ಜೀವನಪೂರ್ತಿ ಬೆವರು ಸುರಿಸಿ ದುಡಿದ ಹಣವನ್ನುಮಕ್ಕಳಿಗೋಸ್ಕರ ಖರ್ಚು ಮಾಡಿ,ಬದುಕಿನ ಇಳಿಸಂಜೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸೋ ಹೆತ್ತವರು ಸಾಕಷ್ಟು ಜನರಿದ್ದಾರೆ. ಇಂಥ ಸಮಯದಲ್ಲಿ ಹೆತ್ತವರಿಗೆ ಮಕ್ಕಳು ಹೇಗೆ ಹೆಗಲಾಗಬಹುದು?
ಹೆತ್ತವರ ಪ್ರೀತಿಯೇ ಹಾಗೇ,ಬೆಲೆ ಕಟ್ಟಲು ಅಸಾಧ್ಯ.ಮಕ್ಕಳಿಗೆ ಏನೂ ಕೊರತೆಯಾಗದಂತೆ ಚೆನ್ನಾಗಿ ಬೆಳೆಸಬೇಕು,ಉತ್ತಮ ಶಿಕ್ಷಣ ಕೊಡಿಸಿ ಸುಭದ್ರ ಬದುಕು ಕಟ್ಟಿಕೊಡಬೇಕೆಂಬುದೇ ಅವರ ಕನಸಾಗಿರುತ್ತದೆ.ಇದಕ್ಕಾಗಿ ಅವರು ಅದೆಂಥ ತ್ಯಾಗಕ್ಕೂ ಸಿದ್ಧರಿರುತ್ತಾರೆ.ಜಮೀನು, ಒಡವೆ ಮಾರಿ, ಮನೆ ಅಡವಿಟ್ಟು ಮಕ್ಕಳನ್ನು ಪ್ರತಿಷ್ಠಿತ ಶಾಲೆ, ಕಾಲೇಜಿಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸಿದ ಹೆತ್ತವರ ನಿದರ್ಶನಗಳು ಬೇಕಾದಷ್ಟಿವೆ. ಸಂಗೀತ, ನೃತ್ಯ, ಸ್ವಿಮ್ಮಿಂಗ್, ಕರಾಟೆ, ಕ್ರಿಕೆಟ್ ಹೀಗೆ ಮಕ್ಕಳು ಇಷ್ಟಪಟ್ಟ ತರಗತಿಗಳಿಗೆ ಸೇರಿಸಿ ಅವರ ಸಾಧನೆ ನೋಡಿ ಹಿರಿಹಿರಿ ಹಿಗ್ಗೋ ಅಪ್ಪ-ಅಮ್ಮ,ಅದಕ್ಕಾಗಿ ತಮ್ಮ ಆಸೆ-ಆಕಾಂಕ್ಷೆಗಳನ್ನು ಮರೆತಿರುತ್ತಾರೆ. ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅವರ ಉನ್ನತ ಶಿಕ್ಷಣಕ್ಕಾಗಿ ಲಕ್ಷಗಟ್ಟಲೆ ಸಾಲ ಮಾಡಲು ಅವರು ಹಿಂದೆಮುಂದೆ ನೋಡೋದಿಲ್ಲ.ಮಕ್ಕಳ ಮದುವೆಗೆ ಅದೆಷ್ಟೇ ಹಣ ಖರ್ಚಾದ್ರೂ ಎಳ್ಳಷ್ಟೂ ಬೇಸರಿಸದೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಆದರೆ, ಈ ಎಲ್ಲ ಜವಾಬ್ದಾರಿ, ಕರ್ತವ್ಯಗಳನ್ನು ನಿಭಾಯಿಸೋದರಲ್ಲಿ ಬ್ಯುಸಿಯಾಗಿರೋ ಅಪ್ಪ-ಅಮ್ಮ ತಮ್ಮ ವೃದ್ಧಾಪ್ಯದ ಬದುಕಿಗೆ ಒಂದಿಷ್ಟು ಹಣ ಕೂಡಿಡೋದು ಅಗತ್ಯ ಎಂಬುದನ್ನು ಮನಗಾಣೋದೇ ಇಲ್ಲ.
