ಮಹಿಳೆಯರು ಈಗ ಉಳಿತಾಯದ ಬಗ್ಗೆ ಹೆಚ್ಚು ಆಲೋಚನೆ ಮಾಡ್ತಿದ್ದರೂ ಬ್ಯಾಂಕ್ ವ್ಯವಹಾರದಲ್ಲಿ ಅವರು ಸ್ವಲ್ಪ ಹಿಂದಿದ್ದಾರೆ. ಬ್ಯಾಂಕ್ ಬಗ್ಗೆ ಹೆಚ್ಚಿನ ಮಾಹಿತಿ ಅವರಿಗಿರೋದಿಲ್ಲ. ಹಣಗಳಿಸುವ ಮಹಿಳೆಗೆ ಹಣ ಎಲ್ಲಿ ಇಡಬೇಕು ಹಾಗೆ ಹೇಗೆ ಇಡಬೇಕು ಎಂಬುದು ತಿಳಿದಿರಬೇಕಾಗುತ್ತದೆ.
ಮಹಿಳೆಯರಿಗೆ ಬ್ಯಾಂಕ್ ವ್ಯವಹಾರದ ಬಗ್ಗೆ ಸರಿಯಾಗಿ ತಿಳಿದಿರೋದಿಲ್ಲ ಅಂದ್ರೆ ನೀವು ನಂಬದೆ ಇರಬಹುದು. ಆದ್ರೆ ಇದು ಸತ್ಯ. ಬಹುತೇಕ ಮಹಿಳೆಯರು ಈ ಬ್ಯಾಂಕ್ ವ್ಯವಹಾರದ ಬಗ್ಗೆ ಹೆಚ್ಚಾಗಿ ತಿಳಿದಿರೋದಿಲ್ಲ. ಕೆಲವರಿಗೆ ಬ್ಯಾಂಕ್ ನಲ್ಲಿ ಖಾತೆಯಿದ್ರೂ ಅದಕ್ಕೆ ಹಣ ಹಾಕುವ ವಿಧಾನ ಸರಿಯಾಗಿ ತಿಳಿದಿರೋದಿಲ್ಲ. ಇದು ಡಿಜಿಟಲ್ ಯುಗ. ಇಲ್ಲಿ ಎಲ್ಲವೂ ಆನ್ಲೈನ್ ನಲ್ಲಿ ನಡೆಯುತ್ತದೆ. ಹಾಗೆಯೇ ಹಣದ ಅವಶ್ಯಕತೆ ಹೆಚ್ಚಿದೆ. ಸ್ವಾವಲಂಭಿಯಾಗಬೇಕೆಂದು ಬಯಸುವ ಮಹಿಳೆ ಬ್ಯಾಂಕ್ ವ್ಯವಹಾರದ ಬಗ್ಗೆ ಕನಿಷ್ಠ ಜ್ಞಾನ ಹೊಂದಿರಬೇಕು. ನಾವಿಂದು ಬ್ಯಾಂಕ್ ಗೆ ಸಂಬಂಧಿಸಿದ ಕೆಲ ಮಾಹಿತಿಯನ್ನು ಮಹಿಳೆಯರಿಗೆ ನೀಡ್ತೇವೆ.
ಬ್ಯಾಂಕ್ (Bank) ಗೆ ಸಂಬಂಧಿಸಿದ ಈ ವಿಷ್ಯ ತಿಳಿದುಕೊಳ್ಳಿ :
ಸೇವಿಂಗ್ (Saving) ಅಕೌಂಟ್ (Account) ಬಡ್ಡಿ ಬಗ್ಗೆ ತಿಳಿದಿರಿ : ಉಳಿತಾಯ ಖಾತೆ ತೆರೆಯುವ ಮುನ್ನ ನೀವು ಎಷ್ಟು ಬಡ್ಡಿ (Interest ) ಬರುತ್ತದೆ ಎಂಬುದನ್ನು ತಿಳಿಯಿರಿ. ಬ್ಯಾಂಕ್ ನಲ್ಲಿ ಉಳಿತಾಯ ಖಾತೆಗೆ ಬಡ್ಡಿ ಕಡಿಮೆ ಇರುತ್ತದೆ. ಆದ್ರೆ ಹೊಸ ಖಾತೆಯನ್ನು ತೆರೆಯುವಾಗ ಅಥವಾ ನಿಮ್ಮ ಖಾತೆಯನ್ನು ನವೀಕರಿಸುವಾಗ ಹೆಚ್ಚಿನ ಬಡ್ಡಿ ನೀಡಲಾಗುತ್ತದೆ. ಯಾವ ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿಯಿದೆ ಎಂಬುದನ್ನು ಪರಿಶೀಲಿಸಿ ನಂತ್ರ ಖಾತೆ ತೆರೆಯುವುದು ಲಾಭಕರ. ಬ್ಯಾಂಕ್ ಶೇಕಡಾ 2ರಿಂದ 6ರಷ್ಟು ವಾರ್ಷಿಕ ಬಡ್ಡಿಯನ್ನು ಉಳಿತಾಯ ಖಾತೆಗೆ ನೀಡುತ್ತದೆ.
Business Ideas: ಪ್ರಾಪರ್ಟಿ ಡೀಲರ್ ಆಗೋಕೆ ಏನ್ಬೇಕು ಗೊತ್ತಾ?
ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ (Zero Balance Saving Account) : ಅಡುಗೆ ಮನೆಯ ಡಬ್ಬದಲ್ಲಿ ಹಣವಿಟ್ರೆ ಅದಕ್ಕೆ ಬಡ್ಡಿ ಬರುವುದಿಲ್ಲ. ಅದೇ ಹಣವನ್ನು ಬ್ಯಾಂಕ್ ನಲ್ಲಿಟ್ಟರೆ ನೀವು ಬಡ್ಡಿ ಪಡೆಯಬಹುದು. ನೀವು ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಯಲ್ಲಿ ಹಣ ಇಡಬಹುದು. ಬ್ಯಾಲೆನ್ಸ್ ಇಲ್ಲವೆಂದ್ರೆ ಬ್ಯಾಂಕ್ ನಿಮಗೆ ದಂಡ ವಿಧಿಸುವುದಿಲ್ಲ. ನೀವು 10 ರೂಪಾಯಿಗಳಲ್ಲಿ ಖಾತೆಯನ್ನು ಪ್ರಾರಂಭಿಸಬಹುದು. ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಯ ಹಣವನ್ನು ಆನ್‌ಲೈನ್‌ನಲ್ಲಿ ಎಫ್‌ಡಿಗೆ ವರ್ಗಾಯಿಸಲು ಬರುವುದಿಲ್ಲ. ನೀವು ಈ ಖಾತೆ ತೆರೆಯುವ ಮುನ್ನ ಬ್ಯಾಂಕ್ ನಿಯಮ ತಿಳಿದುಕೊಳ್ಳಿ.
ಮಕ್ಕಳ ಹೆಸರಿನಲ್ಲೂ ತೆರೆಯಬಹುದು ಖಾತೆ : ಸಾಮಾನ್ಯವಾಗಿ ಜನರು 18 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ ಮಾತ್ರ ಖಾತೆ ತೆರೆಯಬಹುದು ಅಂದ್ಕೊಂಡಿದ್ದಾರೆ. ಅದು ತಪ್ಪು. ನೀವು 10 ವರ್ಷದ ಮಗುವಿನ ಹೆಸರಿನಲ್ಲಿ ಕೂಡ ಖಾತೆ ತೆರೆಯಬಹುದು. ಇದು ಜಂಟಿ ಖಾತೆಯಾಗಿರುತ್ತದೆ. ಹಣಕಾಸಿನ ಮಿತಿಯಿರುತ್ತದೆ. 18 ವರ್ಷ ತುಂಬಿದಾಗ ಖಾತೆ ಮಗುವಿನ ಕೈ ಸೇರುತ್ತದೆ.
ಕ್ರೆಡಿಟ್ – ಡೆಬಿಟ್ ಕಾರ್ಡ್ (Credit-Debit Card) ಬಗ್ಗೆ ವಿಷ್ಯ ತಿಳಿದಿರಿ : ಹೊಸ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ತೆಗೆದುಕೊಳ್ಳುವ ಮೊದಲು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನಲ್ಲಿ ಗಳಿಸಿದ ಅಂಕಗಳು ಎಷ್ಟು ಎಂಬುದನ್ನು ತಿಳಿದಿರಿ. ಹಾಗೆಯೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ ಶುಲ್ಕಗಳು ಯಾವುವು, ದೇಶೀಯ ಶಾಪಿಂಗ್‌ನಲ್ಲಿ ಯಾವ ಕಾರ್ಡ್ ಹೆಚ್ಚು ಪ್ರಯೋಜನಕಾರಿ ಎಂಬೆಲ್ಲ ಮಾಹಿತಿ ಇರಲಿ.
ವೈಯಕ್ತಿಕ ಸಾಲ ಪಡೆಯುವ ಮುನ್ನ (Personal Loan) : ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುತ್ತಿದ್ದರೆ ಮೊದಲು ವಿವಿಧ ಬ್ಯಾಂಕ್‌ಗಳ ಬಡ್ಡಿದರವನ್ನು ತಿಳಿದುಕೊಳ್ಳಬೇಕು. ವಾಸ್ತವವಾಗಿ, ಬ್ಯಾಂಕುಗಳು ಕಡಿಮೆ ಬಡ್ಡಿ ದರವನ್ನು ತೋರಿಸುತ್ತವೆ ಮತ್ತು ಹೆಚ್ಚು ತೆಗೆದುಕೊಳ್ಳುತ್ತವೆ. ಈ ಬಗ್ಗೆ ಸರಿಯಾದ ಮಾಹಿತಿ ಪಡೆದು ನೀವು ಸಾಲ ಪಡೆಯಬೇಕು.
ಹೂಡಿಕೆ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ!
ಉಳಿತಾಯ ಖಾತೆಯಲ್ಲಿ ಹೀಗೆ ಹೆಚ್ಚಿನ ಬಡ್ಡಿ ಪಡೆಯಿರಿ : ಉಳಿತಾಯ ಖಾತೆಯನ್ನು ಸ್ವೀಪ್ ಇನ್/ಔಟ್ ಖಾತೆಯಾಗಿ ಪರಿವರ್ತಿಸಬಹುದು. ಉಳಿತಾಯ ಖಾತೆಯಲ್ಲಿರುವ ಹಣ ತಾತ್ಕಾಲಿಕ ಎಫ್‌ಡಿಯಾಗಿ ಪರಿವರ್ತನೆಯಾಗುತ್ತದೆ. ಇದನ್ನು ಯಾವಾಗ ಬೇಕಾದರೂ ವಿತ್ ಡ್ರಾ ಮಾಡಬಹುದು. ನಿಮಗೆ ಉಳಿತಾಯ ಖಾತೆ ಬಡ್ಡಿ ಬದಲು ಎಫ್ ಡಿ ಬಡ್ಡಿ ಸಿಕ್ಕಿರುತ್ತದೆ.