ನೂತನ ಹೀರೋ Xtreme 160R 4V ಬೈಕ್ ಬಿಡುಗಡೆ, ಬೆಲೆ ಕಡಿಮೆ, ಹೆಚ್ಚು ಮೈಲೇಜ್!

By Suvarna News  |  First Published Jun 16, 2023, 7:50 PM IST

ಸ್ಪೋರ್ಟಿ ನೋಟ ಮತ್ತು ಸ್ಮಾರ್ಟ್-ಟೆಕ್‌ನ ಹೊಚ್ಚ ಹೊಸ ಹೀರೋ Xtreme 160R 4V  ಬೈಕ್ ಬಿಡುಡೆಯಾಗಿದೆ. ಆಧುನಿಕ ತಂತ್ರಜ್ಞಾನದ ಈ ಬೈಕ್ ಕೈಗೆಟುಕುವ ದರದಲ್ಲಿ ಲಭ್ಯವಿದೆ. ಜೊತೆಗೆ ಅತ್ಯುತ್ತಮ ಪರ್ಫಾಮೆನ್ಸ್ ನೀಡಲಿದೆ.


ಬೆಂಗಳೂರು(ಜೂ.16): ಹೀರೋ ಮೋಟೋಕಾರ್ಪ್ ಆಕರ್ಷಕ ವಿನ್ಯಾಸ , ಹೈ ಪರ್ಫಾಮೆನ್ಸ್ ಜೊತೆಗೆ ಕೈಗೆಟುವ ಬೆಲೆಯಲ್ಲಿ ಬೈಕ್ ಬಿಡುಗಡೆ ಮಾಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೀರೋ ಈಗಾಲೇ ತನ್ನ ಬೈಕ್‌ಗಳನ್ನು ಅಪ್‌ಗ್ರೇಡ್ ಮಾಡಿದೆ. ಇದೀಗ ಹೀರೋ ಹೊಚ್ಚ ಹೊಸ Xtreme 160R 4V ಬೈಕ್ ಬಿಡುಗಡೆ ಮಾಡಿದೆ.  ಸ್ಟಾಂಡರ್ಡ್, ಕನೆಕ್ಟೆಡ್ ಹಾಗೂ ಪ್ರೋ ಎಂಬ ಮೂರು ವೇರಿಯೆಂಟ್‌ನಲ್ಲಿ ನೂತನ ಬೈಕ್ ಬಿಡುಗಡೆಯಾಗಿದೆ. ಜೈಪುರದಲ್ಲಿರುವ ಹೀರೋ ಮೋಟೋಕಾರ್ಪ್‌ನ ಅತ್ಯಾಧುನಿಕ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವಾದ ಸೆಂಟರ್ ಆಫ್ ಇನೋವೇಶನ್ ಅಂಡ್ ಟೆಕ್ನಾಲಜಿ (CIT)ಯಲ್ಲಿ ಅನಾವರಣಗೊಂಡ Xtreme 60R 4V  ಹಲವು ವಿಶೇಷತೆ ಹೊಂದಿದೆ. ಎಂಜಿನ್ ಪರ್ಫಾಮೆನ್ಸ್, ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ ಸಂಪರ್ಕಗೊಂಡ ಅಂಶಗಳು ಹಾಗೂ ಚುರುಕಾದ ನಿಯಂತ್ರಣದ ಸರಿಸಾಟಿಯಿಲ್ಲದ ಪ್ಯಾಕೇಜ್ ಒದಗಿಸುತ್ತದೆ.  

