2022ರ ಕೇಂದ್ರ ಬಜೆಟ್‌ನಲ್ಲಿ ತಂತ್ರಜ್ಞಾನ ವಲಯಕ್ಕೆ ಹಲವು ಕೊಡುಗೆ ನೀಡಲಾಗಿದೆ. ಇತರ ಕ್ಷೇತ್ರಗಳ ಜತೆ ತಂತ್ರಜ್ಞಾನ ಕ್ಷೇತ್ರವೂ ಹೆಚ್ಚು ಗಮನ ಸೆಳೆದಿದೆ.
ನವದೆಹಲಿ (ಫೆ. 01): ಬಹುನಿರೀಕ್ಷಿತ ಕೇಂದ್ರ ಬಜೆಟನ್ನು (Union Budget 2022) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಫೆ.1) ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡಿಸಿದ್ದಾರೆ. ಕೋವಿಡ್ 19 ಮಹಾಮಾರಿ ದೇಶಾದ್ಯಂತ ತಂತ್ರಜ್ಞಾನ ಮತ್ತು ಡಿಜಿಟಲ್ ಅಳವಡಿಕೆಯನ್ನು ವೇಗಗೊಳಿಸಿದ್ದು, ಇದು ಅತಿ ವೇಗದಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತಂತ್ರಜ್ಞಾನ ವಲಯಕ್ಕೆ ಹಲವು ಕೊಡುಗೆ ನೀಡಲಾಗಿದೆ. ಇತರ ಕ್ಷೇತ್ರಗಳ ಜತೆ ತಂತ್ರಜ್ಞಾನ ಕ್ಷೇತ್ರ ಕೂಡ ಹೆಚ್ಚು ಗಮನ ಸೆಳೆದಿದೆ.
ಈ ವರ್ಷ 5G ಹರಾಜು ಸೇರಿದಂತೆ ಇ-ಪಾಸ್‌ಪೋರ್ಟ್, ಇ-ಬ್ಯಾಂಕಿಂಗ್ ಕ್ಷೆತ್ರಕ್ಕೆ ಹಲವು ಕೂಡುಗೆಗಳನ್ನು ನೀಡಲಾಗಿದೆ. ದೇಶದಲ್ಲಿ ಸುಮಾರು 75% ಜಾಗತಿಕ ಡಿಜಿಟಲ್ ಪ್ರತಿಭೆಗಳೊಂದಿಗೆ ಭಾರತವು ವಿಶ್ವದ ಡಿಜಿಟಲ್ ಸಾಮರ್ಥ್ಯದ ಕೇಂದ್ರವಾಗಿದೆ. ಭಾರತದಲ್ಲಿ ಪ್ರಸ್ತುತ ಇಂಟರ್ನೆಟ್ ಚಂದಾದಾರರ ಸಂಖ್ಯೆ ಸುಮಾರು 750 ಮಿಲಿಯನ್ ಆಗಿದ್ದು, 2025 ರ ವೇಳೆಗೆ 900 ಮಿಲಿಯನ್‌ಗೆ ಬೆಳೆಯುವ ನಿರೀಕ್ಷೆಯಿದೆ. ಭಾರತ ಡಿಜಿಟಲ್ ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ಬೆಳವಣಿಗೆಯನ್ನು ಮುಂದುವರೆಸಿದೆ. ಕೇಂದ್ರ ಬಜೆಟ್‌ನಲ್ಲಿ ಈ ವರ್ಷ ಟೆಕ್ ವಲಯಕ್ಕೆ ಸಿಕ್ಕ ಕೊಡುಗೆಗಳ ಡಿಟೇಲ್ಸ್ ಇಲ್ಲಿದೆ.
undefined
Budget 2022 LIVE ಇಲ್ಲಿ ವಿಕ್ಷೀಸಿ!
2022-23ರಲ್ಲಿ 5G ತರಂಗ ಹರಾಜು: 5G ಸೇವೆ ಪ್ರಸ್ತುತ ವಿಶ್ವದಲ್ಲಿ ಕೇವಲ 60 ದೇಶಗಳಲ್ಲಿ ಲಭ್ಯವಿದ್ದು, ಈ ಪಟ್ಟಿಗೆ ಶೀಘ್ರವೇ ಭಾರತವೂ ಸೇರ್ಪಡೆಯಾಗಲಿದೆ. 2022-23 ರ ವೇಳೆಗೆ ಭಾರತದಲ್ಲಿ 5G ಸೇವೆ ಆರಂಭಿಸಲಾಗವುದು ಎಂದು ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ತಿಳಿಸಿದ್ದಾರೆ. ಖಾಸಗಿ ಟೆಲಿಕಾಂ ಕಂಪನಿಗಳಿಂದ 5G ಮೊಬೈಲ್ ಸೇವೆಗಳನ್ನು ನೀಡಲು ಅನುಕೂಲವಾಗುವಂತೆ, ಅಗತ್ಯವಿರುವ ಸ್ಪೆಕ್ಟ್ರಮ್ ಹರಾಜುಗಳನ್ನು 2022ರಲ್ಲೇ ನಡೆಸಲಾಗುವುದು ಎಂದು ಸೀತಾರಾಮನ್ ತಿಳಿಸಿದ್ದಾರೆ.
