ಭಾರತದಲ್ಲಿ ಹೊಸ ಹೊಸ ಬ್ರ್ಯಾಂಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಇದೀಗ ಜಿಟಿ ಫೋರ್ಸ್ ಕೈಗೆಟುಕುವ ದರದಲ್ಲಿ ಸ್ಕೂಟರ್ ಬಿಡುಗಡೆ ಮಾಡಿದೆ. ನೂತನ ಸ್ಕೋಟರ್ ವಿವರ ಇಲ್ಲಿದೆ.
ನವದೆಹಲಿ(ಸೆ.29): ಭಾರತದ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ವಿಸ್ತಾರಗೊಂಡಿದೆ. ಸ್ಟಾರ್ಟ್ ಅಪ್ ಕಂಪನಿಗಳು ಹೊಸ ಹೊಸ ಬ್ರ್ಯಾಂಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಗರಿಷ್ಠ ಮೈಲೇಜ್, ಕೈಗೆಟುಕುವ ದರ, ಅತೀ ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. ಇದೀಗ ಜಿಟಿ ಫೋರ್ಸ್ ಸ್ಟಾರ್ಟ್ ಅಪ್ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಜಿಟಿ ಫೋರ್ಸ್ ಮೂರು ವೇರಿಯೆಂಟ್ ಸ್ಕೂಟರ್ ಬಿಡುಗಡೆ ಮಾಡಿದೆ. ಈ ಸ್ಕೂಟರ್ ಬೆಲೆ 47,370 ರೂಪಾಯಿ(ಎಕ್ಸ್ ಶೋ ರೂಂ) ನಿಂದ ಆರಂಭಗೊಳ್ಳುತ್ತಿದೆ. ಲಿಥಿಯಂ ಐಯಾನ್, ಆ್ಯಸಿಡ್ ಸೇರಿದಂತೆ ಅತ್ಯಾಧುನಿಕ ಬ್ಯಾಟರಿ ಪ್ಯಾಕ್ ಹೊಂದಿರುವ ನೂತನ ಜಿಟಿ ಫೋರ್ಸ್ ಸ್ಕೂಟರ್ ಇದೀಗ ಭಾರತದಲ್ಲಿ ಕೈಟುಕುವ ದರದ ಎಲೆಕ್ಟ್ರಿಕ್ ಸ್ಕೂಟರ್ ಪಟ್ಟಿಗೆ ಸೇರಿಕೊಂಡಿದೆ.
ಜಿಟಿ ಸೋಲ್ ವೆಗಾಸ್
ಜಿಟಿ ಸೋಲ್ ವೆಗಾಸ್ ಆ್ಯಸಿಡ್ ಬ್ಯಾಟರಿ ಸ್ಕೂಟರ್ ಬೆಲೆ 47,370 ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ ಸ್ಕೂಟರ್ ಬೆಲೆ 63,461 ರೂಪಾಯಿ(ಎಕ್ಸ್ ಶೋ ರೂಂ). ಆ್ಯಸಿಡ್ ಬ್ಯಾಟರಿ ಪ್ಯಾಕ್ ಸ್ಕೂಟರ್ 50 ರಿಂದ 60 ಕಿಲೋಮೀಟರ್ ಮೈಲೇಜ್ ನೀಡಿದರೆ, ಲಿಥಿಯಂ ಐಯಾನ್ ಬ್ಯಾಟರಿ 60 ರಿಂದ 65 ಕಿಲೋಮೀಟರ್ ಮೈಲೇಜ್ ನೀಡಲಿದೆ. ಆ್ಯಸಿಡ್ ಬ್ಯಾಟರಿ ಚಾರ್ಜಿಂಗ್ ಸಮಯ 7 ರಿಂದ 8 ಗಂಟೆ. ಇನ್ನು ಲಿಥಿಯಂ ಐಯಾನ್ ಬ್ಯಾಟರಿ ಚಾರ್ಜಿಂಗ್ ಸಮಯ 4 ರಿಂದ 5 ಗಂಟೆ. ಸಾಮಾನ್ಯ ಪ್ಲಗ್ ಪಾಯಿಂಟ್‌ನಲ್ಲಿ ಚಾರ್ಜ್ ಮಾಡಿಕೊಳ್ಳಬಹುದು. ಇದರ ಗರಿಷ್ಠ ವೇಗ 25 ಕಿ.ಮೀ ಪ್ರತಿ ಗಂಟೆಗೆ
undefined
ಓಲಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಓಲಾ ಎಸ್1 ಬಿಡುಗಡೆ, 2024ರಲ್ಲಿ ಬರಲಿದೆ ಓಲಾ ಕಾರು!
