ಭಾಲ್ಕಿ: ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Published : Nov 08, 2019, 01:00 PM IST
ಭಾಲ್ಕಿ:  ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಸಾರಾಂಶ

ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ| ಕೊಲೆ ಶಂಕೆ| ಕೊಲೆಯಾದ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ|ಘಟನಾ ಸ್ಥಳಕ್ಕೆ ಪೊಲಿಸರ ಭೇಟಿ, ಪರಿಶೀಲನೆ| 

ಬೀದರ್[ನ.8]: ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾದ ಘಟನೆ ಜಿಲ್ಲೆಯ  ಭಾಲ್ಕಿ ತಾಲೂಕಿನ ಮೈನಳ್ಳಿ ಗ್ರಾಮದ ಸಕ್ಕರೆ ಕಾರ್ಖಾನೆ ಹತ್ತಿರ ಶುಕ್ರವಾರ ನಡೆದಿದೆ. ಕೊಲೆಯಾದ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. 

ದುಷ್ಕರ್ಮಿಗಳು ವ್ಯಕ್ತಿಯನ್ನ ಕೊಲೆ ಮಾಡಿದ ಬಳಿಕ ಗುರುತು ಪತ್ತೆಯಾಗಬಾರದು ಎಂಬ ಉದ್ದೇಶಕ್ಕೆ ಬೆಂಕಿ ಹಚ್ಚಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ವ್ಯಕ್ತಿಯ ವಯಸ್ಸು 25 ರಿಂದ 30 ಇರಬಹುದು ಎಂದು ಅಂದಾಜಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಘಟನಾ ಸ್ಥಳಕ್ಕೆ ಖಟಕ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಅಪರಿಚಿತ ಶವ ಯಾರದು ? ಇದು ಕೊಲೆನಾ? ಅಥವಾ ಆತ್ಮಹತ್ಯೆ ಎಂಬುವುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇವೆಲ್ಲ ಪ್ರಶ್ನೆಗಳಿಗೆ ಪೊಲೀಸರು ತನಿಖೆಯಿಂದ ಸತ್ಯಾಂಶ ತಿಳಿದು ಬರಲಿದೆ.

PREV
click me!

Recommended Stories

ತುಂಗಭದ್ರಾ ಜಲಾಶಯದ ಗೇಟ್‌ ಅಳವಡಿಕೆ ವಾರದಲ್ಲಿ ಆರಂಭ: ಸಚಿವ ಬೋಸರಾಜು
ಬಸವ ತತ್ವದವರು ತಾಲಿಬಾನಿ ಇದ್ದಂತೆ ಎಂದ ಕಾಡಸಿದ್ದೇಶ್ವರ ಸ್ವಾಮೀಜಿಗೆ 'ಕಾಡು ಪ್ರಾಣಿ' ಎಂದ ಚನ್ನಬಸವಾನಂದ ಶ್ರೀ!