ಅದಾನಿ ಗ್ರೂಪ್‌ಗೆ ಎಷ್ಟು ಸಾಲ ನೀಡಿದ್ದೀರಿ ಎನ್ನುವ ಮಾಹಿತಿ ಕೇಳಿದ ಆರ್‌ಬಿಐ!

By Santosh Naik  |  First Published Feb 2, 2023, 6:32 PM IST

ಅದಾನಿ ಎಂಟರ್‌ಪ್ರೈಸಸ್‌ ತನ್ನ ಬಹುನಿರೀಕ್ಷಿತ ಎಫ್‌ಪಿಒ ಪೂರ್ಣ ಪ್ರಮಾಣದಲ್ಲಿ ಖರೀದಿ ಮಾಡಿದ ಬಳಿಕವೂ ಅದನ್ನು ರದ್ದು ಮಾಡಿದ್ದು ಹಾಗೂ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ನ ಷೇರುಗಳ ಕುಸಿತದ ಬಗ್ಗೆ ಸೆಬಿ ಇನ್ನಷ್ಟೇ ತನಿಖೆ ನಡೆಸಬೇಕಿದೆ.
 


ನವದೆಹಲಿ (ಫೆ.2): ಹಿಂಡೆನ್‌ಬರ್ಗ್‌ ವರದಿಯ ಬೆನ್ನಲ್ಲಿಯೇ ಅದಾನಿ ಕಂಪನಿಗಳ ಷೇರುಗಳು ಸಂಪೂರ್ಣವಾಗಿ ಕುಸಿತ ಕಂಡಿದೆ. ಇದರ ನಡುವೆ 20 ಸಾವಿರ ಕೋಟಿ ರೂಪಾಯಿಗಳ ಫಾಲೋಆಣ್‌ ಪಬ್ಲಿಕ್‌ ಆಫರ್‌ ಅನ್ನು ಅದಾನಿ ಗ್ರೂಪ್‌ ಹಿಂತೆಗೆದುಕೊಂಡಿದೆ. ಹೂಡಿಕೆದಾರರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದಾಗಿ ಅದಾನಿ ಗ್ರೂಪ್‌ನ ಚೇರ್ಮನ್‌ ಗೌತಮ್‌ ಅದಾನಿ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದರು. ಇನ್ನು ಸಂಸತ್‌ನಲ್ಲಿ ಅದಾನಿ ಗ್ರೂಪ್‌ನ ಮೇಲೆ ಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹ ಕೇಳಿಬಂದಿದೆ. ಇದೆಲ್ಲದರ ನಡುವೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಅದಾನಿ ಗ್ರೂಪ್‌ಗೆ ಯಾವೆಲ್ಲಾ ಬ್ಯಾಂಕ್‌ಗಳು ಸಾಲ ನೀಡಿವೆ ಹಾಗೂ ಎಷ್ಟು ಪ್ರಮಾಣದ ಸಾಲ ನೀಡಿವೆ ಎನ್ನುವ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್‌ ಜಾರಿ ಮಾಡಿದೆ. ಈ ಬೆಳವಣಿಗೆಯ ಬಗ್ಗೆ ಆರ್‌ಬಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಲು ಕೂಡ ನಿರಾಕರಿಸಿದ್ದಾರೆ. ಕ್ರೆಡಿಟ್‌ ಸೂಸ್‌ ತನ್ನ ಖಾಸಗಿ ಬ್ಯಾಂಕಿಂಗ್‌ ಕ್ಲೈಂಟ್‌ಗಳಿಗೆ ಮಾರ್ಜಿನ್‌ ಲೋನ್‌ಗಳಿಗೆ ಆಧಾರವಾಗಿ ಅದಾನಿ ಗ್ರೂಪ್‌ ಕಂಪನಿಗಳ ಬಾಂಡ್‌ಗಳ ಸ್ವೀಕಾರ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಹೇಳಿದೆ. ಇನ್ನು ಸಿಟಿಗ್ರೂಪ್‌ನ ಸಂಪತ್ತಿನ ವಿಭಾಗ ಕೂಡ, ಅದಾನಿ ಗ್ರೂಪ್‌ನ ಸೆಕ್ಯುರಿಟಿಗಳ ವಿರುದ್ಧ ಮಾರ್ಜಿನ್‌ ಲೋನ್‌ಗಳನ್ನು ನಿರಾಕರಿಸುವುದಾಗಿ ತಿಳಿಸಿದೆ.