ಪಿಎಫ್ ನಿಯಮಗಳಲ್ಲಿ ಬದಲಾವಣೆ: ಹೀಗ್ಮಾಡದಿದ್ರೆ EPF ಹಣಕ್ಕೆ ಕತ್ತರಿ!
undefined
ಹೆತ್ತವರ ನೆರವಿಗೆ ಧಾವಿಸಿ
ಭಾರತೀಯ ಸಮಾಜದಲ್ಲಿ ಇಳಿಸಂಜೆ ವಯಸ್ಸಿನಲ್ಲಿ ಜೇಬು ಖಾಲಿ ಮಾಡಿಕೊಂಡು ದುಡಿಮೆಯ ಫಲವನ್ನು ಖುಷಿಯಿಂದ ಅನುಭವಿಸಲು ಸಾಧ್ಯವಾಗದೆ ಪರದಾಡೋ ಪಾಲಕರ ಸಂಖ್ಯೆಗೇನೂ ಕಡಿಮೆಯಿಲ್ಲ. ಒಂದು ವೇಳೆ ನಿಮ್ಮ ಪಾಲಕರೂ ಇಂಥ ಪರಿಸ್ಥಿತಿಯಲ್ಲಿದ್ದರೆ, ತಕ್ಷಣ ಅವರ ನೆರವಿಗೆ ಧಾವಿಸೋದು ನಿಮ್ಮ ಕರ್ತವ್ಯ. ಹಾಗಾದ್ರೆ ಇಳಿವಯಸ್ಸಿನಲ್ಲಿ ಹೆತ್ತವರ ಆರ್ಥಿಕ ಸಂಕಷ್ಟಗಳಿಗೆ ಮಕ್ಕಳು ಹೇಗೆ ಹೆಗಲು ನೀಡಬಹುದು?
ಈ ವಿಷಯಗಳನ್ನು ಪರಿಶೀಲಿಸಿ
ನಿಮ್ಮ ಪಾಲಕರ ಬಳಿ ನಿತ್ಯದ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಂಡು ನೆಮ್ಮದಿಯ ಬದುಕು ಸಾಗಿಸುವಷ್ಟು ಬ್ಯಾಂಕ್ ಬ್ಯಾಲೆನ್ಸ್ ಇದೆಯಾ? ಅವರ ಮಾಸಿಕ ಆದಾಯ ಹಾಗೂ ಉಳಿತಾಯ ಎಷ್ಟು? ಅವರು ಹೂಡಿಕೆ ಮಾಡಿದ್ದರೆ, ಎಲ್ಲಿ? ಆರೋಗ್ಯ ವಿಮೆ ಹೊಂದಿದ್ದಾರಾ? ಅವರ ದಾಖಲೆಗಳು ಸರಿಯಾದ ಅನುಕ್ರಮದಲ್ಲಿವೆಯಾ? ಈ ಎಲ್ಲ ವಿಷಯಗಳನ್ನು ಪರಿಶೀಲಿಸಿ .ಆ ಬಳಿಕ ಈ ವಿಷಯಗಳಿಗೆ ಸಂಬಂಧಿಸಿ ನೀವು ಅವರಿಗೆ ಯಾವ ರೀತಿ ನೆರವು ನೀಡಬಹುದು ಎಂಬುದನ್ನು ನಿರ್ಧರಿಸಿ, ಕಾರ್ಯಪ್ರವೃತ್ತರಾಗಿ.
