National Milk Day: ಹಾಲಿನ ಪ್ಯಾಕೆಟ್ ಮೇಲೆ ಮಿಲ್ಕ್ ಮ್ಯಾನ್ ಆಫ್ ಇಂಡಿಯಾಗೆ ನಂದಿನಿ ನಮನ

By Suvarna News  |  First Published Nov 26, 2021, 3:23 PM IST

ಇಂದು ನಿಮ್ಮ ಮನೆಗೆ ಬಂದಿರೋ ನಂದಿನಿ (Nandini)  ಹಾಲಿನ ಪ್ಯಾಕ್ (Milk pack) ಎಂದಿನಂತಿಲ್ಲ ಎಂಬುದನ್ನು ಗಮನಿಸಿದ್ದೀರಾ? ಅದ್ರಲ್ಲಿ ಭಾರತದ ಮಿಲ್ಕ್ ಮ್ಯಾನ್ (Milk man) ಡಾ.ವರ್ಗೀಸ್ ಕುರಿಯನ್ ಗೆ ನಮನ ಸಲ್ಲಿಸಲಾಗಿದೆ.ಹೌದು, ಇಂದು ಭಾರತದ ʼಕ್ಷೀರ ಕ್ರಾಂತಿ ಪಿತಾಮಹʼ ಕುರಿಯನ್ ಜನ್ಮದಿನ. ಕುರಿಯನ್ ಅವರ ಸಾಧನೆಯ ಕಿರುಪರಿಚಯ ಇಲ್ಲಿದೆ.


ನವದೆಹಲಿ (ನ.26): ಹಾಲು ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಎಲ್ಲರಿಗೂ ಹಾಲು ಅಚ್ಚುಮೆಚ್ಚು.ಇಂದು ಭಾರತದಲ್ಲಿ ಎಲ್ಲರ ಮನೆ ಮಕ್ಕಳು ಹೊಟ್ಟೆ ತುಂಬಾ ಹಾಲು ಕುಡಿದು ಆರೋಗ್ಯವಂತರಾಗಿದ್ದಾರೆ ಎಂದ್ರೆ ಅದಕ್ಕೆ ಕಾರಣ ಡಾ.ವರ್ಗೀಸ್ ಕುರಿಯನ್ ( Dr.Verghese Kurien). ಇವರ ಹೆಸರು ಗೊತ್ತಿಲ್ಲದಿದ್ರೂ ಅಮುಲ್ (Amul) ಹೆಸರು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ತಿಳಿದೇ ಇದೆ. ಹೌದು,ಇಂದು ಭಾರತದ ಉತ್ತರ ತುದಿಯಿಂದ ದಕ್ಷಿಣ ತುದಿಯ ತನಕ ಮನೆಮಾತಾಗಿರೋ ಅಮುಲ್ ಎಂಬ ಟೇಸ್ಟ್ ಆಫ್ ಇಂಡಿಯಾದ (Taste of India) ನಿರ್ಮಾತೃ ಬೇರೇ ಯಾರೂ ಅಲ್ಲ.ಇದೇ ಕುರಿಯನ್.ಇಂದು (ನ.26) ಭಾರತದ ʼಕ್ಷೀರ ಕ್ರಾಂತಿ ಪಿತಾಮಹʼ (Father of White Revolution) ಎಂದೇ ಕರೆಯಲ್ಪಡೋ ಕುರಿಯನ್ ಅವರ ಜನ್ಮದಿನ. ಇವರನ್ನು ಮಿಲ್ಕ್ ಮ್ಯಾನ್ ಆಫ್ ಇಂಡಿಯಾ (Milk man of India) ಎಂದು ಕೂಡ ಕರೆಯುತ್ತಾರೆ. ಇವರ ಜನ್ಮದಿನವನ್ನುʼರಾಷ್ಟ್ರೀಯ ಹಾಲು ದಿನʼ (National Milk Day) ಎಂದು ಆಚರಿಸಲಾಗುತ್ತದೆ. ಕುರಿಯನ್ ಅವರ 96ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರನ್ನು ಸ್ಮರಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಕುರಿಯನ್ ಅವರ ವ್ಯಕ್ತಿತ್ವ ಹಾಗೂ ಸಾಧನೆಯ ಕಿರುಪರಿಚಯ ಇಲ್ಲಿದೆ.

