Economic Survey 2022: ಆಶಾಭಾವನೆ ಮೂಡಿಸಿದ ಆರ್ಥಿಕ ಸಮೀಕ್ಷೆ; ಯಾವೆಲ್ಲ ಅಂಶಗಳ ಮೇಲೆ ಬೆಳಕು ಚೆಲ್ಲಿದೆ? ಇಲ್ಲಿದೆ ಮಾಹಿತಿ

By Suvarna News  |  First Published Jan 31, 2022, 8:30 PM IST

*ದೇಶದ ಇಂಧನ ಅಗತ್ಯದ ಶೇ.55ರಷ್ಟು ಭಾಗ ಕಲ್ಲಿದ್ದಲಿನ ಮೇಲೆ ಅವಲಂಬಿತ
*ಬಾಹ್ಯಾಕಾಶ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರೋ ಸ್ಟಾರ್ಟ್ಅಪ್ ಗಳ ಸಂಖ್ಯೆಯಲ್ಲಿ ಹೆಚ್ಚಳ
*2022ನೇ ಆರ್ಥಿಕ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು ನಿಭಾಯಿಸಲು ಸರ್ಕಾರ ಸಮರ್ಥ


Business Desk: ಕೇಂದ್ರ ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman)2022ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು(Economic Survey) ಇಂದು (ಜ.31) ಸಂಸತ್ತಿನಲ್ಲಿ ಮಂಡಿಸಿದರು. ಆರ್ಥಿಕ ಸಮೀಕ್ಷೆಯು ಸಾಕಷ್ಟು ಭರವಸೆಯ ಅಂಶಗಳನ್ನೊಳಗೊಂಡಿದ್ದು, ಅದರ ಹೈಲೈಟ್ಸ್ ಇಲ್ಲಿದೆ. 

*ಕೋವಿಡ್ ಪೆಂಡಾಮಿಕ್ ನಿಂದ ಅತೀ ಕಡಿಮೆ ಹಾನಿಗೊಳಗಾದ ವಲಯ ಕೃಷಿ. ಕಳೆದ ಸಾಲಿನಲ್ಲಿ ಶೇ.3.6 ಬೆಳವಣಿಗೆ ದಾಖಲಿಸಿದ ಕೃಷಿ ಕ್ಷೇತ್ರ,  2022ನೇ ಸಾಲಿನಲ್ಲಿ ಶೇ.3.9 ಬೆಳವಣಿಗೆ ದಾಖಲಿಸೋ ನಿರೀಕ್ಷೆ
*ಕೋವಿಡ್ ನಿಂದ ಅತೀಹೆಚ್ಚು ಹಾನಿ ಅನುಭವಿಸಿರೋದು ಸೇವಾ ವಲಯ. 2022ನೇ ಸಾಲಿನಲ್ಲಿ ಶೇ.8.2 ಪ್ರಗತಿ ದಾಖಲಿಸೋ ನಿರೀಕ್ಷೆ
*ಕಲ್ಲಿದ್ದಲು ಭಾರತದ ಅತ್ಯಂತ ಪ್ರಮುಖ ಇಂಧನ ಮೂಲವಾಗಿದೆ. ದೇಶದ ಇಂಧನ ಅಗತ್ಯದ ಶೇ.55ರಷ್ಟು ಭಾಗ ಕಲ್ಲಿದ್ದಲಿನ ಮೇಲೆ ಅವಲಂಬಿತವಾಗಿದೆ.
*ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 35 ಸ್ಥಾನಗಳನ್ನೇರಿದ ಭಾರತ. 2015-16ರಲ್ಲಿ 81ನೇ ಸ್ಥಾನದಲ್ಲಿದ್ದ ಭಾರತ, 2021ರಲ್ಲಿ 46ನೇ ಸ್ಥಾನಕ್ಕೇರಿದೆ. 

Latest Videos

undefined

Economic Survey 2022: 2021ರಲ್ಲಿ ಅತ್ಯಧಿಕ ಸ್ಟಾರ್ಟ್ಅಪ್ ಗಳಿರೋ ನಗರ ಬೆಂಗಳೂರಲ್ಲ, ನವದೆಹಲಿ!

