HAL: ಕೊರೋನಾ ಸಂಕಷ್ಟದ ಮಧ್ಯೆಯೂ ಎಚ್‌ಎಎಲ್‌ಗೆ ದಾಖಲೆಯ 24000 ಕೋಟಿ ಆದಾಯ

By Girish GoudarFirst Published Apr 2, 2022, 9:36 AM IST
Highlights

*  ಕೋವಿಡ್‌ ಹೊಡೆತ ನಡುವೆಯೂ ಭರ್ಜರಿ ಆದಾಯ
*  ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.6 ಪ್ರಗತಿ 
*  ನಿಗದಿತ ಗುರಿಯಷ್ಟು ಆದಾಯ ಗಳಿಸಿದ ಎಚ್‌ಎಲ್‌ 
 

ಬೆಂಗಳೂರು(ಏ.02): ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (HAL) 2021-22ರ ಆರ್ಥಿಕ ವರ್ಷದಲ್ಲಿ(Financial Year) ದಾಖಲೆಯ 24,000 ಕೋಟಿ ರು. ಆದಾಯ ಗಳಿಸಿದ್ದು, ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.6 ಪ್ರಗತಿ ಕಂಡಿದೆ.

ಕೋವಿಡ್‌-19ರ(Covid-19) ಎರಡನೇ ಅಲೆಯು ಮೊದಲ ತ್ರೈಮಾಸಿಕದ ಕಾರ್ಯಾಚರಣೆಗೆ ಹೊಡೆತ ನೀಡಿತ್ತು. ಆದರೂ ಸಂಸ್ಥೆ ನಿಗದಿತ ಗುರಿಯಷ್ಟು ಆದಾಯ(Income) ಗಳಿಸಿದೆ. ಉಳಿದ ತ್ರೈಮಾಸಿಕದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ ಎಂದು ಎಚ್‌ಎಎಲ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆರ್‌. ಮಾಧವನ್‌ ಹೇಳಿದ್ದಾರೆ.

Make In India: ರಕ್ಷಣಾ ಹೆಲಿಕಾಪ್ಟರ್‌ಗಳ ಖರೀದಿಯಲ್ಲಿ ಅರ್ಹತೆಯೇ ಪ್ರಧಾನವಾಗಿರಲಿ

ಎರಡನೇ ಅಲೆಯ ಅವಧಿಯಾದ 2021ರ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಸಂಸ್ಥೆ ವಿವಿಧ ಹಂತಗಳ ಲಾಕ್‌ಡೌನ್‌ಗೆ(Lockdown) ಒಳಗಾಗಿತ್ತು. ಆದರೆ ಜೂನ್‌ ಮತ್ತು ಜುಲೈಯಲ್ಲಿ ಹೆಚ್ಚುವರಿ ಸಮಯ ಕೆಲಸ ಮಾಡಿ ಕೆಲಸದ ನಷ್ಟವನ್ನು ಸರಿದೂಗಿಸಲಾಗಿತ್ತು. ಉತ್ತಮ ಆರ್ಥಿಕ ಪ್ರದರ್ಶನ ಮತ್ತು ನಗದು ಹರಿವಿನ ಕಾರಣದಿಂದ ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿ ಮತ್ತು ಐಸಿಆರ್‌ಎ ಗಳು ಕಂಪನಿಯ ಕ್ರೆಡಿಟ್‌ ರೇಟಿಂಗ್‌ ಅನ್ನು ಎಎಪ್ಲಸ್‌ನಿಂದ ಎಎಎ/ಸ್ಥಿರಕ್ಕೆ ಉನ್ನತೀಕರಿಸಿದೆ ಎಂದು ಎಚ್‌ಎಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

44 ಹೆಲಿಕಾಪ್ಟರ್‌(Helicopter) ಮತ್ತು ಏರ್‌ಕ್ರಾಫ್ಟ್‌(Aircraft), 84 ಹೊಸ ಎಂಜಿನ್‌ಗಳ ಉತ್ಪಾದನೆ, 203 ಹೆಲಿಕಾಪ್ಟರ್‌, ಏರ್‌ಕ್ರಾಫ್ಟ್‌ ಮತ್ತು 478 ಎಂಜಿನ್‌ಗಳನ್ನು ಮೇಲ್ದರ್ಜೆಗೇರಿಸುವ, ಸರಿಪಡಿಸುವ ಕೆಲಸವನ್ನು ಈ ಅವಧಿಯಲ್ಲಿ ಮಾಡಿರುವುದಾಗಿ ಸಂಸ್ಥೆ ತಿಳಿಸಿದೆ.

ಗಿರಿಗಿಟ್ಲೆ ಪರೀಕ್ಷೆಯಲ್ಲಿ ಎಚ್‌ಎಎಲ್‌ ನಿರ್ಮಿತ ಐಜೆಟಿ ವಿಮಾನ ಪಾಸ್‌!

ಬೆಂಗಳೂರು: ವಾಯುಪಡೆಯ ಪೈಲಟ್‌ಗಳ ಎರಡನೇ ಹಂತದ ತರಬೇತಿಗಾಗಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ವಿನ್ಯಾಸ ಮಾಡಿ ಅಭಿವೃದ್ಧಿಪಡಿಸಿರುವ ಇಂಟರ್‌ಮೀಡಿಯೇಟ್‌ ಜೆಟ್‌ ಟ್ರೈನರ್‌ (ಐಜೆಟಿ) ಗುರುವಾರ ತನ್ನ ಗಿರಿಗಿಟ್ಲೆ (ಸ್ಪಿನ್‌) ಹಾಕುವ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು. 