ಎಂಬೆಡೆಡ್ ಚಿಪ್‌ನೊಂದಿಗೆ ಇ-ಪಾಸ್‌ಪೋರ್ಟ್: ಎಂಬೆಡೆಡ್ ಚಿಪ್ ತಂತ್ರಜ್ಞಾನದೊಂದಿಗೆ ಸರ್ಕಾರ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನಗ ಘೋಷಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಇ-ಪಾಸ್‌ಪೋರ್ಟ್‌ಗಳು ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ ಮತ್ತು ರೇಡಿಯೊ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಮತ್ತು ಬಯೋಮೆಟ್ರಿಕ್‌ಗಳನ್ನು ಬಳಸುತ್ತವೆ.
ಇದನ್ನೂ ಓದಿ: Union Budget 2022 ಆಟೋ ಕ್ಷೇತ್ರಕ್ಕೆ ಬ್ಯಾಟರಿ ಸ್ವ್ಯಾಪ್ ನೀತಿ, ಎಲೆಕ್ಟ್ರಿಕ್ ವಾಹನ ನಿರ್ವಹಣೆ ಮತ್ತಷ್ಟು ಅಗ್ಗ!
ಆಪ್ಟಿಕಲ್ ಫೈಬರ್ ಸಂಪರ್ಕ: ದೇಶದ ಪ್ರತಿ ಮೂಲೆಗೂ ಇಂಟರ್‌ನೆಟ್ ಸೇವೆ ಒದಗಿಸಲು ನಿಟ್ಟಿನಲ್ಲಿ ಆಪ್ಟಿಕಲ್ ಫೈಬರ್ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಬ್ರಾಡ್‌ಬ್ಯಾಂಡ್, ಇಂಟರ್ ನೆಟ್ ಸೇವೆ ನೀಡಲಾಗುವುದು. 2025ರೊಳಗೆ ಪ್ರತಿ ಗ್ರಾಮಕ್ಕೂ ಇಂಟರ್‌ನೆಟ್ ನೀಡುವ ಗುರಿಯೊಂದಿಗೆ ಯೋಜನೆ ಸಿದ್ಧಪಡಿಸಲಾಗುವುದು ಎಂದು ಸೀತಾರಾಮನ್ ತಿಳಿಸಿದ್ದಾರೆ.
ಬ್ಲಾಕ್‌ಚೈನ್ ಆಧಾರಿತ ಡಿಜಿಟಲ್ ಕರೆನ್ಸಿ: 2022-23ರಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನ (Block Chain) ಬಳಸಿ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ್ (Rserve Bank Of India) ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಆರ್‌ಬಿಐ ಡಿಜಿಟಲ್ ಕರೆನ್ಸಿ ಮೂಲಕ ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಮಾದರಿಯಲ್ಲಿ ನಮ್ಮದೇ ಆದೇ ಆದ ಡಿಜಿಟಲ್ ಕರೆನ್ಸಿ ಜಾರಿಗೊಳಿಸಲು ಸಾಧ್ಯವಾಗಲಿದೆ.
ವರ್ಚುವಲ್ ಡಿಜಿಟಲ್ ಆಸ್ತಿಯ ಮೇಲೆ ತೆರಿಗೆ: ಯಾವುದೇ ಡಿಜಿಟಲ್ ವಸ್ತುಗಳ ವರ್ಗಾವಣೆ ಮೂಲಕ ಗಳಿಸಿದ ಆದಾಯದ ಮೇಲೆ 30% ತೆರಿಗೆ ವಿಧಿಸಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ. ವರ್ಚುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆಯಿಂದ ನಷ್ಟವನ್ನು ಯಾವುದೇ ಇತರ ಆದಾಯದ ವಿರುದ್ಧ ಹೊಂದಿಸಲಾಗುವುದಿಲ್ಲ.ಅಂತಹ ಸ್ವತ್ತುಗಳ ಉಡುಗೊರೆಯನ್ನು ಸ್ವೀಕರಿಸುವವರ ಕೈಯಿಂದ ತೆರಿಗೆ ವಿಧಿಸಲಾಗುತ್ತದೆ. ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ವಹಿವಾಟುಗಳಿಗೆ 1% ಮೂಲದಲ್ಲಿ ಕಡಿತಗೊಳಿಸಿದ ತೆರಿಗೆ (TDS) ವಿಧಿಸಲಾಗುತ್ತದೆ.
