ಸೆಮಿಕಂಡಕ್ಟರ್ ಉತ್ಪಾದನೆಗೆ ಹಿನ್ನಡೆ ಇಲ್ಲ, ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ರಾಜಕೀಯದಲ್ಲಿ ಬೆತ್ತಲಾದ ಕಾಂಗ್ರೆಸ್!
ವೇದಾಂತ ಜೊತೆ ಮಾಡಿಕೊಂಡಿದ್ದ ಸೆಮಿಕಂಡಕ್ಟರ್ ಉತ್ಪಾದನೆ ಒಪ್ಪಂದದಿಂದ ಫಾಕ್ಸ್‌ಕಾನ್ ಹಿಂದೆ ಸರಿದ ಬೆನ್ನಲ್ಲೇ ಕಾಂಗ್ರೆಸ್ ಭಾರಿ ರಾಜಕೀಯ ಆರಂಭಿಸಿದೆ. ಬಿಜೆಪಿ ವಿರುದ್ದ ಕಾಂಗ್ರೆಸ್ ಮುಗಿಬಿದ್ದಿತ್ತು. ಫಾಕ್ಸ್‌ಕಾನ್ ಭಾರತದಿಂದಲೇ ವಾಪಸ್ ಹೋಗುತ್ತಿದೆ ಎಂದಿತ್ತು. ಅಸಲಿಗೆ 2 ಖಾಸಗಿ ಕಂಪನಿಗಳ ಒಪ್ಪಂದ ಮಾತ್ರ ರದ್ದಾಗಿದೆ, ಸೆಮಿಕಂಡಕ್ಟರ್ ಉತ್ಪಾದನೆಗೆ ಸಮಸ್ಯೆ ಇಲ್ಲ. ಇಷ್ಟೇ ಚಿಪ್ ಉತ್ಪಾದನೆಯಲ್ಲಿ ಕಾಂಗ್ರೆಸ್ ಹಲವು ದಶಕಗಳಿಂದ ಮಾಡಿದ ರಾಜಕೀಯವೂ ಬಯಲಾಗಿದೆ.
ನವದೆಹಲಿ(ಜು.12) ಭಾರತದಲ್ಲಿ ಇದೀಗ ಸೆಮಿಕಂಡಕ್ಟರ್ ರಾಜಕೀಯ ಜೋರಾಗಿದೆ. ಫಾಕ್ಸ್‌ಕಾನ್ ಕಂಪನಿ ಭಾರತದ ವೇದಾಂತ ಕಂಪನಿ ಜೊತೆಗೆ ಮಾಡಿಕೊಂಡಿದ್ದ ಸೆಮಿಕಂಡಕ್ಟರ್ ಒಪ್ಪಂದ ರದ್ದು ಮಾಡಿದೆ. ಇದರ ಬೆನ್ನಲ್ಲೇ ಇದು ಪ್ರಧಾನಿ ಹಾಗೂ ಬಿಜೆಪಿ ಆಡಳಿದ ಫಲ. ಭಾರತದಿಂದ ಫಾಕ್ಸ್‌ಕಾನ್ ಹಿಂದೆ ಸರಿಯುತ್ತಿದೆ ಎಂದಿತ್ತು. ಇಷ್ಟೇ ಅಲ್ಲ ಮೋದಿ ಆಡಳಿತದಲ್ಲಿ ಚಿಪ್ ಉತ್ಪಾದನೆ ಫೋಸ್ ನೀಡಿ ಇದೀಗ ಕೈಚೆಲ್ಲಿದೆ ಕೂತಿದೆ ಎಂದು ಆರೋಪಿಸಿತ್ತು. ಇದು ಗ್ಲೋಬಲ್ ಸಮ್ಮಿಟ್ ಹೆಸರಲ್ಲಿ ಬಿಜೆಪಿ ಮೈಲೇಜ್ ಪಡೆಯಲು ಮಾಡಿದ ನಾಟಕ ಎಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ ಅಸಲಿ ವಿಚಾರವೇ ಬೇರೆ. ವೇದಾಂತ ಹಾಗೂ ಫಾಕ್ಸ್‌ಕಾನ್ ಎರಡು ಖಾಸಗಿ ಕಂಪನಿಗಳ ಒಪ್ಪಂದ ಹಿಂಪಡೆದಿದೆ. ಆದರೆ ಸೆಮಿಕಂಡಕ್ಟರ್ ಉತ್ಪಾದನೆಗೆ ಯಾವುದೇ ಹಿನ್ನಡೆ ಇಲ್ಲ. ಎರಡು ಕಂಪನಿಗಳು ಇದೀಗ ಪ್ರತ್ಯೇಕವಾಗಿ ಇತರ ಪಾಟ್ನರ್ ಜೊತೆಗೆ ಚಿಪ್ ಉತ್ಪಾದನೆಗೆ ಅರ್ಜಿ ಸಲ್ಲಿಸಿದೆ ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಹೇಳಿದ್ದಾರೆ.