ಜಿಟಿ ಡ್ರೈವ್ ಪ್ರೋ
ಜಿಟಿ ಡ್ರೈವ್ ಪ್ರೋ ಸ್ಕೂಟರ್ ಎರಡು ವೇರಿಯೆಂಟ್‌ನಲ್ಲಿ ಲಭ್ಯವಿದೆ. ಆ್ಯಸಿಡ್ ಬ್ಯಾಟರಿ ಹಾಗೂ ಲಿಥಿಯಂ ಐಯಾನ್ ಬ್ಯಾಟರಿ. ಜಿಟಿ ಡ್ರೈವ್ ಪ್ರೋ ಆ್ಯಸಿಡ್ ಬ್ಯಾಟರಿ ಪ್ಯಾಕ್ ಸ್ಕೂಟರ್ ಬೆಲೆ 67,208 ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಲಿಥಿಯಂ ಐಯಾನ್ ಬ್ಯಾಟರಿ ಸ್ಕೂಟರ್ ಬೆಲೆ 82,751 ರೂಪಾಯಿ(ಎಕ್ಸ್ ಶೋ ರೂಂ). ಆ್ಯಸಿಡ್ ಬ್ಯಾಟರಿ ಸ್ಕೂಟರ್ 50 ರಿಂ 50 ಕಿ.ಮೀ ಮೈಲೇಜ್ ನೀಡಿದರೆ, ಲಿಥಿಯಂ 60 ರಿಂದ 65 ಕಿ.ಮೀ ಮೈಲೇಜ್ ನೀಡಲಿದೆ. ಇದರ ಗರಿಷ್ಠ ವೇಗ 25 ಕಿ.ಮೀ ಪ್ರತಿ ಗಂಟೆಗೆ.
ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳ 80 ನಗರಗಳಲ್ಲಿ ಜಿಟಿ ಫೋರ್ಸ್ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ದೇಶಾದ್ಯಂತ 100ಕ್ಕೂ ಹೆಟ್ಟು ಡೀಲರ್‌ಶಿಪ್ ಮೂಲಕ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ನೂತನ ಸ್ಕೂಟರ್ ಬುಕ್ ಮಾಡಿಕೊಳ್ಳಬುಹುದು.
ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ಮೇಲುಗೈ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್
ಬೆಂಗಳೂರಿನಲ್ಲಿ ಬಿವೈಡಿ ಶೋರೂಮ್
ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ವಾರನ್ ಬಫೆಟ್ ಬೆಂಬಲಿತ ಆಟೋಮೊಬೈಲ್ ಕಂಪನಿ ಬಿವೈಡಿ ತನ್ನ ಮೊದಲ ಶೋರೂಮ್ ಅನ್ನು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಆರಂಭಿಸಿದೆ. ಇಲ್ಲಿ ಬಿವೈಡ್ ಎಲೆಕ್ಟ್ರಿಕ್ ವಾಹನಗಳು ಲಭ್ಯವಿದೆ. ಈ ಶೋರೂಮ್ ಅನ್ನು ಪಿಪಿಎಸ್ ಮೋಟಾರ್ಸ್ ಸಂಸ್ಥೆಯು ಆರಂಭಿಸಿದೆ. ಇದು ಬಿವೈಡಿ ಕಂಪನಿ ಭಾರತದಲ್ಲಿ ಸ್ಥಾಪಿಸಿರುವ ಆರನೇ ಶೋರೂಮ್. ಈ ಶೋರೂಮ್ ಅನ್ನು ಪಿಪಿಎಸ್ ಮೋಟಾರ್ಸ್‌ನ ಎಂಡಿ ರಾಜೀವ್ ಎಂ ಸಂಘ್ವಿ, ಬಿವೈಡಿ ಇಂಡಿಯಾದ ಎಲೆಕ್ಟ್ರಿಕ್ ಪ್ಯಾಸೆಂಜರ್ ವೆಹಿಕಲ್ಸ್ ಬ್ಯುಸಿನೆಸ್ ವಿಭಾಗದ ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣ ಉದ್ಘಾಟಿಸಿದ್ದಾರೆ.