ತೀವ್ರ ಪೈಪೋಟಿ ಬೆನ್ನಲ್ಲೇ ರಾಯಲ್ ಎನ್‌ಫೀಲ್ಡ್ ಹೊಸ ಬೈಕ್ ಸ್ಕ್ರಾಮ್ 440 ಶೀಘ್ರದಲ್ಲೇ ಬಿಡುಗಡೆ!

By Suvarna News  |  First Published Jul 11, 2023, 4:02 PM IST

ಭಾರತದಲ್ಲಿ ರಾಯಲ್ ಎನ್‌‌ಫೀಲ್ಡ್ ಬೈಕ್‌ಗೆ ಪೈಪೋಟಿ ಹೆಚ್ಚಾಗಿದೆ. ಹಾರ್ಲೆ ಡೇವಿಡ್ಸನ್ ಕೂಡ ಭಾರತದಲ್ಲೇ ಉತ್ಪಾದನೆ ಆರಂಭಿಸಿದೆ. ಜಾವಾ, ಯೆಜೆಡಿ, ಹೋಂಡಾ ಸೇರಿದಂತೆ ಹಲವು ಬ್ರ್ಯಾಂಡ್‌ಗಳು ಹೊಸ ಹೊಸ ಬೈಕ್ ಬಿಡುಗಡೆ ಮಾಡಿ ಪೈಪೋಟಿ ನೀಡುತ್ತಿದೆ. ಇದಕ್ಕೆ ಪ್ರತಿಯಾಗಿ ರಾಯಲ್ ಎನ್‌ಫೀಲ್ಡ್ ಹೊಚ್ಚ ಹೊಸ ಸ್ಕ್ರಾಮ್ 440 ಬೈಕ್ ಬಿಡುಗಡೆಗೆ ಸಜ್ಜಾಗಿದೆ. 


ಚೆನ್ನೈ(ಜು.11) ರಾಯಲ್ ಎನ್‌ಫೀಲ್ಡ್ ಬೈಕ್ ಎಲ್ಲಾ ಕಡೆಯಿಂದ ಪೈಪೋಟಿ ಎದುರಾಗಿದೆ. ಇತ್ತೀಚೆಗೆ ಹಾರ್ಲೆ ಡೇವಿಡ್ಸನ್ ಭಾರತದಲ್ಲೇ ಉತ್ಪಾದನೆ ಆರಂಭಿಸಿ ಹೊಸ ಬೈಕ್ ಬಿಡುಗಡೆ ಮಾಡಿದೆ. ಟ್ರಿಯಂಪ್ ಕೂಡ ಭಾರತದಲ್ಲಿ ಹೊಸ ಹೊಸ ಬೈಕ್ ಬಿಡುಗಡೆ ಮಾಡಿದೆ.ಜಾವಾ, ಯೆಜೆಡಿ, ಹೋಂಡಾ ಸೇರಿದಂತೆ ಹಲವು ಕಂಪನಿಗಳು ಇದೀಗ ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ ನೀಡುತ್ತಿದೆ. ಇದರ ನಡುವೆ ಈ ಎಲ್ಲಾ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಇದೀಗ ರಾಯಲ್‍ ಎನ್‌ಫೀಲ್ಡ್ ಸ್ಕ್ರಾಮ್ 440 ಬೈಕ್ ಬಿಡುಗಡೆ ಮಾಡುತ್ತಿದೆ.