ನೂತನ Xtreme 160R, ಕ್ರಮವಾಗಿ 1,27,300 ರೂಪಾಯಿ (ಸ್ಟ್ಯಾಂಡರ್ಡ್), 1,32,800 ರೂಪಾಯಿ (ಕನೆಕ್ಟೆಡ್ 2.0) ಮತ್ತು136,500 ರೂಪಾಯಿ(Pro)ಗಳ ಆಕರ್ಷಕ ದರದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.  ಹೊಸ Xtreme 160R 4V,ಅದ್ವಿತೀಯವಾದ ನಿಖರತೆ ಒದಗಿಸುತ್ತದೆ. KYB (Pro ವೈವಿಧ್ಯದಲ್ಲಿ)ದ ವರ್ಗದಲ್ಲೇ ಅತ್ಯುತ್ತಮವಾದ 37mm ಡಯಾ ಇನ್ವರ್ಟೆಡ್ ಫ್ರಂಟ್ ಫೋರ್ಕ್ ಸಸ್ಪೆನ್ಶನ್ ಮತ್ತು 7-ಹೆಜ್ಜೆಗಳ ಪ್ರೀ-ಲೋಡ್ ಸರಿಪಡಿಸಬಹುದಾದ ಹಿಂಬದಿ ಸಸ್ಪೆನ್ಶನ್‌ನೊಂದಿಗೆ ಅದು ಆರಾಮ ಮತ್ತು ನಿಯಂತ್ರಣದ ವಿಶಿಷ್ಟ ಸಮತೋಲನ ಒದಗಿಸುತ್ತದೆ. ಪರಿಷ್ಕೃತ ಜ್ಯಾಮಿತಿಯೊಂದಿಗೆ ವೇಗ ಮತ್ತು ಚಲನಶೀಲತೆಯನ್ನು ವರ್ಧಿಸುವುದಕ್ಕಾಗಿ ಇಂಜಿನಿಯರ್ ಮಾಡಲಾದ ಈ ಮೋಟಾರು ಸೈಕಲ್, ಚುರುಕಾದ ಹ್ಯಾಂಡ್ಲಿಂಗ್ ಒದಗಿಸುವ ಮೂಲಕ ರಸ್ತೆಗಳು ಹಾಗೂ ಅಧಿಕ ವೇಗಗಳಲ್ಲಿ ಅಂಚುಗಳಲ್ಲಿ ಚಲಿಸುವಾಗ ಅತ್ಯಂತ ದೃಢವಾಗಿರುವ ಭಾವ ಒದಗಿಸುತ್ತದೆ.144 kg (Base & Connected 2.0 ವೈವಿಧ್ಯ) ಮತ್ತು145Kg (Pro ವೈವಿಧ್ಯ)ದ ವರ್ಗದಲ್ಲೇ ಅತಿ-ಕಡಿಮೆ ಕರ್ಬ್ ತೂಕ ಮತ್ತು ಶಕ್ತಿಶಾಲಿಯಾದ ಪೆಟಲ್ ಡಿಸ್ಕ್ ಬ್ರೇಕ್‌ಗಳನ್ನು ಈ ಮೋಟಾರು ಸೈಕಲ್ ಹೊಂದಿದೆ. 

Latest Videos

undefined

 

ಕಡಿಮೆ ಬೆಲೆ, ಹೊಸ ಅವತಾರದಲ್ಲಿ ಐಕಾನಿಕ್ ಪ್ಯಾಶನ್ ಪ್ಲಸ್ ಬೈಕ್ ಬಿಡುಗಡೆ!

ತನ್ನ ತಂತ್ರಜ್ಞಾನ-ಭರಿತ ಅಂಶಗಳೊಂದಿಗೆ Xtreme 160R 4V, ಆನುಕೂಲತೆಯ ಅಂಶಗಳಲ್ಲಿ ಅಧಿಕ ಶ್ರೇಯಾಂಕಗಳನ್ನು ಪಡೆದುಕೊಂಡು ವಿಸ್ತರಿತ ದೂರಗಳಲ್ಲೂ ಕೂಡ ಆರಾಮದಾಯಕ ಸವಾರಿಯನ್ನು ಖಾತರಿಪಡಿಸುತ್ತದೆ. ಎಲ್ಲವೂ LED ಪ್ಯಾಕೇಜ್ Xtreme 160R 4Vಗೆ, ಅದರ ನಿಚ್ಚಳವಾದ ಸ್ಪೋರ್ಟಿ-ಚುರುಕಾದ ನೋಟ ಒದಗಿಸುತ್ತದೆ. ಈ LED, ಪೊಸಿಶನ್ ಲ್ಯಾಂಪ್, ಲೋಬೀಮ್, ಹೈಬೀಮ್, ಟೇಲ್ ಲ್ಯಾಂಪ್ ಮತ್ತು ವಿಂಕರ್‌ಗಳಿಗೆ ಅನ್ವಯವಾಗುತ್ತದೆ. 