ಈ ವಿಮಾನವು ಈ ಹಿಂದೆ ಎತ್ತರ ಹಾರುವ ಪರೀಕ್ಷೆ, ವೇಗ, ಭಾರ ಹೊರುವಿಕೆ, ಶಸ್ತ್ರಾಸ್ತ್ರ ಬಳಕೆ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿತ್ತು. ಆದರೆ 2016ರಲ್ಲಿ ನಡೆದ ಸ್ಪಿನ್‌ ಪರೀಕ್ಷೆಯಲ್ಲಿ ವಿಫಲವಾಗಿತ್ತು. ಆದ್ದರಿಂದ ಯೋಜನೆಗೆ ದೊಡ್ಡ ಹಿನ್ನಡೆಯಾಗಿತ್ತು.

ಪರೀಕ್ಷೆಯಲ್ಲಿ ವಿಫಲಗೊಂಡ ಬಳಿಕ ಎಚ್‌ಎಎಲ್‌ ಈ ವಿಮಾನದಲ್ಲಿ ಅನೇಕ ತಾಂತ್ರಿಕ ಬದಲಾವಣೆಗಳನ್ನು ಮಾಡಿತ್ತು. 2020ರ ಹೊತ್ತಿಗೆ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಚ್‌ಎಎಲ್‌ ಯಶಸ್ವಿಯಾಗಿತ್ತು. ಆದರೆ ಕೋವಿಡ್‌ ಕಾರಣದಿಂದ ಹಾರಾಟ ಪರೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ.

83 ತೇಜಸ್‌ ಯುದ್ಧ ವಿಮಾನ ಖರೀದಿ, ಬೆಂಗಳೂರಿನ HAL‌ಗೆ ಇದರ ಹೊಣೆ!

ಇದೀಗ ಎಚ್‌ಎಎಲ್‌ನ ನಿವೃತ್ತ ಗ್ರೂಪ್‌ ಕ್ಯಾಪ್ಟನ್‌ಗಳಾದ ಎಚ್‌.ವಿ.ಠಾಕೂರ್‌, ಎ. ಮೆನನ್‌ ಅವರು ಸ್ಪಿನ್‌ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಐಜೆಟಿ ಉಳಿದೆಲ್ಲ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಭಾರತೀಯ ವಾಯುಪಡೆಯಲ್ಲಿರುವ ‘ಕಿರಣ’ ತರಬೇತಿ ವಿಮಾನಗಳಿಗೆ ಪರ್ಯಾಯವಾಗಿ ಐಜೆಟಿಯನ್ನು ಬಳಸಿಕೊಳ್ಳಲು ವಾಯುಪಡೆ ಉದ್ದೇಶಿಸಿದೆ.

ತೇಜಸ್‌ ಯುದ್ಧ ವಿಮಾನ ನಿರ್ಮಾಣಕ್ಕೆ ಬಿಇಎಲ್‌ ಸಾಥ್‌

ಬೆಂಗಳೂರು: ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಮತ್ತು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (BEL)ಗಳ ನಡುವೆ ತೇಜಸ್‌ ಎಂಕೆ 1ಎ ಲಘು ಯುದ್ಧ ವಿಮಾನಕ್ಕೆ 20 ರೀತಿಯ ವೈಮಾನಿಕ ವ್ಯವಸ್ಥೆಗಳನ್ನು ಅಭಿವೃದ್ಧಿಗೊಳಿಸಿ ಮತ್ತು ಪೂರೈಸುವ ಕುರಿತು ಗುರುವಾರ 2,400 ಕೋಟಿ ರು.ಗಳ ಒಪ್ಪಂದವೇರ್ಪಟ್ಟಿದೆ. ಎಚ್‌ಎಎಲ್‌ ಭಾರತದ(India) ಕಂಪೆನಿಯೊಂದರ ಜೊತೆಗೆ ಈವರೆಗೆ ನಡೆಸಿದ ಅತಿ ದೊಡ್ಡ ಮೊತ್ತದ ಒಪ್ಪಂದ(Agreement) ಇದಾಗಿದೆ. ಆತ್ಮನಿರ್ಭರ ಅಭಿಯಾನದ(AatmaNirbhar Bharat Abhiyaan) ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಎಚ್‌ಎಎಲ್‌ ಹೇಳಿದೆ. 

2023ರಿಂದ 2028ರವರೆಗಿನ ಐದು ವರ್ಷಗಳ ಒಪ್ಪಂದದಲ್ಲಿ ವೈಮಾನಿಕ ಉಪಕರಣಗಳಾದ ಲೈನ್‌ ರಿಪ್ಲೇಸಬಲ್‌ ಯುನಿಟ್‌, ಫ್ಲೈಟ್‌ ಕಂಟ್ರೋಲ್‌ ಕಂಪ್ಯೂಟರ್‌ಗಳು ಮತ್ತು ರಾತ್ರಿ ಹಾರುವ ಎಲ್‌ಆರ್‌ಯುಗಳ ಪೂರೈಕೆಯನ್ನು ಒಳಗೊಂಡಿದೆ. ತೇಜಸ್‌ ಲಘು ಯುದ್ಧ ವಿಮಾನ(War Aircraft) ಯೋಜನೆಯು ಎಚ್‌ಎಎಲ್‌, ಡಿಆರ್‌ಡಿಒ ಮತ್ತು ಬಿಇಎಲ್‌ನಂತಹ ಭಾರತೀಯ ರಕ್ಷಣಾ ಸಂಸ್ಥೆಗಳ(Indian Defense Agency) ನಡುವಿನ ಹೊಂದಾಣಿಕೆಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಎಚ್‌ಎಎಲ್‌ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

click me!