ವೇದಾಂತ ಹಾಗೂ ಫಾಕ್ಸ್‌ಕಾನ್ ಎರಡು ಕಂಪನಿಗಳು ಪ್ರತ್ಯೇಕವಾಗಿ ಚಿಪ್ ಉತ್ಪಾದನೆಗೆ ಮುಂದಾಗಿದೆ. ಇದಕ್ಕಾಗಿ ಪ್ರತ್ಯೇಕ ಆಯೋಗ ರಚಿಸಿ ಪ್ರೋತ್ಸಾಹ ಧನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ. ಇಲ್ಲಿ ಎರಡೂ ಕಂಪನಿಗಳು ಭಾರತದಿಂದ ಹೊರಹೋಗಿಲ್ಲ. ಚಿಪ್ ಉತ್ಪಾದನೆಯಿಂದ ಹಿಂದೆ ಸರಿದಿಲ್ಲ. ವೇದಾಂತ ಹಾಗೂ ಫಾಕ್ಸ್‌ಕಾನ್ ಕಂಪನಿ ಆತಂರಿಕ ವಿಚಾರ ಇದು. ಅವರ ಒಪ್ಪಂದ ರದ್ದಾಗಿದೆ. ಇದರಿಂದ ಭಾರತದ ಸಮೆಕಂಡಕ್ಟರ್ ಉತ್ಪಾದನಾ ಯೋಜನೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅಮಿತ್ ಮಾಳವಿಯಾ ಹೇಳಿದ್ದಾರೆ.
ಸೆಮಿಕಂಡಕ್ಟರ್ ಕನಸಿಗೆ ಭಾರೀ ಪೆಟ್ಟು, ವೇದಾಂತ ಜತೆಗಿನ 1.5 ಲಕ್ಷ ಕೋಟಿಯ ಒಪ್ಪಂದ ರದ್ದುಮಾಡಿದ ಫಾಕ್ಸ್‌ಕಾನ್
ಸಿಲಿಕಾನ್ ಫ್ಯಾಬ್ ಹಾಗೂ ಡಿಸ್‌ಪ್ಲೇ ಫ್ಯಾಬ್‌ಗೆ ಅರ್ಜಿ ಸಲ್ಲಿಸಲು ಫಾಕ್ಸ್‌ಕಾನ್ ಮುಂದಾಗಿದೆ. ಇತ್ತ ವೇದಾಂತ ಹೊಸ ಪಾರ್ಟ್ನರ್ ಜೊತೆ ಅರ್ಜಿ ಸಲ್ಲಿಸಲು ಮುಂದಾಗಿದೆ. ಇದು ಕಾಂಗ್ರೆಸ್ ಪಾಲಿಗೆ ಕಹಿ ಸುದ್ದಿ. ಕಾರಣ ಕಾಂಗ್ರಸ್ ನಾಯಕ ಜೈರಾಂ ರಮೇಶ್ ಮಾಡಿದ ಆರೋಪಕ್ಕೆ ತದ್ವಿರುದ್ಧವಾಗಿದೆ ಎಂದು ಅಮಿತ್ ಮಾಳವಿಯಾ ಹೇಳಿದ್ದಾರೆ.
ಫಾಕ್ಸ್‌ಕಾನ್ ಹಾಗೂ ವೇದಾಂತ ಪ್ರತ್ಯೇತ ಅರ್ಜಿ ಸಲ್ಲಿಸಲು ಮುಂದಾದ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಸೈಲೆಂಟ್ ಆಗಿದೆ. ಆದರೆ ಈ ರಾಜಕೀಯದಲ್ಲಿ ಸ್ವತಂತ್ರ ಭಾರತದಲ್ಲಿ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆ ಇತಿಹಾಸ ಇದೀಗ ಬಯಲಾಗಿದೆ. 1987ರಿಂದ ಭಾರತದಲ್ಲಿ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆ ಪ್ರಯತ್ನಗಳು ನಡೆದಿದೆ. ಆದರೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ, ಅಸಡ್ಡೆಯಿಂದ ಆರಂಭಗೊಂಡ ಕಂಪನಿಗಳು ಮುಚ್ಚಿ ಹೋಯಿತು. ಸರ್ಕಾರದಿಂದ ನಯಾ ಪೈಸೆ ನೆರವು ಸಿಗಲಿಲ್ಲ ಅನ್ನೋ ಮಾಹಿತಿಗಳು ಹೊರಬಿದ್ದಿದೆ.
