ರೈಲಿನಲ್ಲಿ ಪ್ರಯಾಣಿಸುವಾಗ ವಾಟ್ಸಾಪ್‌ನಲ್ಲೇ ಆಹಾರ ಆರ್ಡರ್‌ ಮಾಡಿ: ಐಆರ್‌ಸಿಟಿಸಿ ಹೊಸ ಸೇವೆ

By BK Ashwin  |  First Published Feb 7, 2023, 1:14 PM IST

IRCTC ಈಗಾಗಲೇ ತನ್ನ ವೆಬ್‌ಸೈಟ್ www.catering.irctc.co.in ಮತ್ತು ಇ-ಕ್ಯಾಟರಿಂಗ್ ಅಪ್ಲಿಕೇಶನ್ ಫುಡ್ ಆನ್ ಟ್ರ್ಯಾಕ್ ಮೂಲಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಆದರೀಗ, ವಾಟ್ಸಾಪ್‌ನಲ್ಲೇ ಇದನ್ನು ಮಾಡಬಹುದು.


ನವದೆಹಲಿ (ಫೆಬ್ರವರಿ 7, 2023): ಕೋವಿಡ್‌ ಬಳಿಕ ದೇಶಾದ್ಯಂತ ಹೊಸ ರೈಲುಗಳು ಆರಂಭವಾಗುತ್ತಿದ್ದು, ಹಾಗೆ ಭಾರತೀಯ ರೈಲ್ವೆ ಹಲವು ಹೊಸ ಸೇವೆಗಳನ್ನು ಸಹ ಆರಂಭಿಸುತ್ತಿದೆ. ಇದೇ ರೀತಿ, ಐಆರ್‌ಸಿಟಿಸಿ ಈಗ ಆಹಾರ ಆರ್ಡರ್‌ ಮಾಡಲು ಪ್ರಯಾಣಿಕರಿಗೆ ಸುಲಭ ಮಾಡಿಕೊಟ್ಟಿದೆ. ನೀವು ರೈಲಿನಲ್ಲಿ ಪ್ರಯಾಣಿಸುತ್ತಿರುವ ವೇಳೆ ಹಾಗೂ ನಿಮ್ಮ ಪ್ರಯಾಣದ ಸಮಯದಲ್ಲಿ ಆಹಾರ ಆರ್ಡರ್ ಮಾಡಲು ಬಯಸುತ್ತೀರಾ..? ಹಾಗಾದ್ರೆ, ಇನ್ಮುಂದೆ ನೀವು ಇದನ್ನು ವಾಟ್ಸಾಪ್‌ ಮೂಲಕವೇ ಮಾಡಬಹುದು. 

ಹೌದು, ಭಾರತೀಯ ರೈಲ್ವೆಯ (Indian Railway) ಪಿಎಸ್‌ಯು, ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (Indian Railway Catering and Tourism Corporation) (ಐಆರ್‌ಸಿಟಿಸಿ) (IRCTC) ತನ್ನ ಇ-ಕ್ಯಾಟರಿಂಗ್ ಸೇವೆಗಳನ್ನು (eCatering Service) ಹೆಚ್ಚು ಗ್ರಾಹಕ ಕೇಂದ್ರಿತವಾಗಿಸಲು ವಾಟ್ಸಾಪ್ (WhatsApp) ಮೂಲಕ ರೈಲು ಪ್ರಯಾಣಿಕರಿಗೆ (Passengers) ಇ-ಕೇಟರಿಂಗ್ ಸೇವೆಗಳನ್ನು ಸೋಮವಾರ ಪರಿಚಯಿಸಿದೆ.