*ಬಾಹ್ಯಾಕಾಶ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರೋ ಸ್ಟಾರ್ಟ್ಅಪ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2019ರಲ್ಲಿ 11 ಸ್ಟಾರ್ಟ್ ಅಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, 2021ರಲ್ಲಿ ಈ ಸಂಖ್ಯೆ  47 ಕ್ಕೇರಿಕೆ ಆಗಿದೆ.
*2022ನೇ ಆರ್ಥಿಕ ಸಾಲಿನ ಮೊದಲ ಎಂಟು ತಿಂಗಳಲ್ಲಿ ಐಪಿಒ ( IPOs) ಮೂಲಕ ಬಂಡವಾಳ ಸಂಗ್ರಹ ದಶಕಗಳಲ್ಲೇ ಅತ್ಯಧಿಕ ಎಂಬ ದಾಖಲೆ ಬರೆಯಲಿದೆ. 2021-22 ಆರ್ಥಿಕ ಸಾಲಿನ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಇಕ್ವಿಟ್ ಶೇರುಗಳ ಮೂಲ  43,004 ಕೋಟಿ ರೂ. ಸಂಗ್ರಹಿಸಿದ್ದು, ಇದರ ಹಿಂದಿನ ಸಾಲಿನಲ್ಲಿ ಇದೇ ಅವಧಿಯಲ್ಲಿ 25,701ಕೋಟಿ ರೂ. ಅಷ್ಟೇ ಸಂಗ್ರಹವಾಗಿತ್ತು. 
*ಪ್ರಸಕ್ತ ಆರ್ಥಿಕ ಸಾಸಗಟು ಬೆಲೆ ಆಧರಿತ ಹಣದುಬ್ಬರ  (WPI) ಏರಿಕೆಯ ಹಾದಿಯಲ್ಲಿದ್ದು, ಗರಿಷ್ಠ ಮಟ್ಟದಲ್ಲೇ ಇರಲಿದೆ.
*ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾದ ಕಾರಣ ಪಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. 
*ಏರ್ ಇಂಡಿಯಾದ ಖಾಸಗೀಕರಣ ಬಂಡವಾಳ ಹಿಂತೆಗೆತದ ಕಾರಣದಿಂದ ಮಾತ್ರವಲ್ಲ, ಖಾಸಗೀಕರಣ ಆಂದೋಲನಕ್ಕೆ ಉತ್ತೇಜನ ನೀಡೋ ದೃಷ್ಟಿಯಿಂದ ಕೂಡ ಮುಖ್ಯವಾಗಿದೆ. 
*2021ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಸುಮಾರು 221 ಲಕ್ಷ ವೈಯಕ್ತಿಕ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ. 
*ಮುಂದಿನ ಹತ್ತು ವರ್ಷಗಳಲ್ಲಿ ಭಾರತೀಯ ರೈಲ್ವೆ ವಲಯ ಅತ್ಯಧಿಕ ಮಟ್ಟದ ಬಂಡವಾಳ ವೆಚ್ಚವನ್ನು ಹೊಂದಲಿದೆ, ಆ ಮೂಲಕ ದೇಶದ ಪ್ರಗತಿಯ ವೇಗವನ್ನು ಹೆಚ್ಚಿಸಲಿದೆ.
*ಆರ್ಥಿಕ ನೆರವು ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕ್ರಮಗಳು 2020-21ನೇ ಸಾಲಿನಲ್ಲಿ ವಿತ್ತೀಯ ಕೊರತೆ ಸೃಷ್ಟಿಸಿದ್ದು, ಇದ್ರಿಂದ ಸರ್ಕಾರ ಸಾಲ ಪಡೆಯಬೇಕಾಗಿ ಬಂದಿತ್ತು.
*2022ನೇ ಆರ್ಥಿಕ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು ನಿಭಾಯಿಸಲು ಸರ್ಕಾರ ಸಮರ್ಥವಾಗಿದೆ. 