ಕೇರಳದಲ್ಲಿ ಜನನ
ವರ್ಗೀಸ್ ಕುರಿಯನ್ ಕೇರಳದ  (Kerala) ಕೋಯಿಕ್ಕೋಡ್ ನಲ್ಲಿ1921 ನವೆಂಬರ್ 26ರಂದು ಜನಿಸಿದರು. ಮದ್ರಾಸ್ ಲೊಯೋಲಾ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆದ ಕುರಿಯನ್,ನಂತರ ಮೆಕ್ಯಾನಿಕಲ್ ನಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು. ಆ ಬಳಿಕ ಜೆಮ್ ಷೆಡ್ ಪುರದ ಟಾಟಾ ಸ್ಟೀಲ್ ಸಂಸ್ಥೆಯಲ್ಲಿ ಅಧ್ಯಯನ ಮಾಡಿದರು. ಆ ಬಳಿಕ ಶಿಷ್ಯವೇತನ ಪಡೆದು ಅಮೆರಿಕಕ್ಕೆ ತೆರಳಿ ಮೆಟಲರ್ಜಿಕಲ್ ಇಂಜಿನಿಯರಿಂಗ್ನಲ್ಲಿ ಎಂಎಸ್ಸಿಪದವಿ ಪಡೆದರು.

Tap to resize

Latest Videos

undefined

ಹಬ್ಬದ ವೇಳೆ ಮಕ್ಕಳ ಬಟ್ಟೆ ಖರೀದಿ ಹೆಚ್ಚಳ, ಕಿಡ್ಸ್ ಫ್ಯಾಶನ್‌‌ಗೆ ಫ್ಲಿಪ್‌ಕಾರ್ಟ್ ಪ್ರವೇಶ!

ಅಮುಲ್ ಕಟ್ಟಿದ ಬಗೆ
949 ಮೇ 13ರಂದು ಅಮೆರಿಕದಿಂದ ಭಾರತಕ್ಕೆ ಮರಳಿದ ಕುರಿಯನ್, ಗುಜರಾತ್(Gujarat) ನ ಕೈರಾ ಜಿಲ್ಲೆಯ ʼಆನಂದ್ʼ (Anand) ಎಂಬ ಪ್ರದೇಶದಲ್ಲಿ ಐದು ವರ್ಷಗಳ ಕಾಲ ಡೈರಿ ಆಫೀಸರ್ ಆಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಇಲ್ಲಿನ ಹೈನುಗಾರರು ಹಾಲು ಉತ್ಪಾದಕರಿಂದ ಶೋಷಣೆ ಅನುಭವಿಸೋದನ್ನು ಕಣ್ಣಾರೆ ಕಂಡ ಕುರಿಯನ್, ಇದಕ್ಕೊಂದು ಪರಿಹಾರ ಹುಡುಕೋ ಸಂಕಲ್ಪ ಮಾಡಿದರು.ಇದೇ ಸಮಯದಲ್ಲಿ ಆ ಪ್ರದೇಶದಲ್ಲಿ ತ್ರಿಭುವನ್ ದಾಸ್ ಪಟೇಲ್ ಎಂಬ ವ್ಯಕ್ತಿ ಸಹಕಾರಿ ಸಂಘಗಳ ಮೂಲಕ ಜನರನ್ನು ಸಂಘಟಿಸುತ್ತಿದ್ದರು. ಇವರಿಂದ ಪ್ರೇರಣೆ ಪಡೆದ ಕುರಿಯನ್ ಉದ್ಯೋಗ ತೊರೆದು ಕೈರಾ ಜಿಲ್ಲೆಯ ಆನಂದ್ ನಲ್ಲಿ ಹೈನುಗಾರರನ್ನುಒಗ್ಗೂಡಿಸಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸಿದರು. ಮುಂದೆ ಇದು ʼಅಮುಲ್ʼ (ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್) ಎಂಬ ಹೆಸರಿನೊಂದಿಗೆ ಭಾರತದ ಮನೆಮಾತಾಗಿದ್ದುಇತಿಹಾಸ. ಈ ರೀತಿ ಹೈನುಗಾರರನ್ನು ಒಗ್ಗೂಡಿಸಿ ಸಹಕಾರ ಸಂಘ ಸ್ಥಾಪಿಸೋ ಯೋಚನೆ ದೇಶದ 10 ಲಕ್ಷಕ್ಕೂ ಅಧಿಕ ರೈತರ ಬದುಕನ್ನುಹಸನಾಗಿಸಿತು.