Tap to resize

Latest Videos

ಇದನ್ನು ಓದಿ: ವಂದೇ ಭಾರತ್‌ ರೈಲಿನಲ್ಲಿ ಕಳಪೆ ಆಹಾರ ಪೂರೈಕೆ ಬಗ್ಗೆ ದೂರು: ನೆಟ್ಟಿಗರ ಆಕ್ರೋಶ; IRCTC ಪ್ರತಿಕ್ರಿಯೆ

IRCTC ಈಗಾಗಲೇ ತನ್ನ ವೆಬ್‌ಸೈಟ್ www.catering.irctc.co.in ಮತ್ತು ಇ-ಕ್ಯಾಟರಿಂಗ್ ಅಪ್ಲಿಕೇಶನ್ ಫುಡ್ ಆನ್ ಟ್ರ್ಯಾಕ್ ಮೂಲಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಆದರೀಗ, ವಾಟ್ಸಾಪ್‌ನಲ್ಲೇ ಇದನ್ನು ಮಾಡಬಹುದು. ಈ ಉದ್ದೇಶಕ್ಕಾಗಿ ರೈಲ್ವೆಯು (ಬ್ಯುಸಿನೆಸ್‌) ವಾಟ್ಸಾಪ್ ಸಂಖ್ಯೆ +91-8750001323 ಅನ್ನು ಪ್ರಾರಂಭಿಸಿದೆ. 

ಆಯ್ದ ರೈಲುಗಳು ಮತ್ತು ಪ್ರಯಾಣಿಕರಿಗೆ ಇ-ಕ್ಯಾಟರಿಂಗ್ ಸೇವೆಗಳಿಗಾಗಿ WhatsApp ಸಂವಹನವನ್ನು ಅಳವಡಿಸಲಾಗಿದೆ ಮತ್ತು ಗ್ರಾಹಕರ ಪ್ರತಿಕ್ರಿಯೆ ಹಾಗೂ ಸಲಹೆಗಳ ಆಧಾರದ ಮೇಲೆ, ರೈಲ್ವೆಯು ಇತರ ರೈಲುಗಳಲ್ಲಿಯೂ ಸಹ ಅದನ್ನು ಸಕ್ರಿಯಗೊಳಿಸುತ್ತದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: Travel Tips : ತತ್ಕಾಲ್ ರೈಲ್ವೆ ಟಿಕೆಟ್ ಬುಕ್ ಮಾಡಲು ಇಲ್ಲಿವೆ ಟಿಪ್ಸ್!

ಈ ಮಧ್ಯೆ, ಭಾರತೀಯ ರೈಲ್ವೆ ಇಲಾಖೆ ತನ್ನ ಪತ್ರಿಕಾ ಹೇಳಿಕೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವಾಗ ವಾಟ್ಸಾಪ್ ಮೂಲಕ ಆಹಾರವನ್ನು ಹೇಗೆ ಆರ್ಡರ್ ಮಾಡಬಹುದು ಎಂಬ ಪ್ರಕ್ರಿಯೆಯನ್ನು ವಿವರಿಸಿದೆ.

  • ಟಿಕೆಟ್ ಕಾಯ್ದಿರಿಸುವಾಗ, www.ecatering.irctc.co.in ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಇ-ಕ್ಯಾಟರಿಂಗ್ ಸೇವೆಗಳನ್ನು ಆಯ್ಕೆ ಮಾಡಲು ಬ್ಯುಸಿನೆಸ್‌ ವಾಟ್ಸಾಪ್‌ ಸಂಖ್ಯೆಯಿಂದ ಗ್ರಾಹಕರಿಗೆ ಸಂದೇಶವನ್ನು ಕಳುಹಿಸಲಾಗುತ್ತದೆ.
  • ಆ ವೆಬ್‌ಸೈಟ್‌ಗೆ ಹೋದ ನಂತರ, ಗ್ರಾಹಕರು ನೇರವಾಗಿ ವೆಬ್‌ಸೈಟ್‌ನಿಂದ ನಿಲ್ದಾಣಗಳಲ್ಲಿ ಲಭ್ಯವಿರುವ ತಮ್ಮ ಆಯ್ಕೆಯ ರೆಸ್ಟೋರೆಂಟ್‌ಗಳಿಂದ ಊಟವನ್ನು ಬುಕ್ ಮಾಡಬಹುದು.
  • ಇದರ ನಂತರ, ವಾಟ್ಸಾಪ್‌ ಸಂಖ್ಯೆಯನ್ನು ದ್ವಿಮುಖ ಸಂವಹನ ವೇದಿಕೆಯಾಗಿ ಸಕ್ರಿಯಗೊಳಿಸಲಾಗುತ್ತದೆ. AI ಪವರ್ ಚಾಟ್‌ಬಾಟ್ ಪ್ರಯಾಣಿಕರಿಗೆ ಇ-ಕೇಟರಿಂಗ್ ಸೇವೆಗಳ ಎಲ್ಲಾ ಪ್ರಶ್ನೆಗಳನ್ನು ನಿರ್ವಹಿಸುತ್ತದೆ.