ಇದನ್ನೂ ಓದಿ: Budget 2022: ಹುಸಿಯಾದ ನಿರೀಕ್ಷೆ, ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಯಾವುದೇ ಬದಲಾವಣೆ ಇಲ್ಲ
ತಂತ್ರಜ್ಞಾನದಲ್ಲಿ ದೇಶೀಯ ಉತ್ಪಾದನೆಯ: ಟ್ರಾನ್ಸ್‌ಫಾರ್ಮರ್‌ಗಳು, ಮೊಬೈಲ್ ಫೋನ್ ಚಾರ್ಜರ್‌ಗಳು ಮತ್ತು ಮೊಬೈಲ್ ಕ್ಯಾಮೆರಾದ ಕ್ಯಾಮೆರಾ ಲೆನ್ಸ್‌ಗಳ ಭಾಗಗಳ ತಯಾರಿಕೆಗೆ ಸುಂಕದ ರಿಯಾಯಿತಿಗಳನ್ನು ನೀಡಲಾಗುತ್ತದೆ. ಧರಿಸಬಹುದಾದ ವಸ್ತುಗಳು (Wearables), ಕೇಳಬಲ್ಲ (Hearable) ಮತ್ತು ಎಲೆಕ್ಟ್ರಾನಿಕ್ ಸ್ಮಾರ್ಟ್ ಮೀಟರ್‌ಗಳ ತಯಾರಿಕೆಗೆ ಅನುಕೂಲವಾಗುವಂತೆ ಕಸ್ಟಮ್ಸ್ ಸುಂಕದ ದರವನ್ನು ಸರಿಹೊಂದಿಸಲಾಗುವುದು.
ಡಿಜಿಟಲ್ ಬ್ಯಾಂಕಿಂಗ್‌ಗೆ ಪ್ರೋತ್ಸಾಹ: 75ನೇ ಸ್ವಾತಂತ್ರ್ಯೋತ್ಸವ ಬೆನಲ್ಲೇ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಯುನಿಟ್ಸ್ ಆರಂಭ ಮಾಡುವ ಮೂಲಕ ಬ್ಯಾಂಕಿಂಗ್ ಕ್ಷೇತ್ರಕ್ಕೆ ಪ್ರೋತ್ಸಾಹ . ಜತೆಗೆ 1.4ಲಕ್ಷ ಪೋಸ್ಟ್ ಆಫಿಸ್‌ಗಳ ಸ್ವರೂಪ ಬದಲಿಸಿ ಎಟಿಎಂ, ಡಿಜಿಟಲ್ ಬ್ಯಾಂಕಿಂಗ್ ಸೇವೆ ನೀಡಲಾಗುವುದು. ಪೋಸ್ಟ್ ಆಫೀಸ್‌ನಿಂದ್ ಬ್ಯಾಂಕ್ ಸ್ವರೂಪ ನೀಡುವ ಮೂಲಕ ಹಣ ವರ್ಗಾಯಿಸುವ ಸೇವೆ ನೀಡಲಾಗುವುದು.
ವಿದ್ಯಾರ್ಥಿಗಳಿಗೆ ಒನ್ ಕ್ಲಾಸ್ ಒನ್ ಟಿವಿ ಕಾರ್ಯಕ್ರಮ: ಕೊರೋನಾ ಕಾರಣಕ್ಕೆ ಶಿಕ್ಷಣದಿಂದ ವಂಚಿತ ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಲು ಶಾಲೆ ಮಕ್ಕಳಿಗೆ 'ಒನ್ ಕ್ಲಾಸ್- ಒನ್ ಟಿವಿ' ಕಾರ್ಯಕ್ರಮ ಆರಂಭಿಸಲಾಗುವುದು. 1ನೇ ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ 200 ಟಿವಿ ಚಾನೆಲ್ ಮೂಲಕ ಪರ್ಯಾಯ ಶಿಕ್ಷಣ ನೀಡಲಾಗುವುದು. ಈ ಬೆನಲ್ಲೇ ಸ್ಥಳೀಯ ಭಾಷೆಗಳಲ್ಲಿ ಡಿಜಿಟಲ್ ಪಠ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.