ಸ್ವಿಸ್ ಬ್ಯಾಂಕಲ್ಲಿ ಭಾರತೀಯರ ಠೇವಣಿ ಹೆಚ್ಚಾಗಿಲ್ಲ, ಕುಸಿದಿದೆ: ಕೇಂದ್ರ
ಆರ್ಥಿಕ ಹೊರೆ ಹಂಚಿಕೊಳ್ಳಿ
ನಿಮ್ಮ ಪಾಲಕರ ನಿವೃತ್ತಿ ಬದುಕು ಸುಖ ಹಾಗೂ ನೆಮ್ಮದಿಯಿಂದ ಕೂಡಿರಬೇಕೆಂದ್ರೆ ಅವರ ಆರ್ಥಿಕ ಹೊರೆಯನ್ನು ಹಂಚಿಕೊಳ್ಳಿ. ಉದಾಹರಣೆಗೆ ನಿಮ್ಮ ಉನ್ನತ ಶಿಕ್ಷಣದ ಸಂದರ್ಭದಲ್ಲಿ ಸಂಪೂರ್ಣ ವೆಚ್ಚದ ಹೊರೆಯನ್ನು ಪಾಲಕರ ಹೆಗಲ ಮೇಲೆ ಹಾಕೋ ಬದಲು ಎಜುಕೇಷನ್ ಲೋನ್ ಪಡೆದುಕೊಳ್ಳಿ. ಇದ್ರಿಂದ ನಿಮ್ಮ ಶಿಕ್ಷಣಕ್ಕೆ ಯಾವುದೇ ಆರ್ಥಿಕ ತೊಂದರೆಯೂ ಆಗೋದಿಲ್ಲ. ಅಲ್ಲದೆ, ಈ ಸಾಲದ ಇಎಂಐ ನಿಮ್ಮ ವಿದ್ಯಾಭ್ಯಾಸ ಮುಗಿದು ಆರು ತಿಂಗಳ ಬಳಿಕ ಅಥವಾ ಉದ್ಯೋಗ ಸಿಕ್ಕ ತಕ್ಷಣ, ಇವೆರಡರಲ್ಲಿ ಯಾವುದು ಮೊದಲು ಅಲ್ಲಿಂದ ಪ್ರಾರಂಭವಾಗೋ ಕಾರಣ ಇದನ್ನು ನಿಧಾನವಾಗಿ ನೀವೇ ತೀರಿಸಬಹುದು. ಎಜುಕೇಷನ್ ಲೋನ್‌ನಲ್ಲಿ ನಿಮ್ಮ ಕೋರ್ಸ್ ಶುಲ್ಕ ಮಾತ್ರ ಕವರ್ ಆಗೋ ಕಾರಣ ಉಳಿದ ಖರ್ಚು-ವೆಚ್ಚಗಳನ್ನು ಹೇಗೋ ನಿಮ್ಮ ಹೆತ್ತವರೇ ಭರಿಸುತ್ತಾರೆ. ಇದ್ರಿಂದ ಅವರಿಗೂ ಹೆಚ್ಚಿನ ಹೊರೆಯಾಗೋದಿಲ್ಲ. ಒಂದು ವೇಳೆ ನಿಮ್ಮ ಹೆತ್ತವರ ಆರ್ಥಿಕ ಸ್ಥಿತಿ ಚೆನ್ನಾಗಿರದಿದ್ರೆ, ಅರೆಕಾಲಿಕಾ ಉದ್ಯೋಗ ಮಾಡೋ ಮೂಲಕ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನೀವೇ ಭರಿಸಲು ಪ್ರಯತ್ನಿಸಬಹುದು. ಇದ್ರಿಂದ ನಿಮ್ಮ ಹೆತ್ತವರಿಗೆ ವೃದ್ಧಾಪ್ಯದಲ್ಲಿ ಸಾಲ ತೀರಿಸೋ ಸಂಕಷ್ಟ ಎದುರಾಗೋದಿಲ್ಲ.