ಇದನ್ನೂ ಓದಿ: ರೈಲು ತಡವಾದರೆ IRCTC ಯಿಂದ ನೀವು ಈ ಸೌಲಭ್ಯ ಪಡೆದುಕೊಳ್ಳಬಹುದು..!

ಐಆರ್‌ಸಿಟಿಸಿಯ ಇ-ಕೇಟರಿಂಗ್ ಸೇವೆಗಳ ಮೂಲಕ ಗ್ರಾಹಕರಿಗೆ ದಿನಕ್ಕೆ ಸುಮಾರು 50,000 ಮೀಲ್ಸ್‌ ಅನ್ನು ನೀಡಲಾಗುತ್ತಿದೆ ಎಂದೂ ರೈಲ್ವೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 
ಕಳೆದ ವರ್ಷ, ಆನ್‌ಲೈನ್ ಪ್ಲಾಟ್‌ಫಾರ್ಮ್ ಝೂಪ್ ಇಂಡಿಯಾ ರೈಲಿನಲ್ಲಿ ಪ್ರಯಾಣಿಕರಿಗೆ ಆಹಾರವನ್ನು ತಲುಪಿಸಲು ವಾಟ್ಸಾಪ್‌ ಚಾಟ್‌ಬಾಟ್ ಪರಿಹಾರ ಪೂರೈಕೆದಾರ ಜಿಯೋ ಹ್ಯಾಪ್ಟಿಕ್ ಟೆಕ್ನಾಲಜೀಸ್ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆ ಹೊಂದಿತ್ತು.

ಪ್ರಯಾಣಿಕರು ತಮ್ಮ ಪಿಎನ್‌ಆರ್ ಸಂಖ್ಯೆಗಳ ಮೂಲಕ ವಾಟ್ಸಾಪ್-ಆಧಾರಿತ ಸ್ವಯಂ-ಸೇವಾ ಆಹಾರ ವಿತರಣಾ ವೇದಿಕೆಯನ್ನು ಫುಡ್‌ ಆರ್ಡರ್‌ಗಳನ್ನು ಮಾಡಬಹುದು ಮತ್ತು ನೈಜ-ಸಮಯದ ಆರ್ಡರ್ ಟ್ರ್ಯಾಕಿಂಗ್, ಪ್ರತಿಕ್ರಿಯೆ ಮತ್ತು ಬೆಂಬಲದೊಂದಿಗೆ ನೇರವಾಗಿ ತಮ್ಮ ಸೀಟ್‌ಗಳಿಗೆ ತಮ್ಮ ಆಹಾರ ಡೆಲಿವರಿ ಪಡೆಯಬಹುದು ಎಂದೂ ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ನವರಾತ್ರಿ ವ್ರತ ಮಾಡೋರಿಗೆ ಇನ್ನು ಟೆನ್ಶನ್‌ ಇಲ್ಲ; ರೈಲಿನಲ್ಲೂ ಸಿಗುತ್ತೆ ಉಪವಾಸದ ಊಟ

click me!