ಆಪರೇಷನ್ ಫ್ಲಡ್ ಕಾರ್ಯಕ್ರಮ
ಆಪರೇಷನ್ ಫ್ಲಡ್ ಕಾರ್ಯಕ್ರಮ ದೇಶಾದ್ಯಂತ 1970ರಲ್ಲಿ ಪ್ರಾರಂಭಗೊಂಡಿತು. ಈ ಕಾರ್ಯಕ್ರಮದ ಮೂಲಕ ದೇಶಾದ್ಯಂತ ನೂರಾರು ಹಾಲಿನ ಒಕ್ಕೂಟಗಳು ಸ್ಥಾಪನೆಗೊಂಡವು. ಈ ಸಂಘಟನೆಗಳು ಹೈನುಗಾರರು ಹಾಗೂ ಗ್ರಾಹಕರ ನಡುವಿನ ನೇರ ವಹಿವಾಟವನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸುತ್ತಿವೆ. ಈ ಕಾರ್ಯಕ್ರಮದಡಿಯಲ್ಲೇ ಆಯಾ ರಾಜ್ಯಗಳ ಹಾಲು ಉತ್ಪಾದಕರ ಒಕ್ಕೂಟಗಳು ಹುಟ್ಟಿಕೊಂಡವು. ಅಮುಲ್ ದೇಶಾದ್ಯಂತ ಶ್ವೇತ ಕ್ರಾಂತಿಗೆ ನಾಂದಿ ಹಾಡಿತು.

Bank Holiday:ಡಿಸೆಂಬರ್ ನಲ್ಲಿ12 ದಿನ ಬ್ಯಾಂಕ್ ಕ್ಲೋಸ್!

ಎಮ್ಮೆ ಹಾಲಿನ ಪುಡಿ ಪರಿಚಯ
ದೇಶದಲ್ಲಿ ಎಮ್ಮೆ ಹಾಲು ಹಾಗೂ ಹಾಲಿನ ಪುಡಿಯನ್ನು ಮೊದಲ ಬಾರಿಗೆ ಪರಿಚಯಿಸಿದವರು ಕುರಿಯನ್. ಅವರ ಈ ಯೋಜನೆಗೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಕೂಡ ಉತ್ತಮ ಬೆಂಬಲ ನೀಡಿದ್ದರು.

ಅನೇಕ ಪ್ರಶಸ್ತಿ,ಪುರಸ್ಕಾರಗಳು
ಕುರಿಯನ್ ಅವರಿಗೆ 1999ರಲ್ಲಿ ಪದ್ಮವಿಭೂಷಣ, 1989ರಲ್ಲಿ ವಿಶ್ವ ಆಹಾರ ಪ್ರಶಸ್ತಿ, 1966ರಲ್ಲಿ ಪದ್ಮಭೂಷಣ, 1965ರಲ್ಲಿ ಪದ್ಮಶ್ರೀ, 1963ರಲ್ಲಿ ರಾಮನ್ ಮ್ಯಾಗ್ನೇಸ್ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.

click me!