್ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಹಾಗೂ ಗ್ರಾಹಕರಿಗೆ ಲಾಕರ್ ಒಪ್ಪಂದಗಳನ್ನು ನೀಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಿರ್ದೇಶನ ನೀಡಿದೆ. ಲಾಕರ್ ಹೊಂದಿರುವ ಎಲ್ಲ ಗ್ರಾಹಕರು ಲಾಕರ್ ಒಪ್ಪಂದದ ನವೀಕರಣ ಪತ್ರಕ್ಕೆ ಸಹಿ ಹಾಕುವ ಜೊತೆಗೆ ಅರ್ಹತ ದಾಖಲೆಗಳನ್ನು 2023ರ ಜನವರಿ 1ರೊಳಗೆ ನೀಡಬೇಕು ಎಂದು ಆರ್ ಬಿಐ ಸೂಚಿಸಿದೆ.