‘ನಮಗ ತಂದೆ-ತಾಯಿ, ಬಂಧು ಬಳಗ ಎಲ್ಲ ಸಿದ್ದರಾಮಯ್ಯ ಸಾಹೆಬ್ರೆ’

Published : Nov 03, 2019, 02:42 PM ISTUpdated : Nov 03, 2019, 02:46 PM IST
‘ನಮಗ ತಂದೆ-ತಾಯಿ, ಬಂಧು ಬಳಗ ಎಲ್ಲ ಸಿದ್ದರಾಮಯ್ಯ ಸಾಹೆಬ್ರೆ’

ಸಾರಾಂಶ

ಚುನಾವಣೆ ಸಂದರ್ಭದಲ್ಲಿ ಎಲ್ಲಿ ಹೋಗಿದ್ದೀರಿ ನೀವು ಎಂದ ಶಾಸಕ ಬಿ.ನಾರಾಯಣ| ಚುನಾವಣೆ ಬಂದಾಗ ಸಿದ್ದರಾಮಯ್ಯ ಸಾಹೆಬ್ರಿಗೆ ಮತ ಹಾಕಿ| 60 ಸೀಟು ಬಂದಿದ್ದು, ಇನ್ನೂ 30 ಸೀಟು ಬಂದ್ರೆ ಅವರೇ ಮುಖ್ಯಮಂತ್ರಿ ಆಗ್ತಿದ್ರು| 

ಬೀದರ್[ನ.3]: ನಮಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟು ಯಾರೂ ದಿಕ್ಕಿಲ್ಲ. ನಮಗೆ ತಂದೆ-ತಾಯಿ ಆದರೂ ಇವರೇ, ಅಣ್ಣಾ ಆದರೂ ಇವರೇ, ಬಂಧು ಆದರೂ ಇವರೆ ಎಂದು ಶಾಸಕ ಬಿ.ನಾರಾಯಣ ಅವರು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭಾನುವಾರ ನಗರದ ಗಣೇಶ ಮೈದಾನದಲ್ಲಿ ನಡೆದ ಅಹಿಂದ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಎಲ್ಲಿ ಹೋಗಿದ್ದೀರಿ ನೀವು? ಚುನಾವಣೆ ಬಂದಾಗ ಸಿದ್ದರಾಮಯ್ಯ ಸಾಹೆಬ್ರಿಗೆ ಮತ ಹಾಕ್ರಿ, 60 ಸೀಟು ಬಂದಿದ್ದು, ಇನ್ನೂ 30 ಸೀಟು ಬಂದ್ರೆ ಅವರೇ ಮುಖ್ಯಮಂತ್ರಿ ಆಗ್ತಿದ್ರು ಎಂದು ನೆರೆದ ಜನ ಸಮೂಹಕ್ಕೆ ಹೇಳಿದ್ದಾರೆ. 

ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಸಾಹೆಬ್ರೆ ಮುಖ್ಯಮಂತ್ರಿ ಆಗಿ ಬೀದರ್ ಬರುವ ಹಾಗೆ ಮಾಡಬೇಕು. ನಿಮಗೆ ನಮ್ಮ ಓಟ್(ಅಹಿಂದ ವರ್ಗಗಳ) ಪಕ್ಕಾ ಬೀಳುತ್ತವೆ ಸರ್? ಆದ್ರೆ ಯಡಿಯೂರಪ್ಪ ಅವರಿಗೆ ಮತ ಹೋಗದಂತೆ ಈಶ್ವರ್ ಖಂಡ್ರೆ, ರಾಜಶೇಖರ ಪಾಟೀಲ್ ಅವರು ನೋಡಿಕೊಳ್ಳಬೇಕಾಗಿದೆ ಎಂದು ಹೇಳುವ ಶಾಸಕ ಬಿ.ನಾರಾಯಣ ಅವರು ಮತ್ತೊಮ್ಮೆ ಸಿದ್ದರಾಮಯ್ಯ ಅವರ ಮೇಲೆ ಅಭಿಮಾನವನ್ನು ಮೆರೆದಿದ್ದಾರೆ.
 

PREV
click me!

Recommended Stories

ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ
ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