2027ಕ್ಕೆ ಭಾರತ ವಿಶ್ವದ 3ನೇ ದೊಡ್ಡ ಆರ್ಥಿಕತೆ: ಹಣಕಾಸು ಸೇವಾ ಸಂಸ್ಥೆ ಮಾರ್ಗನ್‌ ಸ್ಟ್ಯಾನ್ಲಿ ಭವಿಷ್ಯ

By Kannadaprabha News  |  First Published Nov 10, 2022, 10:49 AM IST

ವಿಶ್ವದಲ್ಲೇ ಅತಿವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿರುವ ಭಾರತ, 2027ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಖ್ಯಾತನಾಮ ಹಣಕಾಸು ಸೇವಾ ಸಂಸ್ಥೆ ಮಾರ್ಗನ್‌ ಸ್ಟ್ಯಾನ್ಲಿ ವಿಶ್ಲೇಷಿಸಿದೆ.


ನವದೆಹಲಿ: ವಿಶ್ವದಲ್ಲೇ ಅತಿವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿರುವ ಭಾರತ, 2027ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಖ್ಯಾತನಾಮ ಹಣಕಾಸು ಸೇವಾ ಸಂಸ್ಥೆ ಮಾರ್ಗನ್‌ ಸ್ಟ್ಯಾನ್ಲಿ ವಿಶ್ಲೇಷಿಸಿದೆ. ಮೊದಲ ಎರಡು ಸ್ಥಾನದಲ್ಲಿ ಕ್ರಮವಾಗಿ ಅಮೆರಿಕ ಮತ್ತು ಚೀನಾ ಇರಲಿವೆ ಎಂದು ಅದು ಹೇಳಿದೆ.

ಈ ಕುರಿತು ಪತ್ರಿಕೆಯೊಂದರಲ್ಲಿ ಲೇಖನ ಬರೆದಿರುವ ಮಾರ್ಗನ್‌ ಸ್ಟ್ಯಾನ್ಲಿ (Morgan Stanley) ಸಂಸ್ಥೆಯ ಹಿರಿಯ ಅಧಿಕಾರಿ ಚೇತನ್‌ ಆರ್ಯ (Chetan Arya),‘ಬಂಡವಾಳ ಹೂಡಿಕೆ (capital investment) ಆಕರ್ಷಣೆಗೆ ನೀತಿಗಳಲ್ಲಿ ತಂದ ಸುಧಾರಣೆಗಳು, ಭಾರತದ ಜನಸಂಖ್ಯೆ ಮತ್ತು ಸಾರ್ವಜನಿಕ ಡಿಜಿಟಲ್‌ ಮೂಲಸೌಕರ್ಯಗಳು ಭಾರತವನ್ನು 2027ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕೆಯಾಗಿ (largest economy) ಮಾಡಲಿವೆ. ಹಾಲಿ 279 ಲಕ್ಷ ಕೋಟಿ ರು.ನಷ್ಟಿರುವ ದೇಶದ ಜಿಡಿಪಿ ಮುಂದಿನ 10 ವರ್ಷಗಳಲ್ಲಿ 697 ಲಕ್ಷ ಕೋಟಿ ರು.ಗೆ ತಲುಪಲಿದೆ’ ಎಂದು ಹೇಳಿದ್ದಾರೆ.

Tap to resize

Latest Videos

ಜಗತ್ತಿನ ಬಲಿಷ್ಠ ಆರ್ಥಿಕತೆಗಳಿಗಿಂತ ಭಾರತದಲ್ಲಿ ಹಣದುಬ್ಬರ ಕಡಿಮೆ; ಹಾಗಾದ್ರೆ ಯಾವ ರಾಷ್ಟ್ರಗಳಲ್ಲಿ ಹೆಚ್ಚಿದೆ?

ಜೊತೆಗೆ ‘ಪ್ರತಿ ವರ್ಷ ಭಾರತ (India) ತನ್ನ ಜಿಡಿಪಿಗೆ(GDP) 32 ಲಕ್ಷ ಕೋಟಿ ರು.ಗಳನ್ನು ಸೇರಿಸುತ್ತಾ ಹೋಗಲಿದೆ. ಈ ಪ್ರಮಾಣವನ್ನು ಮೀರಿಸಲಿರುವುದು ಅಮೆರಿಕ(USA)  ಮತ್ತು ಚೀನಾ (China) ದೇಶಗಳು ಮಾತ್ರ. ದೇಶೀಯ ಮತ್ತು ಜಾಗತಿಕವಾಗಿ ಪೂರಕವಾಗಿರುವ ಬೆಳವಣಿಗೆಗಳು ಭಾರತವು 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ನೆರವಾಗಲಿವೆ. ಜಿಎಸ್‌ಟಿ ರೂಪದಲ್ಲಿ ಮಾಡಲಾದ ತೆರಿಗೆ ಸುಧಾರಣೆಗಳು, ಕಾರ್ಪೊರೆಟ್‌ ತೆರಿಗೆಯಲ್ಲಿನ ಇಳಿಕೆ, ಉತ್ಪಾದಕತೆ ಆಧರಿತ ಬೋನಸ್‌ ಮೊದಲಾದ ಕೇಂದ್ರ ಸರ್ಕಾರದ (Central government) ಸುಧಾರಣೆಗಳು ದೇಶದ ಆರ್ಥಿಕತೆ ಪ್ರಗತಿಗೆ ಪ್ರಮುಖ ಕಾರಣವಾಗಲಿವೆ. 1991ರ ಬಳಿಕ ಭಾರತ 3 ಲಕ್ಷ ಕೋಟಿ ಡಾಲರ್‌ (279 ಲಕ್ಷ ಕೋಟಿ ರು.) ಆರ್ಥಿಕತೆಯಾಗಿ ಹೊರಹೊಮ್ಮಲು 31 ವರ್ಷಗಳನ್ನು ತೆಗೆದುಕೊಂಡರೆ, ಮತ್ತೆ ಅಷ್ಟೇ ಪ್ರಮಾಣದ ಆರ್ಥಿಕ ಪ್ರಗತಿ ಸಾಧಿಸಲು ದೇಶ ಕೇವಲ 7 ವರ್ಷಗಳನ್ನು ತೆಗೆದುಕೊಳ್ಳಲಿದೆ’ ಎಂದು ಆರ್ಯ ಹೇಳಿದ್ದಾರೆ.

ಹಣದುಬ್ಬರ ನಿಯಂತ್ರಿಸಲು ಅಮೆರಿಕದಲ್ಲಿ ದರ ಏರಿಕೆ, ಭಾರತಕ್ಕೆ ಎಚ್ಚರಿಕೆ ಗಂಟೆ!

ಇದೇ ವೇಳೆ ಭಾರತ ಮತ್ತು ಚೀನಾ ನಡುವಣ ಆರ್ಥಿಕ ಪ್ರಗತಿಯಲ್ಲಿ 15 ವರ್ಷಗಳ ಬೃಹತ್‌ ಅಂತರವಿದೆ. ಹಾಲಿ ಭಾರತ ಯಾವ ಸ್ಥಾನದಲ್ಲಿದೆಯೇ ಚೀನಾ 2007ರಲ್ಲಿ ಈ ಹಂತದಲ್ಲಿತ್ತು ಎಂದು ಆರ್ಯ ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.
 

click me!