NIJ ಎಕ್ಸಲೆರೋ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, 53 ಸಾವಿರ ರೂ, 190 ಕಿ.ಮೀ ಮೈಲೇಜ್!

Published : Mar 20, 2022, 09:25 PM IST
NIJ ಎಕ್ಸಲೆರೋ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, 53 ಸಾವಿರ ರೂ, 190 ಕಿ.ಮೀ ಮೈಲೇಜ್!

ಸಾರಾಂಶ

ಭಾರತದ ಮಾರುಕಟ್ಟೆಗೆ ಮತ್ತೊಂದು ಲಾಂಗ್ ರೇಂಜ್ ಸ್ಕೂಟರ್ NIJ ಎಕ್ಸಲೆರೋ ಪ್ಲಸ್ ಎಲೆಕ್ಟ್ರಿಕ್ 3 ವೇರಿಯೆಂಟ್‌ನಲ್ಲಿ ಲಭ್ಯ 190 ಕಿ.ಮೀ ಮೈಲೇಜ್ ನೀಡಬಲ್ಲ ಅತ್ಯಾಧಿನಿಕ ತಂತ್ರಜ್ಞಾನದ ಸ್ಕೂಟರ್

ನವದೆಹಲಿ(ಮಾ.20): ಭಾರತದಲ್ಲಿ ಅತೀ ಹೆಚ್ಚು ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಇದೀಗ NIJ ಆಟೋಮೇಟಿವ್ ಕಂಪನಿ ಇದೀಗ NIJ ಎಕ್ಸಲೆರೋ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಬೆಲೆ 53,000 ರೂಪಾಯಿಂದ ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 98,000 ರೂಪಾಯಿ(ಎಕ್ಸ್ ಶೋ ರೂಂ).

ಕೈಗೆಟುಕವ ದರದಲ್ಲಿ NIJ ಆಟೋಮೇಟಿವ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಮತ್ತೊಂದು ವಿಶೇಷತೆ ಅಂದರೆ ಮೈಲೇಜ್. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 190 ಕಿ.ಮೀ ಮೈಲೇಜ್ ನೀಡಲಿದೆ. ಇದು ಇಕೋ ಮೂಡ್‌ನಲ್ಲಿ ರೈಡ್ ಮಾಡಿದಾಗ ಈ ರೇಂಜ್ ಸಿಗಲಿದೆ. ಇನ್ನು ಸಿಟಿ ಮೂಡ್‌ನಲ್ಲಿ 140 ಕಿ.ಮೀ ಮೈಲೇಜ್ ಸಿಗಲಿದೆ ಎಂದು NIJ ಹೇಳಿದೆ.

NIJ ಎಕ್ಸಲೆರೋ ಪ್ಲಸ್ ಸ್ಕೂಟರ್‌ನಲ್ಲಿ ಮೂರು ವೇರಿಯೆಂಟ್ ಲಭ್ಯವಿದೆ. 1.5 Kw (48V), 1.5 Kw (60V) ಹಾಗೂ 3 Kw(48V) ಡ್ಯುಯೆಲ್ ಬ್ಯಾಟರಿ ಸೆಟ್ಅಪ್ ವೇರಿಯೆಂಟ್ ಲಭ್ಯವಿದೆ. ಇದೀಗ ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಸ್ಕೂಟರ್ ಭಾರತದ  ಮಾರುಕಟ್ಟೆಯಲ್ಲಿ ಹೊಸ ಸಂಚನ ಸೃಷ್ಟಿಸುತ್ತಿದೆ. NIJ ಎಕ್ಸಲೆರೋ ಪ್ಲಸ್ ಸ್ಕೂಟರ್ ಬುಕಿಂಗ್ ಮಾಡಲು ಗ್ರಾಹಕರು ಆಸಕ್ತಿ ತೋರುತ್ತಿದ್ದಾರೆ.

ಹೋಳಿ ಹಬ್ಬಕ್ಕೆ ಓಲಾ S1 ಪ್ರೋ ಗೆರುವಾ ಎಡಿಶನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

