ಕರ್ನಾಟಕದಲ್ಲಿ ಐಫೋನ್ ಉತ್ಪಾದನಾ ಘಟಕ, ಫಾಕ್ಸ್‌ಕಾನ್‌ಗೆ 100 ಏಕರೆ ಭೂಮಿ ನೀಡಿದ ಸರ್ಕಾರ!

By Suvarna NewsFirst Published Jul 18, 2023, 5:16 PM IST
Highlights

ಅತೀ ದೊಡ್ಡ ಐಫೋನ್ ಉತ್ಪಾದನಾ ಕಂಪನಿ  ಫಾಕ್ಸ್‌ಕಾನ್ ಇದೀಗ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಅತೀ ದೊಡ್ಡ ಉತ್ಪಾದನಾ ಘಟಕ ಆರಂಭಿಸಲು ರಾಜ್ಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದ ಫಾಕ್ಸ್‌ಕಾನ್‌ಗೆ ಇದೀಗ ಹೆಚ್ಚುವರಿ 100 ಏಕರೆ ಭೂಮಿ ನೀಡಲಾಗಿದೆ. ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ.

ಬೆಂಗಳೂರು(ಜು.18) ಕರ್ನಾಟಕದಲ್ಲಿ ಅತೀ ದೊಡ್ಡ ಐಫೋನ್ ಉತ್ಪಾದನಾ ಘಟಕ ಆರಂಭಗೊಳ್ಳುತ್ತಿದೆ. ಐಫೋನ್ ಉತ್ಪಾದಿಸುತ್ತಿರುವ ಫಾಕ್ಸ್‌ಕಾನ್ ಕಂಪನಿ,  ಹೊಸ ಉತ್ಪಾದನಾ ಘಟಕ ಆರಂಭಿಸುತ್ತಿದೆ. ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದ ಫಾಕ್ಸ್‌ಕಾನ್‌ಗೆ ಇದೀಗ ಹೆಚ್ಚುವರಿ 100 ಏಕರೆ ಭೂಮಿ ನೀಡಲಾಗಿದೆ. ಈ ಸಂಬಂಧ ಫಾಕ್ಸ್‌ಕಾನ್ ಸಿಇಒ ಬ್ರ್ಯಾಂಡ್ ಚೆಂಗ್, ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ್, ಐಟಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಫಾಕ್ಸ್‌ಕಾನ್ ಬರೋಬ್ಬರಿ 8,800 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. 

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 300 ಏಕರೆ ಭೂಮಿ ನೀಡುವ ಕುರಿತು ಈ ಮೊದಲು ಒಪ್ಪಂದ ಮಾಡಲಾಗಿತ್ತು. ಆದರೆ ಇದೀಗ ಸಿಎಂ ಸಿದ್ದರಾಮಯ್ಯ, ತುಮಕೂರಿನ ಜಪಾನೀಸ್ ಇಂಡಸ್ಟ್ರೀಯಲ್ ಏರಿಯಾ ಬಳಿ 100 ಏಕರೆ ಭೂಮಿ ನೀಡುವುದಾಗಿ ಹೇಳಿದ್ದಾರೆ. ಫಾಕ್ಸ್‌ಕಾನ್ ಕಂಪನಿಗೆ ಸರ್ಕಾರದಿಂದ ಎಲ್ಲಾ ನೆರವು ನೀಡಲಾಗುತ್ತದೆ. ಆರಂಭಿಕ ಹಂತದಲ್ಲಿ ಮಾನವ ಸಂಪೂನ್ಮೂಲಗಳ ಬಳಕೆಗೆ ಸರ್ಕಾರ ನೆರವು ನೀಡಲಿದೆ. ಕರ್ನಾಟಕದಲ್ಲಿ ಅತೀ ದೊಡ್ಡ ಐಫೋನ್ ಉತ್ಪಾದನಾ ಘಟಕ ತಲೆ ಎತ್ತಲಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ. ಇಷ್ಟೇ ಅಲ್ಲ ಬೆಂಗಳೂರಿನಿಂದ ಹೊರ ಪ್ರದೇಶಗಳ ಅಭಿವೃದ್ದಿಗೆ ಇದು ಅತ್ಯಂತ ಮುಖ್ಯವಾಗಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. 

ಸೆಮಿಕಂಡಕ್ಟರ್ ಉತ್ಪಾದನೆಗೆ ಹಿನ್ನಡೆ ಇಲ್ಲ, ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ರಾಜಕೀಯದಲ್ಲಿ ಬೆತ್ತಲಾದ ಕಾಂಗ್ರೆಸ್!