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 440 ಬೈಕ್ ಹೊಸ ವಿನ್ಯಾಸದಲ್ಲಿ ಬಿಡುಗಡೆಯಾಗುತ್ತಿದೆ. ಬಾಬ್ ಸ್ಟೈಲ್ ಡಿಸೈನ್ ಹೊಂದಿರುವ ನೂತನ ಬೈಕ್ ಅತ್ಯಂತ ಆಕರ್ಷಕವಾಗಿದೆ. ಸ್ಕ್ರಾಮ್ 440 ಬೈಕ್ , ಹಿಮಾಲಯನ್ ಬೈಕ್‌ನಷ್ಟು ಪವರ್‌ಫುಲ್ ಅಲ್ಲ. ಸ್ಕ್ರಾಮ್  ಆಫ್ ರೋಡ್ ಬೈಕ್ ಅಲ್ಲ. ಸ್ಕ್ರಾಂಬ್ಲರ್ ಬೈಕ್‌ನಲ್ಲಿ ಕೈಗೆಟುಕುವ ದರದ ಬೈಕ್ ಇದಾಗಲಿದ್ದು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹೊಸ ಫೀಚರ್ಸ್ ಹೊಂದಿರಲಿದೆ.

Tap to resize

Latest Videos

undefined

ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೆಲೆ ಕೇವಲ 18,700 ರೂ ಮಾತ್ರ, 1986ರ ಬಿಲ್ ವೈರಲ್!

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ 440ಸಿಸಿ ಎಂಜಿನ್ ಹೊಂದಿದೆ. ಇದೀಗ ಹೊಸ ಸ್ಕ್ರಾಮ್ 440 ಕೂಡ ಇದೇ ಎಂಜಿನ್ ಬಳಕೆ ಮಾಡುವ ಸಾಧ್ಯತೆ ಇದೆ.ಈ ವರ್ಷದಲ್ಲೇ ನೂತನ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ ಬೈಕ್ ಬಿಡುಗಡೆಯಾಗಲಿದೆ. ರಾಯಲ್ ಎನ್‌ಫೀಲ್ಡ್ 350 ಸಿಸಿ ಎಂಜಿನ್ ಪ್ಲಾಟ್‌ಫಾರ್ಮ್ ಅಡಿ ರಾಯಲ್ ಎನ್‌ಪೀಲ್ಡ್ ಕ್ಲಾಸಿಕ್, ಹಂಟರ್, ಮೆಟೆಯೋರ್, ಬುಲೆಟ್ ಬೈಕ್‌ಗಳಿವೆ. ಇನ್ನು 450 ಸಿಸಿ ಪ್ಲಾಟ್‌ಫಾರ್ಮ್ ಅಡಿ ಸದ್ಯ ಹಿಮಾಲಯನ್ ಬೈಕ್ ಮಾರುಕಟ್ಟೆಯಲ್ಲಿದೆ. ಇದೀಗ ಈ ಸಾಲಿಗೆ ಸ್ಕ್ರಾಮ್ ಕೂಡ ಸೇರಿಕೊಳ್ಳಲಿದೆ. ಇನ್ನು ಆರ್ ಪ್ಲಾಟ್‌ಫಾರ್ಮ್ ಅಡಿಯಲಲ್ಲಿ 750 ಸಿಸಿ ಬೈಕ್ 2025ಕ್ಕೆ ಬಿಡುಗಡೆ ಮಾಡಲು ರಾಯಲ್ ಎನ್‌ಫೀಲ್ಡ್ ನಿರ್ಧರಿಸಿದೆ.

ನೂತನ ಸ್ಕ್ರಾಮ್ ಬೈಕ್ ಬೆಲೆ 1.5 ಲಕ್ಷ ರೂಪಾಯಿಂದ 2.5 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಅಂದಾಜಿಸಲಾಗಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಬೆಲೆ 2.15 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.

ರಾಯಲ್ ಎನ್‌ಫೀಲ್ಡ್ ಈಗಾಗಲೇ ತನ್ನ ಹಲವು ಬೈಕ್‌ಗಳನ್ನು ಅಪ್‌ಗ್ರೇಡ್ ಮಾಡಿದೆ. ಇತ್ತೀಚೆಗೆ ಹಿಮಾಲಯನ್ ಹೊಸ ಬಣ್ಣದಲ್ಲಿ ಬಿಡುಗಡೆಯಾಗಿತ್ತು.  ಗ್ರೇಶಿಯರ್‌ ಬ್ಲ್ಯೂ, ಸ್ಲೀಟ್‌ ಬ್ಲ್ಯಾಕ್‌ ಮತ್ತು ಬ್ರೌನ್‌ ಬಣ್ಣಗಳಲ್ಲಿ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಮಾರುಕಟ್ಟೆಗೆ ಬಂದಿದೆ.  

