ವಿದ್ಯೆಗೆ ತಕ್ಕ ಕೆಲಸ ಮಾಡುವ ಅಗತ್ಯವಿಲ್ಲ. ಯಾವುದೇ ಕೆಲಸವನ್ನು ಪ್ರೀತಿ, ಆಸಕ್ತಿಯಿಂದ ಮಾಡಿದ್ರೆ ಅದರಲ್ಲೂ ಸಾಕಷ್ಟು ಲಾಭ, ನೆಮ್ಮದಿ ಕಾಣಬಹುದು. ಅದಕ್ಕೆ ಈ ಇಂಜಿನಿಯರ್ ರೈತ ಮಾದರಿ.
ಕೊರೊನಾ ಅನೇಕರ ಬದುಕು ಬದಲಿಸಿದೆ. ಕೊರೊನಾ, ಲಾಕ್ ಡೌನ್ ಸಮಯದಲ್ಲಿ ಕೆಲವರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ರೆ ಮತ್ತೆ ಕೆಲವರು ಉದ್ಯೋಗ ಹಾಗೂ ಸ್ವಂತ ವ್ಯವಹಾರದ ವ್ಯತ್ಯಾಸವನ್ನು ಅರಿತು, ಹೊಸ ದಾರಿ ಹಿಡಿದು ಯಶಸ್ಸು ಕಂಡಿದ್ದಾರೆ. ವಿದ್ಯೆ ಎನ್ನುವುದು ನಮ್ಮ ಜ್ಞಾನ ವೃದ್ಧಿಗೆ ಮಾತ್ರ. ಅದೇ ಕ್ಷೇತ್ರದಲ್ಲಿ ಮುನ್ನಡೆಯುತ್ತೇನೆ, ಲಕ್ಷ ಲಕ್ಷ ಸಂಪಾದನೆ ಮಾಡುವ ಕೆಲಸ ಗಿಟ್ಟಿಸಿಕೊಳ್ಳುತ್ತೇನೆ ಎಂಬ ಮಾತು ಎಲ್ಲರಿಗೂ ಸಾಧ್ಯವಾಗೋದಿಲ್ಲ. ಆದ್ರೆ ಕೆಲಸವಿಲ್ಲದ ಸಮಯದಲ್ಲಿ ಅದ್ರ ಬಗ್ಗೆ ಚಿಂತಿಸುತ್ತ ಕಾಲಹರಣ ಮಾಡುವ ಬದಲು ಹೊಸ ಪ್ರಯೋಗ ಮಾಡಿ ಅದ್ರಲ್ಲಿ ಯಶಸ್ಸು ಕಾಣಬಹುದು. ಇದಕ್ಕೆ ಈ ಇಂಜಿನಿಯರ್ ಉತ್ತಮ ನಿದರ್ಶನ. ಇಂಜಿನಿಯರಿಂಗ್ ಶಿಕ್ಷಣ ಮುಗಿಸಿ, ಕೆಲಸಕ್ಕೆ ಸೇರಿದ್ರೂ ಕೃಷಿ ಮೇಲೆ ಆಸಕ್ತಿ ಹೊಂದಿದ್ದ ವ್ಯಕ್ತಿ, ಬಾಳೆ ಗಿಡ ಬೆಳೆದು ಈಗ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾನೆ. ಅಷ್ಟೇ ಅಲ್ಲ ಆ ಊರಿನಲ್ಲಿ ಎಲ್ಲರ ಕೇಂದ್ರಬಿಂದುವಾಗಿದ್ದಾನೆ.
ಅಪ್ಪ ನೆಟ್ಟ ಆಲದ ಮರಕ್ಕೆ ಜೋತು ಬೀಳ್ಬೇಕು ಎನ್ನುವ ನಂಬಿಕೆ ಅನೇಕರಿಗಿದೆ. ಮನೆಯಲ್ಲಿ ಒಂದಿಷ್ಟು ತೋಟ (Garden), ಜಮೀನಿದ್ರೂ ಅಪ್ಪನ ಪದ್ಧತಿಯನ್ನು ಅನುಸರಿಸಿಕೊಂಡು ಎಲ್ಲರಂತೆ ನಷ್ಟ ಅನುಭವಿಸಿ ಕಣ್ಣಿರು ಹಾಕುತ್ತಾರೆಯೇ ವಿನಃ ಏನಾದ್ರೂ ಹೊಸದು ಮಾಡ್ಬೇಕು ಎನ್ನುವ ಆಲೋಚನೆ ಮಾಡೋದಿಲ್ಲ. ಊರಿನಲ್ಲಿ ಎಲ್ಲರೂ ಮಾಡುವ ಕೆಲಸ ಮಾಡದೆ ಒಬ್ಬ ವ್ಯಕ್ತಿ ಬೇರೆ ಮಾರ್ಗ ಹಿಡಿದಾಗ ಅದನ್ನು ಊರಿನವರೂ ಒಪ್ಪಿಕೊಳ್ಳೋದಿಲ್ಲ. ಬಿಹಾರ (Bihar) ದ ಬೇಗುಸರಾಯ್ ಜಿಲ್ಲೆಯ ಬರಿಯಾರ್‌ಪುರ ಗ್ರಾಮದಲ್ಲಿ ವಾಸಿಸುವ ಸುಶಾಂತ್ ಸಿಂಗ್ ಕೂಡ ಈ ಮೇಲಿನ ಎಲ್ಲ ಸಮಸ್ಯೆ ಎದುರಿಸಿದ್ದ. ಆದ್ರೆ ಛಲಬಿಡದ ಮೆಕ್ಯಾನಿಕಲ್ ಇಂಜಿನಿಯರ್ ಸುಶಾಂತ್ ಸಿಂಗ್ ಈಗ ಯಶಸ್ವಿ ರೈತ.