1960ರಲ್ಲಿ ವಿಶ್ವದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಆರಂಭದೊಂಡಿತು. ಚೀನಾ, ತೈವಾನ್, ಮಲೇಷಿಯಾ ಸೇರಿದಂತೆ ಹಲವು ದೇಶಗಳು ಚಿಪ್ ಉತ್ಪಾದನೆಗೆ ಒತ್ತು ನೀಡಿತು. ಆದರೆ ಭಾರತ ವಿದೇಶಗಳ ಮೇಲಿನ ಅವಲಂಬನೆ ಮುಂದುವರಿಸಿತು. 1962ರಲ್ಲಿ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್(BEL) ಆರಂಭಗೊಂಡಿತು. ಸಿಲಿಕಾನ್ ಹಾಗೂ ಟ್ರಾನ್ಸ್‌ಸಿಸ್ಟರ್ ಉತ್ಪಾದನೆಗೆ ಮುಂದಾಯಿತು. ಆದರೆ ಚೀನಾ, ತೈವಾನ್ ಹಾಗೂ ಸೌತ್ ಕೊರಿಯಾ ದೇಶಗಳ ಪೈಪೋಟಿಗೆ BEL ಕುಸಿಯಿತು. ಕಾರಣ ಎಲ್ಲಾ ವಸ್ತುಗಳನ್ನು BEL ಆಮದ ಮಾಡಿಕೊಂಡು ಉತ್ಪಾದನೆ ಮಾಡಬೇಕಿತ್ತು. ಇನ್ನು ಆಮದು ಮಾಡಿಕೊಂಡ ಕಚ್ಚಾ ವಸ್ತುಗಳು ತಿಂಗಳು ಗಟ್ಟಲೆ ಬಂದರಿನಲ್ಲಿ ಕೊಳೆಯುವಂತಾಯಿತು. ಆಮದು ಸುಂಕ ಸೇರಿದಂತೆ ಹಲವು ಕಾರಣಗಳಿಂದ ಸರ್ಕಾರ ಕಚ್ಚಾ ವಸ್ತುಗಳನ್ನು ಕಂಪನಿಗೆ ಬಿಟ್ಟುಕೊಡಲು ಹಿಂದೇಟು ಹಾಕಿತು. ಹೀಗಾಗಿ BEL ಪ್ರಯತ್ನಗಳು ವಿಫಲಗೊಂಡಿತು.
ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಭೂಮಿ ಖರೀದಿಸಿದ ಐಫೋನ್ ತಯಾರಕ ಫಾಕ್ಸ್‌ಕಾನ್: 1 ಲಕ್ಷ ಉದ್ಯೋಗ ಸೃಷ್ಟಿ!
1992ರಲ್ಲಿ BHEL ಸಿಲಿಕಾನ್ ಹಾಗೂ ಟ್ರಾನ್ಸ್‌ಸಿಸ್ಟರ್ ಉತ್ಪಾದನೆಗೆ ಮುಂದಾಯಿತು. ಆದರೆ ಅಂದಿನ ಸರ್ಕಾರ ಪ್ರೋತ್ಸಾಹ ನೀಡಲಿಲ್ಲ. ಉತ್ಪಾದನೆ ಕುಂಠಿತಗೊಂಡಿತು. ಉತ್ಪಾದನೆ ವೆಚ್ಚ ಅಧಿಕಗೊಂಡಿತು. ಹೀಗಾಗಿ ಚೀನಾ ತೈವಾನ್ ಅತೀ ಕಡಿಮೆ ಬೆಲೆಯಲ್ಲಿ ಭಾರತಕ್ಕೆ ಚಿಪ್ ನೀಡುತ್ತಿದ್ದ ಕಾರಣ BHEL ಪ್ರಯತ್ನಗಳು ಕೈಗೂಡಲಿಲ್ಲ. ಇನ್ನು 2012-13ರಲ್ಲಿ ಮನ್‌ಮೋಹನ್ ಸಿಂಗ್ ಸರ್ಕಾರ ಎರಡು ಫ್ಯಾಬ್ ನಿರ್ಮಾಣಕ್ಕೆ 39,000 ಕೋಟಿ ರೂಪಾಯಿ ಅನುದಾನ ನೀಡುವ ಘೋಷಣೆ ಮಾಡಿತು. JP ಗ್ರೂಪ್, IBM ಹಾಗೂ HSMC ಬಿಡ್ ಮಾಡಿತ್ತು. ಇದಕ್ಕಾಗಿ ಅಂದಿನ ಕಾಂಗ್ರೆಸ್ ಸರ್ಕಾರ ಗಾಂಧಿನಗರ ಹಾಗೂ ಹೈದರಬಾದ್‌ನಲ್ಲಿ ಜಮೀನು ನೀಡುವ ಘೋಷಣೆಯನ್ನು ಮಾಡಿತ್ತು. ಆದರೆ HSMC ಹೂಡಿಕೆ ವಿಚಾರದಲ್ಲಿ ಹಲವು ಸಂಕಷ್ಟ ಎದುರಿಸಿತು. ಹೀಗಾಗಿ ಉತ್ಪಾದನೆಯಿಂದ ಹಿಂದೆ ಸರಿಯಿತು. ಹೈದರಾಬಾದ್‌ನಲ್ಲಿ ನೀಡಿದ್ದ 200 ಎಕರೆ ಪ್ರದೇಶ ಬಳಿಕ ಸರ್ಕಾರ ರಿಯಲ್ ಎಸ್ಟೇಟ್‌ಗಾಗಿ ಬಳಸಿಕೊಂಡಿತು.