ಈ ಎಲ್ಲಾ ಕಾರಣದಿಂದಾಗಿ ಬ್ಯಾಂಕಿಂಗ್‌ನ ನಿಯಂತ್ರಕರಾಗಿರುವ ಆರ್‌ಬಿಐ ಕಣಕ್ಕೆ ಇಳಿದಿರುವ ಸಾಧ್ಯತೆ ಇದೆ. ಎಲ್ಲಾ ಬ್ಯಾಂಕ್‌ಗಳಿಗೆ ಸಾಲದ ಪ್ರಮಾಣವನ್ನು ವಿವರಿಸುವಂತೆ ನೋಟಿಸ್‌ ಜಾರಿ ಮಾಡಿದೆ ಎಂದು ಬ್ಯಾಂಕ್‌ನ ಮೂಲಗಳು ತಿಳಿಸಿವೆ. ಈ ನಡುವೆ ಸಂಪೂರ್ಣವಾಗಿ ಮಾರಾಟವಾಗಿದ್ದ ಅದಾನಿ ಗ್ರೂಪ್‌ನ 20 ಸಾವಿರ ಕೋಟಿಯ ಎಫ್‌ಪಿಒಅನ್ನು ರದ್ದು ಮಾಡಿದ್ದಲ್ಲದೆ, ಹಣವನ್ನು ವಾಪಾಸ್‌ ನೀಡುವುದಾಗಿ ಕಂಪನಿ ಘೋಷಣೆ ಮಾಡಿದ್ದರ ಕುರಿತು ಸೆಬಿ (ಸೆಕ್ಯುರಿಟೀಸ್‌ ಆಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್‌ ಇಂಡಿಯಾ) ಈವರೆಗೂ ಯಾವುದೇ ತನಿಖೆ ಘೋಷಣೆ ಮಾಡಿಲ್ಲ.

ಒಂದು ಅಂದಾಜಿನ ಪ್ರಕಾರ ಅದಾನಿ ಗ್ರೂಪ್‌ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾಲವನ್ನು ಹೊಂದಿದೆ. ಕ್ರೆಡಿಟ್ ಸ್ಯೂಸ್ ಗ್ರೂಪ್ ಎಜಿ ಅದಾನಿ ಗ್ರೂಪ್ ಕಂಪನಿಗಳ ಬಾಂಡ್‌ಗಳನ್ನು ಮೇಲಾಧಾರವಾಗಿ ಸ್ವೀಕರಿಸುವುದನ್ನು ನಿಲ್ಲಿಸಿದೆ ಎಂದು ಬುಧವಾರ ವರದಿ ಮಾಡಿದ್ದ ಬ್ಲೂಮ್‌ಬರ್ಗ್, ಗುರುವಾರ ಮತ್ತೊಂದು ವರದಿಯಲ್ಲಿ ಸಿಟಿಗ್ರೂಪ್ ಇಂಕ್‌ನ ಸಂಪತ್ತು ಅದಾನಿ ಗ್ರೂಪ್ ಸಂಸ್ಥೆಗಳ ಸೆಕ್ಯುರಿಟಿಗಳನ್ನು ಮಾರ್ಜಿನ್ ಲೋನ್‌ಗಳಿಗೆ ಮೇಲಾಧಾರವಾಗಿ ಸ್ವೀಕರಿಸುವುದನ್ನು ನಿಲ್ಲಿಸಿದೆ ಎಂದು ವರದಿ ಮಾಡಿದೆ.

ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ; LIC, SBIಯಲ್ಲಿನ ನಿಮ್ಮ ಹೂಡಿಕೆಗೂ ಅಪಾಯ ಇದೆಯಾ?