ವೆಚ್ಚ ಕಡಿತಕ್ಕೆ ಚಿಂತಿಸಿ
ಇಳಿ ವಯಸ್ಸಿನಲ್ಲಿರೋ ನಿಮ್ಮ ಹೆತ್ತವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದಿದ್ರೆ ವೆಚ್ಚ ಕಡಿತದ ಬಗ್ಗೆ ನೀವು ಯೋಚಿಸಲೇಬೇಕಾಗುತ್ತದೆ. ಒಂದು ವೇಳೆ ನಿಮ್ಮ ಹೆತ್ತವರು ಬಾಡಿಗೆ ಮನೆಯಲ್ಲಿದ್ದು, ಜಾಸ್ತಿ ಬಾಡಿಗೆ ಪಾವತಿಸುತ್ತಿದ್ದರೆ, ಕಡಿಮೆ ಬಾಡಿಗೆಯ ಪುಟ್ಟ ಮನೆಗೆ ಅವರನ್ನು ಶಿಫ್ಟ್ ಮಾಡಿ. ಔಷಧ, ದಿನಸಿ ಸೇರಿದಂತೆ ನಿತ್ಯದ ಖರ್ಚು ವೆಚ್ಚಗಳನ್ನು ಆದಷ್ಟು ನೀವೇ ನಿಭಾಯಿಸಿ.
2022ಕ್ಕೆ ದೇಶದಲ್ಲಿ 30 ಲಕ್ಷ ಐಟಿ ಉದ್ಯೋಗ ನಷ್ಟ?
ಆರೋಗ್ಯ ವಿಮೆ ಮಾಡಿಸಿ
ಸದ್ಯದ ಪರಿಸ್ಥಿತಿಯಲ್ಲಿ ಆರೋಗ್ಯ ವಿಮೆ ಅತ್ಯಗತ್ಯ.ಬಹುತೇಕ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ನೀಡೋ ಆರೋಗ್ಯ ವಿಮೆಯಲ್ಲಿ ಹೆತ್ತವರನ್ನೂ ಸೇರ್ಪಡೆಗೊಳಿಸೋ ಅವಕಾಶವಿದೆ.ಇದನ್ನು ಬಳಸಿಕೊಳ್ಳಿ.ಇದ್ರಿಂದ ನಿಮ್ಮ ಜೊತೆ ಹೆತ್ತವರಿಗೂ ವಿಮೆ ಕವರೇಜ್ ಸಿಗುತ್ತೆ. ಒಂದು ವೇಳೆ ಇಂಥ ಅವಕಾಶವಿಲ್ಲವೆಂದಾದ್ರೆ ಸಾಕಷ್ಟು ಆರೋಗ್ಯ ವಿಮಾ ಯೋಜನೆಗಳಿದ್ದು,ಅವಶ್ಯಕತೆ ಹಾಗೂ ಆದಾಯಕ್ಕೆ ಅನುಗುಣವಾಗಿ ಯಾವುದು ಸೂಕ್ತ ಎಂಬುದನ್ನು ನಿರ್ಧರಿಸಿ. ಒಟ್ಟಾರೆ ನಿಮ್ಮ ಅಪ್ಪ-ಅಮ್ಮ ಇಬ್ಬರಿಗೂ ಆರೋಗ್ಯ ವಿಮೆಯ ಸುರಕ್ಷತೆ ಒದಗಿಸಲು ಮಾತ್ರ ಮರೆಯಬೇಡಿ.
ವೈದ್ಯಕೀಯ ವೆಚ್ಚಕ್ಕೆಂದೇ ನಿಧಿ ಇರಲಿ
ವೃದ್ಧಾಪ್ಯದಲ್ಲಿ ವಯೋಸಹಜ ಕಾಯಿಲೆಗಳು ಇದ್ದೇಇರುತ್ತವೆ. ಹೀಗಾಗಿ ನಿಮ್ಮ ಹೆತ್ತವರ ವೈದ್ಯಕೀಯ ವೆಚ್ಚಗಳಿಗೆಂದೇ ಒಂದಿಷ್ಟು ಹಣ ಮೀಸಲಿರುವಂತೆ ನೋಡಿಕೊಳ್ಳಿ.ಇದ್ರಿಂದ ಆಗಾಗ ವೈದ್ಯರು ಹಾಗೂ ಔಷಧಕ್ಕೆ ತಗಲುವ ವೆಚ್ಚವನ್ನು ಅವರು ಯಾವುದೇ ಒತ್ತಡವಿಲ್ಲದೆ ಆರಾಮವಾಗಿ ನಿಭಾಯಿಸಬಹುದು.