 

ಕೈಗೆಟುಕುವ ದರ, ಸಿಟಿ ಹಾಗೂ ಲಾಂಗ್ ರೈಡ್‌ಗೂ ಸೈ ಎನಿಸುವ ನೂತನ ರಾಯಲ್ ಎನ್‌ಫೀಲ್ಡ್ ಹಂಟರ್ ಬೈಕ್ ಲಾಂಚ್!

ಕಳೆದ ವರ್ಷದ  ರಾಯಲ್‌ ಎನ್‌ಫೀಲ್ಡ್‌ ಹಂಟರ್‌ 350 ಬೈಕ್ ಬಿಡುಗಡೆ ಮಾಡಿತ್ತು. ಈ ಬೈಕಿನ ಆರಂಭಿಕ ಬೆಲೆ ರು.1,49,990.(ಎಕ್ಸ್‌ ಶೋರೂಮ್‌) ಎನ್‌ಫೀಲ್ಡ್‌ ಕಂಪನಿ ಜೆ ಸರಣಿಯ ಇಂಜಿನ್‌ ಅನ್ನು 350 ಸಿಸಿ ವಿಭಾಗಕ್ಕೆಂದೇ ಸಿದ್ಧಪಡಿಸಿ ಆಗಾಗ ಮಾರ್ಪಡಿಸುವುದಿದೆ. ಈಗಾಗಲೇ ಬಂದಿರುವ ಕ್ಲಾಸಿಕ್‌ 350 ಮತ್ತು ಮಿಟಿಯೋರ್‌ 350 ಈ ಜೆ ಸೀರೀಸ್‌ ಇಂಜಿನ್ನಿನ ಹಿರಿಯರು. ಹಂಟರ್‌ 350 ಅದೇ 350 ಸಿಸಿ ಇಂಜಿನ್ನಿನ ಸುಧಾರಿತ ರೂಪ. ತನ್ನ ಹಿರಿಯರಂತೆ ಇಂಜಿನ್‌ ಹೊಂದಿದ್ದರೂ ಸ್ಟೈಲ್‌ನಲ್ಲಿ, ಸ್ವರೂಪದಲ್ಲಿ, ಶಕ್ತಿಯಲ್ಲಿ ಮಾತ್ರ ಹಂಟರ್‌ ಭಿನ್ನ. 

ಈ ಬೈಕಿನ ಭಾರ 181 ಕೆಜಿ. ಉಳಿದಿಬ್ಬರಿಗಿಂತ ಬಹುತೇಕ 14 ಕೆಜಿ ಕಡಿಮೆ ತೂಕ. ಇದರ ಸೀಟಿನ ಎತ್ತರ 790 ಎಂಎಂ. ಹಿರಿಯರಿಗಿಂತ ಕುಳ್ಳ. ಹೈಟು ಜಾಸ್ತಿ ಇದ್ದರೂ ಕಡಿಮೆ ಇದ್ದರೂ ವ್ಯತ್ಯಾಸವೇನೂ ಆಗುವುದಿಲ್ಲ. ಸಮಾಧಾನಕರವಾಗಿ ಕುಳಿತು ಬೈಕು ಓಡಿಸಬಹುದು. ಜಾಸ್ತಿ ಭಾರವಿಲ್ಲದಿದ್ದರಿಂದ ಭಯವೂ ಕಡಿಮೆ. ಆ ಕಾರಣಕ್ಕೇನೇ ಹಂಟರ್‌ ಹೊಸ ರೈಡರ್‌ಗಳ ಪಾಲಿನ ಹಾಟ್‌ ಫೇವರಿಟ್‌.

click me!