undefined
ಕಾರು,ಬೈಕ್ ವಿಮೆ ನವೀಕರಿಸುವಾಗ ಹಣ ಉಳಿಸೋದು ಹೇಗೆ? ಈ 5 ಟಿಪ್ಸ್ ಅನುಸರಿಸಿ
ಮೆಕ್ಯಾನಿಕಲ್ ಇಂಜಿನಿಯರ್ ಮುಗಿಸಿದ್ದ ಸುಶಾಂತ್ ಸಿಂಗ್, ದೆಹಲಿಯಲ್ಲಿ ಕೆಲಸ ಮಾಡ್ತಿದ್ದ. 2020ರಲ್ಲಿ ಸುಶಾಂತ್ ಸಿಂಗ್ ಸ್ನೇಹಿತರು ಬಾಳೆ ಗಿಡದ ಬಗ್ಗೆ ಮಾಹಿತಿ ನೀಡಿದ್ದರು. ಹಾಜಿಪುರ ಬಾಳೆ ಹಣ್ಣಿಗೆ ಹೆಚ್ಚಿನ ಬೇಡಿಗೆ ಇದೆ. ಬಿಹಾರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುವ ಬಾಳೆ ಹಣ್ಣು ಹಾಜಿಪುರ ಬಾಳೆಹಣ್ಣು. ಉತ್ತಮ ಗುಣಮಟ್ಟದ ಬಾಳೆ ಹಣ್ಣನ್ನು ಬೆಳೆಯಬಹುದು ಎಂದು ಸಲಹೆ ನೀಡಿದ್ದರಂತೆ. 2021ರಲ್ಲಿ ಪ್ರಥಮ ಬಾರಿಗೆ ಒಂದೂವರೆ ಎಕರೆಯಲ್ಲಿ ಸುಶಾಂತ್ ಬಾಳೆ ನೆಟ್ಟಿದ್ದ. ಆಗ ಅನೇಕರು ಲೇವಡಿ ಮಾಡಿದ್ದರು. ಒಳ್ಳೆ ಕೆಲಸ ಬಿಟ್ಟು ಕೃಷಿಗೆ ಬಂದಿದ್ದಾನೆ ಎಂದಿದ್ದರು. ಈ ಪ್ರದೇಶದಲ್ಲಿ ಬಾಳೆ ಬೆಳೆ ಶುರು ಮಾಡಿದ್ದ ಏಕೈಕ ರೈತ ಸುಶಾಂತ್. ಬಾಳೆ ಗಿಡ ಎದ್ದು ನಿಲ್ಲುತ್ತಿದ್ದಂತೆ ಗ್ರಾಮಸ್ಥರು ಹುಬ್ಬೇರಿಸಿದ್ದರು. ಈಗ್ಲೂ ಈ ಪ್ರದೇಶದಲ್ಲಿ ಬಾಳೆಹಣ್ಣು ಉತ್ಪಾದಿಸುವ ಏಕೈಕ ರೈತ ಸುಶಾಂತ್.
ಸುಶಾಂತ್ ಸಿಂಗ್, ಸದ್ಯ ಮಹಾರಾಷ್ಟ್ರದ ಜಲಗಾಂವ್‌ನಿಂದ ಜಿ-9 ಬಾಳೆಹಣ್ಣಿನ ಗಿಡವನ್ನು ತಂದು ನಾಲ್ಕು ಎಕರೆಯಲ್ಲಿ ಬೆಳೆದಿದ್ದಾರೆ. ಇದಕ್ಕೆ ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಅವರ ಮೂವರು ಸಹೋದರರ ಜೊತೆ ಪ್ರತಿ ದಿನ ಬಾಳೆ ತೋಟದಲ್ಲಿ ಕೆಲಸ ಮಾಡುತ್ತಾರೆ ಸುಶಾಂತ್. ಹಿಂದಿನ ವರ್ಷ ಒಂದು ಎಕರೆಗೆ ಒಂದು ಲಕ್ಷ ಖರ್ಚು ಮಾಡಿದ್ದ ಸುಶಾಂತ್ ಉತ್ತಮ ಬೆಳೆ ಪಡೆದಿದ್ದರು. ಅವರು ಒಂದು ಕೆ.ಜಿ ಬಾಳೆ ಹಣ್ಣಿಗೆ 18 ರೂಪಾಯಿಯಂತೆ ಮಾರಾಟ ಮಾಡಿ ಆರು ಲಕ್ಷ ರೂಪಾಯಿ ಪಡೆದಿದ್ದರು. ಒಂದು ಎಕರೆ ಬೆಳೆಯಲ್ಲೇ ಇಷ್ಟೊಂದು ಲಾಭಕಂಡು ಸುಶಾಂತ್ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಬಾಳೆ ಬೆಳೆಯುವ ನಿರ್ಧಾರ ಮಾಡಿದ್ದಾರೆ. ಸುಶಾಂತ್ ತೋಟ ನೋಡಿದ ಅನೇಕರು, ತರಬೇತಿಗಾಗಿ ಬರ್ತಿದ್ದಾರೆ.
ಹತ್ತು ಸಾವಿರಕ್ಕೆ ವ್ಯವಹಾರ ಶುರು ಮಾಡಿ, ಸೋಲಿನ ನಂತ್ರವೂ ಎದ್ದು ನಿಂತ ಮಹಿಳೆ