*ವೈಯಕ್ತಿಕ ಮೂಲ ತೆರಿಗೆ ವಿನಾಯ್ತಿ ಮಿತಿಯಲ್ಲಿ ಬದಲಾವಣೆ ಇಲ್ಲ
*ಡಿಜಿಟಲ್ ಸ್ವತ್ತುಗಳ ಆದಾಯದ ಮೇಲೆ ಶೇ. 30ರಷ್ಟು ತೆರಿಗೆ
*ಡಿಜಿಟಲ್ ಸ್ವತ್ತುಗಳ ವರ್ಗಾವಣೆಯ ಮೇಲೆ ಮಾಡಿದ ಪಾವತಿಗಳಿಗೆ ಶೇ. 1ರಷ್ಟು ಟಿಡಿಎಸ್
*ರಾಜ್ಯ ಸರ್ಕಾರಿ ಉದ್ಯೋಗಿಗಳ ಎನ್ ಪಿಎಸ್ ಖಾತೆಗೆ ಉದ್ಯೋಗದಾತರು ನೀಡೋ ಕೊಡುಗೆ ಕೊಡುಗೆ ಹಿಂದಿನ ಶೇ. 10ರಿಂದ 14ಕ್ಕೆ ಏರಿಕೆ
ನವದೆಹಲಿ (ಫೆ.01): ಬಜೆಟ್ ಅಂದ ತಕ್ಷಣ ಸಾಮಾನ್ಯ ಜನರು ಮೊದಲು ನೋಡೋದು ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಏನಾದ್ರೂ ಬದಲಾವಣೆ ಆಗಿದೆಯಾ ಎಂಬುದು. ಕೋವಿಡ್-19 ಕಾರಣದಿಂದ ಸಾಕಷ್ಟು ಆರ್ಥಿಕ ತೊಂದರೆಗೆ ಸಿಲುಕಿರೋ ಸಾಮಾನ್ಯ ವ್ಯಕ್ತಿಯ ಈ ಬಾರಿಯ ಬಜೆಟ್ ನಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳಗೊಳ್ಳಬಹುದು, ಆದಾಯ ತೆರಿಗೆ ಸ್ಲ್ಯಾಬ್ ಗಳಲ್ಲಿ ಬದಲಾವಣೆಯಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. 2022ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿಗೆ ಸಂಬಂಧಿಸಿದ ಆದಾಯ ತೆರಿಗೆ ಸ್ಲ್ಯಾಬ್ ಹಾಗೂ ಆದಾಯ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದು ವೇತನ ಪಡೆಯೋ ವರ್ಗಕ್ಕೆ ನಿರಾಸೆ ಮೂಡಿಸಿದೆ.
ಮೂಲ ತೆರಿಗೆ ವಿನಾಯ್ತಿ ಮಿತಿಯಲ್ಲಿ ಹೆಚ್ಚಳವಿಲ್ಲ
2022-23ನೇ ಸಾಲಿನಲ್ಲಿ ವೈಯಕ್ತಿಕ ಮೂಲ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸಬಹುದೆಂಬ ನಿರೀಕ್ಷೆಯಿತ್ತು. ಮೂಲ ತೆರಿಗೆ ವಿನಾಯ್ತಿ ಮಿತಿಯನ್ನು 2014 ರಲ್ಲಿ ಕೊನೆಯದಾಗಿ ಬದಲಾಯಿಸಲಾಗಿತ್ತು. ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮೂಲ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷದಿಂದ 2.5 ಲಕ್ಷಕ್ಕೆ ಏರಿಸಿದ್ದರು. ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ 60ರಿಂದ 80 ವರ್ಷದವರಿಗೆ 3 ಲಕ್ಷ ರೂಪಾಯಿ, 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರೂಪಾಯಿಯನ್ನು ತೆರಿಗೆ ವಿನಾಯಿತಿ ಮಿತಿಯಾಗಿ ನಿಗದಿಪಡಿಸಲಾಗಿತ್ತು. ಹಾಗೆಯೇ 60ರಿಂದ 80 ವರ್ಷದವರಿಗೆ 3 ಲಕ್ಷ ರೂಪಾಯಿ, 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರೂಪಾಯಿಯನ್ನು ತೆರಿಗೆ ವಿನಾಯಿತಿ ಮಿತಿಯಾಗಿ ನಿಗದಿಪಡಿಸಲಾಗಿತ್ತು. ಆದ್ರೆ 2014ರ ಬಳಿಕ ಮೂಲ ತೆರಿಗೆ ವಿನಾಯಿತಿ ಮಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಬಜೆಟ್ ಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಎರಡು ತೆರಿಗೆ ವ್ಯವಸ್ಥೆ
ನಿರ್ಮಲಾ ಸೀತಾರಾಮನ್ ಅವರು 2020 ರ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಿದ್ದಾರೆ. ಹೊಸ ತೆರಿಗೆ ಪದ್ಧತಿಯಲ್ಲಿ, ತೆರಿಗೆ ವಿನಾಯಿತಿಗಳು ಮತ್ತು ಕಡಿತಗಳನ್ನು ತ್ಯಜಿಸಲು ಬಯಸುವವರಿಗೆ ತೆರಿಗೆ ದರಗಳನ್ನು ಕಡಿಮೆ ಮಾಡಲಾಗಿದೆ. ಹೊಸ ತೆರಿಗೆ ಪದ್ಧತಿಯು ತೆರಿಗೆದಾರರಿಗೆ ಐಚ್ಛಿಕವಾಗಿರುತ್ತದೆ. ಇದರರ್ಥ ತೆರಿಗೆದಾರರು ಹಳೆಯ ಆಡಳಿತಕ್ಕೆ ಅಂಟಿಕೊಳ್ಳುವ ಅಥವಾ ಹೊಸ ಆಡಳಿತವನ್ನು ಆರಿಸಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ.
ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳು (FY2022-23)
2.5 ಲಕ್ಷ ರೂ. ತನಕ: ಯಾವುದೇ ತೆರಿಗೆಗಳಿಲ್ಲ
2.5 ಲಕ್ಷ ರೂ.ನಿಂದ 5 ಲಕ್ಷ ರೂ.: ಶೇ.5 ತೆರಿಗೆ
5 ಲಕ್ಷ ರೂ.ನಿಂದ 10 ಲಕ್ಷ ರೂ.: ಶೇ.20ರಷ್ಟು ತೆರಿಗೆ
10 ಲಕ್ಷ ರೂ.ಮೇಲ್ಪಟ್ಟು: ಶೇ.30ರಷ್ಟು ತೆರಿಗೆ
ಹೊಸ ತೆರಿಗೆ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ಗಳು (FY2022-23)
2.5ಲಕ್ಷ ರೂ. ತನಕ: ಯಾವುದೇ ತೆರಿಗೆಗಳಿಲ್ಲ
2.5 ಲಕ್ಷದಿಂದ 5 ಲಕ್ಷ ರೂ.: ಶೇ.5 ತೆರಿಗೆ
₹5 ಲಕ್ಷ ರೂ.ನಿಂದ₹7.5 ಲಕ್ಷ: ಶೇ.10ರಷ್ಟು ತೆರಿಗೆ
₹7.5ಲಕ್ಷ ರೂ.ನಿಂದ ₹10 ಲಕ್ಷ: ಶೇ.15ರಷ್ಟು ತೆರಿಗೆ
₹10 ಲಕ್ಷ ರೂ.ನಿಂದ ₹12.5 ಲಕ್ಷ: ಶೇ.20ರಷ್ಟು ತೆರಿಗೆ
₹12.5 ಲಕ್ಷ ರೂ.ನಿಂದ ₹15 ಲಕ್ಷ: ಶೇ.25ರಷ್ಟು ತೆರಿಗೆ
₹15 ಲಕ್ಷ ರೂ. ಮೇಲ್ಪಟ್ಟು: ಶೇ.30ರಷ್ಟು ತೆರಿಗೆ
ಡಿಜಿಟಲ್ ಸ್ವತ್ತುಗಳ ಆದಾಯದ ಮೇಲೆ ಶೇ. 30ರಷ್ಟು ತೆರಿಗೆ
ತೆರಿಗೆದಾರರು ಸಂಬಂಧಿತ ಅಂದಾಜು ವರ್ಷದ ಕೊನೆಯಿಂದ ಎರಡು ವರ್ಷಗಳೊಳಗೆ ತೆರಿಗೆಗಳ ಪಾವತಿಯ ಮೇಲೆ ಪರಷ್ಕರಿಸಿದ ರಿಟರ್ನ್ ಸಲ್ಲಿಸಬಹುದು. ಡಿಜಿಟಲ್ ಸ್ವತ್ತುಗಳ ಆದಾಯದ ಮೇಲೆ ಶೇ. 30ರಷ್ಟು ತೆರಿಗೆ ಪಾವತಿಸಬೇಕು. ಡಿಜಿಟಲ್ ಸ್ವತ್ತುಗಳ ವರ್ಗಾವಣೆಯ ಮೇಲೆ ಮಾಡಿದ ಪಾವತಿಗಳಿಗೆ ಶೇ. 1ರಷ್ಟು ಟಿಡಿಎಸ್ ವಿಧಿಸಲಾಗುತ್ತದೆ ಎಂದು ವಿತ್ತ ಸಚಿವರು ತಿಳಿಸಿದ್ದಾರೆ. ರಾಜ್ಯ ಸರ್ಕಾರಿ ಉದ್ಯೋಗಿಗಳ ಎನ್ ಪಿಎಸ್ ಖಾತೆಗೆ ಉದ್ಯೋಗದಾತರು ನೀಡೋ ಕೊಡುಗೆ ಕೊಡುಗೆ ಹಿಂದಿನ ಶೇ. 10ರಿಂದ 14ಕ್ಕೆ ಏರಿಕೆಯಾಗಲಿದೆ.
Budget 2022: ಬ್ಲಾಕ್‌ಚೈನ್ ಬಳಸಿ RBI ಡಿಜಿಟಲ್ ಕರೆನ್ಸಿ: ಡಿಜಿಟಲ್ ಸ್ವತ್ತು ಆದಾಯದ ಮೇಲೆ ತೆರಿಗೆ!