Economic Survey 2022: 1.2 ಲಕ್ಷ ಬ್ಯಾಂಕ್ ಠೇವಣಿದಾರರಿಗೆ 1, 500 ಕೋಟಿ ರೂ. ಪಾವತಿಸಿದ DICGC

*ಭಾರತದ ಕ್ಯಾಪಿಟಲ್ ಮಾರುಕಟ್ಟೆ ಉತ್ತಮ ಸಾಧನೆ ದಾಖಲಿಸಿದೆ. ಭಾರತದ ಬಹುತೇಕ ಕಂಪನಿಗಳು ಕಳೆದ ಸಾಲಿನಲ್ಲಿ ಇಲ್ಲಿಂದ ಬಂಡವಾಳ ಸಂಗ್ರಹಿಸಿವೆ.
*ಭಾರತೀಯ ಬ್ಯಾಂಕುಗಳು ಕೂಡ ಉತ್ತಮ ಬಂಡವಾಳ ಹೊಂದಿವೆ. ಅಲ್ಲದೆ, ಬ್ಯಾಂಕುಗಳ ವಸೂಲಾಗದ ಸಾಲ ಅಥವಾ ಅನುತ್ಪಾದಕ ಆಸ್ತಿಗಳ ಪ್ರಮಾಣ ಕೂಡ ತಗ್ಗಿದೆ.
*2021ನೇ  ಸಾಲಿನ ಏಪ್ರಿಲ್-ನವೆಂಬರ್ ಅವಧಿಯಲ್ಲಿ 75 ಕಂಪನಿಗಳು ಐಪಿಒಗೆ ಲಿಸ್ಟ್ ಆಗಿದ್ದು, 89,066 ಕೋಟಿ ರೂ. ಸಂಗ್ರಹಿಸಿವೆ. 2020ನೇ ಸಾಲಿನ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಐಪಿಒ ಮೂಲಕ 14,733 ಕೋಟಿ ರೂ. ಅಷ್ಟೇ ಸಂಗ್ರಹವಾಗಿತ್ತು.ಅಂದ್ರೆ ಬಂಡವಾಳ ಸಂಗ್ರಹದಲ್ಲಿ ಕಳೆದ ಸಾಲಿನಲ್ಲಿ 504.5% ಹೆಚ್ಚಳವಾಗಿದೆ.
*ಅಬಕಾರಿ ಸುಂಕದಿಂದ ಸರ್ಕಾರದ ಬೊಕ್ಕಸ ಸೇರೋ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಕಂಡುಬಂದಿದೆ. 2021ನೇ ಸಾಲಿನ ಏಪ್ರಿಲ್- ನವೆಂಬರ್ ನಲ್ಲಿ ಶೇ.23.2 ಪ್ರಗತಿ ಕಂಡುಬಂದಿದೆ.
*ಮಧ್ಯಮ ವರ್ಗದವರ ಗೃಹ ಸಾಲ ಪಡೆಯೋ ದರದಲ್ಲಿ ಇಳಿಕೆ ಕಂಡುಬಂದಿದೆ. ಗೃಹಸಾಲಗಳಲ್ಲಿ 2018ನೇ ಮಾರ್ಚ್ ನಲ್ಲಿ 13.3%, 2019 ಮಾರ್ಚ್ ನಲ್ಲಿ21.1%, 2020 ಮಾರ್ಚ್ ನಲ್ಲಿ13.3% ಹಾಗೂ 2021 ಮಾರ್ಚ್ನಲ್ಲಿ 9.1 % ಬೆಳವಣಿಗೆ ಕಂಡುಬಂದಿದೆ. 
*2022ನೇ ಆರ್ಥಿಕ ಸಾಲಿನಲ್ಲಿ ಹೂಡಿಕೆಯಲ್ಲಿ ಗಣನೀಯ ಪ್ರಗತಿ ದಾಖಲಾಗಲಿದೆ.  15% ಪ್ರಗತಿ ದರ ದಾಖಲಾಗೋ ನಿರೀಕ್ಷೆಯಿದೆ. 

click me!