ಕೇಂದ್ರ ಸರ್ಕಾರಿ ಪಿಂಚಣಿದಾರರ ಡಿಆರ್ ಶೇ.396ಕ್ಕೆ ಹೆಚ್ಚಳ; ಆದ್ರೆ ಇವರಿಗೆ ಮಾತ್ರ ಅನ್ವಯ

By Suvarna News  |  First Published Nov 3, 2022, 11:29 AM IST

*5ನೇ ವೇತನ ಆಯೋಗದಡಿ ಪಿಂಚಣಿ ಪಡೆಯುತ್ತಿರೋರಿಗೆ ಮಾತ್ರ ಅನ್ವಯ
*ಪರಿಷ್ಕೃತ ಪಿಂಚಣಿ ಜುಲೈ 1, 2022ರಿಂದಲೇ ಅನ್ವಯ
*ಸಿಪಿಎಫ್ ನಿವೃತ್ತರಿಗೆ ಸಿಗಲಿದೆ ಇದರ ಪ್ರಯೋಜನ 


ನವದೆಹಲಿ (ನ.03): ಐದನೇ ವೇತನ ಆಯೋಗದಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಕೇಂದ್ರ ಸರ್ಕಾರದ ಕೆಲವು ಪಿಂಚಣಿದಾರರ ಡಿಯರ್ ನೆಸ್ ರಿಲೀಫ್ (ಡಿಆರ್) ದರವನ್ನು ಪರಿಷ್ಕರಿಸಲಾಗಿದೆ.  ಪಿಂಚಣಿ ಹಾಗೂ ಪಿಂಚಣಿದಾರರ ಕಲ್ಯಾಣ ಇಲಾಖೆ (ಡಿಒಪಿಪಿಡಬ್ಲ್ಯು)  ಈ ಕ್ರಮ ಕೈಗೊಂಡಿದ್ದು, ಪಿಂಚಣಿದಾರರು ಜುಲೈ 1, 2022ರಿಂದ ಅನ್ವಯಿಸುವಂತೆ ಪ್ರಸ್ತುತ  ಮೂಲ ಧನದ ಶೇ.396ರಷ್ಟು ಡಿಆರ್ ಪಡೆಯಲಿದ್ದಾರೆ. 2022ರ ಅಕ್ಟೋಬರ್ 31 ರ ಕಚೇರಿ ಜ್ಞಾಪನಾ ಪತ್ರದಲ್ಲಿ ಈ ಬಗ್ಗೆ ಡಿಒಪಿಪಿಡಬ್ಲ್ಯು ಮಾಹಿತಿ ನೀಡಿದೆ. 18.11.1960 ಹಾಗೂ 31.12.1985ರ ನಡುವೆ ಸೇವೆಯಿಂದ ನಿವೃತ್ತಗೊಂಡಿರುವ ಸಿಪಿಎಫ್  ಗ್ರೂಪ್ ಎ, ಬಿ, ಸಿ ಹಾಗೂ ಡಿ ಫಲಾನುಭವಿಗಳು ಮೂಲ ಧನದ 3000ರೂ., 1000ರೂ., 750ರೂ. ಹಾಗೂ  650 ರೂ. ಅನ್ನು ಕ್ರಮವಾಗಿ ಪಡೆಯಲು 2013 ರ ಜೂನ್ 4ರಿಂದ ಅನ್ವಯಿಸುವಂತೆ ಅರ್ಹರಾಗಿದ್ದಾರೆ. ಇಂಥವರಿಗೆ ಡಿಆರ್ ಅನ್ನು ಶೇ.381ರಿಂದ ಶೇ.396ಕ್ಕೆ ಏರಿಕೆ ಮಾಡಲಾಗಿದೆ. 01.01.1986ಕ್ಕಿಂತ ಮೊದಲು ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ಮೃತರಾದ ಸಿಪಿಎಫ್ ಫಲಾನುಭವಿಯ ವಿಧವೆ ಪತ್ನಿ ಹಾಗೂ ಮಕ್ಕಳು 2013ರ ಜೂನ್ 4ರಿಂದ  ಮೂಲಧನದ 645ರೂ. ಮಾಸಿಕ ಪಿಂಚಣಿ ಪಡೆಯುತ್ತಿದ್ದರೆ ಅವರಿಗೆ ಹೊಸ ಪರಿಷ್ಕೃತ ಪಿಂಚಣಿ ಅನ್ವಯಿಸಲಿದೆ. ಹಾಗೆಯೇ 18.11.1960ರ ಮುನ್ನ ನಿವೃತ್ತಿ ಹೊಂದಿದ ಸಿಪಿಎಫ್ ಉದ್ಯೋಗಿ 654ರೂ., 659ರೂ., 703ರೂ. ಹಾಗೂ 965ರೂ. ಪಿಂಚಣಿ ಪಡೆಯುತ್ತಿದ್ದರೆ ಅವರು ಪಿಂಚಣಿ ಹೆಚ್ಚಳದ ಪ್ರಯೋಜನ ಪಡೆಯಲಿದ್ದಾರೆ.