ತಲೆಕೆಳಗಾಗಿರುವ ಸ್ಪೀಡೋಮೀಟರ್‌ನೊಂದಿಗೆ ಚಾಲಕರು ಎಲ್ಲವನ್ನೂ ಕಣ್ ದೃಷ್ಟಿಯಲ್ಲಿಟ್ಟುಕೊಂಡು ನಿಯಂತ್ರಿಸಬಹುದು. ಬ್ಲೂಟೂತ್ ಸ್ಟೇಟಸ್, ಬ್ಯಾಟರಿ ಹೆಲ್ತ್ ಸ್ಟೇಟಸ್, ಸರ್ವಿಸ್ ಅಲರ್ಟ್, ಗೇರ್ ಪೊಸಿಶನ್, ಎಬಿಎಸ್/ಇಂಜಿನ್ ಕಾರ್ಯವೈಫಲ್ಯ, ಕರೆ/ಎಸ್‌ಎಮ್‌ಎಸ್/ತಪ್ಪಿದಕರೆಗಳ ಅಲರ್ಟ್ ಇತ್ಯಾದಿ 20ಕ್ಕಿಂತ ಹೆಚ್ಚಿನ ಅಂಶಗಳ ಪ್ರದರ್ಶನದೊಂದಿಗೆ ಅದು ಬರುತ್ತದೆ. 

ಕಡಿಮೆ ಬೆಲೆಯಲ್ಲಿ ಬೆಸ್ಟ್ ಬೈಕ್, 60 ಸಾವಿರ ರೂ ಬೆಲೆಯ ಹೀರೋ HF ಡಿಲಕ್ಸ್ ಬ್ಲಾಕ್ ಬೈಕ್ ಬಿಡುಗಡೆ!

•    ಭದ್ರತೆ – ರಿಮೋಟ್ ಇಮ್ಮೊಬಿಲೈಜೇಶನ್, ಬಳಕೆದಾರರು, ಬೈಕ್‌ನ ವರ್ಧಿತ ಭದ್ರತೆಗಾಗಿ ದೂರದಿಂದಲೇ ವಾಹನವನ್ನುಮೊಬಿಲೈಜ್/ಇಮ್ಮೊಬಿಲೈಜ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಇದರ ಜೊತೆಗೆ, ಜಿಯೋಫೆನ್ಸ್ (Geo Fence)ಅಂಶವು, ವಾಹನವು ಪೂರ್ವ-ವಿವರಿತ ಭೌಗೋಳಿಕ ಪ್ರದೇಶಗಳಿಗೆ ಆಗಮಿಸಿದಾಗಲ್ಲೆಲ್ಲಾ ಅಥವಾ ಬಿಡುವಾಗಲೆಲ್ಲಾ ಒಂದು ಎಚ್ಚರಿಕೆ ಕಳುಹಿಸುತ್ತದೆ. ಹೆಚ್ಚುವರಿಯಾಗಿ, ಬಳಕೆದಾರರು ಆಪ್ ಮೇಲೆ, ಕಳವು ಎಚ್ಚರಿಕೆಗಳು ಹಾಗೂ ಬ್ಯಾಟರಿ ತೆಗೆಯುವಿಕೆಯ ಕುರಿತು ಎಚ್ಚರಿಕೆಗಳನ್ನು ಪಡೆದುಕೊಳ್ಳಬಹುದು. 
•    ಸುರಕ್ಷತೆ – ಸವಾರರು ಕಳುಹಿಸುವ SOS ಎಚ್ಚರಿಕೆಯು, ಆಪ್‌ನಲ್ಲಿ ಬಳಕೆದಾರರು ವಿವರಿಸಿರುವ ತುರ್ತುಸ್ಥಿತಿ ಕಾಂಟಾಕ್ಟ್‌ಗಳಿಗೆ ಸೂಚನೆ ಕಳುಹಿಸುತ್ತದೆ. ಇತರ ಸುರಕ್ಷತಾ ಎಚ್ಚರಿಕೆಗಳೆಂದರೆ, ಕಡಿಮೆ ಫ್ಯುಯೆಲ್, ಓವರ್ ಸ್ಪೀಡಿಂಗ್, ಟಾಪಲ್ ಇತ್ಯಾದಿ.  

click me!