ತೈವಾನ್‌ ಮೂಲದ ಐಫೋನ್‌ ಉತ್ಪಾದಕ ಕಂಪನಿ ‘ಫಾಕ್ಸ್‌ಕಾನ್‌’ ಚೀನಾ ಜೊತೆ ಮುನಿಸಿಕೊಂಡಿದೆ. ಇದರ ಲಾಭ ಭಾರತ ಹಾಗೂ ಕರ್ನಾಟಕ್ಕೆ ಆಗುತ್ತಿದೆ. ವಿಶ್ವದ ಅತಿ ದೊಡ್ಡ ಎಲೆಕ್ಟ್ರಾನಿಕ್‌ ಉಪಕರಣಗಳ ಉತ್ಪಾದಕ ಕಂಪನಿ ಆಗಿರುವ ಹಾಗೂ ಐಫೋನ್‌ಗಳ ಮುಖ್ಯ ಜೋಡಣೆದಾರ ಕಂಪನಿ ಆಗಿರುವ ಫಾಕ್ಸ್‌ಕಾನ್‌ ಈಗಾಗಲೇ ಲಂಡನ್‌ ಷೇರುಪೇಟೆಗೆ ಭಾರತದ ಉತ್ಪಾದನಾ ಘಟಕ ಆರಂಭ ಕುರಿತು ಮಾಹಿತಿ ನೀಡಿದೆ.

ಕಳೆದ ಮಾಚ್‌ರ್‍ನಲ್ಲಿ ಕರ್ನಾಟಕ ಸರ್ಕಾರ ಹಾಗೂ ಫಾಕ್ಸ್‌ಕಾನ್‌ ಒಡಂಬಡಿಕೆಯೊಂದಕ್ಕೆ ಸಹಿ ಹಾಕಿದ್ದವು. ಕರ್ನಾಟಕದಲ್ಲಿ 8 ಸಾವಿರ ಕೋಟಿ ರು. ಹೂಡಿಕೆ ಮಾಡಿ ಐಫೋನ್‌ ಉತ್ಪಾದನಾ ಘಟಕ ಸ್ಥಾಪಿಸಲು ಒಪ್ಪಂದ ಏರ್ಪಟ್ಟಿತ್ತು. ಇದರಿಂದ ಗರಿಷ್ಠ 1 ಲಕ್ಷ ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.

1.6 ಲಕ್ಷ ಕೋಟಿ Semiconductor ಹೂಡಿಕೆ ಗುಜರಾತ್‌ ಪಾಲು; ರೇಸ್‌ನಲ್ಲಿದ್ದ ಕರ್ನಾಟಕಕ್ಕೆ ಸೋಲು

2024ರ ಏಪ್ರಿಲ್‌ 1ರ ವೇಳೆಗೆ ಕಂಪನಿಯು ಇಲ್ಲಿ ಉತ್ಪಾದನೆ ಆರಂಭಿಸಲಿದೆ. ಇದನ್ನು ಗಮನದಲ್ಲಿರಿಸಿಕೊಂಡು ಜುಲೈ 1ಕ್ಕೆ ಮೊದಲೇ ಕಂಪನಿಗೆ ಭೂಮಿ ಹಸ್ತಾಂತರಿಸಲಾಗುವುದು. ಜೊತೆಗೆ ದಿನಕ್ಕೆ 50 ಲಕ್ಷ ಲೀಟರ್‌ ನೀರು ಬೇಕಾಗುವುದಾಗಿ ಕಂಪನಿ ತಿಳಿಸಿದೆ. ಅಗತ್ಯ ವಿದ್ಯುತ್‌, ನೀರು ಪೂರೈಕೆ, ರಸ್ತೆ ಸಂಪರ್ಕ ಇತ್ಯಾದಿ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ. ಕಂಪನಿಯ ಸಿಬ್ಬಂದಿಗೆ ಬೇಕಾಗುವ ಕೌಶಲ ವಿವರಗಳನ್ನು ಕೂಡ ಕೇಳಲಾಗಿದೆ. ಅದಕ್ಕೆ ತಕ್ಕಂತೆ ಸರ್ಕಾರದ ವತಿಯಿಂದ ಅರ್ಹರಿಗೆ ಕೌಶಲ ತರಬೇತಿ ಕೊಟ್ಟು ಮಾನವ ಸಂಪನ್ಮೂಲ ಲಭ್ಯವಾಗಿಸಲು ಒತ್ತು ಕೊಡುವುದಾಗಿ ಸಚಿವರು ತಿಳಿಸಿದರು.

click me!