ನಗರದ ಹಲವೆಡೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

Published : Feb 08, 2019, 10:44 AM ISTUpdated : Feb 08, 2019, 10:46 AM IST
ನಗರದ ಹಲವೆಡೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

ಸಾರಾಂಶ

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಯಲ್ಲಿ ವ್ಯತ್ಯಯ ಉಂಟಾಗಿದೆ. ವಿದ್ಯುತ್ ಪೂರೈಕೆ ವ್ಯತ್ಯಯದಿಂದ ಈ ಸಮಸ್ಯೆ ಎದುರಾಗುತ್ತಿದೆ. 

ಬೆಂಗಳೂರು: ತೊರೆಕಾಡನಹಳ್ಳಿಯ ಜಲಮಂ ಡಳಿ ಪಂ ಪಿಂಗ್ ಕೇಂದ್ರದಲ್ಲಿ ವಿದ್ಯುತ್ ಪೂರೈಕೆ ಯಲ್ಲಿ ವ್ಯತ್ಯಯ ವಾಗಿರುವುದರಿಂದ ಶುಕ್ರವಾರ (ಫೆ.8) ನಗರದ ಹಲವೆ ಡೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಯಶವಂತಪುರ, ಮಲ್ಲೇಶ್ವರ, ಮತ್ತೀಕೆರೆ, ಗೋಕುಲ್ ಎಕ್ಸ್ ಟೆನ್ಷನ್, ಜಯಮಹಲ್, ವಸಂತ ನಗರ, ಮುತ್ಯಾ ಲನಗರ, ಆರ್.ಟಿ. ನಗರ, ಸಂಜಯನಗರ, ಸದಾಶಿವನ ಗರ, ಹೆಬ್ಬಾ ಳ, ಭಾರತಿನಗರ, ಸುಧಾಮನಗರ, ಪ್ಯಾಲೇ ಸ್ ಗುಟ್ಟಹಳ್ಳಿ, ಮಾಚಳ್ಳಿ ಬೆಟ್ಟ, ಫ್ರೆಜರ್‌ಟೌನ್, ವಿಲ್ಸನ್‌ಗಾರ್ಡನ್, ಹೊಂಬೇಗೌಡನಗರ, ಪಿಳ್ಳ ಣ್ಣ ಗಾರ್ಡನ್, ಬನ್ನಪ್ಪ ಪಾರ್ಕ್, ಶಿವಾಜಿನಗರ, ಜೀವನ ಭೀಮಾನಗರ, ಚಿಕ್ಕ ಲಾಲ್‌ಬಾಗ್, ಗವಿಪುರ, ಬ್ಯಾಟರಾಯನಪುರ, ಮೆಜೆಸ್ಟಿಕ್, ಕಸ್ತೂರಬಾ ರಸ್ತೆ, ಮಡಿವಾಳ, ಯಲಚೇತನಹಳ್ಳಿ, ಇಸ್ರೋ ಲೇಔಟ್, ಪೂರ್ಣಪ್ರಜ್ಞಾ ಲೇಔಟ್, ನಲ್ಲಸಂದ್ರ, ಕೆ.ಆರ್.ಮಾರ್ಕೆಟ್, ಸಂಪಂಗಿ ರಾಮ ನಗ ರ, ಕುಮಾರ ಸ್ವಾಮಿ ಲೇಔಟ್, ಬನ ಶಂಕರಿ 2 ಮತ್ತು 3 ನೇ ಹಂತ, ಜಯನಗರ, ಜೆ.ಪಿ.ನಗರ, ಬನಗಿರಿ ನಗರ ಸುತ್ತಮುತ್ತಲ ಬಡಾವಣೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯವಾಗಲಿದೆ. 

ಅಂತೆಯೆ ಬಸವನಗುಡಿ, ಓಕಳಿಪುರ, ಚಾಮರಾಜ ಪೇಟೆ, ಪದ್ಮನಾಭನಗರ, ಹೊಸಕೆರೆಹಳ್ಳಿ, ಬೈರಸಂದ್ರ, ಲಿಂಗರಾಜಪುರ, ಜಾನಕಿರಾಮ ಲೇಔಟ್, ಆರ್. ಎಸ್.ಪಾಳ್ಯ, ಜಾನ್ಸನ್ ಮಾರ್ಕೆಟ್, ಆಡುಗೋಡಿ, ದೊಮ್ಮಲೂರು, ಬಿಟಿಎಂ ಲೇಔಟ್, ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯವಾಗಲಿದೆ.

PREV
click me!

Recommended Stories

Karnataka Covid-19 Cases: ಕರ್ನಾಟಕದಲ್ಲಿ Covid-19 ಮತ್ತೆ ಏರಿಕೆ; 5 ಹೊಸ ಕೇಸ್ ದಾಖಲು, ಬೆಂಗಳೂರಿನಲ್ಲಿ ಒಂದು ಸಾವು!
Marathahalli Incident: ದೇವರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್; ಕೊಡದಿದ್ದಕ್ಕೆ ಯುವಕನ ಮೇಲೆ ಹಲ್ಲೆ!