ತುಟ್ಟಿ ಭತ್ಯೆ ಅಥವಾ ಡಿಎ (DA) ಅನ್ನು ಸರ್ಕಾರಿ ನೌಕರರಿಗೆ ನೀಡಿದ್ರೆ, ಡಿಯರನೆಸ್ ರಿಲೀಫ್ (DR) ಅನ್ನು ಪಿಂಚಣಿದಾರರಿಗೆ (Pensioners) ನೀಡಲಾಗುತ್ತದೆ. ದಸರಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ (Cntral Government) ನೌಕರರು ಹಾಗೂ  ಪಿಂಚಣಿದಾರರ ತುಟ್ಟಿಭತ್ಯೆಯನ್ನು(ಡಿಎ) ಶೇ.4ರಷ್ಟು ಹೆಚ್ಚಳ ಮಾಡಿತ್ತು. ಪರಿಣಾಮ ಕೇಂದ್ರ ಸರ್ಕಾರಿ ನೌಕರರ ಡಿಎ (DA) ಮೂಲವೇತನದ ಶೇ.38ಕ್ಕೆ ಏರಿಕೆಯಾಗಿದೆ. ಇದು ಜುಲೈ 1ರಿಂದಲೇ ಜಾರಿಗೆ ಬಂದಿತ್ತು. ಇದು ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಎಲ್ಲ ನೌಕರರಿಗೂ ಅನ್ವಯವಾಗಿತ್ತು.

Tap to resize

Latest Videos

ಬ್ಯಾಂಕ್ ಗಿಂತಲೂ ಕಡಿಮೆ ಬಡ್ಡಿದರದಲ್ಲಿ ಸಿಗುತ್ತೆ ಎಲ್ಐಸಿ ವೈಯಕ್ತಿಕ ಸಾಲ, ಪಡೆಯೋದು ಹೇಗೆ?

ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆ (DA) ಹಾಗೂ ತುಟ್ಟಿ ಪರಿಹಾರವನ್ನು (DR) ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಪರಿಷ್ಕರಿಸುತ್ತದೆ. ಆದರೆ, ಈ ನಿರ್ಧಾರವನ್ನು ಮಾತ್ರ ಸರ್ಕಾರ ಮಾರ್ಚ್ ಮತ್ತು ಸೆಪ್ಟೆಂಬರ್ ನಲ್ಲಿ ಪ್ರಕಟಿಸುತ್ತದೆ. 

ಡಿಎ ಪರಿಷ್ಕರಣೆಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಮಾನದಂಡವಾಗಿದ್ದು,ಅದರ ಆಧಾರದಲ್ಲೇ ಪರಿಷ್ಕರಿಸಲಾಗುತ್ತದೆ.  ಎಐಸಿಪಿಐ ಆರ್ ಬಿಐಯ (RBI) ಸಹನ ಮಟ್ಟಕ್ಕಿಂತ ಮೇಲಿದೆ. ಸದ್ಯ ಚಿಲ್ಲರೆ ಹಣದುಬ್ಬರ (Retail inflation) ಆರ್ ಬಿಐ ಸಹನ ಮಟ್ಟವಾದ ಶೇ.2-6ಕ್ಕಿಂತ ಹೆಚ್ಚಿದೆ. ಹೀಗಾಗಿ ಹೀಗಾಗಿ ತುಟ್ಟಿ ಭತ್ಯೆಯನ್ನು ಶೇ. 4ರಷ್ಟು ಹೆಚ್ಚಿಸಲಾಗಿದೆ. ಈ ವರ್ಷದ ಮಾರ್ಚ್ ನಲ್ಲಿ ಕೇಂದ್ರ ಸಚಿವ ಸಂಪುಟ (Central cabinet) ಡಿಎಯನ್ನು ಶೇ.3ಕ್ಕೆ ಏರಿಕೆ ಮಾಡಲು ಒಪ್ಪಿಗೆ ನೀಡಿತ್ತು. ಪರಿಣಾಮ ಡಿಎ ಮೂಲವೇತನದ ಶೇ.34ಕ್ಕೆ ಹೆಚ್ಚಳವಾಗಿತ್ತು.

Pink Tax ಅಂದ್ರೇನು? ಮಹಿಳೆಯರು ಯಾಕೆ ನೀಡ್ಬೇಕು ಗೊತ್ತಾ?

ಕೋವಿಡ್ -19  (COVID-19) ಕಾರಣದಿಂದ ಸೃಷ್ಟಿಯಾದ ಹೆಚ್ಚುವರಿ ವೆಚ್ಚಗಳನ್ನು ಭರಿಸಲು ಕೇಂದ್ರ ಸರ್ಕಾರ ಡಿಎ (DA) ಹಾಗೂ ಡಿಆರ್ (DR) ದರ ಹೆಚ್ಚಳದ ಮೂರು ಕಂತುಗಳನ್ನು ತಡೆ ಹಿಡಿದಿತ್ತು. 2020 ಜನವರಿ 1, 2020 ಜುಲೈ 1 ಹಾಗೂ 2021ರ ಜನವರಿ 1ರ ಡಿಎ ಹಾಗೂ ಡಿಆರ್ ಕಂತುಗಳನ್ನು ಸರ್ಕಾರ ತಡೆ ಹಿಡಿದಿತ್ತು. 2021ರ ಜುಲೈನಲ್ಲಿ ಡಿಎ ಹಾಗೂ ಡಿಆರ್ ಹೆಚ್ಚಳದ ಮೇಲಿನ ತಡೆಯನ್ನು ಹಿಂಪಡೆದ ಸರ್ಕಾರ, ಆ ಬಳಿಕ ಒಟ್ಟು ಮೂರು ಬಾರಿ ಡಿಎ ಹಾಗೂ ಡಿಆರ್ ಭತ್ಯೆಗಳಲ್ಲಿ ಹೆಚ್ಚಳ ಮಾಡಿತ್ತು. 
 

click me!