ಈ ನಡುವೆ ಅದಾನಿ ಗ್ರೂಪ್‌ಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಾಲವನ್ನು ನೀಡಿದ್ದರೂ, ಎಷ್ಟು ಪ್ರಮಾಣದ ಸಾಲವನ್ನು ನೀಡಿದೆ ಎನ್ನುವುದು ಇನ್ನಷ್ಟೇ ಪ್ರಕಟಿಸಬೇಕಿದೆ. ಇನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಅದಾನಿ ಗ್ರೂಪ್‌ಗೆ 7 ಸಾವಿರ ಕೋಟಿ ರೂಪಾಯಿ ಸಾಲವನ್ನು ನೀಡಿದ್ದರೂ, ಅದು ನಗದು ಹಣದ ಹರಿವಿನಿಂದ ಬೆಂಬಲಿತವಾಗಿದೆ ಹಾಗಾಗಿ ಸದ್ಯಸ ಮಟ್ಟಿಗೆ ಮರುಪಾವತಿಯ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಹೇಳಿದೆ. ಸಾಲದಾತರು 6,300 ಕೋಟಿ ರೂಪಾಯಿಗಳ ನಿಧಿ ಆಧಾರಿತ ಮಾನ್ಯತೆ ಹೊಂದಿದ್ದಾರೆ ಮತ್ತು ಗ್ರೂಪ್‌ನ ವಿವಿಧ ಕಂಪನಿಗಳಿಗೆ 700 ಕೋಟಿ ರೂಪಾಯಿಗಳ ನಿಧಿಯೇತರ ಮಾನ್ಯತೆ ಹೊಂದಿದ್ದಾರೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎ ಕೆ ಗೋಯೆಲ್ ಹೇಳಿದ್ದಾರೆ. ಇನ್ನು ಬ್ಯಾಂಕ್‌ ಆಫ್‌ ಬರೋಡಾ 4 ಸಾವಿರ ಕೋಟಿ ರೂಪಾಯಿ ಸಾಲ ನೀಡಿರುವುದಾಗಿ ಹೇಳಿದೆ. ಉಳಿದಂತೆ ಮತ್ತೆ ಯಾವುದೇ ಬ್ಯಾಂಕ್‌ಗಳು ತಾವು ಕೊಟ್ಟಿರುವ ಸಾಲದ ಬಗ್ಗೆ ಮಾಹಿತಿ ನೀಡಿಲ್ಲ. 

Tap to resize

Latest Videos

 

ಒಂದೇ ಒಂದು ರಿಪೋರ್ಟ್‌, 1.44 ಲಕ್ಷ ಕೋಟಿ ಕಳೆದುಕೊಂಡ ಗೌತಮ್‌ ಅದಾನಿ!

ಹೂಡಿಕೆ ಸಂಸ್ಥೆ CLSA ವರದಿಯ ಪ್ರಕಾರ, ಅಗ್ರ ಐದು ಅದಾನಿ ಗ್ರೂಪ್ ಕಂಪನಿಗಳಾದ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಪವರ್, ಅದಾನಿ ಗ್ರೀನ್ ಮತ್ತು ಅದಾನಿ ಟ್ರಾನ್ಸ್‌ಮಿಷನ್  2.1 ಲಕ್ಷ ಕೋಟಿ ರೂಪಾಯಿಗಳ ಏಕೀಕೃತ ಸಾಲವನ್ನು ಹೊಂದಿವೆ. ಅದಾನಿ ಗ್ರೂಪ್‌ ಮಾಡಿರುವ ಸಾಲದಲ್ಲಿ ಶೇ.40ಕ್ಕಿಂತ ಕಡಿಮೆ ಸರ್ಕಾರಿ ಬ್ಯಾಂಕ್‌ಗಳದ್ದಾಗಿದೆ. ಇನ್ನು ಖಾಸಗಿ ಬ್ಯಾಂಕ್‌ಗಳ ಸಾಲದ ಪ್ರಮಾಣ ಶೇ.10ಕ್ಕಿಂತ ಕಡಿಮೆ ಇದೆ ಎನ್ನಲಾಗಿದೆ.

click me!