ಭಾರತದಲ್ಲಿ ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಕಾರುಗಳ ಚಾರ್ಜಿಂಗ್ ಮಾಡಲು ಕೇಂದ್ರಗಳ ಸ್ಥಾಪನೆಯಾಗುತ್ತಿದೆ. ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಇ-ಸ್ಕೂಟರ್‌ ಚಾಜ್‌ರ್‍ ಮಾಡಲು 1000 ಕೇಂದ್ರ ಸ್ಥಾಪನೆಗೆ ಒಪ್ಪಂದ
ರಾಜ್ಯದಲ್ಲಿ ವಿದ್ಯುತ್‌ ದ್ವಿಚಕ್ರ ವಾಹನಗಳಿಗೆ ಒಂದು ಸಾವಿರ ತ್ವರಿತ ಚಾರ್ಜಿಂಗ್‌ ಸೌಲಭ್ಯ ಸ್ಥಾಪಿಸಲು ಎಥರ್‌ ಎನರ್ಜಿ ಮತ್ತು ಎಸ್ಕಾಂಗಳ ನಡುವೆ ಒಪ್ಪಂದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಸಹಿ ಮಾಡಲಾಯಿತು. ಚಾರ್ಜಿಂಗ್‌ ಸೌಲಭ್ಯಗಳಿಗೆ ಅಗತ್ಯ ತಾಂತ್ರಿಕ ಬೆಂಬಲವನ್ನು ಎಸ್ಕಾಂಗಳು ನೀಡಲಿದ್ದು, ಸರ್ಕಾರಿ ಸಂಸ್ಥೆಗಳು ಈ ಸೌಲಭ್ಯ ಸ್ಥಾಪನೆಗೆ ಸ್ಥಳಾವಕಾಶ ಒದಗಿಸಲು ಎಸ್ಕಾಂಗಳೊಂದಿಗೆ ಸಮನ್ವಯ ವಹಿಸಲಿವೆ. ಎಥರ್‌ ಎನರ್ಜಿ ಕಂಪನಿಯು ವಿದ್ಯುತ್‌ ದ್ವಿಚಕ್ರ ವಾಹನಗಳಿಗೆ ಉಚಿತವಾಗಿ ಚಾರ್ಜಿಂಗ್‌ ಸೌಲಭ್ಯ ಕಲ್ಪಿಸಲಿದೆ.

ಭಾರತದಲ್ಲಿ 4 ಹೊಸ ಇವಿ ಉತ್ಪಾದನಾ ಘಟಕ ಸ್ಥಾಪಿಸಲಿದೆ ಹೀರೋ ಎಲೆಕ್ಟ್ರಿಕ್!

ಎಥರ್‌ ಎನರ್ಜಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ತರುಣ್‌ ಮೆಹ್ತಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಈ ಒಪ್ಪಂದಕ್ಕೆ ಸಹಿ ಮಾಡಿದರು. ಶಾಸಕ ಅರವಿಂದ ಬೆಲ್ಲದ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ್‌ ಇತರರು ಉಪಸ್ಥಿತರಿದ್ದರು.

ಎಲೆಕ್ಟ್ರಿಕ್‌ ಸ್ಕೂಟರ್‌ ಬಳಿಕ ಓಲಾ ಬೈಕ್‌, ಕಾರುಗಳು ಮಾರುಕಟ್ಟೆಗೆ: ಭವೀಶ್‌
ಕೇವಲ 2 ದಿನಗಳಲ್ಲಿ ಆನ್‌ಲೈನ್‌ ಮುಖಾಂತರ ಭರ್ಜರಿ 1100 ಕೋಟಿ ರು. ಮೌಲ್ಯದ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಮಾರಾಟ ದಾಖಲಿಸಿದ ಬೆಂಗಳೂರಿನ ಓಲಾ ಕಂಪನಿ, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್‌ ಬೈಕ್‌ ಮತ್ತು ಕಾರು ಉತ್ಪಾದನಾ ಕ್ಷೇತ್ರಕ್ಕೂ ಲಗ್ಗೆ ಇಡಲು ಮುಂದಾಗಿದೆ. ಶೀಘ್ರವೇ ಎಲೆಕ್ಟ್ರಿಕ್‌ ಬೈಕ್‌ ಮತ್ತು ಇ-ಕಾರುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಓಲಾ ಕಂಪನಿ ಸಿಇಒ ಭವೀಷ್‌ ಅಗರ್‌ವಾಲ್‌ ಹೇಳಿದ್ದಾರೆ. ಈ ಸಂಬಂಧ ಗುರುವಾರ ಬೆಳಗ್ಗೆ ಟ್ವೀಟರ್‌ನಲ್ಲಿ ತಮ್ಮ ಬ್ಲಾಗ್‌ ಪೋಸ್ಟ್‌ ಹಂಚಿಕೊಂಡಿರುವ ಭವೀಷ್‌ ಅವರು, ನಾವು ಈಗಾಗಲೇ ಅತ್ಯುತ್ತಮ ಗುಣಮಟ್ಟದ ಎಸ್‌-1 ಹೆಸರಿನ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ನಿರ್ಮಾಣ ಮಾಡಿದ್ದೇವೆ. ಮುಂದಿನ ತ್ರೈಮಾಸಿಕಗಳಲ್ಲಿ ನಾವು ಹೆಚ್ಚು ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಜತೆಗೆ ಬೈಕ್‌ ಮತ್ತು ಕಾರುಗಳನ್ನು ಉತ್ಪಾದಿಸುತ್ತೇವೆ. ಪರಿಸರಕ್ಕೆ ಹಾನಿಕಾರಕವಾದ ಸಾಂಪ್ರದಾಯಿಕ ವಾಹನಗಳು ಅಪ್ರಸ್ತುತವಾಗಿವೆ. ಆದರೆ ಓಲಾದ ಎಲೆಕ್ಟ್ರಿಕ್‌ ವಾಹನಗಳು ಸ್ಮಾರ್ಟ್‌ ಆಗಿವೆ ಎಂದು ಹೇಳಿದ್ದಾರೆ.

PREV
Read more Articles on
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್